ನೀವು ನಾಲಿಗೆ ಸ್ವಚ ಮಾಡಿಲ್ಲ ಅಂದ್ರೆ ನಿಮಗೆ ಹನ್ನೊಂದು ರೀತಿಯ ರೋಗಗಳು ಬರುತ್ತೆ

0
437

ನಾಲಿಗೆ ಸ್ವಚತೆ ಮನುಷ್ಯನಿಗೆ ಬಹು ಮುಖ್ಯ ಆದರೆ ನಮ್ಮಲ್ಲಿ ಸಾಕಷ್ಟು ಜನರು ಹಲ್ಲು ಉಜ್ಜಿ ನಾಲ್ಕು ಬಾರಿ ಬಾಯಿ ಮುಕ್ಕಳಿಸಿ ಮುಗಿಯಿತು ಸಾಕಪ್ಪ ಅಂತ ಆತುರದಿಂದ ಓಡುತ್ತಾರೆ. ನಾವು ಪ್ರತಿ ನಿತ್ಯ ಹಲ್ಲನ್ನು ಹೇಗೆ ಸ್ವಚ ಮಾಡುತ್ತೇವೆ ಹಾಗೇ ನಾಲಿಗೆಯನ್ನು ಸಹ ಸ್ವಚ ಮಾಡಲೇ ಬೇಕು. ಈಗಂತೂ ಅಗ್ಗದ ಬೆಲೆಗೆ ಸಿಗುವ ಒಂದಿಷ್ಟು ತೂಥ್ ಪೇಸ್ಟ್ ಗಳು ಮತ್ತು ಯಾವುದೇ ಆಲೋಚನೆ ಇಲ್ಲದೆ ಅದನ್ನು ಬಳಕೆ ಮಾಡುವುದು ಮತ್ತಷ್ಟು ಸಮಸ್ಯೆ ಬರಲು ಕಾರಣ ಆಗುತ್ತದೆ. ನಮ್ಮ ಹೆಚ್ಚಿನ ಜನರು ಉಡಾಸೆ ಉತ್ತರವನ್ನೇ ನೀಡುತ್ತಾರೆ ಯಾವ ಟೂತ್ ಪೇಸ್ಟ್ ಆದ್ರೆ ಏನು ಎಂದು ಆದ್ರೆ ಅದಕ್ಕೆ ಹಾಕುವ ರಾಸಾಯನಿಕಗಳು ಸ್ವಲ್ಪ ಪ್ರಮಾಣದಲ್ಲಿ ಆದರು ನಿಮ್ಮ ದೇಹಕ್ಕೆ ಸೇರಿ ಅನೇಕ ರೀತಿಯ ರೋಗಗಳು ಬರುವ ಹಾಗೇ ಮಾಡುತ್ತದೆ. ಹಾಗೆಯೇ ನಾವು ನಿಮಗೆ ನಾಲಿಗೆಯನ್ನು ಸ್ವಚ ಮಾಡದೆ ಇದ್ದಲ್ಲಿ ನಿಮಗೆ ಯಾವ ಯಾವ ಸಮಸ್ಯೆಗಳು ಬರುತ್ತದೆ ಸಂಪೂರ್ಣ ಮಾಹಿತಿ ನೀಡಿದ್ದೇವೆ ತಪ್ಪದೇ ಓದಿ.

ಪ್ರತಿ ನಿತ್ಯ ನಾವು ನಾಲಿಗೆಯನ್ನು ಸ್ವಚ್ಚ ಮಾಡದೇ ಇದ್ದಲ್ಲಿ ಅವುಗಳು ಅಪಾಯಕಾರಿ ಬ್ಯಾಕ್ಟೀರಿಯ ಉತ್ಪತ್ತಿ ಆಗಲು ನಾವೇ ದಾರಿ ಮಾಡಿ ಕೊಟ್ಟ ಆಗುತ್ತದೆ. ಈ ಬ್ಯಾಕ್ಟೀರಿಯಾ ಉತ್ಪ್ಪತ್ತಿ ಆದ ನಂತರ ಅವುಗಳು ಸುಮ್ಮನೆ ಇರುವುದಿಲ್ಲ ಅನೇಕ ರೀತಿಯ ರೋಗ ರುಜುನೆಗಳು ಬರುವ ಹಾಗೇ ಮಾಡಿಸುತ್ತದೆ. 2 ನಾಲಿಗೆಯ ಸ್ವಚತೆ ಮಾಡದೆ ಇದ್ದಲಿ ಬಾಯಲ್ಲಿ ದುರ್ಘಂಧ ಹೆಚ್ಚಾಗಿ ನೀವು ಯಾರೊಂದಿಗೆ ಸಹ ಮಾತನಾಡಲು ಸಾಧ್ಯ ಆಗುವುದಿಲ್ಲ ಬಾಯಿಯಿಂದ ಕೆಟ್ಟ ವಾಸನೆ ಬರುತದೆ. ವಿಶೇಷ ಏನು ಅಂದ್ರೆ ಈ ವಾಸನೆ ನಿಮ್ಮನು ಅಷ್ಟೇನೂ ಬಾದೆ ಮಾಡುವುದಿಲ್ಲ ಅಂದ್ರೆ ಇದರಿಂದ ಜನಕ್ಕೆ ಸಾಕಷ್ಟು ಕಿರಿ ಕಿರಿ ಆಗಲಿದೆ. ನಾಲಿಗೆಯ ಸ್ವಚತೆಗೆ ಟಾಂಗ್ ಕ್ಲೀನರ್ ಬಳಕೆ ಮಾಡುವುದು ಮರೆಯಬೇಡಿ. ಪ್ರತಿ ದಿನ ನಾಲಿಗೆಯನ್ನು ಸ್ವಚ್ಚ ಮಾಡದೇ ಇದ್ದಲ್ಲಿ ನಾಲಿಗೆಯ ಮೇಲೆ ಬ್ಯಾಕ್ಟೀರಿಯಾ ಜಾಸ್ತಿ ಆಗಿ ಒಂದು ತೆಳ್ಳಗಿನ ಬಿಳಿ ಪದರ ಉದ್ಬವ ಆಗಲಿದೆ.

ಇದು ನಿಮ್ಮ ಆಹಾರವನ್ನು ರುಚಿ ಕೊಡದ ಹಾಗೇ ಮಾಡಿಸುತ್ತದೆ. ನೀವು ಎಷ್ಟೇ ಉತ್ತಮ ಆಹಾರ ತಿಂದರು ಸಹ ನಿಮಗೆ ರುಚಿ ಎಂಬುದು ಸರಿಯಾಗೀ ದೊರೆಯುವುದಿಲ್ಲ. 4 ದೇಹದಲ್ಲಿ ಆರೋಗ್ಯ ಸಮಸ್ಯೆ ಎಂಬುದು ಬಂದಾಗ ನಮ್ಮ ವೈದ್ಯರು ನಮ್ಮ ನಾಲಿಗೆ ಚೆಕ್ ಮಾಡಿ ನಂತರ ದೇಹದ ಆರೋಗ್ಯದ ಸ್ತಿತಿ ತಿಳಿಸುತ್ತಾರೆ ಆದರೆ ನೀವು ನಾಲಿಗೆಯನ್ನು ಸ್ವಚತೆ ಮಾಡದೆ ಇದ್ದಲ್ಲಿ ಅವರಿಗೆ ಮಾಹಿತಿ ಕೊಡಲು ಕಷ್ಟ ಆಗಬಹುದು. ಮತ್ತು ಹೃದಯ ಸಂಬಂಧಿ ಖಾಯಿಲೆಗಳು ಏನಾದರು ಇದ್ದಲ್ಲಿ ಮತ್ತಷ್ಟು ತೀವ್ರತೆ ಆಗುವ ಸಾಧ್ಯತೆ ಇರುತ್ತದೆ ಆದರಿಂದ ನಾಲಿಗೆ ಸ್ವಚವನ್ನು ಮಾಡದೇ ಇದ್ದಲ್ಲಿ ಗಂಭೀರ ಪರಿಣಾಮ ಅನುಭವಿಸುವುದು ನಿಶ್ಚಿತ. ನೀವು ಪ್ರತಿ ನಿತ್ಯ ನಾಲಿಗೆ ಸ್ವಚ ಮಾಡದೆ ಇದ್ದಲ್ಲಿ ಅಜೀರ್ಣ ಸಮಸ್ಯೆ ನಿಮಗೆ ಇಲ್ಲದೆ ಇದ್ದರು ಕೆಲವೇ ದಿನದಲ್ಲಿ ಆ ಸಮಸ್ಯೆ ಹೆಚ್ಚು ಕಾಡಿಸುತ್ತದೆ. ಮತ್ತು ಸ್ವಾಶಕೋಶ ಸಮಸ್ಯೆಗೆ ನಾವೇ ಮತ್ತಷ್ಟು ದಾರಿ ಮಾಡಿ ಕೊಟ್ಟ ಹಾಗೇ ಆಗುತ್ತದೆ. ಸ್ನೇಹಿತರೇ ತಿಳಿಯಿತು ಅಲ್ಲವೇ ನಾಲಿಗೆ ಸ್ವಚತೆ ಎಷ್ಟು ಪ್ರಾಮುಖ್ಯತೆ ನೀಡಬೇಕು ಎಂದು. ಈ ಲೇಖನ ನೀವು ತಪ್ಪದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ.

LEAVE A REPLY

Please enter your comment!
Please enter your name here