ಹಿಂದಿನ ಕಾಲದಲ್ಲಿ ಎಂತಹ ಆರೋಗ್ಯದ ಸಮಸ್ಯೆ ಬಂದರು ಕೂಡ ಮನೆಯಲ್ಲಿ ಕಷಾಯ. ಅಥವಾ ಇನ್ನಿತರ ಔಷಧಿಗಳನ್ನು ಮಾಡಿಕೊಂಡು ಕುಡಿಯುತ್ತಿದ್ದರು ಆದರೆ ಇಂದು ಯಾವುದೇ ಸ್ವಲ್ಪ. ನೋವು ಬಂದರು ಕೂಡ ಆಸ್ಪತ್ರೆಗೆ ಹೋಗುತ್ತಾರೆ ಇಲ್ಲ ಮೆಡಿಕಲ್ ಗೆ ಹೋಗಿ ಮಾತ್ರೆಗಳನ್ನು ತಂದು ತೆಗೆದುಕೊಳ್ಳುತ್ತೇವೆ ಅಲ್ಲವೇ. ಇದರಿಂದ ಎಷ್ಟೆಲ್ಲ ಅಡ್ಡ ಪರಿಣಾಮಗಳು ಇವೆ ಎಂದು ಗೊತ್ತಿದ್ದರೂ ಕೂಡ ಮಾತ್ರೆ ಟಾನಿಕ್ ಗಳ ಸೇವನೆಯನ್ನು ಮಾತ್ರ ಬಿಡುವುದಿಲ್ಲ ಏಕೆಂದರೆ ಎಲ್ಲರೂ ಮುಂದೆ ಏನಾಗುತ್ತದೆ ಎಂದು ಯೋಚಿಸುವುದಿಲ್ಲ ತಕ್ಷಣಕ್ಕೆ ಆ ಸಮಸ್ಯೆಗೆ ಪರಿಹಾರ ಸಿಕ್ಕರೆ ಸಾಕು ಅಷ್ಟೇ ಅಲ್ಲವೇ ಅದೆಲ್ಲ ಸರಿ ಆದರೆ ನಾವು ಗಮನಿಸಬೇಕಾದ ಮುಖ್ಯವಾದ ಅಂಶ ಇದೆ ಅದು ಏನೆಂದರೆ ನಾವು ಯಾವುದೇ ಮಾತ್ರೆಗಳನ್ನು ತೆಗೆದುಕೊಂಡಾಗ ಆ ಮಾತ್ರೆಯ ಶೀಟ್ ಗಮನಿಸಿದ್ದೀರಾ ಅದರಲ್ಲಿ ಒಂದು ಮಾತ್ರೆಗೂ ಇನ್ನೊಂದು ಮಾತ್ರೆಗೂ ಎಷ್ಟು ಅಂತರ ಇಟ್ಟು ಮಾತ್ರೆ ಪ್ಯಾಕ್ ಮಾಡಿರುತ್ತಾರೆ ಅಲ್ಲವೇ ಇನ್ನು ಕೆಲವು ಮಾತ್ರೆಗಳು ಬಾಟಲ್ ಅಲ್ಲಿ ಸಿಗುತ್ತದೆ ಆದರೆ ಈ ರೀತಿ ಯಾಕೆ ಇರುತ್ತದೆ ಎಂದು ಗೊತ್ತೇ. ಈ ವಿಚಿತ್ರ ಸಂಗತಿ ಬಗ್ಗೆ ಇಂದು ತಿಳಿದುಕೊಳ್ಳೋಣ.

ಮಾತ್ರೆಗಳನ್ನು ಬ್ಲಿಸ್ಟರ್ ಪ್ಯಾಕ್ಗಳಲ್ಲಿ ನೀಡುತ್ತಾರೆ. ಅಲ್ಲದೆ ಮಾತ್ರೆಗಳನ್ನು ಪ್ಯಾಕ್ ಮಾಡುವಾಗ ಅವುಗಳನ್ನು ಪಕ್ಕ ಪಕ್ಕದಲ್ಲಿಯೇ ಅಲ್ಲದೆ ಸ್ವಲ್ಪ ಸ್ಥಳ ಬಿಟ್ಟು ಪ್ಯಾಕ್ ಮಾಡುತ್ತಾರೆ. ಹೀಗೆ ಯಾಕೆ ಮಾಡುತ್ತಾರೆಂದರೆ ಯಾವುದೇ ಮಾತ್ರೆಗಳ ಮಧ್ಯೆ ರಾಸಾಯನಿಕ ರಿಯಾಕ್ಷನ್ ಉಂಟಾಗಬಾರದೆಂಬ ಕಾರಣಕ್ಕೆ. ಪಕ್ಕ ಪಕ್ಕದಲ್ಲಿಯೇ ಮಾತ್ರೆಗಳು ಇದ್ದರೆ ಅವು ಒಂದಕ್ಕೊಂದು ರಾಸಾಯನಿಕವಾಗಿ ಕಾರ್ಯ ನಿರ್ವಹಿಸಿ ಫಲಿತವಾಗಿ ಅವು ನಮಗೆ ಉಪಯೋಗವಿಲ್ಲದಂತೆ ಆಗುತ್ತವೆ. ಅದ ಕಾರಣ ಜೊತೆಯಾಗಿ ಮಾತ್ರೆಗಳನ್ನು ರವಾನಿಸುವಾಗ ಅವು ಒಡೆದುಹೋಗದಂತೆ ಇರುವುದಕ್ಕೆ ಆ ರೀತಿ ಪ್ಯಾಕ್ ಮಾಡುತ್ತಾರೆ. ಜೊತೆಗೆ ಯಾವುದೇ ವ್ಯಕ್ತಿ ಕೂಡ ಒಂದೇ ಬಾರಿ ಒಂದು ಶೀಟ್ ಪೂರ್ಣ ಮಾತ್ರೆಗಳನ್ನು ತೆಗೆದುಕೊಳ್ಳುವುದಿಲ್ಲ ಒಂದೆರಡು ಮಾತ್ರೆಗಳನ್ನು ಮಾತ್ರ ಕೊಂಡುಕೊಳ್ಳುತ್ತಾರೆ. ಇದರಿಂದ ಅಂತಹ ಸಂದರ್ಭಗಳಲ್ಲಿ ಮಾತ್ರೆಗಳನ್ನು ಸುಲಭವಾಗಿ ಕತ್ತರಿಸಲು ಕೂಡ ಉಪಯೋಗ ಆಗುತ್ತದೆ. ಹಾಗೆಯೇ ಆ ಪ್ಯಾಕ್ ಹಿಂದೆ ಟ್ಯಾಬ್ಲೆಟ್ ಪ್ರಿಂಟ್ ವಿಷಯವನ್ನು ಹಂಚಿಕೆದಾರರಿಗೆ ಗೊತ್ತಾಗಲಿ ಎಂಬ ಕಾರಣಕ್ಕೂ ಕೂಡಾ ಮಾತ್ರೆಗಳ ಮಧ್ಯೆ ಗ್ಯಾಪ್ ಇಡುತ್ತಾರೆ.
ಮಾತ್ರೆಗಳನ್ನು ತೆಗೆದುಕೊಳ್ಳುವಾಗ ಈ ಟಿಪ್ಸ್ ಪಾಲಿಸಿರಿ ನಿಮಗೆ ಆದಷ್ಟು ಹೆಚ್ಚಿನ ಸಹಾಯ ಆಗಲಿದೆ ಮೊದಲಿಗೆ ನೀವು ಯಾವುದೇ ಮಾತ್ರೆಗಳನ್ನೂ ತೆಗೆದುಕೊಳ್ಳುವ ಅರ್ಥ ಗಂಟೆ ಆಹಾರ ಸೇವನೆ ಮಾಡಿರಬೇಕು ಕೆಲವೊಂದು ಮಾತ್ರೆಗಳು ಬಿಟ್ಟು ಉಳಿದೆಲ್ಲವೂ ಆಹಾರ ಸೇವನೆ ಮಾಡಿದ ನಂತರವೇ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಹೆಚ್ಚಿನ ಅಡ್ಡ ಪರಿಣಾಮ ಆಗಲಿದೆ. ಮತ್ತು ಬೆಚ್ಚಗಿನ ನೀರಿನಲ್ಲಿ ತೆಗೆದುಕೊಳ್ಳುವುದು ಸೂಕ್ತ. ವೈದ್ಯರು ನೀಡಿದ ಕೋರ್ಸ್ ಮುಗಿದ ಮೇಲೆ ಸಮಸ್ಯೆ ಕಡಿಮೆ ಆಗಿಲ್ಲ ಅಂದ್ರೆ ಕೊಡಲೇ ವೈದ್ಯರ ಸಂಪರ್ಕ ಮಾಡಿರಿ ನೀವೇ ಮೆಡಿಕಲ್ ನಲ್ಲಿ ಮರಳಿ ಮಾತ್ರೆ ಪಡೆದು ನುಂಗಬೇಡಿ ಓವರ್ ಡೋಸ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಉಪಯುಕ್ತ ಲೇಖನ ತಪ್ಪದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗಲಿದೆ.