ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮಗೆ ಮುಂದೆ ಆಗುವ ಶುಭ ಮತ್ತು ಅಶುಭಗಳ ಮುಂಚೆಯೇ ತಿಳಿಯುತ್ತೆ

0
576

ನಮ್ಮ ಹಿಂದೂ ಧರ್ಮದಲ್ಲಿ ಹಲವು ರೀತಿಯ ಸಂಪ್ರದಾಯಗಳು ಮತ್ತು ಆಚರಣೆಗಳು ಚಾಲನೆಯಲ್ಲಿದೆ ನಮ್ಮ ಪ್ರಕೃತಿಯ ವಿಸ್ಮಯ ಶಕ್ತಿ ಹೇಗಿದೆ ಅಂದರೆ ಅದನ್ನು ನಾವು ತಪಸ್ಸಿನಿಂದ ಅಥವ ಸಾಧನೆ ಮಾಡಿ ಪಡೆದರೆ ನಾವು ಈ ಸಮಾಜದಲ್ಲಿ ವಿಬ್ಭಿನ್ನ ಮತ್ತು ವಿಶೇಷ ವ್ಯಕ್ತಿ ಆಗಿ ಎಲ್ಲರೊಂದಿಗೆ ಗುರುತಿಸಿಕೊಳ್ಳುತ್ತೇವೆ. ಅಂತಹ ಒಂದು ಸೂಚನೆ ನೀಡುವ ಘಟನೆಗಳ ಬಗ್ಗೆ ನಾವು ನಿಮಗೆ ಇಂದು ತಿಳಿಸುತ್ತಾ ಇದ್ದೇವೆ. ಈ ನಮ್ಮ ಆಧುನಿಕ ಜಗತ್ತಿನಲ್ಲಿ ಮನುಷ್ಯ ಎಷ್ಟೇ ಮುಂದೆ ಇದ್ದರೂ ನಾವು ನಮ್ಮ ನಮ್ಮ ಧರ್ಮದ ಅನುಸರವಾಗಿ ದೇವರನ್ನು ನಂಬುತ್ತೇವೆ. ಒಂದು ಕಾರ್ ಖರೀದಿ ಮಾಡಬೇಕು ಅಂದ್ರೆ ಮೊದಲು ನಮ್ಮ ಜನ್ಮ ನಕ್ಷತ್ರಕ್ಕೆ ಅನುಗುಣವಾದ ಬಣ್ಣ ಮತ್ತು ಸೂಕ್ತ ಕಾಲ ನೋಡಿ ವಾಹನ ವಸ್ತು ಖರೀದಿ ಮಾಡುತ್ತೇವೆ. ಕೆಲವರು ಇದೆಲ್ಲ ಮೂಡ ನಂಬಿಕೆ ಎನ್ನುವ ಜನರೇ ಒಳ್ಳೆಯ ಮುಹೂರ್ತ ನೋಡಿ ಮದ್ವೆ ಆಗ್ತಾರೆ.

ಹೀಗೆ ನಾವು ನಿಮಗೆ ಇಂದು ಮುಂದೆ ಆಗುವ ಘಟನೆಗಳ ಅದು ನಮಗೆ ಹೇಗೆಲ್ಲ ಮುನ್ಸೂಚನೆ ನೀಡುತ್ತದೆ ಇದರ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ನೀಡುತ್ತೇವೆ. ಸ್ನೇಹಿತರೇ ನಿಮಗೆ ಈಗಾಗಲೇ ನಾವು ಜೆಳುವ ಈ ರೀತಿ ಅನುಭವ ಆಗಿರಬಹುದು ಆದರೆ ನೀವು ಅದನ್ನು ಏನೋ ಆರೋಗ್ಯ ಸಮಸ್ಯೆಯಿಂದ ಈ ರೀತಿ ಆಗಿದೆ ಎಂದು ಅದನ್ನು ನಿರ್ಲಕ್ಷ್ಯ ಮಾಡುತ್ತೀರಿ. ಆದರೆ ಕೆಲವು ಜನರು ಮಾತ್ರ ಅದರ ಬಗ್ಗೆ ಒಂದಿಷ್ಟು ಮಾಹಿತಿ ಇದ್ದವರು ಏನೋ ಮುಂದೆ ದುರ್ಘಟನೆ ಆಗುತ್ತಾ ಇದೆ ನನಗೆ ಏನೋ ಸಮಸ್ಯೆ ಆಗುವ ಸಂಭವ ಇದೆ ಎಂದು ಅದನ್ನು ತಿಳಿದುಕೊಳ್ಳುತ್ತಾರೆ. ರಾತ್ರಿ ನಾವು ಮಲಗಿದಾಗ ಎಷ್ಟೋ ರೀತಿಯ ಕನಸುಗಳು ನಮ್ಮನು ಆವರಿಸುತ್ತದೆ ನಾವು ಎಂದು ಸಹ ನಮ್ಮ ಕನಸುಗಳಿಗೆ ನಿರ್ದಿಷ್ಟ ವಾಗಿ ಹೇಳಿರುವುದಿಲ್ಲ ಇಂತಹದೇ ಕನಸುಗಳು ನಮಗೆ ಬರಬೇಕು ಎಂದು ಅದೆಲ್ಲವೂ ಪ್ರಕೃತಿಯಿಂದ ಮಾನವನಿಗೆ ಬಂದ ಒಂದು ವಿಶೇಷ ವರ.

ನಿಮ್ಮ ದೇಹದಲ್ಲಿ ಅಂಗಾಂಗಗಳು ಕೆಲವೊಮ್ಮೆ ಸೂಕ್ಷ್ಮ ರೀತಿ ಬದಲಾವಣೆ ಕಾಣಿಸಿಕೊಂಡರೆ ಮುಂದೆ ನಿಮಗೆ ಏನಲ್ಲ ಸಮಸ್ಯೆಗಳು ಆಗುತ್ತದೆ ಎಂಬುದನ್ನು ನಿಮಗೆ ನೀವೇ ತಿಳಿಯಬಹುದು ಇದಕ್ಕೆ ಯಾವ ಜೋತಿಷ್ಯದವರ ಬಳಿ ಹಣ ಕೊಟ್ಟು ಕೇಳುವ ಪಜೀತಿ ಇಲ್ಲವೇ ಇಲ್ಲ. ಮೊದಲನೇದಾಗಿ ಮನುಷ್ಯನ ಎರಡು ಕೆನ್ನೆ ಒಂದೇ ಬಾರಿಗೆ ಹಾರಿದ ರೀತಿ ಆದರೆ ಆತನಿಗೆ ಧನ ಪ್ರಾಪ್ತಿ ಆಗುವ ಸಂಭವ ಇರುತ್ತದೆ. ವ್ಯಕ್ತಿಯ ಹಣೆಯ ಮೇಲೆ ಇದಕ್ಕಿದಂತೆ ತುಡಿತ ಕಂಡರೆ ಆತನಿಗೆ ಆ ದಿನ ಪೂರ್ತಿ ಹೆಚ್ಚಿನ ಸುಖ ಪ್ರಾಪ್ತಿ ಆಗುವ ಸಂಭವ ಇರುತ್ತದೆ. ನಿಮ್ಮ ಬಲ ಕಣ್ಣು ಇದ್ದಕಿದ್ದಂತೆ ಅದರಲು ಶುರು ಆದರೆ ನಿಮ್ಮ ಬಹು ದಿನಗಳ ಬೇಡಿಕೆ ಒಂದು ಈಡೇರುವ ಕಾಲ ಹತ್ತಿರ ಬಂದಿದೆ ಎಂಬುದು ಅರ್ಥ ಹಾಗೆಯೇ ನಿಮ್ಮ ಎಡ ಕಣ್ಣು ಅದರಲು ಶುರು ಮಾಡಿದರೆ ನಿಮಗೆ ಏನೋ ಕೆಟ್ಟ ಸಮಸ್ಯೆ ಆಗುತ್ತಾ ಇದೆ ಎಂಬ ಮುನ್ಸೂಚನೆ ನಿಮಗೆ ಮೊದಲೇ ಸಿಗಲಿದೆ. ಈ ಎಡ ಕಣ್ಣು ಅದರುವ ಸೂಚನೆ ಬಂದ ವ್ಯಕ್ತಿಗಳಿಗೆ ನೀವೇ ಕೇಳಿರಬಹುದು ಧನ ಹಾನಿ ಮತ್ತು ಮಾನ ಹಾನಿ ಹೆಚ್ಚಿನ ರೀತಿಯಲ್ಲಿ ಆಗಿದೆ ಎಂದು.

ನಿಮ್ಮ ಎಡ ತೊಡೆ ನೀವು ಸುಮ್ಮನೆ ಇದ್ದರು ಸ್ವಲ್ಪ ಮೆಲ್ಲಗೆ ಕುಣಿಯಲು ಶುರು ಮಾಡಿದರೆ ನಿಮ್ಮ ಆರ್ಥಿಕ ಸ್ತಿತಿ ಉತ್ತಮವಾಗಿ ಇರುತ್ತದೆ ಎಂಬ ಅರ್ಥ ಹಾಗೆಯೇ ನಿಮ್ಮ ಬಲ ತೊಡೆ ಮೆಲ್ಲಗೆ ಕುಣಿಯಲು ಶುರು ಮಾಡಿದರೆ ಈ ಸೂಚನೆ ಸಿಕ್ಕರೆ ನಿಮ್ಮ ಮನೆಗೆ ನೆಂಟರು ಆಗಮಿಸುವ ಸಾಧ್ಯತೆ ಇರುತ್ತದೆ ಎಂಬ ಅರ್ಥ. ನಿಮ್ಮ ತುಟಿ ಅಲುಗಾಡಿದ ಸೂಚನೆ ನೀಡಿದರೆ ನಿಮಗೆ ಸಧ್ಯದಲ್ಲೇ ಹೊಸ ಜನರ ಪರಿಚಯ ಆಗುವ ಸಾಧ್ಯತೆ ಇದೆ ಎಂಬ ಸೂಚನೆ ಸಿಗುತ್ತದೆ. ಹೀಗೆ ಸಹಸ್ರ ವರ್ಷಗಳಿಂದ ನಮಗೆ ಕೆಟ್ಟದ್ದು ಮತ್ತು ಒಳ್ಳೆಯದು ಆಗುವ ಮುನ್ಸೂಚನೆ ಮುಂಚೆಯೇ ಸಿಗಲಿದೆ ಆದರೆ ಅದನ್ನು ಕೆಲವರು ಮೂಡ ನಂಬಿಕೆ ಎಂದು ತಿಳಿದುಕೊಂಡರೆ ಮತ್ತೋ ಕೆಲವರು ಮುಂಚೆಯೇ ಜಾಗೃತರಾಗಿ ಇದ್ದು ಸಮಸ್ಯೆಗಳಿಂದ ತಪ್ಪಿಸಿಕೊಳ್ಳುತ್ತಾರೆ. ಈ ಲೇಖನ ಇಷ್ಟ ಆದರೆ ಮರೆಯದೇ ಶೇರ್ ಮಾಡಿರಿ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿರಿ.

LEAVE A REPLY

Please enter your comment!
Please enter your name here