ಗಂಡ ಹೆಂಡತಿಯ ಸಂಬಂಧ ಸದಾಕಾಲ ಸಂತೋಷವಾಗಿ ಇರಬೇಕು ಅಂದ್ರೆ ಹೀಗೆ ಮಾಡಿ ಸಾಕು

0
1257

ಪ್ರತಿ ಒಬ್ಬರ ಜೀವನದಲ್ಲಿ ಹೆಣ್ಣಿಗೆ ಮತ್ತು ಗಂಡಿಗೆ ಮದುವೆ ಎಂಬುದು ನಿರ್ದಿಷ್ಟ ವಯಸ್ಸು ಬಂದಾಗ ಆಗಿಯೇ ಆಗುತ್ತದೆ. ಅವರ ಜೀವನವನ್ನು ಬದಲಾಯಿಸುತ್ತದೆ ಹೊಸ ರೀತಿಯ ಜೀವನವನ್ನು ಶುರು ಮಾಡುತ್ತಾರೆ ಇದು ಎಲ್ಲರಿಗೂ ಕೂಡ ಅನಿವಾರ್ಯ ಆದರೆ ಕೆಲವರು ನಮಗೆ ಮದುವೆಯೇ ಬೇಡ ಎಂದು ಒಬ್ಬರೇ ಇರಲು ಇಷ್ಟ ಪಡುತ್ತಾರೆ ಆದರೆ ಮದುವೇ ಎಂಬುದು ಗಂಡಿಗೆ ಮತ್ತು ಹೆಣ್ಣಿಗೆ ಒಂದು ಬಾಳ ಸಾಂಗತಿಯನ್ನು ನೀಡುತ್ತದೆ ಇವರು ಸಾಯುವ ತನಕ ಕೂಡ ಒಟ್ಟಿಗೆ ಜೀವನ ನೆಡೆಸುತ್ತಾರೆ ಯಾವುದೇ ರೀತಿಯ ಕಷ್ಟ ಸುಖ ಬಂದರು ಎಲ್ಲವನ್ನು ಹಂಚಿಕೊಂಡು ಬದುಕು ಸಾಗಿಸುತ್ತಾರೆ. ಆದರೆ ಕೆಲವು ಗಂಡ ಹೆಂಡತಿಯರ ಜೀವನದಲ್ಲಿ ಮದುವೆ ಆದ ಕೆಲವು ದಿನಗಳು ಸಂತೋಷದಿಂದ ಇರುತ್ತಾರೆ ಆದರೆ ದಿನಗಳು ಕಳೆದಂತೆ ಇಬ್ಬರಲ್ಲೂ ಕೂಡ ಜಗಳ ಕಿತ್ತಾಟ ಮುನಿಸು ಎಂಬುದು ಶುರುವಾಗಿ ದಾಂಪತ್ಯ ಜೀವನವನ್ನೇ ಕೆಡಿಸಿಕೊಳ್ಳುತ್ತಾರೆ ಸಂತೋಷ ಎಂಬುದು ದೂರವಾಗುತ್ತದೆ. ಎಷ್ಟೋ ಜೋಡಿಗಳು ಯೋಚನೆ ಮಾಡದೆ ಡೈವೋರ್ಸ್ ನೀಡಲು ಇಂದು ಮುಂದು ನೋಡುವುದಿಲ್ಲ.

ಅದಕ್ಕಾಗಿ ಗಂಡ ಹೆಂಡತಿಯರ ಮದ್ಯದಲ್ಲಿ ಮನಸ್ತಾಪ ಬರಬಾರದು ಸಂತೋಷವಾಗಿ ಇರಬೇಕು ಎಂದರೆ ಏನು ಮಾಡಬೇಕು ಗೊತ್ತೇ. ದಂಪತಿಗಳಲ್ಲಿ ಯಾರಾದರೂ ಒಬ್ಬರು ಅಥವಾ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದಾರೆ ಸಂಜೆ ಮನೆಗೆ ಬಂದ ತಕ್ಷಣ ತಮ್ಮ ಸಂಗಾತಿಯನ್ನು ಆತ್ಮೀಯವಾಗಿ ಒಮ್ಮೆ ಮಾತನಾಡಿಸಬೇಕು. ಯಾವುದೇ ಕಾರಣಕ್ಕೂ ಕೆಲಸದ ಒತ್ತಡವನ್ನು ಮನೆಗೆ ತರಬಾರದು. ಕೆಲಸದ ಒತ್ತಡ ಏನೇ ಇರಲಿ ಅದನ್ನು ಆಫೀಸಿನಲ್ಲೇ ಬಿಟ್ಟು ಬಿಡಿ. ಕೆಲಸದಿಂದ ಮನೆಗೆ ಬರುವಾಗ ಕೆಲಸದ ವಿಷಯಗಳನ್ನು ಬಿಟ್ಟು ಮನೆ ಬಗ್ಗೆ ಜೀವನದ ಬಗ್ಗೆ ಜೀವನ ಸಂಗಾತಿ ಬಗ್ಗೆ ಸ್ವಲ್ಪ ಸಮಯ ಯೋಚಿಸಬೇಕು ಆಗ ದಂಪತಿಗಳ ನಡುವೆ ಪ್ರೀತಿ ಬೆಳೆಯುತ್ತದೆ. ನಿತ್ಯ ಕೆಲಸಗಳಿಂದ ಒದ್ದಾಡುತ್ತಿದ್ದರೂ ಆಗಾಗ ಜಾಲಿಯಾಗಿ ಹೊರಗೆ ಸುತ್ತಾಡಿ ಬರಬೇಕು ಪಾರ್ಕ್ ಸಿನಿಮಾ ರೆಸ್ಟೋರೆಂಟ್‌ಗೆ ಸಂತೋಷ ನೀಡುವ ಸ್ಥಳಗಳಿಗೆ ಹೋಗಿ ಎಂಜಾಯ್ ಮಾಡಬೇಕು.

ಬಹಳಷ್ಟು ದಂಪತಿಗಳು ತಮ್ಮ ಜೀವನ ಸಂಗಾತಿಯ ಜತೆ ಲೈಫನ್ನು ಎಂಜಾಯ್ ಮಾಡಲು ಇಷ್ಟಪಡುತ್ತಾರೆ. ಆದರೆ ಯಾವುದೋ ಒಂದು ಸಣ್ಣ ವಿಷಯಕ್ಕೆ ಇಬ್ಬರು ಸಹ ಇರಿಸು ಮುನಿಸು ಮಾಡಿಕೊಳ್ಳುತಾರೆ, ನೀವು ಸಣ್ಣ ಸಣ್ಣ ವಿಷಯಗಳಿಗೆ ಮಾಡಿಕೊಳ್ಳುವ ಕೋಪಗಳು ಆ ದಿನದ ಸಂಪೂರ್ಣ ಸಂತೋಷ ಹಾಳು ಮಾಡುತ್ತದೆ. ಮನೆಯಲ್ಲಿ ಯಾವುದೇ ಕೆಲಸವನ್ನು ಸಾಮಾನ್ಯವಾಗಿ ಮಹಿಳೆಯರೇ ಮಾಡುತ್ತಾರೆ ಈ ಕೆಲಸಗಳನ್ನು ಗಂಡಸರು ಕೂಡ ಹಚ್ಚಿಕೊಂಡು ಮಾಡಬೇಕು ಆಗ ಮನೆಯಲ್ಲಿ ಸಂತೋಷ ಇರುತ್ತದೆ. ದಂಪತಿಗಳಲ್ಲಿ ಇಬ್ಬರೂ ತಮ್ಮ ಎರಡೂ ಕಡೆಯ ಬಂಧುಗಳು ಕುಟುಂಬ ಸದಸ್ಯರು ಸ್ನೇಹಿತರನ್ನು ಸಮಾನ ಗೌರವ ಕೊಡಬೇಕು. ಇದರಿಂದ ಜೀವನ ಸಂಗಾತಿಯ ಮೇಲೆ ಒಳ್ಳೆಯ ಅಭಿಪ್ರಾಯ ಉಂಟಾಗುತ್ತದೆ.

ಮನೆಯಲ್ಲಿ ತುಂಬಾ ಕೋಣೆಗಳಿರುವ ದಂಪತಿಗಳು ಯಾವಾಗಲೂ ಒಂದೇ ಕೋಣೆಯಲ್ಲಿ ಅಲ್ಲದೆ ಇಬ್ಬರೂ ಸ್ವಲ್ಪ ಸಮಯ ಬೇರೆ ಬೇರೆ ರೂಮುಗಳಲ್ಲಿ ಕಳೆದರೆ ಇದರಿಂದ ಏನೋ ಒಂದು ರೀತಿಯ ಖುಷಿ ಇರುತ್ತದೆ. ದಂಪತಿಗಳಿಬ್ಬರೂ ತಮ್ಮ ಸಂಬಂಧಗಳಲ್ಲಿ ಏನೆಲ್ಲಾ ಕಳೆದುಕೊಳ್ಳುತ್ತಿದ್ದಾರೆ ಏನೆಲ್ಲಾ ಗ್ರಹಿಸುತ್ತಿದ್ದಾರೆ ಎಂದು ಯಾವಾಗಲೂ ತಿಳಿದುಕೊಳ್ಳುತ್ತಾ ಇರಬೇಕು. ಗಂಡ ಅಥವಾ ಹೆಂಡತಿ ಇವರಲ್ಲಿ ಯಾವುದೇ ರೀತಿಯ ವಿಷಯ ಇದ್ದರು ಕೂಡ ಯಾವುದೇ ವಿಷಯವನ್ನು ಮುಚ್ಚಿಡಬಾರದು. ಮನೆಯಲ್ಲಿ ಮಕ್ಕಳು ಇದ್ದರೆ ತಂದೆಯು ಸಹ ಮಕ್ಕಳ ಜೊತೆಗೆ ಸಮಯ ಕೊಟ್ಟು ಅವರ ಪಾಲನೆ ಮಾಡುವುದು ಮಕ್ಕಳಿಗೆ ಓದಿಸುವುದು ಈ ರೀತಿ ಹೆಂಡತಿ ಮಾಡುವ ಎಲ್ಲ ಕೆಲಸವನ್ನು ಹಂಚಿಕೊಳ್ಳಬೇಕು. ನೀವು ಗಂಡ ಹೆಂಡತಿ ಇಬ್ಬರು ಅನ್ಯುನವಾಗಿ ಇದ್ದಾಗ ಕೆಲವು ಜನರು ಕೆಡಕು ಮಾಡಲು ಬರುತ್ತಾರೆ ಇಲ್ಲ ಸಲ್ಲದ ವಿಷ್ಯ ಚಾಡಿಗಳನ್ನು ಹೇಳಿ ನಿಮ್ಮ ಸಂಬಂಧ ಹಾಳು ಮಾಡುವ ಪ್ರಯತ್ನ ಪಡುತ್ತಾರೆ ಇದರಿಂದ ನೀವು ಹೆಚ್ಚಿನ ಜಾಗ್ರತೆ ಇರುವುದು ಸೂಕ್ತ. ಏನೇ ವಿಷ್ಯ ಇದ್ದರು ಗಂಡ ಹೆಂಡತಿ ಮದ್ಯೆ ಇರಬೇಕೆ ಹೊರತು ಮೂರನೇ ವ್ಯಕ್ತಿಗೆ ಆ ವಿಷ್ಯ ತಿಳಿಯದ ಹಾಗೇ ಮಾಡಿರಿ. ಹೀಗೆ ಮಾಡಿದರೆ ದಂಪತಿಗಳ ನಡುವೆ ಸಂತೋಷ ಎಂಬುದು ಸದಾ ಇರುತ್ತದೆ.

LEAVE A REPLY

Please enter your comment!
Please enter your name here