ನಂದಿನಿ ಹಾಲನ್ನು ಬಳಸುತ್ತೀರಾ ಹಾಗಾದ್ರೆ ತಪ್ಪದೇ ತಿಳಿಯಿರಿ

0
661

ಗ್ರಾಮೀಣ ಪ್ರದೇಶದ ಜನರನ್ನು ಬಿಟ್ಟರೆ ಇನ್ನು ನಗರದಲ್ಲಿ ವಾಸ ಮಾಡುತ್ತಿರುವ ಎಲ್ಲರೂ ಕೂಡ ಬಳಸುವುದು ನಂದಿನಿ ಹಾಲು ಇದು ಸರ್ಕಾರದ ವತಿಯಿಂದ ಸುವ್ಯವಸ್ಥಿತವಾಗಿ ರೂಪುಗೊಳ್ಳುತ್ತಿರುವ ಹಾಲಿನ ಪ್ಯಾಕ್ ಇದು ಎಲ್ಲ ರಾಜ್ಯಗಳಿಗೂ ಕೂಡ ಸಾಗಣಿಕೆ ಆಗುತ್ತಿದೆ. ನಮ್ಮ ರಾಜ್ಯದ ರೈತರು ಉತ್ಪಾದಿಸಿದ ಹಾಲಿನಿಂದ ಈ ಹಾಲಿನ ಪ್ಯಾಕ್ ಗಳನ್ನು ಮತ್ತು ಹಾಲಿನ ಉತ್ಪನ್ನಗಳನ್ನು ತಯಾರಿಸುವುದರಿಂದ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ ಮತ್ತು ನಂದಿನಿ ಹಾಲು ತುಂಬಾ ಶುದ್ದವಾಗಿ ಇದ್ದು ಯಾವುದೇ ರೀತಿಯ ಇತರೆ ಹಾಲಿನಂತೆ ಕೆಮಿಕಲ್ ಬೆರೆಸುವುದಿಲ್ಲ. ಈ ನಂದಿನಿ ಹಾಲನ್ನು ಕೊಂಡುಕೊಳ್ಳಲು ಹೋದಾಗ ಗಮನಿಸಿರಬಹುದು ಹಾಲಿನ ಪ್ಯಾಕ್ ಅಲ್ಲಿ ಎಷ್ಟೆಲ್ಲ ರೀತಿಯ ಬಣ್ಣಗಳು ಇರುತ್ತವೆ ಅಲ್ಲವೇ ಅದರ ಬೆಲೆಯು ಕೂಡ ವಿವಿಧ ರೀತಿಯಾಗಿಯೇ ಇರುತ್ತದೆ ಆದರೆ ಈ ನಂದಿನಿ ಹಾಲಿನ ಪ್ಯಾಕೆಟ್ ಗಳ ಬಗ್ಗೆ ತಿಳಿದುಕೊಳ್ಳಲೇಬೇಕಾದ ಕೆಲವು ವಿಷಯಗಳು ಕೂಡ ಇವೆ ಅವುಗಳು ಏನೆಂದರೆ

ನಂದಿನಿ ಹಾಲಿನ ಪ್ಯಾಕ್ ಅಲ್ಲಿ ನೇರಳೆ ಬಣ್ಣದ ಹಾಲಿನ ಪ್ಯಾಕೆಟ್ ಕೂಡ ಬರುತ್ತದೆ ಈ ಹಾಲನ್ನು ಗಟ್ಟಿಯಾದ ಹಾಲಿನಿಂದ ಮಾಡಲಾಗಿರುತ್ತದೆ ಜೊತೆಗೆ ಇದರಲ್ಲಿ ಹಾಲಿನ ಕೆನೆಯು ಕೂಡ ಹೇರಳವಾಗಿರುತ್ತದೆ. ಈ ಹಾಲಿನಿಂದ ತುಂಬಾ ಗಟ್ಟಿಯಾಗಿ ಟೀ ಕಾಫಿ ಮಾಡಬಹುದು ಹಾಗೂ ಪಾಯಸ ಪೊಂಗಲ್ ಮೊದಲಾದ ಹಾಲನ್ನು ಉಪಯೋಗಿಸಿ ತಯಾರಿಸುವ ತಿಂಡಿ ತಿನಿಸುಗಳನ್ನು ಮಾಡಲು ಇದು ಚೆನ್ನಾಗಿರುತ್ತದೆ. ನಂದಿನಿ ಹಾಲಿನ ಪ್ಯಾಕ್ ಅಲ್ಲಿ ಹಳದಿ ಬಣ್ಣದ ನಂದಿನಿ ಹಾಲಿನ ಪ್ಯಾಕೆಟ್ ಕೂಡ ಇದೆ ಇದರಲ್ಲಿ ಕೊಬ್ಬಿನಂಶ ಕಡಿಮೆ ಇರುತ್ತದೆ ಹಾಗೂ ಮಕ್ಕಳಿಗೆ ಬೇಕಾದ ಎಲ್ಲ ರೀತಿಯ ಪೋಷಕಾಂಶಗಳು ಇದರಲ್ಲಿ ಸಿಗುತ್ತದೆ. ನಂದಿನಿ ಹಾಲಿನಲ್ಲಿ ಹಸಿರು ಬಣ್ಣದ ಹಾಲಿನ ಪ್ಯಾಕೆಟ್ ಕೂಡ ಇದೆ ಇದರಲ್ಲಿ ಟೀ ಕಾಫಿ ಮಾಡಲು ಚೆನ್ನಾಗಿರುತ್ತದೆ ಇದರಲ್ಲಿ ಎಮ್ಮೆಯ ಹಾಲನ್ನು ಮಿಶ್ರಣ ಮಾಡಿರುವುದಿಲ್ಲ. ಆದ್ದರಿಂದ ಇದು ಮಕ್ಕಳ ಆರೋಗ್ಯಕ್ಕೆ ಉತ್ತಮವಾಗಿದೆ. ಎಮ್ಮೆಯ ಹಾಲನ್ನು ಕುಡಿಯಲು ಇಷ್ಟ ಪಡದೆ ಇರುವವರು ಈ ಹಾಲನ್ನು ಖರೀದಿಸಬಹುದು.

ನಂದಿನಿ ಹಾಲಿನಲ್ಲಿ ನೀಲಿ ಬಣ್ಣದ ನಂದಿನಿ ಗುಡ್ ಲೈಫ್ ಹಾಲು ಕೂಡ ಇದೆ ಈ ಹಾಲನ್ನು ಕಾಯಿಸಿ ಕುಡಿಯುವ ಅವಶ್ಯಕತೆ ಇಲ್ಲ ಏಕೆಂದರೆ ಈ ಹಾಲನ್ನು ಪ್ಯಾಕ್ ಮಾಡುವ ಮೊದಲೇ 100 ಡಿಗ್ರಿಗೂ ಹೆಚ್ಚು ಉಷ್ಣಾಂಶದಲ್ಲಿ ಕಾಯಿಸಿ ಆರಿಸಿ ನಂತರ ಪ್ಯಾಕ್ ಮಾಡಲಾಗಿರುತ್ತದೆ. ಇದನ್ನು ನಾಲ್ಕು ಪರದೆಯುಳ್ಳ ಪ್ಯಾಕ್ ನಲ್ಲಿ ಶೇಖರಿಸಲಾಗಿರುವುದರಿಂದ ಈ ಹಾಲು ಬೇಗನೆ ಹೊಡೆಯುವುದಿಲ್ಲ.ಈ ಹಾಲಿನಲ್ಲಿ ಯಾವುದೇ ರೀತಿಯ ಕೆಟ್ಟ ವೈರಸ್, ಬ್ಯಾಕ್ಟೀರಿಯಾಗಳು ಇರುವುದಿಲ್ಲ. ನೋಡಿದರಲ್ಲ ನಂದಿನಿ ಹಾಲಿನಲ್ಲಿ ಎಷ್ಟೆಲ್ಲ ರೀತಿಯಲ್ಲಿ ಇದೆ ಹಾಗಾಗಿ ನಿಮಗೆ ಅಗತ್ಯಕ್ಕೆ ತಕ್ಕಂತೆ ಖರೀದಿಸಿ. ಸ್ನೇಹಿತರೇ ಹಾಲಿನ ಪೊಟ್ಟಣ ಖರೀದಿ ಮಾಡುವ ಮುನ್ನ ಈ ವಿಷ್ಯ ನೆನಪು ಇಟ್ಟುಕೊಂಡು ಮುಂದೆ ಖರೀದಿ ಮಾಡಿರಿ ಹಾಗೆಯೇ ಈ ಉಪಯುಕ್ತ ಮಾಹಿತಿ ಎಲ್ಲೆಡೆ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ.

LEAVE A REPLY

Please enter your comment!
Please enter your name here