ಕ್ಯಾನ್ಸರ್ ಮತ್ತು ಹಾರ್ಟ್ ಅಟ್ಯಾಕ್ ಬರದಂತೆ ತಡೆಯುತ್ತದೆ ನಟ್ಸ್ ಬೀಜಗಳು.

0
763

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಹಾರ್ಟ್ ಅಟ್ಯಾಕ್ ಎಂಬುದು ಸಾಮಾನ್ಯವಾಗಿ ಬಿಟ್ಟಿದೆ ಈ ಎರಡು ಸಮಸ್ಯೆಗಳು ಅತಿರೇಕಕ್ಕೆ ಹೋದರೆ ಸಾವು ಎಂಬುದು ಖಚಿತ. ಅದಕ್ಕಾಗಿಯೇ ಜನರು ಕೂಡ ತುಂಬಾ ಹೆದರುತ್ತಾರೆ ಕ್ಯಾನ್ಸರ್ ಅಥವ ಹಾರ್ಟ್ ಅಟ್ಯಾಕ್ ಸಮಸ್ಯೆಗಳು ಬಂದ ತಕ್ಷಣ ಅವುಗಳಿಗೆ ಚಿಕಿತ್ಸೆ ಪಡೆಯುತ್ತಾರೆ ಆದರೂ ಕೂಡ ಸಾಯುವವರೆಗೂ ಕೂಡ ಔಷಧಿಗಳನ್ನು ಸೇವಿಸುತ್ತಲೇ ಇರಬೇಕು ಎನ್ನುವುದು ಒಂದು ಬಾದೆ. ಆದರೆ ಈ ಕ್ಯಾನರ್ ಮತ್ತು ಹಾರ್ಟ್ ಅಟ್ಯಾಕ್ ಸಮಸ್ಯೆಗೆ ಉತ್ತಮ ಮದ್ದು ನೇಟ್ಸ್ ಬೀಜಗಳಿಂದ ಸಿಗುತ್ತದೆ. ನಮಗೆ ಈ ಖಾಯಿಲೆಗಳು ಬರದಂತೆ ತಡೆಯುತ್ತದೆ. ಈ ಡ್ರೈ ಫ್ರೂಟ್ ನಿಜಕ್ಕೂ ದುಬಾರಿ ಆದರೆ ನಾವು ಹಣ ದುಡಿಯುವುದು ಉತ್ತಮ ಆರೋಗ್ಯಕ್ಕಾಗಿ ಅಲ್ಲವೇ? ನಮ್ಮ ಬಡ್ಜೆಟ್ ಗೆ ತಕ್ಕಂತೆ ಖರೀದಿ ಮಾಡಿ ಅಲ್ಪ ಪ್ರಮಾಣದಲ್ಲಿ ಸೇವನೆ ಮಾಡಿದ್ರೆ ಆರೋಗ್ಯ ಸೂಪರ್.

ನಟ್ಸ್ ಬೀಜಗಳನ್ನು ಪ್ರತಿ ನಿತ್ಯ ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ನಮ್ಮ ಶರೀರಕ್ಕೆ ಅತ್ಯಗತ್ಯವಾಗಿ ಬೇಕಾದ ವಿಟಮಿನ್ ಗಳು ಮಿನಿರಲ್ ಗಳು ಇದರಲ್ಲಿ ದೊರೆಯುತ್ತವೆ. ಆದರೆ ಒಂದು ದೊಡ್ಡ ಸಮಸ್ಯೆ ಎಂದರೆ ಈ ನಟ್ಸ್ ಬೀಜಗಳನ್ನು ಅತಿಯಾಗಿ ಸೇವಿಸಬಾರದು ಹಾಗೆ ಸೇವಿಸಿದರೆ ಸಮಸ್ಯೆ ಎಂಬುದು ಖಂಡಿತ ಹಾಗಾದರೆ ನಿತ್ಯ ಎಷ್ಟು ನಟ್ಸ್ ಗಳನ್ನು ತಿಂದರೆ ಒಳ್ಳೆಯದು ಎಂದು ನೋಡುವುದಾದರೆ ನಟ್ಸ್ ಅಲ್ಲದೆ ಇನ್ನು ಯಾವುದೇ ವಿಧದ ಬೀಜಗಳಾದರೂ ಕೂಡ ಪ್ರತಿದಿನ 10ಗ್ರಾಂ ಮಾತ್ರ ಸೇವಿಸಬೇಕು ಇದರಿಂದ ದೇಹಕ್ಕೆ ಬೇಕಾಗುವಷ್ಟು ಪೋಷಕಾಂಶಗಳು ದೊರೆಯುತ್ತವೆ. ಆದರೆ ಒಂದೇ ವಿಧದ ನಟ್ಸ್ ಗಳಲ್ಲದೆ 3ರಿಂದ 4 ನಟ್ಸ್ ಗಳನ್ನು ಪ್ರತಿಯೊಂದು 10 ಗ್ರಾಂ ಪರಿಮಾಣದಲ್ಲಿ ಒಟ್ಟು 50 ಗ್ರಾಂ ಸೇವಿಸಿದಲ್ಲಿ ಅದ್ಭುತವಾದ ಫಲಿತಾಂಶ ಸಿಗುತ್ತದೆ

ವಾಲ್ ನಟ್ಸ್ ಇದನ್ನು ಪ್ರತಿದಿನ ಸುಮಾರು 6 ಅಥವಾ 7 ಮಾತ್ರ ತಿನ್ನುವುದರಿಂದ ಶರೀರದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಹೋಗಿ ಒಳ್ಳೆ ಕೊಲೆಸ್ಟ್ರಾಲ್ ಬರುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು ಬರುವುದನ್ನು ತಡೆಗಟ್ಟುತ್ತದೆ. ಮೂಳೆಗಳು ದೃಢವಾಗುತ್ತವೆ. ಶರೀರದ ಮೆಟಬಾಲಿಸಂ ಪ್ರಕ್ರಿಯೆ ಹೆಚ್ಚುತ್ತದೆ. ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಕ್ಯಾನ್ಸರ್ ಬರುವುದಿಲ್ಲ. ಗಂಡಸರಲ್ಲಿ ವೀರ್ಯ ವೃದ್ಧಿಯಾಗುತ್ತದೆ. ಹೆಂಗಸರ ಋತುಚಕ್ರ ಸಮಸ್ಯೆಗಳು ನಿವಾರಣೆಯಾಗುತ್ತವೆ. ಬಾದಾಮಿ ಇದನ್ನು ನಿತ್ಯ 5 ರಿಂದ 6 ಮಾತ್ರ ಸೇವಿಸಬೇಕು ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಲವು ರೀತಿಯ ಇನ್ಫೆಕ್ಷನ್ ಗಳು ಗುಣವಾಗುತ್ತವೆ. ಪುರುಷರಲ್ಲಿ ತಲೆದೋರುವ ನಪುಂಸಕತೆ ನಿವಾರಣೆಯಾಗುತ್ತದೆ. ಸಂತಾನವನ್ನು ಹೊಂದಲು ಸಹಕಾರಿ. ರಕ್ತದಲ್ಲಿರುವ ಸಕ್ಕರೆ ಮಟ್ಟ ನಿಯಂತ್ರಿಸಲ್ಪಡುತ್ತದೆ. ಡಯಾಬಿಟಿಸ್ ರೋಗಿಗಳಿಗೆ ಬಾದಾಮಿ ತುಂಬಾ ಒಳ್ಳೆಯದು.

ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಹೃದಯ ರೋಗ ಬರುವುದಿಲ್ಲ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಒಳ್ಳೆ ಕೊಲೆಸ್ಟ್ರಾಲ್ ಉತ್ಪತ್ತಿಯಾಗುತ್ತದೆ. ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ನೆಲಗಡಲೆ ಇದನ್ನು ನಿತ್ಯ 10-15 ಬೀಜಗಳನ್ನು ತಿಂದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ. ಶರೀರಕ್ಕೆ ಅವಶ್ಯವಿರುವ ಸಸ್ಯ ಜನ್ಯ ಪ್ರೋಟೀನ್ ಗಳು ಲಭಿಸುತ್ತವೆ. ಕ್ಯಾನ್ಸರ್ ಹಾಗೂ ಹೃದಯ ಸಮಸ್ಯೆಗಳು ಬರುವುದಿಲ್ಲ. ಇದರಲ್ಲಿ ವಿಟಮಿನ್ ಇ ಇರುವುದರಿಂದ ಪುರುಷರ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ. ಪಿಸ್ತಾ ಇದನ್ನು ನಿತ್ಯ 10 ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ. ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಸ್ನಾಯುಗಳ ನೋವು ಕಡಿಮೆಯಾಗುತ್ತದೆ. ಒಣ ಚರ್ಮ ಸಮಸ್ಯೆ ಹೋಗುತ್ತದೆ.
ಚರ್ಮ ಮೃದುವಾಗುತ್ತದೆ. ಇದರಲ್ಲಿ ನಾರಿನಂಶ ಇರುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಪುರುಷರ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಬಲಿಷ್ಠವಾಗುತ್ತದೆ. ರಕ್ತ ಹೀನತೆಯನ್ನು ನಿವಾರಿಸುತ್ತದೆ. ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿರುತ್ತದೆ.

ಗೋಡಂಬಿ ಇದನ್ನು ನಿತ್ಯ 7 ತಿಂದರೆ ಸಾಕು ಇದನ್ನು ತಿನ್ನುವುದರಿಂದ. ಹೃದ್ರೋಗ ಸಮಸ್ಯೆಗಳು ಬರುವುದಿಲ್ಲ. ಕೆಟ್ಟ ಕೊಲೆಸ್ಟ್ರಾಲ್ ಹೋಗಿ ಒಳ್ಳೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ರಕ್ತ ಶುದ್ಧಿಯಾಗುತ್ತದೆ. ರಕ್ತ ಹೀನತೆ ದೂರವಾಗುತ್ತದೆ. ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಕಣ್ಣಿನ ಸಮಸ್ಯೆಗಳಿರುವುದಿಲ್ಲ. ಸಕ್ಕರೆ ಕಾಯಿಲೇ ಬರುವುದಿಲ್ಲ. ಪೈನ್ ಬೀಜಗಳು ಇದನ್ನು ನಿತ್ಯ 12 ತಿಂದರೆ ದೇಹದ ತೂಕ ಕಡಿಮೆಯಾಗುತ್ತದೆ. ಶರೀರಕ್ಕೆ ಅಗತ್ಯವಿರುವ ಶಕ್ತಿ ಸಿಗುತ್ತದೆ. ವೃದ್ಧಾಪ್ಯದಿಂದ ಬರುವ ಸುಕ್ಕುಗಳು ಕಡಿಮೆಯಾಗಿ ಯುವಕರಂತೆ ಕಾಣುತ್ತಾರೆ. ಕಣ್ಣಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ನೋಡಿದರಲ್ಲ ನಿತ್ಯ ಎಷ್ಟು ನಟ್ಸ್ ಗಳು ತಿನ್ನಬೇಕು ತಿಂದರೆ ಏನಾಗುತ್ತದೆ ಎಂದು ಅದಕ್ಕಾಗಿ ನಿತ್ಯ ಈ ಎಲ್ಲ ನಟ್ಸ್ ಗಳನ್ನು ಸೇವಿಸಿ ಆರೋಗ್ಯ ಕಾಪಿಡಿಕೊಳ್ಳಿ. ತಪ್ಪದೇ ಈ ಲೇಖನ ಶೇರ್ ಮಾಡಿರಿ.

LEAVE A REPLY

Please enter your comment!
Please enter your name here