ಮುಖದ ಚಂದವನ್ನು ಹೆಚ್ಚಿಸಲು ಎಷ್ಟೆಲ್ಲಾ ಪ್ರಯತ್ನ ಪಡ್ತೇವೆ ನಾವು ಅದಕ್ಕಾಗಿ ನಮ್ಮ ಹೆಣ್ಣು ಮಕ್ಕಳು ಸಾವಿರಾರು ರುಪಾಯಿ ಹಣ ಖರ್ಚು ಮಾಡ್ತಾರೆ ಆದ್ರೆ ಇತ್ತೇಚೆಗೆ ನಮ್ಮ ಹುಡುಗರು ಸಹ ಏನು ಕಡಿಮೆ ಇಲ್ಲ ತಮ್ಮ ಫೇಸ್ ಬ್ಯೂಟಿ ಹೆಚ್ಚಿಸಲು ಹೆಚ್ಚಿನ ಹಣ ಖರ್ಚು ಮಾಡ್ಕೊತಾರೆ. ಇನ್ನು ಕೆಲವರು ಮನೆಯಲ್ಲೇ ಹಲವು ರೀತಿಯ ಕೆಮಿಕಲ್ ಮಿಶ್ರಿತ ಫೇಸ್ ಪ್ಯಾಕ್ ಬಳಕೆ ಮಾಡಿದ್ರೆ ಮತ್ತಷ್ಟು ಜನ ಆಯುರ್ವೇದ ಫೇಸ್ ಪ್ಯಾಕ್ ಉಪಯೋಗ ಮಾಡ್ತಾರೆ. ನೀವು ಎಷ್ಟೇ ಆಯುರ್ವೇದ ಹೆಸರಲ್ಲಿ ಉತ್ಪನ್ನಗಳು ಬಳಕೆ ಮಾಡಿದರು ಸಹ ಅದು ನಿಮಗೆ ಆ ಕ್ಷಣದ ಮಟ್ಟಿಗೆ ಮಾತ್ರ ಉಪಯೋಗ ಆಗಿ ಸಮಯ ಕಳೆದಂತೆ ನಮ್ಮ ನ್ಯಾಚುರಲ್ ಫೇಸ್ ಕೂಡ ಹಾಳಾಗಿ ಹೋಗುತ್ತದೆ ಇದಕ್ಕೆ ಮುಖ್ಯ ಕಾರಣ ಅದರಲ್ಲಿರುವ ರಾಸಾಯನಿಕ ಅಂಶಗಳು. ಆದರೆ ಯಾವುದೇ ಹಣದ ಖರ್ಚು ಇಲ್ಲದೆ ಮನೆಯಲ್ಲೇ ಫೇಸ್ ಪ್ಯಾಕ್ ಸಿದ್ದತೆ ಮಾಡಿಕೊಳ್ಳಿರಿ ಇದರಿಂದ ನಿಮ್ಮ ಮುಖದ ಅಂದವು ಸುಪರ್ ಆಗಿರುತ್ತದೆ ಮತ್ತೆ ಯಾವುದೇ ರೀತಿಯ ಸೈಡ್ ಎಫೆಕ್ಟ್ಸ್ ಎನ್ನುವುದು ನಿಮಗೆ ಒಮ್ಮೆ ಕೂಡ ಬರೋದೇ ಇಲ್ಲ. ನಾವು ನಿಮಗೆ ಇಂದು ಹೇಳಲು ಹೊರಟಿರುವ ಫೇಸ್ ಪ್ಯಾಕ್ ಹುಣಸೆ ಹಣ್ಣು ಬಳಕೆ ಮಾಡಿಕೊಂಡು. ಇದನ್ನು ಮಾಡುವುದರಿಂದ ನಿಮ್ಮ ಫೇಸ್ ಫ್ರೆಶ್ ಆಗಿರುವಂತೆ ಮಾಡುತ್ತದೆ ಮತ್ತು ನಿಮ್ಮ ತ್ವಚೆ ಸುಪರ್ ಆಗಿರುತ್ತೆ.

ಎಲ್ಲರಿಗು ತಿಳಿದಿರುವ ಹಾಗೇ ಹುಣಸೆ ಹಣ್ಣಿನಲ್ಲಿ ಅನೇಕ ರೀತಿಯ ಪೊಟಾಷಿಯಂ ಸೋಡಿಯಂ ಮೆಗ್ನಿಶಿಯಂ ಮತ್ತು ಕಬ್ಬಿಣದ ಅಂಶ ಹೆಚ್ಚಿದೆ. ಇದನ್ನು ಫೇಸ್ ಪ್ಯಾಕ್ ಆಗಿ ಮಾಡಿಕೊಂಡು ಉಪಯೋಗ ಮಾಡಿದ್ರೆ ನಿಮಗೆ ಹಲವು ರೀತಿಯ ಲಾಭಗಳು ಖರ್ಚು ಇಲ್ಲದೆ ದೊರೆಯುವುದು ಖಚಿತ. ಈ ಹುಣಸೆ ಫೇಸ್ ಪ್ಯಾಕ್ ನೀವು ಮಾಡಿದರೆ ನಿಮ್ಮ ಮುಖದಲ್ಲಿ ಇರುವ ಮೊಡವೆಗಳು ಸಂಪೂರ್ಣವಾಗಿ ನಿವಾರಣೆ ಆಗುತ್ತದೆ. ಮತ್ತು ಹುಣಸೆ ಹಣ್ಣಿನಲ್ಲಿ ಇರುವ ಆಸಿಡ್ ಯುಕ್ತ ಅಂಶವು ನಿಮ್ಮ ಮುಖಕ್ಕೆ ನ್ಯಾಚುರಲ್ ಕ್ಲೀನ್ ಮತ್ತು ಟೋನರ್ ಆಗಿ ಕೆಲಸ ಮಾಡಿ ನಿಮ್ಮ ಮುಖದ ಅಂದವನ್ನು ಹೆಚ್ಚು ಮಾಡುತ್ತದೆ. ಮುಖದಲ್ಲಿ ಇರುವ ಗಲೀಜು ಮತ್ತು ಜಿಡ್ಡು ಎಲ್ಲವನ್ನು ಕ್ಲೀನ್ ಮಾಡುತ್ತದೆ. ಮತ್ತು ಮುಖದಲ್ಲಿ ನೆರಿಗೆ ಇದ್ದರೆ ಅದನ್ನು ಸಹ ಕಡಿಮೆ ಮಾಡುತ್ತದೆ.
ಹಾಗಾದ್ರೆ ಹುಣಸೆ ಫೇಸ್ ಪ್ಯಾಕ್ ಹೇಗೆ ಮಾಡೋದು? ಅದಕ್ಕೆ ಏನೆಲ್ಲಾ ಪದಾರ್ಥಗಳು ನಮಗೆ ಬೇಕು? ಅದಕ್ಕೆ ಬೆಳಗುವ ಸಾಮಗ್ರಿಗಳು ಏನು ಇಲ್ಲಿದೆ ಸಂಪೂರ್ಣ ವಿವರ: ನಾಲ್ಕು ಚಮಚ ಹುಣಸೆ ತಿರುಳು ಮತ್ತು ಒಂದು ಚಮಚ ಶುದ್ದ ಜೇನು ಒಂದಿಷ್ಟು ಮೊಸರು ಸ್ವಲ್ಪ ಜೋಜೋಬ ಎಣ್ಣೆ ಮತ್ತು ಗುಲಾಬಿ ನೀರು ಚಮಚದಲ್ಲಿ ಅರ್ಥ ವಿಟಮಿನ್ ಪೌಡರ್. ಹಾಗಾದ್ರೆ ಈ ಮನೆ ಮದ್ದು ಮಾಡೋದು ಹೇಗೆ ತಿಲಿಯಿರಿ. ಮೊದಲು ಒಂದು ಕಪ್ ನಲ್ಲಿ ಮೊಸರು ಮತ್ತು ಹುಣಸೆ ಹಣ್ಣಿನ ತಿರುಳು ಅಂದ್ರೆ ಅದರ ಪೇಸ್ಟ್ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿರಿ. ಆದಷ್ಟು ಚೆನ್ನಾಗಿ ಅದನ್ನ ಮಿಕ್ಸ್ ಮಾಡಲೇ ಬೇಕು ನಂತರ ಅದಕ್ಕೆ ವಿಟಮಿನ್ ಪುಡಿ ನಿಮ್ಮ ಬಳಿ ಇಟ್ಟುಕೊಂಡ ರೋಸ್ ನೀರು ಎಲ್ಲ ರೀತಿಯ ಪುಡಿಯನ್ನು ಹಾಕಿ ಚೆನ್ನಾಗಿ ಕಲಿಸಿ. ನಿಮಗೆ ಅವಶ್ಯ ಇರೋ ಅಷ್ಟು ಮದ್ದು ಮಾಡಿಕೊಂಡು ರಾತ್ರಿ ಮಲಗುವ ಮುನ್ನ ಅಥವ ಬೆಳ್ಳಗೆ ಎದ್ದ ಮೇಲೆ ಹಚ್ಚಿ ಒಂದು ಗಂಟೆ ಬಿಟ್ಟು ತಣ್ಣನೆಯ ನೀರಿನಲ್ಲಿ ಮುಖ ತೊಳೆಯಿರಿ ಹೀಗೆ ನೀವು ಮಾಡಿದ್ರೆ ನಿಮ್ಮ ಮುಖ ಸುಪರ್ ಆಗಿರುತ್ತೆ. ಮುಖದಲ್ಲಿ ಹೊಳಪು ಕಾಣಿಸುತ್ತದೆ. ಜೊತೆಗೆ ಮೊಡವೆಗಳು ಅಥವ ಜಿಡ್ಡು ಏನೇ ಇರಲಿ ಎಲ್ಲವು ಗುಣ ಆಗಲಿದೆ. ಈ ಉಪಯುಕ್ತ ಲೇಖನ ತಪ್ಪದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ.