ನಿಮ್ಮ ದೇಹ ಉಷ್ಣತೆ ಸಮಸ್ಯೆಯಿಂದ ತೊಂದರೆ ಆಗಬಾರದು ಅಂದ್ರೆ ಮಾತ್ರೆ ಬೇಡ ಮನೆಯಲ್ಲೇ ಈ ಮದ್ದು ಮಾಡಿರಿ

0
1083

ಜೀವನದಲ್ಲಿ ಉಷ್ಣತೆ ಎಂಬುದು ದೇಹಕ್ಕೆ ತುಂಬಾ ಮುಖ್ಯ ಇದನ್ನು ನಾವು ಸಮತೋಲನದಲ್ಲಿ ಇಟ್ಟುಕೊಂಡರೆ ಮಾತ್ರ ನಮ್ಮ ಜೀವನ ಆರೋಗ್ಯವಾಗಿ ಇರುತ್ತದೆ ಕೆಲವು ಆಹಾರ ಸೇವನೆಯಿಂದ ನಮಗೆ ಇದಕ್ಕಿದಂತೆ ಕೆಲವೊಮ್ಮೆ ಉಷ್ಣತೆ ಹೆಚ್ಚು ಆದ್ರೆ ಆರೋಗ್ಯ ಹದಗೆಡುತ್ತದೆ. ಮನುಷ್ಯನ ದೇಹದ ಸಾಮಾನ್ಯ ಚಟುವಟಿಕೆಗಳಿಗೆ ಉಷ್ಣತೆ ಎಂಬುದು ತುಂಬಾ ಅವಶ್ಯಕವಾಗಿದೆ ಉಷ್ಣವೇ ಜೀವನದ ಮೂಲ ಊಟ ಉಸಿರಾಟ ಅಷ್ಟೇ ಅಲ್ಲದೆ ಜೀವಿಯ ಸಂತಾನೋತ್ಪತ್ತಿಯಲ್ಲಿಯೂ ಉಷ್ಣದ ಪಾತ್ರ ತುಂಬಾ ಮುಖ್ಯವಾದದ್ದು ಆದರೆ ಯಾವುದೇ ಆದರೂ ಕೂಡ ಮಿತವಾಗಿ ಇರಬೇಕು ಅಲ್ಲವೇ ಹಾಗೆಯೇ ಈ ಉಷ್ಣತೆ ಎಂಬುದು ಹೆಚ್ಚು ಆದರೆ ಏನು ಆಗುತ್ತದೆ ಗೊತ್ತೇ.

ಉಷ್ಣತೆ ಎಂಬುದು ಹೆಚ್ಚಾದರೆ ಉಷ್ಣದ ಗುಳ್ಳೆ ಬರುತ್ತವೆ ಎಂದರೆ ಚರ್ಮದ ಮೇಲೆ ದೊಡ್ಡದಾಗಿ ಹರುಡುವಂತಹ ಕೀವು ತುಂಬಿರುವ ಗುಳ್ಳೆಗಳು ಇವುಗಳು ಮೊದಮೊದಲು ಸಣ್ಣ ಗುಳ್ಳೆಯಂತೆ ಕಾಣಿಸುತ್ತವೆ ಆದರೆ ದಿನಗಳು ಕಳೆದಂತೆ ಕೀವು ತುಂಬಿಕೊಂಡು ದೊಡ್ಡದಾಗುತ್ತವೇ. ಈ ಗುಳ್ಳೆಗಳು ಸೋಂಕಿನಿಂದ ಹರಡುವಂತಹದು. ಅಷ್ಟೇ ಅಲ್ಲದೆ ಉಷ್ಣತೆ ಎಂಬುದು ಹೆಚ್ಚಾದರೆ ಮೂತ್ರ ಹೋಗಲು ಕೂಡ ತುಂಬಾ ಕಷ್ಟವಾಗುತ್ತದೆ ಉರಿ ಕಾಣಿಸುತ್ತದೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ ಜೊತೆಗೆ ಮುಖದ ಮೇಲೆ ಅನವಶ್ಯಕ ಗುಳ್ಳೆಗಳು ಕಾಣಿಸುತ್ತವೆ ಮೂತ್ರವು ಕಡು ಹಳದಿ ಬಣ್ಣಕ್ಕೆ ಬರುತ್ತದೆ.

ಈ ಉಷ್ಣತೆ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಮಜ್ಜಿಗೆ ಹೆಚ್ಚು ನೀರು. ಮೊಸರು. ಎಳನೀರು ಇವುಗಳನ್ನು ಸೇವಿಸುತ್ತಾರೆ ಆದರೂ ಕೂಡ ಈ ಉಷ್ಣತೆ ಎಂಬುದು ಆದಷ್ಟು ಬೇಗ ಕಡಿಮೆ ಆಗುವುದಿಲ್ಲ. ಅತಿಯಾದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಲು ಆಯುರ್ವೇದದ ಔಷಧಿಗಳು ಇವೇ ಅವುಗಳು ಏನೆಂದರೆ. ಕಸ್ತೂರಿ ಮತ್ತು ಅರಿಶಿನದ ಕೊಂಬನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಕಲ್ಲಿನ ಮೇಲೆ ಅರೆಯಬೇಕು ಹೀಗೆ ಅರೆದ ನಂತರ ಅದನ್ನು ಒಂದು ಚಮಚದಷ್ಟು ತೆಗೆದುಕೊಂಡು ಅದಕ್ಕೆ ಒಂದು ಲೋಟ ನೀರು ಹಾಕಿಕೊಂಡು ಅದಕ್ಕೆ ಸ್ವಲ್ಪ ಬೆಲ್ಲ ಹಾಕಿ ಚೆನ್ನಾಗಿ ಕಲಕಿ ಸ್ವಲ್ಪ ಸಮಯ ಹಾಗೆ ಇಡಬೇಕು ನಂತರ ಅದಕ್ಕೆ ಸ್ವಲ್ಪ ಜೇನುತುಪ್ಪ ಹಾಕಿ ಕಲಸಿ ಕುಡಿಯಬೇಕು ಹೀಗೆ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಕುಡಿಯುತ್ತ ಬಂದರೆ ಉಷ್ಣತೆ ಎಂಬುದು ಕಡಿಮೆ ಆಗುತ್ತದೆ ಇದನ್ನು ಬೇಸಿಗೆ ಕಾಲದಲ್ಲಿ ಕುಡಿದರೆ ತುಂಬಾ ಒಳ್ಳೆಯದು. ಇದು ಉಷ್ಣತೆಯಿಂದ ಬರುವ ಎಲ್ಲ ರೀತಿಯ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಉಷ್ಣತೆ ಎಂಬುದು ಸಣ್ಣ ಮಕ್ಕಳಿನಿಂದ ಹಿಡಿದು ವೃದ್ದರವರೆಗೂ ಎಲ್ಲರಿಗು ಸಾಮಾನ್ಯವಾಗಿ ಏರು ಪೇರು ಆಗುತ್ತಲೇ ಇರುತ್ತದೆ ಇದರಿಂದ ಕೆಲವೊಂದು ಸಮಸ್ಯೆಗಳು ಬಂದಾಗ ವೈದ್ಯರ ಬಳಿ ಭೇಟಿ ನೀಡಿದರೆ ಅವರು ನಿಮಗೆ ಬಿ ಕಾಂಪ್ಲೆಕ್ಸ್ ಮಾತ್ರೆಗಳು ನೀಡುವುದು ವಾಡಿಕೆ ಈ ರೀತಿಯ ಮಾತ್ರೆಗಳು ತಕ್ಷಣಕ್ಕೆ ನಮಗೆ ಒಳ್ಳೆಯ ಪರಿಣಾಮ ಕೊಟ್ಟರು ಅದು ಮುಂದೊಂದು ದಿನ ಹಲವು ರೀತಿಯ ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತೆದೆ. ಈ ಲೇಖನ ಇಷ್ಟ ಆದ್ರೆ ಕೊಡಲೇ ಶೇರ್ ಮಾಡಿರಿ ನಿಮ್ಮ ಸ್ನೇಹಿತರಿಗೂ ತಿಳಿಸಿರಿ.

LEAVE A REPLY

Please enter your comment!
Please enter your name here