ಮನೆಯಲ್ಲೇ ನೈಸರ್ಗಿಕ ಶಾಂಪೂ ತಯಾರು ಮಾಡಿ

0
660

ತಲೆಯ ಕೂದಲನ್ನು ಸೊಂಪಾಗಿ ಬೆಳೆಸಲು ಕೂದಲಿನ ಸಮಸ್ಯೆಗಳನ್ನು ಹೋಗಿಸಲು ಹಲವಾರು ರೀತಿಯ ಎಣ್ಣೆಗಳನ್ನು ಶಾಂಪೂಗಳನ್ನು ಬಳಕೆ ಮಾಡುತ್ತೇವೆ ಆದರೆ ಈ ಶಾಂಪೂಗಳಲ್ಲಿ ಹಲವರು ರೀತಿಯ ರಾಸಾಯನಿಕ ಪದಾರ್ಥಗಳನ್ನು ಬಳಕೆ ಮಾಡಿರುತ್ತಾರೆ ಇದರಿಂದಲೇ ಕೂದಲು ಬಿಳಿ ಆಗುವುದು ಕೂದಲು ಉದುರುವುದು ತಲೆಯಲ್ಲಿ ಹೊಟ್ಟು ಹೆಚ್ಚುತ್ತದೆ ಈ ಸಮಸ್ಯೆಗಳೆಲ್ಲ ಕೂಡ ನಾವು ಬಳಸುವ ಶಾಂಪೂವಿಂದ ಆಗುತ್ತದೆ ಅದಕ್ಕಾಗಿ ನಾವು ಮಾರುಕಟ್ಟೆಯಲ್ಲಿ ಸಿಗುವ ಶಾಂಪೂವನ್ನು ಬಳಕೆ ಮಾಡುವ ಬದಲು ಮನೆಯಲ್ಲೇ ನೈಸರ್ಗಿಕವಾಗಿ ಶಾಂಪೂ ಮಾಡುವ ಪ್ರಯತ್ನ ಮಾಡಬೇಕು. ಈ ಹಿಂದೆ ನಮ್ಮ ಪೂರ್ವಿಕರು ಯಾವುದೇ ರೀತಿಯ ಶಾಂಪೂ ಬಳಕೆ ಮಾಡುತ್ತಾ ಇರ್ಲಿಲ್ಲ ಆದರು ಅವರ ಕೂದಲು ಅದ್ಬುತವಾಗಿ ಇರುತ್ತಾ ಇತ್ತು. ಆಗಿನ ಕಾಲದಲ್ಲಿ ಎಲ್ಲರು ಸೀಗೆ ಪುಡಿ ಮತ್ತು ಚಿಗರೆ ಪುಡಿ ಬಳಕೆ ಮಾಡುತ್ತಾ ಇದ್ದರು ಇದು ಕೂದಲಿಗೆ ಮತ್ತಷ್ಟು ಸೈಸರ್ಗಿಕ ಹೊಳಪು ಮತ್ತು ಶಕ್ತಿ ನೀಡುತ್ತಾ ಇತ್ತು. ಮನೆಯಲ್ಲೇ ಶಾಂಪೂ ಮಾಡುವ ವಿಧಾನ ಹೇಗೆ ತಿಳಿಯೋಣ ಬನ್ನಿ.

ತಯಾರಿಸುವ ವಿಧಾನ ಅದು ಹೇಗೆ ಗೊತ್ತೇ: ಅತ್ಯುತ್ತಮ ಹರ್ಬಲ್ ಶಾಂಪೂ ಮಾಡುವ ವಿಧಾನ ಹೇಗೆಂದರೆ: ಸೋಪ್ ಬೀಜಗಳು ಒಣ ಬೆಟ್ಟದ ನೆಲ್ಲಿಕಾಯಿ ಸೀಗೆಕಾಯಿ. ಇವುಗಳನ್ನು ರಾತ್ರಿ ನೀರಿನಲ್ಲಿ ನೆನೆಸಬೇಕು ನಂತರ ಮೆಂತ್ಯೆ ಬೀಜಗಳನ್ನು ಬೆಳಿಗ್ಗೆ ಸ್ವಲ್ಪ ಸಮಯ ಕುದಿಸಬೇಕು ನಂತರ ಅದು ತಣ್ಣಗಾದ ಮೇಲೆ ಆ ನೀರನ್ನು ಸೋಸಿಕೊಳ್ಳಬೇಕು ಆ ನೀರಿಗೆ ಸ್ವಲ್ಪ ನಿಂಬೆ ರಸವನ್ನು ಸೇರಿಸಬೇಕು ಇದನ್ನು ಒಂದು ಬಾಟಲಿನ ಒಳಗೆ ಹಾಕಿಕೊಂಡು ತಲೆ ಕೂದಲಿಗೆ ಬಳಕೆ ಮಾಡಬಹುದು. ಮುಲ್ತಾನಿ ಮಿಟ್ಟಿ ಮತ್ತು ತೆಂಗಿನ ಪುಡಿಯನ್ನು ನೆನೆಸಬೇಕು ಅದನ್ನು ತಲೆಯ ಮೇಲೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತಲೆಯನ್ನು ತೊಳೆಯಬೇಕು

ಲೋಳೆಸರಸ ಇದನ್ನು ತಲೆಗೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತೊಳೆಯಬೇಕು ಹೀಗೆ ಮಾಡಿದರೆ ತಲೆಯ ಕೂದಲಿಗೆ ಒಳ್ಳೆಯ ಶಾಂಪೂ ಸಿದ್ಧವಾಗಿರುತ್ತದೆ. ಸೀಗೆ ಕಾಯಿಯನ್ನು ಚೆನ್ನಾಗಿ ಪುಡಿ ಮಾಡಿಕೊಂಡು ಅದನ್ನು ತಲೆಯ ಕೂದಲಿಗೆ ಶಾಂಪೂವಾಗಿ ಬಳಕೆ ಮಾಡುವುದು ಕೂದಲಿಗೆ ತುಂಬಾ ಒಳ್ಳೆಯದು. ಇವುಗಳನ್ನು ಬಳಕೆ ಮಾಡಿ ತಲೆಯ ಕೂದಲನ್ನು ತೊಳೆದರೆ ತಲೆಯ ಕೂದಲು ತುಂಬಾ ಶುದ್ಧವಾಗುತ್ತದೆ ಜೊತೆಗೆ ತಲೆಯ ಕೂದಲು ಸೊಂಪಾಗಿ ಬೆಳೆಯುತ್ತದೆ ತಲೆಯ ಕೂದಲು ಉದುರುವುದಿಲ್ಲ ಜೊತೆಗೆ ತಲೆಯಲ್ಲಿ ಹೊಟ್ಟು ಬರುವುದಿಲ್ಲ ಹಾಗಾಗಿ ಇದನ್ನು ಬಳಕೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಇದು ನಮ್ಮ ಕೂದಲಿನ ಸಮಸ್ಯೆಯನ್ನು ಎಲ್ಲ ರೀತಿಯಲ್ಲೂ ಹೋಗಿಸುತ್ತದೆ ಇದರಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಹಾಗಾಗಿ ಆದಷ್ಟು ಮಾರುಕಟ್ಟೆಯಲ್ಲಿ ಸಿಗುವ ಶಾಂಪೂಗಳ ಬಳಕೆಯನ್ನು ಬಿಟ್ಟು ನೈಸರ್ಗಿಕವಾಗಿ ಶಾಂಪೂಗಳ ಬಳಕೆಯನ್ನು ತಯಾರಿಸಿಕೊಂಡು ತಲೆಯ ಕೂದಲಿಗೆ ಬಳಕೆ ಮಾಡುವುದು ಒಳ್ಳೆಯದು. ಮನೆಯಲ್ಲೇ ಮಾಡಿದ ಶಾಂಪೂ ಒಂದು ತಿಂಗಳು ಉಪಯೋಗಿಸಿದ ನಂತರ ನಿಮಗೆ ಅದರ ಶಕ್ತಿ ಏನು ಎಂಬುದು ಅರ್ಥ ಆಗುತ್ತದೆ.

LEAVE A REPLY

Please enter your comment!
Please enter your name here