ಸಾಡೇ ಸಾಥಿ ಸಮಸ್ಯೆಯನ್ನು ಹೋಗಲಾಡಿಸುವ ದೇವಸ್ಥಾನ ಇದು

0
659

ಪಂಚ ಎಂಬುದು ಬದಲುಗುತ್ತಿದೆ ಆ ಬದಲಾಗುತ್ತಿರುವ ಪ್ರಪಂಚಕ್ಕೆ ನಮ್ಮ ಜನರು ಕೂಡ ಬದಲಾಗುತ್ತಿದ್ದಾರೆ ಆದರೆ ದೇವರ ವಿಷಯದಲ್ಲಿ ಮಾತ್ರ ಬದಲಾವಣೆ ಆಗುವುದಿಲ್ಲ ಮೊದಲು ಇದ್ದ ನಂಬಿಕೆ ಭಕ್ತಿ ಎಲ್ಲವೂ ಕೂಡ ಈಗಲೂ ಮುಂದುವರಿಯುತ್ತಲೇ ಇದೆ. ಹಾಗಾಗಿಯೇ ಹಿಂದಿನ ದೇವಾಲಯ ಪೂಜೆ ಆಚಾರ ವಿಚಾರಗಳು ಎಲ್ಲವೂ ಕೂಡ ಹಾಗೆ ಮುಂದುವರಿಯುತ್ತಲೇ ಇವೆ. ಅದಕ್ಕಾಗಿಯೇ ಅಂದು ಇದ್ದ ದೇವಾಲಯ ಈಗಲೂ ಕೂಡ ಇವೆ. ಕೆಲವರು ಜನರಲ್ಲಿ ದೇವರು ಎಂಬ ನಂಬಿಕೆ ಬದಲಾಗಿರಬಹುದು ಆದರೆ ಭಕ್ತಿ ಎಂಬುದು ಮಾತ್ರ ಜನರಲ್ಲಿ ಕಡಿಮೆ ಆಗಿಲ್ಲ ನಮ್ಮ ದೇಶದಲ್ಲಿ ಎಲ್ಲವೂ ಭಿನ್ನ ಭಿನ್ನವಾದ ದೇಗುಲಗಳು ಅದರಲ್ಲಿ ಶನಿ ದೇವರ ದೇಗುಲ ಅಂದರೆ ನವಗ್ರಹ ದೇವಸ್ಥಾನ ಕೂಡ ಒಂದು.

ನವಗ್ರಹಗಳಲ್ಲಿ ಅತ್ಯಂತ ಸುಂದರನಾದ ಶನಿಯು ಪುಣ್ಯ ಪಾಪ ದುಃಖ ನೋವು ಮಾನಸಿಕ ಖಿನ್ನತೆ ಮತ್ತು ವೈರಾಗ್ಯವನ್ನು ನೀಡುತ್ತಾನೆ. ಈ ಲೋಕದ ಸಮಸ್ತ ಜನರಿಗೆ ಶನಿ ಕಾಟ ಎಂಬುದು ತಪ್ಪಿದ್ದಲ್ಲ ಈ ಶನಿದೇವನು ಇರುವ ರಾಶಿಯ ಜನರಿಗೆ ಕಷ್ಟಗಳನ್ನು ಕೊಡುತ್ತಾನೆ ಇದನ್ನೇ ನಾವು ಸಾಡೇ ಸಾಥಿ ಎನ್ನುತ್ತಾರೆ. ಆದರೆ ಈ ಸಾಡೇ ಸಾತ್ ಬಂತು ಅಂದ್ರೆ ಬರೀ ಕೆಟ್ಟದು ಮಾತ್ರ ಆಗುತ್ತದೆ ಎಂದು ನಮ್ಮ ಜನರು ನಂಬಿದ್ದಾರೆ ಸತ್ಯ ಏನು ಅಂದ್ರೆ ಸಾಡೇ ಸಾತ್ ಬಂದ್ರೆ ನಮ್ಮ ಪಾಪ ಪುಣ್ಯ ಕರ್ಮಗಳ ಲೆಕ್ಕಾಚಾರದ ಮೇಲೆ ನಮಗೆ ಒಳ್ಳೆಯದು ಕೆಟ್ಟದು ಆಗುತ್ತದೆ.

ಸಾಡೆ ಸಾತ್ ಸಮಸ್ಯೆಗಿಂದ ಒಳ್ಳೇದು ಪಡೆದುಕೊಂಡ ಜನರು ಕಡಿಮೆ ಏಕೆ ಅಂದ್ರೆ ಮಾಡಿರುವ ಪಾಪಗಳು ಸುಮ್ಮನೆ ಬಿಡುತ್ತವೆ ? ಎಲ್ಲವು ಈ ಸಮಯದಲ್ಲಿ ಕಾಡಲಿದೆ. ದೇಹದ ಆರೋಗ್ಯ ಇದ್ದಕ್ಕಿದಂತೆ ಹಾಳಾಗುತ್ತದೆ, ಹಣದ ಸಮಸ್ಯೆ ಹೆಚ್ಚಾಗುತ್ತದೆ, ನಾವು ತಪ್ಪು ಮಾಡಿಲ್ಲ ಅಂದ್ರು ಅಪವಾದ ನಮ್ಮ ಮೇಲೆ ಬರುವ ಸಂಭವ ಇರುತ್ತದೆ ಹೀಗೆ ಹಲವರು ಸಮಸ್ಯೆಗಳು ನಮ್ಮನು ಹುಡುಕಿಕೊಂಡು ಬರಲಿದೆ. ಆದರೆ ಸಾಡೇ ಸಾಥಿಯ ಸಮಯದಲ್ಲಿ ಶನಿದೇವರ ವಕ್ರ ದೃಷ್ಟಿಯಿಂದ ದೂರವಾಗಲು ಏಕೈಕ ದೇಗುಲವಿದೆ ಆ ದೇಗುಲದ ಹೆಸರು ಉಜ್ಜಯಿನಿಯ ಕಾಲ ಭೈರವೇಶ್ವರ ಸ್ವಾಮಿ ದೇಗುಲ. ಕಾಲ ಭೈರವನನ್ನು ಶಿವ ದೇವರ ಒಂದು ಅಭಿವ್ಯಕ್ತಿ ರೂಪ ಎಂದು ಕರೆಯಲಾಗುತ್ತದೆ ಈ ಉಜ್ಜಯಿನಿಯ ಕಾಲ ಭೈರವೇಶ್ವರ ಸ್ವಾಮಿ ದೇವಾಲಯ ತಂತ್ರ ಪಂಥದೊಂದಿಗೆ ಸಂಬಂಧ ಹೊಂದಿದೆ ಈ ದೇಗುಲಕ್ಕೆ ಬಂದಾಗ ಮೈಗೆ ಬೂದಿಯನ್ನು ಹಚ್ಚಿಕೊಂಡಿರುವ ಅನೇಕ ಸಾಧು ಸಂತರನ್ನು ಕಾಣಬಹುದಾಗಿದೆ. ಈ ದೇಗುಲಕ್ಕೆ ಬಂದು ಮನಪೂರ್ವಕ ಏನೇ ಬೇಡಿಕೊಂಡರೂ ಅದೆಲ್ಲವೂ ಈಡೇರುತ್ತದೆ.

ಈ ದೇಗುಲದ ತುಂಬಾ ವಿಶೇಷವಾದ ವಿಶೇಷತೆ ಏನು ಗೊತ್ತೇ ಈ ದೇವರಿಗೆ ನೈವೇದ್ಯವಾಗಿ ನೀಡಲಾಗುವುದು ಸಾರಾಯಿಯನ್ನು ಹಾಗೂ ಅದನ್ನೇ ಜನರಿಗೆ ತೀರ್ಥವನ್ನಾಗಿ ನೀಡಲಾಗುತ್ತದೆ. ನಿಮಗೆ ನಂಬಿಕೆ ಇಲ್ಲ ಅಂದರು ನಂಬಲೇ ಬೇಕು ಮೇಲಿನ ಚಿತ್ರದಲ್ಲಿ ಸೂಕ್ಷ್ಮವಾಗಿರಿ ಗಮನಿಸಿರಿ. ಈ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಶನಿದೇವರ ಸಾಡೇ ಸಾಥಿಯಲ್ಲಿರುವ ಜನರಿಗೆ ಶನಿಯ ಕಾಟವು ನಿಲ್ಲುತ್ತದೆ. ಹಾಗಾಗಿ ಶನಿಮಹಾರಾಜರ ಈ ಸಾಡೇ ಸಾಥಿಯ ಪ್ರಭಾವಕ್ಕೊಳಾಗಿರುವ ಜನರು ಈ ದೇವಾಲಯಕ್ಕೆ ಬಂದು ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಈಗೆ ಪೂಜೆ ಸಲ್ಲಿಸಿದವರ ಸಾಡೇ ಸಾಥಿಯ ಸಮಸ್ಯೆ ಪರಿಹಾರವಾಗಿ ಸಂತೋಷವಾಗಿದ್ದಾರೆ ದಿನದಿಂದ ದಿನಕ್ಕೆ ದೇಗುಲದ ಬಗ್ಗೆ ಹೆಚ್ಚಿನ ಪ್ರಭಾವ ಸಿಕ್ಕಿ ಇದೀಗ ವಿಶ್ವದೆಲ್ಲೆಡೆ ಈ ದೇಗುಲ ಮನೆ ಮಾತಾಗಿದೆ.

LEAVE A REPLY

Please enter your comment!
Please enter your name here