ದಾಸವಾಳದ ಹೂವು ತಗೊಂಡು ಈ ರೀತಿ ಮಾಡಿ ಹತ್ತಾರು ಲಾಭಗಳು ಪಡೆಯಿರಿ

0
540

ದಾಸವಾಳದ ಹೂವನ್ನು ಪ್ರತಿಯೊಬ್ಬರೂ ನೋಡಿರುತ್ತೀರಾ ಇದನ್ನು ದೇವರಿಗೆ ಪೂಜೆಯ ಸಂದರ್ಭದಲ್ಲಿ ಬಳಸುತ್ತಾರೆ ಆದರೆ ಇದರಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ಹೆಚ್ಚು ಜನರಿಗೆ ತಿಳಿದಿರುವುದಿಲ್ಲ. ದಾಸವಾಳದ ಹೂವನ್ನು ಚೆನ್ನಾಗಿ ಅರೆದು ನಂತರ ಕೂದಲಿಗೆ ಹಚ್ಚುವುದರಿಂದ ನಿಮ್ಮ ಉದುರುವ ಕೂದಲಿನ ಸಮಸ್ಯೆ ಕಡಿಮೆಯಾಗುತ್ತದೆ. ದಾಸವಾಳದ ಹೂವನ್ನು ಚೆನ್ನಾಗಿ ಅರೆದು ನಂತರ ಅದರಿಂದ ಜ್ಯೂಸ್ ಅಥವಾ ಟೀ ಮಾಡಿ ಕುಡಿಯುವುದರಿಂದ ಸಣ್ಣಪುಟ್ಟ ಸಮಸ್ಯೆಗಳು ಬಂದರೆ ಶೀತ ಕೆಮ್ಮು ನೆಗಡಿ ಅಂತಹ ಸಮಸ್ಯೆಗಳು ದೂರವಾಗುತ್ತದೆ. ದಾಸವಾಳದ ಹೂವನ್ನು ಚೆನ್ನಾಗಿ ಅರೆದು ನಿಮ್ಮ ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖದಲ್ಲಿ ಯಾವುದೇ ರೀತಿಯ ಮೊಡವೆಗಳು ಬರುವುದಿಲ್ಲ ಹಾಗೂ ನಿಮ್ಮ ಮುಖದ ಕಾಂತಿಯೋ ಕೂಡ ಹೆಚ್ಚುತ್ತದೆ. ದಾಸವಾಳದ ಹೂವಿನಲ್ಲಿ ಇರುವ ಆಂಟಿ ಆಕ್ಸಿಡೆಂಟ್ಸ್ ಮತ್ತು ವಿಟಮಿನ್ ಸಿ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಡ್ರೈ ಸ್ಕಿನ್ ಇರುವವರು ಅಥವಾ ದೇಹದಲ್ಲಿ ನೀರಿನ ಅಂಶದ ಕೊರತೆ ಇರುವವರು ದಾಸವಾಳದ ಹೂವನ್ನು ಜ್ಯೂಸ್ ಮಾಡಿ ಪ್ರತಿನಿತ್ಯ ಸೇವಿಸುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.

ಪ್ರತಿನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇದು ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ ಹಾಗೂ ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಕೂಡ ಸಹಾಯ ಮಾಡುತ್ತದೆ. ದಾಸವಾಳದ ಹೂವಿನಲ್ಲಿ ಇರುವ ವಿಷೇಶವಾದ ಅಂಶಗಳು ನಿಮ್ಮ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ ಆದ್ದರಿಂದ ಪ್ರತಿದಿನ ದಾಸವಾಳ ಹೂವಿನ ಜ್ಯೂಸ್ ಕುಡಿಯುವುದು ಒಳ್ಳೆಯದು. ಅದರಲ್ಲೂ ಬಿಳಿ ದಾಸವಾಳದ ಹೂವಿನ ಜ್ಯೂಸ್ ಅನ್ನು ಕುಡಿಯುವುದು ಇನ್ನೂ ಒಳ್ಳೆಯದು. ಪ್ರತಿನಿತ್ಯ ಬೆಳಗ್ಗೆಯಿಂದ ಸಂಜೆಯವರೆಗೆ ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುವವರು ದಾಸವಾಳದ ಹೂವಿನ ಜ್ಯೂಸ್ ಅನ್ನು ಪ್ರತಿನಿತ್ಯ ಕುಡಿಯುವುದರಿಂದ ನಿಮ್ಮ ಕಣ್ಣುಗಳಿಗೆ ತಂಪನ್ನು ನೀಡುತ್ತದೆ ಹಾಗೂ ಕಣ್ಣಿಗೆ ಆಗುವ ಸ್ಟ್ರೆಸ್ ಅನ್ನು ಕೂಡ ಕಡಿಮೆ ಮಾಡುತ್ತದೆ. ದಾಸವಾಳದ ಹೂವನ್ನು ಚೆನ್ನಾಗಿ ಅರೆದು ನಂತರ ಇದರಿಂದ ಕಷಾಯವನ್ನು ಮಾಡಿ ಕುಡಿಯುವುದರಿಂದ ಇದು ನಿಮ್ಮ ಹೃದಯ ಸಂಬಂಧಿ ತೊಂದರೆಗಳನ್ನು ಕಡಿಮೆ ಮಾಡುತ್ತದೆ ಹಾಗೂ ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.

ದಾಸವಾಳದ ಹೂವನ್ನು ಚೆನ್ನಾಗಿ ಅರೆದು ಅದರಿಂದ ರಸವನ್ನು ತೆಗೆದು ಅದನ್ನು ಕೂದಲಿಗೆ ಹಚ್ಚುವುದರಿಂದ ನಿಮ್ಮ ತಲೆಯ ಕೂದಲಿನಲ್ಲಿ ತಲೆಹೊಟ್ಟನ್ನು ಕಡಿಮೆ ಮಾಡುತ್ತದೆ ಹಾಗೂ ಬಿಳಿ ಕೂದಲನ್ನು ಕೂಡ ಕಡಿಮೆ ಮಾಡುತ್ತದೆ ಮತ್ತು ಕೂದಲುಗಳು ಚೆನ್ನಾಗಿ ಬೆಳೆಯುವಂತೆ ಮಾಡುತ್ತದೆ. ದಾಸವಾಳದ ಹೂವಿನ ಟೀ ಅನ್ನು ಪ್ರತಿನಿತ್ಯ ಕುಡಿಯುವುದರಿಂದ ಇದು ನಿಮ್ಮ ಜೀರ್ಣ ಕ್ರಿಯೆಯನ್ನು ಚೆನ್ನಾಗಿ ಆಗುವಂತೆ ಮಾಡುತ್ತದೆ. ಚಳಿಗಾಲದಲ್ಲಿ ದಾಸವಾಳದ ಹೂವನ್ನು ಚೆನ್ನಾಗಿ ಅರೆದು ನಿಮ್ಮ ಕೈ ಕಾಲುಗಳಿಗೆ ಅದರ ರಸವನ್ನು ಹಚ್ಚುವುದರಿಂದ ಚಳಿಗಾಲದಲ್ಲಿ ನಿಮ್ಮ ಕೈ ಕಾಲುಗಳ ಚರ್ಮ ಬಿರುಕು ಬಿಡುವುದನ್ನು ಕಡಿಮೆ ಮಾಡುತ್ತದೆ.

LEAVE A REPLY

Please enter your comment!
Please enter your name here