ನಿಮ್ಮ ಲೈಫ್ ಸುಪರ್ ಆಗಿ ಇರ್ಬೇಕು ಅಂದ್ರೆ ಈ ಲಕ್ಷಣಗಳು ಇರೋ ಹುಡುಗಿನ ಮದ್ವೆ ಆಗಿ

0
650

ಹುಡುಗ ಆಗಲಿ ಅಥವಾ ಹುಡುಗಿಯ ಆಗಲೇ ತಾವು ಮದುವೆ ಆಗುವವರ ಬಗ್ಗೆ ಬಹಳಷ್ಟು ಕನಸನ್ನು ಕಟ್ಟಿಕೊಂಡಿರುತ್ತಾರೆ ಈ ಕೆಳಗಿನ ಲಕ್ಷಣಗಳನ್ನು ಹೊಂದಿರುವ ಹುಡುಗಿಯರನ್ನು ಮದುವೆ ಆದರೆ ಹುಡುಗನ ಜೀವನವು ಬಹಳ ಚೆನ್ನಾಗಿರುತ್ತದೆ ಆ ಲಕ್ಷಣಗಳ ಬಗ್ಗೆ ಹೇಳುವುದಾದರೆ ಮದುವೆ ಆಗುವ ಹುಡುಗಿಯ ವಿದ್ಯಾವಂತೆ ಆಗಿರಬೇಕು ಮತ್ತು ಅವಳಿಗೆ ಪ್ರಾಪಂಚಿಕ ಜ್ಞಾನ ಚೆನ್ನಾಗಿ ಇರಬೇಕು ಹಾಗೂ ದೊಡ್ಡವರೊಂದಿಗೆ ವ್ಯವಹರಿಸುವುದನ್ನು ಚೆನ್ನಾಗಿ ಅರಿತಿರಬೇಕು ನೋಡಲು ಸುಂದರವಾಗಿ ಇರ್ಬೇಕು ಹಾಗೂ ನಮ್ಮ ಸಂಪ್ರದಾಯದ ಆಚಾರ ವಿಚಾರಗಳನ್ನು ಚೆನ್ನಾಗಿ ಅರಿತಿರಬೇಕು ಹಣವನ್ನು ಪೋಲು ಮಾಡದಂತೆ ಉಳಿತಾಯ ಮಾಡುವುದರ ಬಗ್ಗೆ ಅರಿವಿರಬೇಕು ಹಾಗೂ ತನ್ನ ಸಂಸಾರವನ್ನು ಮತ್ತು ಕುಟುಂಬದವರನ್ನು ಚೆನ್ನಾಗಿ ನೋಡಿಕೊಳ್ಳುವ ಸಾಮರ್ಥ್ಯ ಇರಬೇಕು. ಗಂಡ ಮತ್ತು ಗಂಡನ ಮನೆಯವರನ್ನು ಸಮಾನವಾಗಿ ತೂಗಿಸಿಕೊಂಡು ಹೋಗುವ ಶಕ್ತಿ ಇರಬೇಕು.

ಆ ಹುಡುಗಿಗೆ ಭೂದೇವಿಯ ಹಾಗೆ ಸಹನೆ ಇದ್ದು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಕುಟುಂಬದ ಸದಸ್ಯರ ಮನವನ್ನು ಗೆಲ್ಲುವಂತೆ ಇರಬೇಕು. ವಿವೇಕವು ಚೆನ್ನಾಗಿರಬೇಕು ಹಾಗೂ ಕೆಲವೊಂದು ಸಂದರ್ಭದಲ್ಲಿ ಹಿರಿಯರಿಂದ ಸಲಹೆ ಸೂಚನೆಗಳನ್ನು ಪಡೆದು ಕೊಳ್ಳಬೇಕು. ಹಾಗೂ ದೊಡ್ಡವರ ಬಗ್ಗೆ ಗೌರವ ಇರಬೇಕು. ಅಡಿಗೆಯನ್ನು ಚೆನ್ನಾಗಿ ಮಾಡಲು ಬರಬೇಕು ಹಾಗೂ ಹಸಿದವರಿಗೆ ಊಟ ಹಾಕುವ ಮನಸ್ಸಿರಬೇಕು. ಪರೋಪಕಾರ ಮಾಡುವ ಗುಣಗಳು ಅವಳಲ್ಲಿ ಇರಬೇಕು. ಮಾನಸಿಕವಾಗಿ ಬಲಿಷ್ಠವಾಗಿರಬೇಕು ಹಾಗೂ ಕಷ್ಟಗಳನ್ನು ಧೈರ್ಯವಾಗಿ ಎದುರಿಸುವ ಸಾಮರ್ಥ್ಯ ಇರಬೇಕು ಎಂತಹ ಕಷ್ಟಗಳು ಬಂದರೂ ಅದನ್ನು ನಿಭಾಯಿಸುವ ಶಕ್ತಿ ಇರಬೇಕು. ಮನೆಗೆ ಬರುವ ಬಂಧುಗಳನ್ನು ಹಾಗೂ ಮಿತ್ರರನ್ನು ಚೆನ್ನಾಗಿ ನೋಡಿಕೊಳ್ಳುವ ಗುಣವಿರಬೇಕು. ಸಹನೆ ತಾಳ್ಮೆ ಇರಬೇಕು. ಯಾವುದೇ ಕೆಲಸಗಳನ್ನು ಮಾಡುವಾಗ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಗುಣವಿರಬೇಕು. ಗಂಡನ ಮನೆಗೆ ಶ್ರೇಯಸ್ಸು ಆಗುವಂತೆ ಅವಳು ಇರಬೇಕು. ಅವಳು ವಿದ್ಯಾವಂತಳಾಗಿದ್ದರೆ ಮಕ್ಕಳಿಗೆ ಮೊದಲ ಗುರುವಿನಂತೆ ಪಾಠ ಹೇಳಿ ಕೊಡುವ ಶಕ್ತಿ ಇರಬೇಕು. ಮನೆಯ ಎಲ್ಲಾ ಜವಾಬ್ದಾರಿಗಳನ್ನು ತನ್ನ ಹೆಗಲ ಮೇಲೆ ಇರುವ ಶಕ್ತಿ ಇರಬೇಕು.

ದೇವರುಗಳ ಬಗ್ಗೆ ವಿಶೇಷವಾದ ಭಕ್ತಿ ಇರಬೇಕು. ಪೂಜೆ ಪುನಸ್ಕಾರಗಳನ್ನು ಮಾಡಬೇಕು. ಅವಳ ನಡವಳಿಕೆ ಇನ್ನೊಬ್ಬರಿಗೆ ಮಾದರಿಯಾಗಿರಬೇಕು. ತಾನು ಮದುವೆಯಾಗುವ ಗಂಡನ ಮನೆಯ ಹಿನ್ನಲೆ ಹಾಗೂ ಅವರ ಮನೆಯ ಆಚಾರ ವಿಚಾರ ಸಂಪ್ರದಾಯ ಗಳ ಬಗ್ಗೆ ಅರಿವನ್ನು ಹೊಂದಿರಬೇಕು. ಪ್ರಪಂಚ ಜ್ಞಾನ ಇರಬೇಕು ಮತ್ತು ಹಣಕಾಸಿನ ವ್ಯವಹಾರವನ್ನು ಸರಿಯಾಗಿ ತೂಗಿಸಿಕೊಂಡು ಹೋಗುವ ಸಾಮರ್ಥ್ಯವಿರಬೇಕು. ಅವಳ ಮಾತಿನಲ್ಲಿ ಮಾಧುರ್ಯ ವಿರಬೇಕು. ಹಾಗೂ ಅವಳು ಮನೆಯಲ್ಲಿ ರಾಣಿಯಂತೆ ಇದ್ದು ಮಂತ್ರಿಯಂತೆ ತನ್ನ ಗಂಡನಿಗೆ ಸಲಹೆ ಸೂಚನೆಗಳನ್ನು ನೀಡುತ್ತಿರಬೇಕು. ಇಷ್ಟೆಲ್ಲಾ ಗುಣಗಳು ಇರುವ ಹುಡುಗಿಯನ್ನು ಮದುವೆಯಾದರೆ ಹುಡುಗನ ಜೀವನ ಬಹಳ ಚೆನ್ನಾಗಿರುತ್ತದೆ. ಆದರೆ ಮದ್ವೆ ಆಗುವ ಹುಡುಗಿಗೂ ಸಹ ಹೆಚ್ಚಿನ ಆಸೆ ಇರುತ್ತದೆ ತನ್ನ ಗಂಡ ನನ್ನನು ಚೆನ್ನಾಗಿ ನೋಡಿಕೊಳ್ಳಬೇಕು. ಇಷ್ಟಾರ್ಥ ಎಲ್ಲವು ಸಾಧ್ಯ ಆಗಬೇಕು ಎಂಬುದು. ನಾವು ಈ ಮೇಲಿನ ಲಕ್ಷಣಗಳು ಆಸೆ ಪಟ್ಟ ಮೇಲೆ ಹೆಂಡತಿಯ ಕೋರಿಕೆಯ ಈಡೇರಿಸುವುದು ಸಹ ನಮ್ಮ ಕರ್ತವ್ಯ.

LEAVE A REPLY

Please enter your comment!
Please enter your name here