ಊಟ ಆದ ನಂತರ ಹೀಗೆ ಮಾಡಿ ನಿಮ್ಮ ಆರೋಗ್ಯ ಸುಪರ್ ಆಗಿರುತ್ತೆ

0
451

ನಮ್ಮ ದೇಶದಲ್ಲಿ ಮಾಡುವಷ್ಟು ವಿವಿಧ ರೀತಿಯ ಖಾದ್ಯಗಳನ್ನು ಬೇರೆ ಯಾವ ದೇಶದವರು ಸಹ ಮಾಡಿಕೊಂಡು ತಿನ್ನುವುದು ಇಲ್ಲ ಬಿಡಿ. ನಾವು ರುಚಿ ರುಚಿ ತಿನ್ನುತ್ತೇವೆ ಆದ್ರೆ ನಾವು ಆರೋಗ್ಯದ ಕಡೆಗೆ ಹೆಚ್ಚಿನ ಒತ್ತು ನೀಡುವುದಿಲ್ಲ ಸಣ್ಣ ಸಣ್ಣ ವಿಷಯಗಳನ್ನು ಅಸಡ್ಡೆ ಮಾಡಿ ಕೊನೆಗೆ ಅದು ಬೇರೆ ಸಮಸ್ಯೆಗಳು ಆಗುವ ಸಾಧ್ಯತೆ ಇದೆ. ನಾವು ನಿಮಗೆ ಇಂದು ವಿಶೇಷ ಮಾಹಿತಿ ತಿಳಿಸುತ್ತಾ ಇದ್ದೇವೆ ಕೊನೆವರೆಗೂ ಓದಿ ತಪ್ಪದೇ ನಂತರ ಶೇರ್ ಮಾಡಿರಿ. ಏಲಕ್ಕಿಯ ಬಗ್ಗೆ ಯಾರಿಗೆ ತಿಳಿದಿರುವುದಿಲ್ಲ ಹೇಳಿ ಎಲ್ಲರಿಗೂ ಏಲಕ್ಕಿ ಗೊತ್ತಿರುತ್ತದೆ. ಏಲಕ್ಕಿಯನ್ನು ಅಡುಗೆಯಲ್ಲಿ ರುಚಿಯನ್ನು ಸ್ವಾದವನ್ನು ಹಾಗೂ ಅಡಿಗೆಯ ಸುವಾಸನೆಯನ್ನು ಹೆಚ್ಚಿಸಲು ಬಳಸುತ್ತಾರೆ. ಹಾಗೂ ಏಲಕ್ಕಿಯಿಂದ ಟೀ ಕೂಡ ಮಾಡಿಕೊಂಡು ಕುಡಿಯುತ್ತಾರೆ. ಹಿಂದಿನ ಕಾಲದ ಒಂದು ಗಾದೆಯನ್ನು ಕೇಳೇ ಇರುತ್ತೀರ ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂದು. ಅದೇ ರೀತಿ ಇವೆಲ್ಲವೂ ಕೂಡ ನೋಡಲು ಬಹಳ ಚಿಕ್ಕದಾಗಿರುತ್ತದೆ ಆದರೆ ಇದರಿಂದ ಸಿಗುವ ಆರೋಗ್ಯಕರ ಲಾಭಗಳು ಅಪಾರ. ಆಯುರ್ವೇದದಲ್ಲಿ ಎಲಕ್ಕಿಗೆ ಒಂದು ಮಹತ್ವದ ಸ್ಥಾನವಿದೆ ಅದೇ ರೀತಿ ವೈದ್ಯಕೀಯ ಲೋಕದಲ್ಲಿ ಕೂಡ ಏಲಕ್ಕಿಯನ್ನು ಬಹಳಷ್ಟು ಔಷಧಿಗಳನ್ನು ತಯಾರಿಸಲು ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಟೂತ್ ಪೇಸ್ಟ್ ನಲ್ಲಿ ಕೂಡ ಏಲಕ್ಕಿಯನ್ನು ಮಿಶ್ರಮಾಡಿ ತಯಾರಿಸುತ್ತಿದ್ದಾರೆ. ಏಲಕ್ಕಿಯನ್ನು ತಿನ್ನುವುದರಿಂದ ನಮ್ಮ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಆದ್ದರಿಂದ ಎಲ್ಲರೂ ಊಟ ಆದ ನಂತರ ಏಲಕ್ಕಿಯನ್ನು ಸೇವಿಸುತ್ತಾರೆ. ಇದು ನಮ್ಮ ದೇಹದಲ್ಲಿ ಆಹಾರದ ಚಯಾ ಪಚನ ಕ್ರಿಯೆಯನ್ನು ಚೆನ್ನಾಗಿ ಆಗುವಂತೆ ಮಾಡುತ್ತದೆ.

ಏಲಕ್ಕಿಯು ಬಹಳಷ್ಟು ರೋಗಗಳಿಗೆ ಒಂದು ರೀತಿಯ ರಾಮಬಾಣದಂತೆ ಕೆಲಸ ಮಾಡುತ್ತದೆ. ಪ್ರತಿನಿತ್ಯ ಒಂದೆರಡು ಏಲಕ್ಕಿಯನ್ನು ಸೇವಿಸುವುದರಿಂದ ಇದು ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆಗಳನ್ನು ತರುತ್ತದೆ ಏಕೆಂದರೆ ಏಲಕ್ಕಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಇದು ನಮ್ಮ ದೇಹದಲ್ಲಿ ಜೀರ್ಣಕ್ರಿಯೆಯನ್ನು ಚೆನ್ನಾಗಿ ಆಗುವಂತೆ ಮಾಡುತ್ತದೆ ಇದರಿಂದ ನಾವು ದಿನಪೂರ್ತಿ ಚೈತನ್ಯದಿಂದ ಹಾಗೂ ಲವಲವಿಕೆಯಿಂದ ಕೂಡಿರುತ್ತದೆ ಅಷ್ಟೇ ಅಲ್ಲದೆ ಇದು ನಮ್ಮ ದೇಹದ ತೂಕವನ್ನು ಕೂಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಲಕ್ಕಿಯನ್ನು ನಿಯಮಿತವಾಗಿ ಊಟದ ನಂತರ ಸೇವಿಸುವುದರಿಂದ ನಿಮ್ಮ ತಲೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ ನಾವು ನಿಮ್ಮ ಕೂದಲು ಉದ್ದವಾಗಿ ಮತ್ತು ದಟ್ಟವಾಗಿ ಬೆಳೆಯುತ್ತದೆ.

ಏಲಕ್ಕಿಯನ್ನು ನಿಯಮಿತವಾಗಿ ಊಟದ ನಂತರ ತಿನ್ನುವುದರಿಂದ ನಿಮ್ಮ ರಕ್ತವನ್ನು ಶುದ್ಧಗೊಳಿಸುತ್ತದೆ ಹಾಗೂ ನಿಮ್ಮ ಹೃದಯವು ಚೆನ್ನಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ. ಪ್ರತಿನಿತ್ಯ ಮಲಗುವ ಮುನ್ನ ಹಾಲಿನಲ್ಲಿ ಏಲಕ್ಕಿ ಹಾಗೂ ಜೇನುತುಪ್ಪವನ್ನು ಮಿಶ್ರಣ ಮಾಡಿ ಕುಡಿಯುವುದರಿಂದ ಇದು ನಿಮ್ಮ ಲೈಂಗಿಕ ಆಸಕ್ತಿಯನ್ನು ಹೆಚ್ಚು ಆಗುವಂತೆ ಮಾಡುತ್ತದೆ. ಹಾಗೂ ಇದರಿಂದ ನಿಮ್ಮ ದಾಂಪತ್ಯ ಜೀವನ ಹೆಚ್ಚು ಶೃಂಗಾರಮಯ ವಾಗಿರುವಂತೆ ಮಾಡುತ್ತದೆ. ಬಿಪಿ ಅಥವಾ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರೆ ಪ್ರತಿ ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಏಲಕ್ಕಿಯನ್ನು ಸೇರಿ ಸೇರಿ ಇದರಿಂದ ನಿಮ್ಮ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಉದರ ಬಾಧೆ ಅಥವಾ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ ಏಲಕ್ಕಿ ಮತ್ತು ನಿಂಬೆ ಹಣ್ಣಿನ ರಸವನ್ನು ನೀರಿನ ಜೊತೆ ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ಸಕ್ಕರೆಯನ್ನು ಬೆರೆಸಿ ನಂತರ ಕುಡಿಯುವುದರಿಂದ ನಿಮ್ಮ ಹೊಟ್ಟೆ ನೋವಿನ ಸಮಸ್ಯೆ ಬಗೆಹರಿಯುತ್ತದೆ. ಆರ್ಯುರ್ವೇದ ವೈದ್ಯಕೀಯ ಲೋಕದಲ್ಲಿ ಅನೇಕ ಔಷಧಿಗಳನ್ನು ತಯಾರಿಸಲು ಏಲಕ್ಕಿಯನ್ನು ಉಪಯೋಗಿಸುತ್ತಾರೆ. ಮೊದಲೇ ಹೇಳಿದಂತೆ ಬರಿ ಅಡುಗೆಗೆ ಮಾತ್ರ ಸೀಮಿತವಾಗಿರದೆ ಒಂದು ವಿಶೇಷ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

LEAVE A REPLY

Please enter your comment!
Please enter your name here