ನಿಮ್ಮ ಎಲ್ಲ ರೀತಿಯ ಕಷ್ಟಗಳು ಕಡಿಮೆ ಆಗಲು ಈ ದೇಗುಲಕ್ಕೆ ಒಮ್ಮೆ ಭೇಟಿ ಕೊಡಿ

0
666

ನಿಮ್ಮ ಹಲವು ರೀತಿಯ ಸಂಕಷ್ಟಗಳು ನಿವಾರಣೆಯಾಗುವುದಕ್ಕೆ ಈ ಆಂಜನೇಯ ದೇವರನ್ನು ಭಕ್ತಿಯಿಂದ ಪ್ರಾರ್ಥಿಸಿರಿ. ಪ್ರತಿನಿತ್ಯ ನಾವು ನಮ್ಮ ಸುತ್ತ ಮುತ್ತ ಇರುವ ಆಂಜನೇಯ ದೇವಾಲಯಕ್ಕೆ ತೆರಳುವುದು ವಾಡಿಕೆ. ಆದರೆ ಅತ್ಯಂತ ಶಕ್ತಿಶಾಲಿಯಾಗಿರುವ ಆಂಜನೇಯ ಸ್ವಾಮಿಯು ನಮ್ಮ ಬೆಂಗಳೂರಿನ ಹತ್ತಿರದಲ್ಲೇ ನೆಲೆಸಿದ್ದಾನೆ. ಈ ದೇವಸ್ಥಾನದ ಹೆಸರೇ ರಾಗಿಗುಡ್ಡ ಹನುಮಂತ ಎಂದು. ಈಗಾಗಲೇ ಈ ದೇಗುಲದ ಬಗ್ಗೆ ನಿಮಗೆ ಮಾಹಿತಿ ತಿಳಿದರು ಸಹ ಮತ್ತೊಮ್ಮೆ ಹನುಮಂತನ ಪವಾಡ ತಿಳಿಯಿರಿ ಭಕ್ತಿಯಿಂದ ಈ ಮಾಹಿತಿ ಶೇರ್ ಮಾಡಿರಿ. ಇಲ್ಲಿರುವ ಹನುಮಂತ ಅಂತ್ಯಂತ ಪ್ರಸಿದ್ಧಿಯನ್ನು ಹೊಂದಿದ್ದಾನೆ. ಈ ದೇಗುಲ ಬೆಂಗಳೂರಿನ ನಗರದಲ್ಲೇ ಇದ್ದು ದೇಗುಲದ ಎಡಭಾಗಕ್ಕೆ ಮಾರೇನಹಳ್ಳಿ ಬಲಭಾಗಕ್ಕೆ ಸಾರಕ್ಕಿ ಮುಂದೆ ಸಾಗುತ್ತಾ ಹೋದರೆ ತಾಯಪ್ಪನ ಹಳ್ಳಿ. ಹೀಗೆ ಅಕ್ಕಪಕ್ಕದಲ್ಲಿ ಹೆಚ್ಚು ರಾಗಿಯನ್ನು ಬೆಳೆಯುತ್ತಾ ಇದ್ದರು ಆದ್ದರಿಂದ ಈ ಒಂದು ಪ್ರದೇಶ ರಾಗಿಗುಡ್ಡ ಎಂದು ಪ್ರಸಿದ್ಧಿಯಾಗಿದೆ.

ಈ ಒಂದು ದೇವಸ್ಥಾನದ ಇತಿಹಾಸವನ್ನು ನೋಡುವುದಾದರೆ ಇದು ಅತ್ಯಂತ ಪ್ರಾಚೀನ ದೇವಸ್ಥಾನ ವಾಗಿದೆ. ಇಲ್ಲಿ ದೇವರ ಬಳಿ ನಾವು ನಮ್ಮ ಕಷ್ಟಸುಖಗಳ ಬಗ್ಗೆ ಪ್ರಾಥನೆ ಮಾಡುತ್ತೇವೆಯೋ ಅದು ಖಂಡಿತಾ ನೆರವೇರುತ್ತದೆ ಎಂದು ಇಲ್ಲಿನ ಜನರ ನಂಬಿಕೆ. ಹಾಗೇ ಈ ದೇವಸ್ಥಾನದಲ್ಲಿ ಹನುಮಂತ ಮಾತ್ರವಲ್ಲದೆ ಪ್ರವೇಶ ದ್ವಾರದಲ್ಲಿ ಕಾಲಕ್ಕೆ ತಕ್ಕಂತೆ ರಾಮ ಲಕ್ಷ್ಮಣ ಸೀತೆ ಈಶ್ವರಲಿಂಗ ಶ್ರೀ ರಾಜರಾಜೇಶ್ವರೀ ದೇವಿ ಮಹವಲ್ಲಭ ಗಣಪತಿ ಹಾಗೂ ನವಗ್ರಹ ದೇವಾಲಯ ಕೂಡ ಇದೆ. ಈ ದೇವಸ್ಥಾನಕ್ಕೆ ವಯಸ್ಸಾದವರಲ್ಲಿ ಹತ್ತಲು ಸಾಧ್ಯವಾಗದಿದ್ದವರಿಗೆ ಲಿಫ್ಟ್ ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ಈ ದೇವಸ್ಥಾನದ ಟ್ರಸ್ಟಿಯಾದವರಲ್ಲಿ ಕೆಲವರು ಅವರ ಅನಿಸಿಕೆಗಳನ್ನು ನಮ್ಮ ತಂಡದೊಂದಿಗೆ ಹಂಚಿಕೊಂಡರು. ಈ ರಾಗಿಗುಡ್ಡ ದೇವಸ್ಥಾನದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಹನುಮಂತನ ಅದ್ಭುತವಾದ ಉತ್ಸವಗಳು ಪ್ರಾರಂಭವಾಗುತ್ತದೆ. ಸಂಜೆಯ ವೇಳೆ ಪ್ರವಚನ ಉಪನ್ಯಾಸ ಕಾರ್ಯಕ್ರಮಗಳೂ ಕೂಡ ಇಲ್ಲಿ ನಡೆಯುತ್ತದೆ.

ಯಾರಿಗಾದರೂ ಮನೆಯಲ್ಲಿ ಹೆಚ್ಚಿನ ದುಷ್ಟ ಶಕ್ತಿಗಳು ಕಾಡುತ್ತಾ ಇದ್ದರೆ ಈ ದೇವರ ದರ್ಶನ ಪಡೆಯಿರಿ ಹನುಮಂತ ದೇವರು ದುಷ್ಟ ಶಕ್ತಿಗಳ ನಿವಾರಕ ಮತ್ತು ನಿಮ್ಮ ಆತ್ಮ ಸ್ಥೈರ್ಯ ಹೆಚ್ಚು ಮಾಡುತ್ತಾರೆ. ಇಲ್ಲಿನ ಪುರಾಣ ಕಥೆ ಪ್ರಕಾರ ಒಮ್ಮೆ ಈ ಪ್ರದೇಶದಲ್ಲಿ ನೆಲೆಸಿದ್ದ ಒಂದು ಮನೆಗೆ ಬೈರಾಗಿ ಬಿಕ್ಷುಕ ಬಿಕ್ಷೆ ಬೇಡಲು ಹೋಗಿದ್ದ ಅಂತೆ ಅಲ್ಲಿರುವ ಸೊಸೆ ಬಡವರಿಗೆ ಪ್ರತಿ ನಿತ್ಯ ರಾಗಿಯನ್ನು ನೀಡುತ್ತಾ ಇದ್ದಳಂತೆ ಇದನ್ನು ಕಂಡ ಆಕೆಯ ಅತ್ತಿಗೆ ಜಗಳ ಮಾಡಿ ಸೊಸೆಯಿಂದ ರಾಗಿಯನ್ನು ಕಿತ್ತುಕೊಂಡು ವಾಪಾಸ್ ಕಳಿಸಿದಳು ಅಂತೆ ಇದಕ್ಕೆ ಕೋಪಗೊಂಡ ಸೊಸೆ ಈ ಇಡೀ ಪ್ರದೇಶವೆಲ್ಲ ಕಲ್ಲಾಗಿ ಹೋಗಲಿ ಎಂದು ಶಾಪ ನೀಡಿದ್ದಳು ಎಂಬ ಪುರಾಣ ಕಥೆ ಇದೆ. ದೇವಾಲಯಕ್ಕೆ ಬರುವ ಜನರು ಅಕ್ಕಿಯನ್ನು ಕೊಂಡು ಅಲ್ಲೇ ಪಕ್ಕದಲ್ಲಿ ಇರುವ ಅನ್ನಪೂರ್ಣೆಶ್ವರಿ ತಾಯಿಗೆ ಅಭಿಷೇಕ ಮಾಡುತ್ತಾರೆ ಇದನ್ನು ಅಕ್ಕಿ ಸೇವೆ ಎಂದು ಇಲ್ಲಿ ಜನಪ್ರಿಯ ಆಗಿದೆ. ನೀವು ಬೆಂಗಳೂರಿನವರಾಗಿದ್ದರೆ ಖಂಡಿತಾ ಈ ದೇವಸ್ಥಾನಕ್ಕೆ ಒಮ್ಮೆಯಾದರೂ ಭೇಟಿ ನೀಡಲೇಬೇಕು. ಏಕೆಂದರೆ ಇಲ್ಲಿರುವ ಹನುಮಂತನ ಶಕ್ತಿ ಅಪಾರವಾದದ್ದು. ಮತ್ತು ನಮ್ಮ ಎಂತಹ ಕಷ್ಟಗಳೇ ಆಗಲಿ ಕೋರಿಕೆಗಳೇ ಆಗಲಿ ಖಂಡಿತಾ ಇಲ್ಲಿರುವ ಹನುಮಂತ ನಿಮ್ಮ ಪ್ರಾರ್ಥನೆಯನ್ನು ಆಲಿಸುತ್ತಾನೆ. ಈ ದೇವಾಲಯ ಇರೋದು 9ನೇ ಬ್ಲಾಕ್ ಜಯನಗರ ಬೆಂಗಳೂರು. ಈ ಲೇಖನ ಇಷ್ಟವಾದರೇ ಲೈಕ್ ಮಾಡಿ, ಶೇರ್ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here