ಹೆಣ್ಣು ಮಕ್ಕಳ ಋತುಚಕ್ರದ ಸಮಯದಲ್ಲಿ ಅನುಭವಿಸುವ ನೋವಿಗೆ ಈ ಮದ್ದು ಮಾಡಿರಿ

0
634

ಹೆಣ್ಣು ಮಕ್ಕಳು ಪ್ರತಿ ತಿಂಗಳು ಅನುಭವಿಸುವ ನೋವು ಎಂದರೆ ಋತುಚಕ್ರದ ಸಮಸ್ಯೆ ಈ ಋತುವಿನ ಕಾಲದಲ್ಲಿ ಮಹಿಳೆಯ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಅಗುತ್ತವೆ ಅಂತಹ ಸಮಯದಲ್ಲಿ ತುಂಬಾ ಅನುಭವಿಸುತ್ತಾರೆ ಈ ನೋವನ್ನು ಬೇರೆಯವರ ಬಳಿ ಹೇಳಿಕೊಳ್ಳಲು ಆಗದೆ ನೋವನ್ನು ಅನುಭವಿಸಲು ಆಗದೆ ಒದ್ದಾಡುತ್ತಾರೆ ಈ ನೋವನ್ನು ಕಡಿಮೆ ಮಾಡಿಕೊಳ್ಳಲು ಹಲವಾರು ರೀತಿಯ ಔಷಧಿಯನ್ನು ತೆಗೆದುಕೊಳ್ಳುತ್ತಾರೆ ಆದರೆ ಇದು ಅಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ. ಅದಕ್ಕಾಗಿ ಈ ಋತುಚಕ್ರದ ಸಮಯದಲ್ಲಿ ಮಹಿಳೆಯರು ಅನುಭವಿಸುವ ನೋವಿಗೆ ಸುಲಭ ಮನೆ ಮದ್ದುಗಳು ಇವೆ ಅವುಗಳನ್ನು ತೆಗೆದುಕೊಂಡರೆ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಹಾಗಾದರೆ ಆ ಮನೆ ಮದ್ದುಗಳು ಯಾವುವು ಎಂದು ನೋಡೋಣ ಬನ್ನಿ.

ಋತುಚಕ್ರದ ಸಮಯದಲ್ಲಿ ಆದಷ್ಟು ಹೆಚ್ಚು ನೀರು ಕುಡಿಯಬೇಕು ಹೆಚ್ಚು ನೀರನ್ನು ಕುಡಿಯುವುದರಿಂದ ಋತುಚಕ್ರದ ಸಮಯದಲ್ಲಿ ಬರುವ ಹೊಟ್ಟೆಯ ನೋವು ಹಾಗೂ ದೇಹದ ಇತರ ನೋವುಗಳು ಕಡಿಮೆ ಆಗುತ್ತದೆ. ಅಡಿಗೆ ಮನೆಯಲ್ಲಿ ಇರುವ ಸಾಂಬಾರ ಪದಾರ್ಥವಾದ ಜೀರಿಗೆ ಒಂದು ಲೋಟ ನೀರಿಗೆ ಸ್ವಲ್ಪ ಜೀರಿಗೆಯನ್ನು ಹಾಕಿ ಅದನ್ನು ಚೆನ್ನಾಗಿ ಕುದಿಸಿಸಬೇಕು ನಂತರ ಅದು ಸ್ವಲ್ಪ ಹಾರಿದ ಮೇಲೆ ಅದನ್ನು ಕುಡಿಯುವುದರಿಂದ ಋತುಚಕ್ರದ ಸಮಯದಲ್ಲಿ ಆಗುವ ಸ್ನಾಯುಗಳ ಸೆಳೆತ, ನೋವು, ಆಯಾಸ ಕಡಿಮೆಯಾಗುತ್ತದೆ. ಶುಂಠಿ ಇದರಲ್ಲಿ ಹಲವಾರು ರೀತಿಯ ಆರೋಗ್ಯದ ಗುಣಗಳನ್ನು ಹೊಂದಿದೇ ಹಾಗಾಗಿ ಒಂದು ಶುಂಠಿ ತುಂಡನ್ನು ಚೆನ್ನಾಗಿ ತೊಳೆದು ಅದನ್ನು ಜಜ್ಜಿ ಸ್ವಲ್ಪ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು ಅದು ಚೆನ್ನಾಗಿ ಕಾಯಿದ ನಂತರ ಅದನ್ನು ಸೋಸಿ ಹಾರಿಸಿ ದಿನಕ್ಕೆ ಎರಡು ಬಾರಿ ಕುಡಿಯಬೇಕು ಇದನ್ನು ಹಾಗೆ ಕುಡಿಯಲು ಸಾಧ್ಯವಾಗಲಿಲ್ಲ ಎಂದರೆ ಇದಕ್ಕೆ ಸ್ವಲ್ಪ ಜೇನುತುಪ್ಪ.ಸಕ್ಕರೆ. ಅಥವಾ ಬೆಲ್ಲವನ್ನು ಸೇರಿಸಿ ಕುಡಿಯಬೇಕು ಹೀಗೆ ಮಾಡುವುದುದರಿಂದ ಋತುಚಕ್ರದ ಸಮಯದಲ್ಲಿ ಆಗುವ ನೋವುಗಳು ಕಡಿಮೆ ಅಗುತ್ತವೆ.

ಋತುಚಕ್ರದ ಸಮಯದಲ್ಲಿ ನೋವು ಕಾಣಿಸುತ್ತದೆ ಎನ್ನುವವರು ಋತುಚಕ್ರಕ್ಕೂ ಒಂದು ವಾರಗಳ ಮುಂಚೆ ಪರಂಗಿ ಹಣ್ಣನ್ನು ಸೇವಿಸಬೇಕು ಹೀಗೆ ಮಾಡುವುದರಿಂದ ಪರಂಗಿ ಹಣ್ಣಿನಲ್ಲಿ ಇರುವ ಕಿಣ್ವ ಪಪಿಯನ್ ಎಂಬ ಅಂಶವು ನೋವನ್ನು ನಿವಾರಣೆ ಮಾಡುತ್ತದೆ. ಋತುಚಕ್ರದ ಸಮಯದಲ್ಲಿ ಆದಷ್ಟು ಕಾಫಿ ಟೀ ಕುಡಿಯುವುದನ್ನು ಕಡಿಮೆ ಮಾಡಬೇಕು ಅತಿಯಾದ ಕಾಫಿ ಟಿ ಸೇವನೆ ನೋವನ್ನು ಹೆಚ್ಚು ಮಾಡುತ್ತದೆ. ಋತುಚಕ್ರದ ಸಮಯದಲ್ಲಿ ಆದಷ್ಟು ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ. ಋತುಚಕ್ರದ ಸಮಯದಲ್ಲಿ ಆದಷ್ಟು ಖಾರ ಪದಾರ್ಥಗಳನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು. ಋತುಚಕ್ರದ ಸಮಯದಲ್ಲೂ ಎಳನೀರನ್ನು ಸೇವಿಸುವುದರಿಂದ ಋತುಚಕ್ರದ ಸಮಯದಲ್ಲಿ ಬರುವ ಹೊಟ್ಟೆ ನೋವು ಕಡಿಮೆ ಆಗುತ್ತದೆ. ಆದ್ದರಿಂದ ಆದಷ್ಟು ಋತುಚಕ್ರದ ಸಮಯದಲ್ಲಿ ಇವುಗಳನ್ನು ಸೇವಿಸುವುದರಿಂದ ಎಲ್ಲ ರೀತಿಯ ನೋವುಗಳು ಕಡಿಮೆ ಅಗುತ್ತವೆ.

LEAVE A REPLY

Please enter your comment!
Please enter your name here