ಕಣ್ಣಿನ ರೆಪ್ಪೆಗಳು ಸುಪರ್ ಆಗಿರಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ

0
574

ಹೆಣ್ಣು ಮಕ್ಕಳ ಅಂದವನ್ನು ಹೆಚ್ಚಿಸುವುದು ಕಣ್ಣಿನ ರೆಪ್ಪೆಗಳು ಇವುಗಳು ಸರಿಯಾಗಿಲ್ಲ ಅಂದರೆ ಮುಖದ ಅಂದವೇ ಕೆಟ್ಟು ಹೋಗುತ್ತದೆ ಹಾಗಾಗಿ ಕಣ್ಣಿನ ರೆಪ್ಪೆಗಳು ಇರಬೇಕು ಆದರೆ ಈ ಕಣ್ಣಿನ ರೆಪ್ಪಗಳು ಆರೋಗ್ಯದ ಸಮಸ್ಯೆಗೆ ಇಂದಲೂ ಅಥವ ಹೆಚ್ಚು ಕೆಮಿಕಲ್ ಯುಕ್ತ ಮೇಕಪ್ ಬಳಕೆ ಮಾಡುವುದರಿಂದಲೂ ಈ ಸಮಸ್ಯೆ ಆಗುತ್ತದೆ. ಈ ಸಮಸ್ಯೆ ಬಂದ ನಂತರ ಹೆಣ್ಣು ಮಕ್ಕಳು ಮತ್ತಷ್ಟು ಹಣ ಖರ್ಚು ಮಾಡಿ ಸಮಸ್ಯೆ ಸರಿ ಮಾಡಲು ಪ್ರಯತ್ನ ಪಡುತ್ತಾರೆ ಅದಕ್ಕಾಗಿ ಮತ್ತಷ್ಟು ಕೆಮಕಲ್ ಮಿಶ್ರಿತ ರಾಸಾಯನಿಕ ಕ್ರೀಮ್ ಬಳಕೆ ಮಾಡ್ತಾರೆ ಇದು ಸದ್ಯಕ್ಕೆ ಸರಿ ಹೋದರು ಕೆಲವು ದಿನಗಳ ನಂತರ ಸಮಸ್ಯೆ ಜಾಸ್ತಿ ಆಗುತ್ತದೆ. ಈ ಕಣ್ಣಿನ ರೆಪ್ಪಗಳನ್ನು ಹೆಚ್ಚಿಸಿಕೊಳ್ಳಲು ಏನು ಮಾಡಬೇಕು ಗೊತ್ತೇ

ಕಣ್ಣಿನ ರೆಪ್ಪೆಗಳು ಕಡಿಮೆ ಆಗುವುದಕ್ಕೆ ಕಾರಣಗಳು. ವಯಸ್ಸಾಗುವುದು ಹಾರ್ಮೋನ್ ಸಮಸ್ಯೆ ಚರ್ಮದ ಸಮಸ್ಯ ಹೆಚ್ಚು ಮಾತ್ರೆಗಳ ಸೇವನೆ ಪೌಷ್ಟಿಕಾಂಶದ ಕೊರತೆ ಮೇಕ್ಅಪ್ ಆದ ನಂತರ ಸರಿಯಾಗಿ ತೆಗೆಯದೆ ಇರುವುದು. ಅಥವಾ ಕೆಮಿಕಲ್ ಮಿಶ್ರಿತ ಮೇಕಪ್ ಹೆಚ್ಚು ಬಳಕೆ ಮಾಡುವುದು. ಕಣ್ಣಿನ ರೆಪ್ಪೆಗಳನ್ನ ಹೆಚ್ಚಿಸಿಕೊಳ್ಳಲು ಸುಲಭ ಮನೆಮದ್ದು. ಹರಳೆ ಎಣ್ಣೆ ಇದಕ್ಕೆ ಸ್ವಲ್ಪ ಅಲೋವೆರಾ ಜೆಲ್ ಬೆರೆಸಿಕೊಂಡು ಅದನ್ನು ಒಂದು ಹತ್ತಿಯಲ್ಲಿ ಹದ್ದಿ ಕಣ್ಣಿನ ರೆಪ್ಪೆಗಳ ಮೇಲೆ ಮಸಾಜ್ ಮಾಡಬೇಕು ಹೀಗೆ ಮಾಡಿದರೆ ಕಣ್ಣಿನ ರೆಪ್ಪೆಗಳು ಉದುರುವುದನ್ನು ತಡೆಯಬಹುದು.

ಲೋಳೆ ರಸ ಇದನ್ನು ಪ್ರತಿ ದಿನ ಮಲಗುವ ಮುನ್ನ ಕಣ್ಣಿನ ರೆಪ್ಪೆಗಳ ಮೇಲೆ ಹಚ್ಚಿಕೊಂಡು ಮಲಗಬೇಕು ನಂತರ ಬೆಳಗ್ಗೆ ಎದ್ದು ತಣ್ಣೀರಿನಿಂದ ತೊಳೆದುಕೊಳ್ಳಬೇಕು ಇದರಿಂದ ಕಣ್ಣಿನ ರೆಪ್ಪೆಗಳು ಬೇಗ ಬೆಳೆಯುತ್ತದೆ. ವಿಟಮಿನ್ ಈ ಇರುವಂತ ಆಹಾರವನ್ನು ಹೆಚ್ಚು ಸೇವಿಸುವುದರಿಂದ ಕೂಡ ಕಣ್ಣಿನ ರೆಪ್ಪೆಗಳು ಚೆನ್ನಾಗಿ ಬೆಳೆಯುತ್ತದೆ. ಒಂದು ಮೊಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಗ್ಲಿಸರೀನ್ ಹಾಕಿ ಚೆನ್ನಾಗಿ ಕಲಸಿಕೊಂಡು ಅದನ್ನು ಕಣ್ಣಿನ ರೆಪ್ಪೆಗಳ ಮೇಲೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತಣ್ಣೀರಿನಿಂದ ತೊಳೆಯ ಬೇಕು ಹೀಗೆ ಮಾಡಿದರೆ ಕಣ್ಣಿನ ರೆಪ್ಪೆಗಳು ಬೆಳೆಯುತ್ತವೆ. ಗ್ರೀನ್ ಟೀ ಅನ್ನು ಮಾಡಿಕೊಂಡು ಅದನ್ನು ಒಂದು ಹತ್ತಿಯ ಸಹಾಯದಿಂದ ಅದ್ದಿ ಕಣ್ಣಿನ ರೆಪ್ಪೆಗಳ ಮೇಲೆ ಮಸಾಜ್ ಮಾಡಿಕೊಂಡು ಸ್ವಲ್ಪ ಸಮಯ ಬಿಟ್ಟು ತೊಳೆಯಬೇಕು ಹೀಗೆ ಮಾಡಿದರೆ ಕಣ್ಣಿನ ರೆಪ್ಪೆಗಳು ಬೆಳೆಯುತ್ತವೆ. ಕಣ್ಣಿಗೆ ಮೇಕಪ್ ಮಾಡಿದ ಮೇಲೆ ರಾತ್ರಿ ಮಲಗುವ ಮುಂಚೆ ಅದನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆದು ಮಲಗಬೇಕು ಹೀಗೆ ಮಾಡಿದರೆ ಕಣ್ಣಿನ ರೆಪ್ಪೆಗಳು ಉದುರುವುದಿಲ್ಲ.

ಧೂಳು. ಬಿಸಿಲು. ಗಾಳಿಗೆ ಹೋಗುವಾಗ ಆದಷ್ಟು ಕಣ್ಣುಗಳು ಹಾಗೂ ಕಣ್ಣಿನ ರೆಪ್ಪೆಗಳನ್ನು ರಕ್ಷಣೆ ಮಾಡಿಕೊಳ್ಳಬೇಕು. ವಯಸ್ಸಿಗೆ ಬೇಕಾದಷ್ಟು ನಿದ್ದೆ ಮಾಡಬೇಕು ಹೀಗೆ ಮಾಡಿದರು ಕೂಡ ಕಣ್ಣಿನ ರೆಪ್ಪೆಗಳು ಉದುರುವುದಿಲ್ಲ. ಇವುಗಳನ್ನು ಪಾಲಿಸಿದರೆ ಸಾಕು ಯಾವುದೇ ಕಾರಣಕ್ಕೂ ಕಣ್ಣಿನ ರೆಪ್ಪೆಗಳು ಉದುರುವುದಿಲ್ಲ ಜೊತೆಗೆ ಕಣ್ಣಿನ ರೆಪ್ಪೆಗಳು ಅಂದವಾಗಿ ಬೆಳೆಯುತ್ತವೆ. ನಮ್ಮ ವೆಬ್ಸೈಟ್ ಚಿತ್ರಗಳಿಗೆ ವಿಶೇಷ ಕಾಪಿರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ಚಿತ್ರಗಳು ಅಥವ ಮಾಹಿತಿ ನಕಲು ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here