ಮನೆಯ ಮುಂದೆ ರಂಗೋಲಿ ಹಾಕುವುದರಿಂದ ಮನೆಗೆ ಎಷ್ಟೆಲ್ಲಾ ಉಪಯೋಗ ಇದೆ ಗೊತ್ತೇ

0
900

ಬೆಳಿಗ್ಗೆ ಎದ್ದು ಮನೆಯ ಮುಂದೆ ಸ್ವಚ್ಛ ಮಾಡಿ ರಂಗೋಲಿ ಬಿಡಿಸಿದರೆ ಅದನ್ನು ನೋಡಲೇ ಒಂದು ಸಂತೋಷ ಮನೆಯ ಮುಂದೆ ರಂಗೋಲಿ ಹಾಕುವುದು ಹಿಂದಿನ ಕಾಲದಿಂದಲೂ ಬಂದಿರುವ ಸಂಪ್ರದಾಯ ಪದ್ದತಿ.ರಂಗೋಲಿಯನ್ನು ಸಂಸ್ಕೃತದಲ್ಲಿ ರಂಗವಲ್ಲಿ ಎಂದು ಕರೆಯುತ್ತಾರೆ. ರಂಗೋಲಿ ಹಾಕಲು ಹಲವರು ರೀತಿಯ ಪದಾರ್ಥಗಳನ್ನು ಬಳಸುತ್ತಾರೆ ಅವುಗಳಲ್ಲಿ ಸುಣ್ಣದಕಲ್ಲು, ಸೀಮೆಸುಣ್ಣ, ಅಕ್ಕಿಹಿಟ್ಟು ಇತ್ಯಾದಿ ಕೆಲವರು ಅಕ್ಕಿ ಹಿಟ್ಟು ಹಾಗು ಸುಣ್ಣ ಎರಡನ್ನೂ ಬೆರಸಿ ರಂಗೋಲಿಯನ್ನು ಬಿಡಿಸುತ್ತಾರೆ ಆ ರಂಗೋಲಿಗೆ ವಿಧವಿಧವಾದ ಬಣ್ಣವನ್ನು ಹಚ್ಚುತ್ತಾರೆ.ಇನ್ನು ಹಬ್ಬ ಹರಿದಿನಗಳು ಬಂದರೆ ಸಾಕು ಸುಮಾರು ಅರ್ಧ ಗಂಟೆ ವಿಧವಿಧವಾದ ರಂಗೋಲಿಗಳನ್ನು ಬಿಡಿಸಿ ಬಣ್ಣ ಹಚ್ಚುತ್ತಾರೆ.

ಆದರೆ ಈ ರಂಗೋಲಿ ಬಿಡಿಸುವುದರಿಂದ ಏನೆಲ್ಲ ಲಾಭ ಗೊತ್ತೇ. ಸುಣ್ಣದಕಲ್ಲಿನಿಂದ ರಂಗೋಲಿ ಬಿಡಿಸಿದಾಗ ಅದರ ವಾಸನೆಗೆ ಚೇಳು ಹಾವು ಮೊದಲಾದ ವಿಷ ಜಂತುಗಳು ಮನೆಯೊಳಗೆ ಬರುವುದಿಲ್ಲ ಎಂಬ ಕಾರಣಕ್ಕೆ ಬಿಡಿಸುತ್ತಾರೆ.ಇನ್ನು ಅಕ್ಕಿಹಿಟ್ಟಿನಿಂದ ರಂಗೋಲಿ ಬಿಡಿಸಿದಾಗ ಅದನ್ನು ತಿನ್ನಲು ಇರುವೆಗಳು ಬಂದು ವಿಷಜಂತುಗಳನ್ನು ಕೀಟನುಗಳನ್ನು ತಿಂದು ಹಾಕುತ್ತವೆ ಎಂಬ ಕಾರಣಕ್ಕೆ ಬಿಡಿಸುತ್ತಾರೆ. ಮಹಿಳೆಯರು ರಂಗೋಲಿಯನ್ನು ಬಿಡಿಸುವಾಗ ತೋರುಬೆರಳು ಹಾಗೂ ಹೆಬ್ಬೆರಳುಗಳನ್ನು ಬಳಸಿ ರಂಗೋಲಿ ಬಿಡಿಸುವುದರಿಂದ ಜ್ಞಾನಮುದ್ರೆಯಿಂದ ಆಗುವ ಉಪಯೋಗವು ಇದರಲ್ಲಿ ದೊರೆಯುತ್ತದೆ. ಮಾನಸಿಕವಾಗಿ ಒತ್ತಡಕ್ಕೆ ಗುರಿಯಾದ ಮಹಿಳೆಯರಿಗೆ ರಂಗೋಲೆ ಹಾಕುವುದರಿಂದ ಮಾನಸಿಕ ಶಾಂತಿಯೂ ಸಹ ಸಿಗುತ್ತದೆ. ಮನೆಯ ಮುಂದೆ ರಂಗೋಲಿ ಹಾಕುವುದರಿಂದ ಮನೆಯ ಒಳಗಡೆ ಯಾವುದೇ ರೀತಿಯ ಕೆಟ್ಟ ಶಕ್ತಿಗಳು ಒಳಗೆ ಬರುವುದಿಲ್ಲ.ರಂಗೋಲಿಯ ರೇಖೆಗಳು ವೃತ್ತ. ನೇರ ಅಂಕುಡೊಂಕಾಗಿ ಇರುವುದರಿಂದ ಈ ರೇಖೆಗಳು ನಮ್ಮ ಮೆದುಳಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತವೆ.

ರಂಗೋಲಿಯು ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ರಂಗೋಲಿ ಬಿಡಿಸುವಾಗ ಏಕಾಗ್ರತೆ ಎಂಬುದು ಬರುತ್ತದೆ. ರಂಗೋಲಿ ಬಿಡಿಸುವುದರಿಂದ ಮೆದುಳಿಗೆ ಹಾಗೂ ಮನಸ್ಸಿಗೆ ಒಳ್ಳೆಯ ಪರಿಣಾಮ ಬೀರುತ್ತದೆ. ಹಾಗಾಗಿ ಈ ರಂಗೋಲಿ ಬಿಡಿಸುವ ಪದ್ದತಿಯು ಆಚರಣೆಗೆ ಬಂದಿತು ಇದು ಗ್ರಾಮೀಣ ಪ್ರದೇಶಗಳಲ್ಲಿ ಇಂದು ಕೂಡ ಇದೆ ಆದರೆ ನಗರ ಪ್ರದೇಶಗಳಲ್ಲಿ ಈ ರಂಗೋಲಿ ಬಿಡಿಸಲು ಸಮಯವಿಲ್ಲದೆ ಬಣ್ಣಗಳಿಂದ ಬಿಡಿಸಿ ಬಿಟ್ಟಿರುತ್ತಾರೆ ಆದರೆ ಈ ರಂಗೋಲಿಯನ್ನು ನಿತ್ಯ ಕೂಡ ಸ್ವಚ್ಛ ಮಾಡಿ ಬಿಡಿಸಬೇಕು. ಆದರೆ ನಮ್ಮ ಇಂದಿನ ಹೆಣ್ಣು ಮಕ್ಕಳಿಗೆ ಕೆಲವರಿಗೆ ಬಿಟ್ಟರೆ ಉಳಿದ ಸಾಕಷ್ಟು ಜನಕ್ಕೆ ರಂಗೋಲಿಯ ಬಗ್ಗೆ ಸ್ವಲ್ಪವು ಜ್ಞಾನವು ಇಲ್ಲ ಬಿಡಿ ನಾಲ್ಕು ಅಕ್ಷರ ಓದಿದ ಮಾತ್ರಕ್ಕೆ ಮನುಷ್ಯ ದೊಡ್ಡ ವ್ಯಕ್ತಿ ಆಗೋದಿಲ್ಲ ಯಾರು ನಮ್ಮ ಶಸ್ತ್ರ ಸಂಪ್ರದಾಯ ಸಂಪೂರ್ಣ ಪಾಲನೆ ಮಾಡುತ್ತಾರೆ ಅವರೇ ನಿಜವಾದ ಮನುಷ್ಯರು. ಈ ಲೇಖನ ಇಷ್ಟ ಆದರೆ ಕೊಡಲೇ ಶೇರ್ ಮಾಡೀರಿ ರಂಗೋಲಿಯ ಉಪಯೋಗ ಎಲ್ಲ ಹೆಂಗಸರಿಗೂ ತಿಳಿಯಲಿ. ನಮ್ಮ ವೆಬ್ಸೈಟ್ ಎಲ್ಲ ಬರಹಗಳಿಗೆ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ನಕಲು ಮಾಡುವುದು ಅಪರಾಧ

LEAVE A REPLY

Please enter your comment!
Please enter your name here