ಇಂಜೆಕ್ಷನ್ ಕೊಡೋವಾಗ ಡಾಕ್ಟರ್ ಹೇಗೇಕೆ ಮಾಡ್ತಾರೆ ನಿಮಗೆ ಗೊತ್ತೇ

0
637

ಡಾಕ್ಟರ್ ಬಳಿ ಎಲ್ಲರೂ ಹೋಗಿರುತ್ತೀರಾ ಹಾಗೂ ಇಂಜೆಕ್ಷನ್ ಅನ್ನು ಹಾಕಿಸಿಕೊಂಡಿರುತ್ತೀರ ಮತ್ತು ಡಾಕ್ಟರ್ ಅಥವಾ ನರ್ಸ್ ಗಳು ಮೆಡಿಸನ್ ಬಾಟಲ್ ಇಂದ ಸಿರಂಜಿನೊಳಗೆ ಔಷಧಿ ಯನ್ನು ಎಳೆದು ಕೊಂಡು ನಂತರ ಸ್ವಲ್ಪ ಔಷಧಿಯನ್ನು ಹೊರಗೆ ಬಿಡುತ್ತಾರೆ. ಈ ರೀತಿ ಯಾಕೆ ಮಾಡುತ್ತಾರೆ ಎಂದು ನಿಮಗೆ ತಿಳಿದಿಯೇ. ಅದಕ್ಕೆ ಉತ್ತರ ನಾವು ಹೇಳುತ್ತೇವೆ ಕೇಳಿ. ಮೆಡಿಸನ್ ಬಾಟಲ್ ಇಂದ ಮೆಡಿಸನ್ ಅನ್ನು ಸಿರಂಜಿನೊಳಗೆ ಎಳೆದುಕೊಳ್ಳುವಾಗ ವಾತಾವರಣ ದಲ್ಲಿ ಇರುವ ಗಾಳಿಯು ಸ್ವಲ್ಲ ಸಿರಂಜಿನೊಳಗೆ ಹೋಗುತ್ತದೆ ಮತ್ತು ಅದು ಸಿರಂಜಿನಲ್ಲಿ ಸೇರಿಕೊಂಡು ಸಣ್ಣ ಸಣ್ಣ ಏರ್ ಬಬಲ್ ನ ರೀತಿ ಆಗುತ್ತದೆ. ಈ ಏರ್ ಬಬಲ್ ಗಳು ನಮ್ಮ ಕಣ್ಣಿಗೆ ಕಾಣುಸುವುದಿಲ್ಲ ಅಷ್ಟು ಸಣ್ಣದಾಗಿ ಇರುತ್ತವೆ. ಡಾಕ್ಟರ್ ಗಳು ಸಿರಂಜಿನೊಳಗೆ ಔಷಧಿ ಯನ್ನು ಎಳೆದುಕೊಂಡು ನಂತರ ಸ್ವಲ್ಪ ಔಷಧಿ ಯನ್ನು ಆಚೆ ಬಿಡದಿದ್ದರೆ ಈ ಏರ್ ಬಬಲ್ ಗಳು ಸಿರಂಜಿನೊಳಗೆ ಉಳಿದು ಬಿಡುತ್ತವೆ. ನಂತರ ಈ ಸಿರಂಜಿನಿಂದ ನಾವು ಇಂಜೆಕ್ಷನ್ ಅನ್ನು ತೆಗೆದುಕೊಂಡರೆ ಸಿರಂಜಿನೊಳಗೆ ಉಳಿದಿರುವ ಏರ್ ಬಬಲ್ ಗಳು ನಮ್ಮ ದೇಹದಲ್ಲಿರುವ ರಕ್ತದೊಳಗೆ ಸೇರಿ ಕೊಂಡು ಬಿಡುತ್ತವೆ. ಇದು ತುಂಬಾ ಅಪಾಯಕಾರಿ. ಹೀಗೆ ಏರ್ ಬಬಲ್ ಗಳು ನಮ್ಮ ರಕ್ತವನ್ನು ಸೇರಿಕೊಳ್ಳುವುದರಿಂದ ನಮಗೆ ನೀಡಿರುವ ಔಷಧಿ ಸರಿಯಾಗಿ ಕೆಲಸ ಮಾಡುವುದಿಲ್ಲ.

ನಮ್ಮ ದೇಹಕ್ಕೆ ಸೇರಿಕೊಳ್ಳುವ ಈ ಏರ್ ಬಬಲ್ ಗಳನ್ನು ಡಾಕ್ಟರ್ ಗಳ ಭಾಷೆಯಲ್ಲಿ ಏರ್ ಎಂಬಾಲಿಸಮ್ ಎಂದು ಕರೆಯುತ್ತಾರೆ. ನಮ್ಮ ದೇಹದಲ್ಲಿ ಏರ್ ಎಂಬಾಲಿಸಮ್ ನ ತೊಂದರೆ ಉಂಟಾದರೆ ಇದು ನಮ್ಮ ಆರೋಗ್ಯದ ಮೇಲೆ ಬಹಳ ಪರಿಣಾಮವನ್ನು ಬೀರುತ್ತದೆ. ಏರ್ ಎಂಬಾಲಿಸಮ್ ಆದರೆ ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆ ಗಳು ಆಗುತ್ತದೆ ಮತ್ತು ಆರೋಗ್ಯದಲ್ಲೂ ವ್ಯತ್ಯಾಸ ಉಂಟಾಗುತ್ತದೆ ಅವುಗಳು ಯಾವುವೆಂದರೆ ಎದೆನೋವು ಕಾಣಿಸಿಕೊಳ್ಳುವುದು. ಮೂರ್ಛೆ ಹೋಗುವುದು ತಲೆನೋವು ಉಂಟಾಗುವುದು ಉಸಿರು ಕಟ್ಟುವಂತೆ ಅನ್ನಿಸುವುದು ರಕ್ತದ ಪರಿಚಲನೆ ಸರಿಯಾಗಿ ಆಗದಿರುವುದು ಹೀಗೆ ಇನ್ನು ಹಲವಾರು ತೊಂದರೆಗಳು ಆಗುತ್ತದೆ. ಕೆಲವೊಮ್ಮೆ ಈ ಏರ್ ಬಬಲ್ ಗಳು ನಮ್ಮ ಪ್ರಾಣಕ್ಕೂ ಆಪತ್ತು ತಂದೊಡ್ಡುವ ಸಂಭವ ಇರುತ್ತದೆ. ಈ ಎಲ್ಲ ಕಾರಣಗಳಿಂದ ಡಾಕ್ಟರ್ ಅಥವಾ ನರ್ಸ್ ಗಳು ಇಂಜೆಕ್ಷನ್ ಕೊಡುವ ಮೊದಲು ಸಿರಂಜಿನೊಳಗೆ ಎಳೆದುಕೊಂಡಿರುವ ಔಷಧಿ ಯನ್ನು ಸ್ವಲ್ಪ ಆಚೆ ಹಾಕುತ್ತಾರೆ. ಇದರಿಂದ ಸಿರಂಜಿನೊಳಗೆ ಸೇರಿಕೊಂಡಿರುವ ಏರ್ ಬಬಲ್ ಗಳು ಆಚೆ ಹೋಗುತ್ತದೆ. ಕೇವಲ ಔಷಧಿ ಮಾತ್ರ ಸಿರಂಜಿನೊಳಗೆ ಉಳಿಯುತ್ತದೆ.

ಕೆಲವರು ಸಣ್ಣ ಪುಟ್ಟ ನೆಗಡಿ ಮತ್ತು ಕೆಮ್ಮು ಬಂದರು ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ ಉತ್ತಮವಾದ ಆರೋಗ್ಯದ ದೃಷ್ಟಿಯಿಂದ ಇದು ಬಹಳ ತಪ್ಪು ಏಕೆಂದರೆ ಇಂದು ನಿಮಗೆ ಅದು ಬೇಗನೆ ಪರಿಣಾಮ ನೀಡಿದರು ಸಣ್ಣ ಪುಟ್ಟ ಸಮಸ್ಯೆ ಬಂದಾಗ ಇಂಜೆಕ್ಷನ್ ತೆಗೆದುಕೊಳ್ಳುವುದು ನಿಜಕ್ಕೂ ತುಂಬಾ ಅಪಾಯ ಇದರಿಂದ ರೋಗ ನಿರೋಧಕ ಶಕ್ತಿ ಕಡಿಮೆ ಆಗಿ ಸಾಕಷ್ಟು ಸಮಸ್ಯೆಗಳು ನಮ್ಮನು ಆವರಿಸುತ್ತದೆ. ಈ ಲೇಖನ ತಪ್ಪದೇ ಶೇರ್ ಮಾಡಿ ಈ ಉಪಯುಕ್ತ ಮಾಹಿತಿ ಎಲ್ಲ ಸ್ನೇಹಿತರಿಗೂ ತಿಳಿಯಲಿ.

LEAVE A REPLY

Please enter your comment!
Please enter your name here