ಈ ಕಾಯಿಗಳಿಂದ ನಿಮಗೆ ಇಪ್ಪತ್ತು ಲಾಭ ಸಿಗುತ್ತೆ

0
565

ಅಂಟ್ವಾಳ ಕಾಯಿಯ ಹೆಸರನ್ನು ಕೇಳಿರಬಹುದು ಜೊತೆಗೆ ನೋಡಿರಬಹುದು ಈ ಕಾಯಿಯನ್ನು ಹಿಂದಿನ ಕಾಲದಲ್ಲಿ ತುಂಬಾ ಬಳಕೆ ಮಾಡುತ್ತಿದ್ದರು ಅದರೆ ಕ್ರಮೇಣವಾಗಿ ಇಂದು ಇದರ ಕಾಯಿ ಸಿಗುತ್ತಿಲ್ಲ ಜೊತೆಗೆ ಇದರ ಪುಡಿ ಸಿಗುತ್ತಿದ್ದೆ ಆದರೆ ಇದು ಕೂಡ ಅಷ್ಟು ಗುಣಮಟ್ಟವನ್ನು ಏನು ಹೊಂದಿಲ್ಲ. ಹಿಂದಿನ ಕಾಲದಲ್ಲಿ ಈ ಅಂಟ್ವಾಳ ಕಾಯಿಯನ್ನು ಜಜ್ಜಿ ನೀರಿನಲ್ಲಿ ನೆನೆಹಾಕಿ ಅದರಿಂದ ತಲೆಯ ಕೂದಲನ್ನು ತೊಳೆಯಲು ಬಳಸುತ್ತಿದ್ದರು ಇದನ್ನು ಸ್ವಲ್ಪ ನೀರಿನ ಒಳಗೆ ಹಾಕಿದರೆ ಸಾಕು ತುಂಬಾ ನೊರೆ ಬರುತ್ತದೆ ಜೊತೆಗೆ ಇದರಿಂದ ತಲೆಯ ಕೂದಲನ್ನು ತೊಳೆದಾಗ ತಲೆಯ ಕೂದಲು ತುಂಬಾ ಸುಂದರವಾಗಿ ಬೆಳೆಯುತ್ತಿತ್ತು ಹಾಗೂ ಯಾವುದೇ ರೀತಿಯ ಸಮಸ್ಯೆಗಳು ಇರುತ್ತಿರಲಿಲ್ಲ. ಇಂತಹ ಅಂಟ್ವಾಳ ಕಾಯಿಯಿಂದ ಇನ್ನು ಏನೆಲ್ಲ ಲಾಭಗಳು ಇವೆ ಎಂದು ನೋಡೋಣ ಬನ್ನಿ.

ಅಂಟ್ವಾಳ ಕಾಯಿಯ ರಸದಿಂದ ತಲೆಯ ಕೂದಲಿನ ಸಮಸ್ಯೆ ಹೋಗುತ್ತಿತ್ತು ಅಲ್ಲವೇ ಹಗದರೆ ಮೊದಲು ಈ ಅಂಟ್ವಾಳ ಕಾಯಿಯ ರಸವನ್ನು ಮಾಡಿಕೊಳ್ಳುವುದು ಹೇಗೆ ಎಂದು ತಿಳಿಯೋಣ. ಮೊದಲು ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಸುಮಾರು 5 ರಿಂದ 6 ಲೋಟ ನೀರನ್ನು ಹಾಕಿ ಕುದಿಸಬೇಕು ಆ ಕುದಿಯುವ ನೀರಿಗೆ 15 ಅಂಟ್ವಾಳ ಕಾಯಿಯನ್ನು ಸ್ವಲ್ಪ ಜಜ್ಜಿ ಹಾಕಬೇಕು ನಂತರ ಅದನ್ನು ಚೆನ್ನಗಿ ಕುದಿಸಬೇಕು ನಂತರ ಅದನ್ನು ಒಂದು ರಾತ್ರಿ ಹಾಗೆಯೇ ಬಿಟ್ಟು ಬೆಳಗ್ಗೆ ಅದರಲ್ಲಿ ಇರುವ ಅಂಟ್ವಾಳ ಕಾಯಿಯ ನೀರನ್ನು ಶೋಧಿಸಬೇಕು ಇದನ್ನು ಯಾವುದೇ ಕಾರಣಕ್ಕೂ ಗಾಳಿಯಾಡುವ ಪಾತ್ರೆಗೆ ಹಾಕ ಬಾರದು. ಹಾಗೆಯೇ ಈ ರಸಕ್ಕೆ ಯವುದೇ ರೀತಿಯ ಸಂರಕ್ಷಕಗಳನ್ನು ಹಾಕಿಲ್ಲವಾದ ಕಾರಣ ಇದು ಒಂದು ವಾರದಲ್ಲಿ ಕೆಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ ದ್ರವಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸ ಹಾಕಿದರೆ ದ್ರವ ಹೆಚ್ಚು ದಿನಗಳ ಕಲಾ ಕೆಡದಂತೆ ಇರುತ್ತದೆ.

ಇದರಿಂದ ಏನೆಲ್ಲಾ ಪ್ರಯೋಜನ ನೋಡೋಣ. ಮನೆಯ ಕಿಟಕಿ ಬಾಗಿಲು ಇನ್ನಿತರ ಗ್ಲಾಸ್ ಗಳನ್ನು ಸ್ವಚ್ಛ ಮಾಡಲು ಬಳಕೆ ಮಾಡಬಹುದು ಅದಕ್ಕೆ ಹೇಗೆ ಉಪಯೋಗಿಸುವುದು ಎಂದರೆ ಒಂದು ಸ್ಪ್ರೇ ಬಾಟಲಿಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು 15 ಎಂಎಲ್ ಅಂಟ್ವಾಳ ದ್ರವ 15 ಎಂಎಲ್ ವೆನಿಗರ್ ಬೆರೆಸಬೇಕು. ಈ ಮಿಶ್ರಣವನ್ನು ಕಿಟಕಿಗಳು ಮನೆಯ ನೆಲ ಇತರೆ ವಸ್ತುಗಳ ಮೇಲೆ ಸ್ಪ್ರೇ ಮಾಡಿ ಬಳಿಕ ಒಣಬಟ್ಟೆಯಿಂದ ಸ್ವಚ್ಛಗೊಳಿಸಬೇಕು. ಇದರಿಂದ ಆಯಾ ಜಾಗಗಳು ಫಳಫಳ ಎಂದು ಹೊಳೆಯುತ್ತವೆ. ಚಿನ್ನದ ಆಭರಣಗಳನ್ನು ಸ್ವಚ್ಛ ಮಾಡಲು ಕೂಡ ಇದು ತುಂಬಾ ಒಳ್ಳೆಯದು ಮೊದಲು ಅಂಟ್ವಾಳ ಕಾಯಿಯ ದ್ರವವನ್ನು ಒಂದು ಚಿಕ್ಕ ಬಟ್ಟಲಿನಲ್ಲಿ ಹಾಕಿ ಅದರ ಒಳಗೆ ಚಿನ್ನದ ಆಭರಣಗಳನ್ನು ಹಾಕಿ 15 ರಿಂದ 20 ನಿಮಿಷ ಬಿಟ್ಟು ತೊಳೆದರೆ ಒಡವೆಗಳು ಪಳಪಳ ಹೊಳಿಯುತ್ತವೆ. ಅಂಟ್ವಾಳ ದ್ರವವನ್ನು ಹ್ಯಾಂಡ್ ವಾಶ್ ಮಾಡಲು ಕೂಡ ಬಳಸಬಹುದು. ಮನೆಯಲ್ಲಿ ಸಾಕಿಕೊಂಡಿರುವ ಪ್ರಾಣಿಗಳನ್ನೂ ಸ್ವಚ್ಛ ಮಾಡಲು ಕೂಡ ಅಂಟ್ವಾಳ ಕಾಯಿಯನ್ನು ಬಳಸಬಹುದು. ಕಾರ್ಪೆಟ್ ಮೇಲೆ ಕಲೆಗಳು ಆಗಿದ್ದರೆ ಅವುಗಳ ಮೇಲೆ ಅಂಟ್ವಾಳ ದ್ರವವನ್ನು ಹಾಕಿ ಬಳಿಕ ಬ್ರಷ್ ಸಹಾಯದಿಂದ ಕ್ಲೀನ್ ಮಾಡಬೇಕು. ಇದರಿಂದ ಕಾರ್ಪೆಟ್ ಮೇಲಿನ ಕೊಳೆ ಹೋಗುತ್ತದೆ. ಕಾರು ದ್ವಿಚಕ್ರವಾಹನಗಳನ್ನು ಅಂಟ್ವಾಳ ದ್ರವದಿಂದ ಕ್ಲೀನ್ ಮಾಡಬಹುದು. ನೋಡಿ ಅಂಟ್ವಾಳ ಕಾಯಿಯಿಂದ ಎಷ್ಟೆಲ್ಲ ಪ್ರಯೋಜನ ಇದೆ ಜೊತೆಗೆ ಇದು ನೈಸರ್ಗಿಕವಾದದ್ದು ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಈ ಉಪಯುಕ್ತ ಲೇಖನ ಮರೆಯದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ ಮತ್ತು ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿರಿ.

LEAVE A REPLY

Please enter your comment!
Please enter your name here