ಮಲಗುವ ಮುನ್ನ ಮೊಸರನ್ನು ಸೇವನೆ ಮಾಡಿದ್ರೆ ಈ ಸಮಸ್ಯೆಗಳು ನಿಮಗೆ ಬರುತ್ತೆ

0
483

ಮೊಸರನ್ನು ಯಾರು ಇಷ್ಟಪಡುವುದಿಲ್ಲ ಹೇಳಿ ಪ್ರತಿಯೊಬ್ಬರಿಗೂ ಮೊಸರು ಅಥವಾ ಮಜ್ಜಿಗೆ ಎಂದರೆ ಬಹಳ ಇಷ್ಟ ಅದನ್ನು ಸೇವಿಸುವುದರಿಂದ ದೇಹವು ತಂಪಾಗಿರುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಊಟದ ಕೊನೆಯಲ್ಲಿ ಮೊಸರಿನ ಸೇವನೆ ಮಾಡುತ್ತಿದ್ದರೆ ಊಟ ಅಪೂರ್ಣ ಎಂದು ಭಾಸವಾಗುತ್ತದೆ. ಮತ್ತು ಮೊಸರಿನಲ್ಲೂ ಕೂಡ ಬಗೆಬಗೆಯ ಖಾದ್ಯಗಳನ್ನು ಮಾಡಬಹುದು. ಇಷ್ಟೊಂದು ಇಷ್ಟ ಪಡುವ ಮೊಸರನ್ನು ಮನಬಂದಂತೆ ಸೇವಿಸುವಂತಿಲ್ಲ ಏಕೆಂದರೆ ಆಯುರ್ವೇದದ ಪ್ರಕಾರ ಮೊಸರನ್ನು ಹೆಚ್ಚಾಗಿ ಸೇವಿಸುವುದರಿಂದ ನಮ್ಮ ಗಂಟಲಲ್ಲಿ ಕಫ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಮತ್ತು ರಾತ್ರಿಯ ಸಮಯ ಮೊಸರನ್ನು ಸೇವಿಸಲೇಬಾರದು. ಏಕೆಂದರೆ ರಾತ್ರಿಹೊತ್ತು ಮೊಸರು ಅನ್ನ ಸೇವಿಸಿದರೆ ಅದು ನಿಧಾನವಾಗಿ ಮೊಸರಿನಲ್ಲಿರುವ ಜಿಡ್ಡಿನ ಅಂಶ ನಮ್ಮ ಗಂಟಲಲ್ಲಿ ಅವನ್ನು ಹೆಚ್ಚು ಮಾಡುವ ಸಾಧ್ಯತೆ ಇರುತ್ತದೆ.

ಮೊಸರಿನಲ್ಲಿ ಜಿಡ್ಡಿನ ಅಂಶ ಮತ್ತು ಕೊಬ್ಬಿನ ಅಂಶ ಹೆಚ್ಚಾಗಿರುವುದರಿಂದ ಮೊಸರನ್ನ ಸೇವಿಸಿದಾಗ ಜೀರ್ಣಕ್ರಿಯೆ ಸ್ವಲ್ಪ ಕಷ್ಟವಾಗುತ್ತದೆ ಮೊಸರನ್ನು ಹೆಚ್ಚು ಸೇವಿಸಿದರೆ ದೇಹದಲ್ಲಿ ಕೊಬ್ಬಿನಂಶ ಹೆಚ್ಚಾಗುತ್ತದೆ. ಹೊಟ್ಟೆಯಲ್ಲಿ ಊತ ಅಥವಾ ಉರಿಯ ಸಮಸ್ಯೆ ಇದ್ದಾಗ ಮೊಸರನ್ನು ಸೇವಿಸಿದರೆ ಆ ಸಮಸ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದು ಉಳಿ ಮೊಸರಿದ್ದಾಗ ಇನ್ನು ಸ್ವಲ್ಪ ಜಾಸ್ತಿ ಇರುತ್ತದೆ. ಉಳಿ ಮೊಸರನ್ನು ಬಿಸಿ ಅನ್ನದ ಜೊತೆ ಮಿಶ್ರಣ ಮಾಡಿ ಸೇವಿಸ ಬೇಡಿ ಇದು ನಿಮ್ಮ ಆರೋಗ್ಯವನ್ನು ಬಹು ಬೇಗ ಹಾಳು ಮಾಡುತ್ತದೆ.

ಉರಿ ಮೂತ್ರದ ಸಮಸ್ಯೆ ಇಂದ ಬಳಲುತ್ತಿದ್ದರೆ ಹುಳಿ ಮೊಸರಿಗೆ ಸ್ವಲ್ಪ ಜೇನುತುಪ್ಪ ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ಸೇವಿಸುವುದರಿಂದ ನಿಮ್ಮ ಉರಿ ಮೂತ್ರದ ಸಮಸ್ಯೆ ಕಡಿಮೆ ಆಗುತ್ತದೆ. ಅಜೀರ್ಣ ದ ಸಮಸ್ಯೆ ಇಂದ ಕಷ್ಟ ಪಡುತ್ತ ಇದ್ದರೆ ಮೊಸರಿಗೆ ಸ್ವಲ್ಪ ಮೆಂತ್ಯ ಪುಡಿಯನ್ನು ಮಿಶ್ರಣ ಮಾಡಿ ಸೇವಿಸುವುದರಿಂದ ನಿಮ್ಮ ಅಜೀರ್ಣದ ಸಮಸ್ಯೆ ಬಗೆಹರಿಯುವುದು. ರಾತ್ರಿಯ ಸಂದರ್ಭದಲ್ಲಿ ಮೊಸರಿಗೆ ಸಕ್ಕರೆ ಯನ್ನು ಮಿಶ್ರಣ ಮಾಡಿ ಏನು ಸೇವಿಸಬಾರದು ಏಕೆಂದರೆ ಇದು ನಮ್ಮ ದೇಹದಲ್ಲಿ ಗ್ಯಾಸ್ಟಿಕ್ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ರಾತ್ರಿಯ ಸಮಯದಲ್ಲಿ ಮೊಸರಿನ ಸೇವನೆ ನಿಷಿದ್ಧ. ರಾತ್ರಿಯ ಸಮಯದಲ್ಲಿ ಮೊಸರಿನ ಸೇವನೆಯ ಹಬ್ಬದಲ್ಲೂ ಮಜ್ಜಿಗೆಯನ್ನು ಕುಡಿಯಿರಿ ಇದರಿಂದ ನಿಮ್ಮ ದೇಹ ತಂಪಾಗಿರುತ್ತದೆ ನಿಮ್ಮ ನಾಳಗಳು ಶುದ್ದಿಯಾಗುತ್ತವೆ ಹಾಗೂ ನಿಮ್ಮ ನಾಳಗಳು ಹಾನಿಕಾರಕ ಅಂಶಗಳನ್ನು ಹೀರಿಕೊಳ್ಳುವುದನ್ನು ತಡೆಗಟ್ಟುತ್ತದೆ.

ಹೀಗಾಗಿ ರಾತ್ರಿಯ ಸಮಯದಲ್ಲಿ ಮೊಸರನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ ಹಾಗೂ ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ ಇದರ ಬದಲು ಬೆಳಗ್ಗೆ ಅಥವಾ ಮಧ್ಯಾಹ್ನದ ಸಮಯದಲ್ಲಿ ಮೊಸರನ್ನು ಸೇವನೆ ಮಾಡಬಹುದು. ರಾತ್ರಿಯ ಸಮಯದಲ್ಲಿ ಮೊಸರನ್ನು ಸೇವನೆ ಮಾಡಲೇ ಬೇಕು ಎಂದೆನಿಸಿದರೆ ಮೊಸರಿನ ಬದಲು ಮಜ್ಜಿಗೆಯನ್ನು ಕುಡಿಯಿರಿ. ಈ ಲೇಖನ ತಪ್ಪದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ.

LEAVE A REPLY

Please enter your comment!
Please enter your name here