ನೀರು ಕುಡಿಯುವಾಗ ಈ ತಪ್ಪು ಮಾಡಿದ್ರೆ ಲಿವರ್ ಗೆ ಸಮಸ್ಯೆ ಆಗಬಹುದು.

0
1015

ನೀರು ಮನುಷ್ಯನಿಗೆ ಎಷ್ಟು ಮುಖ್ಯ ಎಂಬುದು ಎಲ್ಲರಿಗು ಗೊತ್ತು ಅಲ್ಲವೇ ಪ್ರತಿ ದಿನ ಒಬ್ಬ ಮನುಷ್ಯ ಸುಮಾರು 5 ರಿಂದ 6 ಲೀಟರ್ ನೀರು ಕುಡಿದರೆ ಮನುಷ್ಯನಿಗೆ ಯಾವುದೇ ರೀತಿಯ ಕಾಯಿಲೆಗಳು ಬರುವುದಿಲ್ಲ ಎಂದು ಗೊತ್ತು ಆದರೆ ನೀರು ಕುಡಿಯಬೇಕು ಎಂದು ಹೇಗೆ ಹೇಗೋ ನೀರು ಕುಡಿದರೆ ಅದು ನಮ್ಮ ಆರೋಗ್ಯವನ್ನು ಕಾಪಾಡುವುದಿಲ್ಲ ಇನ್ನು ಹೆಚ್ಚು ಮಾಡುತ್ತದೆ ಹಾಗಾದರೆ ಹೇಗೆ ನೀರನ್ನು ಕುಡಿಯಬೇಕು ಎಂದು ತಿಳಿದುಕೊಳ್ಳೋಣ ಬನ್ನಿ. ಮೊದಲು ನಾವು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸುಮಾರು ಅರ್ದ ಲೀಟರ್ ಅನ್ನು ನೀರನ್ನು ಕುಡಿಯಬೇಕು. ಆದರೆ ಬೆಳಿಗ್ಗೆ ತುಂಬಾ ತಣ್ಣಗೆ ಇರುವ ನೀರನ್ನು ಕುಡಿಯಬಾರದು ಆದಷ್ಟು ಸ್ವಲ್ಪ ಬೆಚ್ಚಗೆ ಇರುವ ನೀರನ್ನು ಕುಡಿಯುವುದು ಒಳ್ಳೆಯದು. ಬೆಳಗ್ಗೆ ಎದ್ದ ತಕ್ಷಣವೇ ನೀರು ಕುಡಿಯುವುದರಿಂದ ನಮ್ಮ ದೇಹದಲ್ಲಿನ ಬೇಡವಾದ ವಿಷಕಾರಿ ಅಂಶಗಳು ಜೀರ್ಣಾಂಗ ವ್ಯವಸ್ಥೆಯಿಂದ ದೇಹದಿಂದ ಹೊರಗೆ ಹೋಗಲು ಸಹಾಯಕವಾಗುತ್ತದೆ.

ಜೊತೆಗೆ ಬಾಯಿಯಲ್ಲಿ ಇರುವ ಬೇಡವಾದ ಕೀಟಾಣುಗಳು ಸಹ ದೇಹದಿಂದ ಹೊರಗೆ ಹೋಗುತ್ತದೆ. ತಿಂಡಿ ಊಟ ಮಾಡುವ ಮುಂಚೆ ಸಾಕಷ್ಟು ನೀರನ್ನು ಕುಡಿಯಬಾರದು. ಏಕೆಂದರೆ ಊಟಕ್ಕಿಂತ ಮೊದಲು ನೀರು ಕುಡಿದರೆ ಇದು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಜೀರ್ಣ ಕ್ರಿಯೆಗೆ ಬೇಕಾಗುವ ಕಿಣ್ವಗಳು ನಾಶವಾಗಲು ಕಾರಣವಾಗುತ್ತದೆ. ಹಾಗೆಯೇ ಊಟ ಅದ ನಂತರ 20 ನಿಮಿಷಗಳ ತನಕ ಕೂಡ ನೀರನ್ನು ಕುಡಿಯಬಾರದು. ಊಟ ಆದ ಬಳಿಕ 20 ನಿಮಿಷದ ನಂತರ ಬಿಸಿ ನೀರು ಕುಡಿದರೆ ತುಂಬಾ ಒಳ್ಳೆಯದು ಹೀಗೆ ಮಾಡುವುದರಿಂದ ನಾವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗಲೂ ಸಹಾಯ ಆಗುತ್ತದೆ. ಯಾವುದೇ ಕಾರಣಕ್ಕೂ ನಿಂತುಕೊಂಡು ನೀರನ್ನು ಕುಡಿಯಬಾರದು. ನಾವು ನಿಂತುಕೊಂಡು ನೀರನ್ನು ಕುಡಿಯುವುದು ನಮ್ಮ ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ನಾವು ಯಾವಾಗಲೂ ಕುಳಿತುಕೊಂಡೆ ನೀರನ್ನು ಕುಡಿಯಬೇಕು.

ಮಲಗಿ ಕೊಂಡು ಕೂಡ ನೀರನ್ನು ಕುಡಿಯಬಾರದು. ನೀರು ಕುಡಿಯಬೇಕು ಎಂದು ಒಂದೇ ಬಾರಿ ಹೆಚ್ಚು ನೀರು ಕುಡಿಯಬಾರದು. ಹೀಗೆ ಮಾಡಿದರೆ ದೇಹದಲ್ಲಿನ ಲಿವರ್ ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ ಲಿವರ್ ಸಂಭಂಧ ಪಟ್ಟ ಖಾಯಿಲೆಗಳು ಬರಬಹುದು. ದಿನಕ್ಕೆ 4 ರಿಂದ 5 ಲೀಟರ್ ನೀರು ಕುಡಿಯುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ.ಹಾಗೂ ಕಿಡ್ನಿ ,ಲಿವರ್ ,ಶ್ವಾಸಕೋಶಗಳು, ಹೃದಯ ಚೆನ್ನಾಗಿ ಕಾರ್ಯನಿರ್ವಹಿಸುತ್ತವೆ. ಹೆಚ್ಚು ನೀರಿನ ಸೇವನೆಯಿಂದ ಮೆದುಳಿನ ಬೆಳವಣಿಗೆಯು ಸರಿಯಾಗಿ ನಡೆಯುತ್ತದೆ. ಹೆಚ್ಚು ನೀರಿನ ಸೇವನೆಯಿಂದ ಕಣ್ಣಿನ ಆರೋಗ್ಯ ವೃದ್ಧಿಯಾಗುತ್ತದೆ ಹಾಗೂ ದೇಹದ ಹಾರ್ಮೋನ್ ಗಳು ಸರಿಯಾಗಿ ಕೆಲಸ ನಿರ್ವಹಿಸುತ್ತವೆ. ಕ್ಯಾನ್ಸರ್ ಬರುವ ಸಾಧ್ಯತೆಗಳನ್ನು ತಡೆಯುತ್ತದೆ. ಅಗಾಗಿ ಆದಷ್ಟು ನೀರನ್ನು ಕುಡಿಯುವ ಮುಂಚೆ ಇದನ್ನು ತಿಳಿದುಕೊಳ್ಳುವುದು ತುಂಬಾ ಒಳ್ಳೆಯದು. ಈ ಉಪಯುಕ್ತ ಲೇಖನ ಮರೆಯದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗಲಿದೆ.

LEAVE A REPLY

Please enter your comment!
Please enter your name here