ಶಕ್ತಿಶಾಲಿ 900 ವರ್ಷದ ಶಿವನ ದೇವಸ್ಥಾನ ಮುಸ್ಲಿಂ ಕುಟುಂಬ ನಿರ್ವಹಣೆ ಮಾಡುತ್ತಾ ಇದೆ

0
582

ಶಿವ ಎಂದರೆ ಮತ್ತೊಂದು ಅರ್ಥ ಜಗತ್ತು ಎನ್ನಬಹುದು ಇಡೀ ಜಗತನ್ನೇ ನಡೆಸುತ್ತಿರುವ ಆತ ತನ್ನನ್ನು ನಂಬಿರುವ ಭಕ್ತರಿಗೆ ಎಂದು ಸಹ ಕಷ್ಯಗಳು ಕೊಡುವುದಿಲ್ಲ ಪ್ರೀತಿಯಿಂದ ಭಕ್ತಿಯಿಂದ ಆತನ ಧ್ಯಾನ ಮಾಡಿದರೆ ಪ್ರತಿ ನಿತ್ಯ ಪಂಚಾಕ್ಷರಿ ಮಂತ್ರ ಜಪಿಸಿದರೆ ಯಾರಿಗೂ ತೊಂದರೆ ಮಾಡದ ಹಾಗೇ ನಮ್ಮ ಜೀವನದಲ್ಲಿ ನಾವು ಇದ್ದರೆ ಖಂಡಿತ ಶಿವನ ಕೃಪೆ ನಮಗೆ ಬಹು ಬೇಗನೆ ಸಿಗಲಿದೆ. ನಮ್ಮ ಜನರು ಹೇಗಪ್ಪ ಅಂದ್ರೆ ಮಾಡೋ ತಪ್ಪುಗಳು ಎಲ್ಲವು ಮಾಡಿ ಕೊನೆಗೆ ಸಾವಿರಾರು ರುಪಾಯಿ ಕೊಟ್ಟು ದೇವರ ಹೆಸರಲ್ಲಿ ಪೂಜೆಗಳು ಮಾಡುವುದು ನೋಡಿದ್ದೇವೆ ಆದರೆ ಅವರಿಗೆ ತಿಳಿದಿರುವುದಿಲ್ಲ ಹಣವೇ ಎಲ್ಲದಕ್ಕೂ ಮುಖ್ಯ ಅಲ್ಲ ನಾವು ನಮ್ಮ ಜೀವನ ಹೇಗೆಲ್ಲ ನಡೆಸುತ್ತೇವೆ ಮತ್ತು ಅದರಿಂದ ಯಾರಿಗೆಲ್ಲ ಸುಖ ಮತ್ತು ಕಷ್ಟಗಳು ಆಗಿದೆ ಅದರ ಮೇಲೆ ನಮ್ಮ ಪಾಪ ಪುಣ್ಯಗಳ ಲೆಕ್ಕಚಾರ ಶುರು ಆಗಲಿದೆ. ನಮ್ಮ ಭಾರತ ಸರ್ವ ಧರ್ಮಗಳ ಬೀಡು ಇಲ್ಲಿ ಇರುವ ಅನೇಕ ರೀತಿಯ ಧರ್ಮದ ಜನರು ಅಣ್ಣ ತಮ್ಮಂದಿರ ಹಾಗೇ ಈಗಲೂ ಬದುಕುತ್ತಾ ಇದ್ದಾರೆ ಆದರೆ ಯಾರೋ ರಾಜಕೀಯ ಧರ್ಮ ಲಾಭಕ್ಕಾಗಿ ಮಾಡುವ ಕೆಲಸ ಇಡೀ ಧರ್ಮದ ಜನರನ್ನೇ ಕೆಲವೊಮ್ಮೆ ದೂಷಣೆ ಮಾಡಿದ ಹಾಗೇ ಆಗುತ್ತದೆ.

ನಾವು ನಿಮಗೆ ನಮ್ಮ ಭಾರತದಲ್ಲಿ ಇರುವ ಒಂದು ವಿಶೇಷ ದೇವಾಲಯದ ಬಗ್ಗೆ ಇಂದು ತಿಳಿಸುತ್ತೇವೆ. ಹಿಂದೂ ದೇವಾಲಯ ಎಂದ ಮೇಲೆ ಅಲ್ಲಿ ಹಿಂದೂ ವ್ಯಕ್ತಿ ಪೂಜೆ ಮಾಡುವುದು ಅದನ್ನು ನಿರ್ವಹಣೆ ಮಾಡುವುದು ಮಾಮೂಲಿ ಆದ್ರೆ ದಿಸ್ಪುರ ಎಂಬ ಒಂದು ಹಳ್ಳಿ ಗುವಾಹಾಟಿ ರಾಜ್ಯದಲ್ಲಿದೆ ಇಲ್ಲಿ ಸರಿ ಸುಮಾರು 900 ವರ್ಷದ ಹಳೆ ದೇವಾಲಯವನ್ನು ಒಂದು ಮುಸ್ಲಿಂ ಕುಟುಂಬ ನಿರ್ವಹಣೆ ಮಾಡುತ್ತಾ ಬಂದಿದೆ. ಇಲ್ಲಿನ ದೇವರನ್ನು ಕಾಣಲು ಪ್ರತಿ ನಿತ್ಯ ನೂರಾರು ಮುಸ್ಲಿಂ ಮತ್ತು ಹಿಂದೂ ಭಕ್ತರು ಬರುತ್ತಾರೆ ನಿಜಕ್ಕೆ ಈ ದೇಗುಲ ಭಾರತದಲ್ಲಿ ಇರುವ ಹಿಂದೂ ಮುಸ್ಲಿಂ ಸೌಹಾರ್ದತೆ ಎತ್ತಿ ಹಿಡಿಯುತ್ತದೆ. ಇಲ್ಲಿ ದೇವಾಲಯ ನೋಡಿಕೊಳ್ಳುವ ಹಾಜಿ ಮತಿಬಾರ್ ರೆಹಮಾನ್ ಅವರಿಗೆ ಶಿವ ಎಂದರೆ ಪಂಚ ಪ್ರಾಣ ಪ್ರತಿ ನಿತ್ಯ ಪಂಚಾಕ್ಷರಿ ಮಂತ್ರ ಪಾರಾಯಣ ಮಾಡುತ್ತಾ ಆತನನ್ನು ಭಕ್ತಿಯಿಂದ ಪೂಜೆ ಮಾಡುತ್ತಾ ಇರುತ್ತಾರೆ. ಇವರು ನಿನ್ನೆ ಮೊನ್ನೆ ಯಿಂದ ಈ ದೇಗುಲ ನಿರ್ವಹಣೆ ಮಾಡುತ್ತಾ ಇಲ್ಲ ಇರೆಹ್ಮನ್ ಅವರ ತಾತನ ಕಾಲದಿಂದಲೂ ಅಂದ್ರೆ ಸರಿ ಸುಮಾರು 500 ವರ್ಷಗಳಿಂದಲೂ ಈ ಕುಟುಂಬ ಶಿವನ ದೇಗುಲ ನಿರ್ವಹಣೆ ಮಾಡುತ್ತಾ ಇದೆ ಇದಕ್ಕೆ ಹಲವರು ರೀತಿಯ ಸಾಕ್ಷಿಗಳು ಈ ದೇಗುಲದಲ್ಲಿ ನಮಗೆ ದೊರೆಯುತ್ತದೆ.

ನಿಮಗೆ ಗೊತ್ತಿರಬಹುದು ನಮ್ಮ ದಕ್ಷಿಣ ಭಾರತದ ಕಡೆ ಒಂದಿಷ್ಟು ಸೌಹಾರ್ದತೆ ಇರುವ ದೇವಾಲಯ ನಾವು ನೋಡಿದ್ದೇವೆ ಆದರೆ ಉತ್ತರ ಭಾರತದಲ್ಲಿ ಕೋಮು ಸೌಹಾರ್ದತೆಯಿಂದ ನಡೆದುಕೊಂಡು ಹೋಗುತ್ತಿರುವ ಏಕೈಕ ಪ್ರಸಿದ್ದ ದೇವಾಲಯ ಇದು ಎಂದರೆ ತಪ್ಪಾಗುವುದಿಲ್ಲ. ಇಲ್ಲಿರುವ ಶಿವನು ಸಹ ಸಾಕಷ್ಟು ಪವಾಡಗಳು ಮಾಡುತ್ತಾನೆ ಆತನ ಎದುರು ನಿಂತರೆ ಸಾಕು ಮೈ ಜುಮ್ ಎನ್ನುವ ರೀತಿಯಲ್ಲಿ ಭಾಸವಾಗುತ್ತದೆ ಇದಕೆಲ್ಲ ಕಾರಣ ಆ ಸ್ಥಳದಲ್ಲಿ ನೆಲೆಸಿರುವ ಶಿವನ ಮಹಿಮೆ. ಅಲ್ಲಿನ ಸುತ್ತ ಮುತ್ತ ಇರುವ ಮುಸ್ಲಿಂ ಮತ್ತು ಹಿಂದೂಗಳು ಒಮ್ಮೆಲೇ ಬಂದು ಪೂಜೆ ಮಾಡಿಕೊಂಡು ಹೋಗುತ್ತಾರೆ ಏನೇ ಕಷ್ಟಗಳು ಬಂದರು ಈ ಶಿವನನ್ನು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾರೆ. ಈ ಲೇಖನ ಇಷ್ಟ ಆಗಿದ್ರೆ ಕೊಡಲೇ ಶೇರ್ ಮಾಡಿರಿ. ನಿಮ್ಮ ಸ್ನೇಹಿತರಿಗೂ ತಿಳಿಸಿರಿ.

LEAVE A REPLY

Please enter your comment!
Please enter your name here