ಹೃದಯ ವೈಫಲ್ಯ ಮತ್ತು ಅಧಿಕ ರಕ್ತದೊತ್ತಡ ಮತ್ತು ಕಂಜೆಸ್ಟಿವ್‌ ಕಾರ್ಡಿಯಾಕ್‌ ಫೈಲೂರ್‌ ಈ ಸಮಸ್ಯೆ ಬರಲೇ ಬಾರದು ಅಂದ್ರೆ ಹೀಗೆ ಮಾಡಿ

0
690

ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಬರುವುದು ಸರ್ವೇ ಸಾಮಾನ್ಯವಾಗಿದೆ ಆದರೆ ಅದರಿಂದ ಎಷ್ಟೋ ಜನರು ಪ್ರಾಣವನ್ನು ಕೂಡ ಕಳೆದುಕೊಳ್ಳುತ್ತಾರೆ ಅಂತಹ ಸಮಸ್ಯೆ ಇದು ಆದರೆ ಈ ಈ ಸಮಸ್ಯೆಗೆ ಎಂದು ಆಸ್ಪತ್ರೆಗೆ ಹೋದರೆ ಒಂದಲ್ಲ ಎರಡಲ್ಲ ಹತ್ತಾರು ಮಾತ್ರೆಗಳನ್ನು ಕೊಡುತ್ತಾರೆ ಜೊತೆಗೆ ಅಷ್ಟು ಸುಲಭವಾಗಿ ಹೋಗುವ ಸಮಸ್ಯೆ ಕೂಡ ಇದಲ್ಲ ಆದರೆ ಈ ಹೃದಯದ ಸಮಸ್ಯೆ ಇಂದ ಸುಲಭವಾಗಿ ಪಾರಾಗಲು ಉತ್ತಮ ಚಿಕಿತ್ಸೆ ಎಂದರೆ ಪ್ರಕೃತಿ ಚಿಕಿತ್ಸೆ ಬನ್ನಿ ಇದರ ಬಗ್ಗೆ ತಿಳಿಯೋಣ. ಹೃದಯದ ಕಾಯಿಲೆಗಳಾದ ಅಧಿಕ ರಕ್ತದೊತ್ತಡ ಸ್ಟ್ರೋಕ್‌ ಕಂಜೆಸ್ಟಿವ್‌ ಕಾರ್ಡಿಯಾಕ್‌ ಫೈಲೂರ್‌ ಹೃದಯಾಘಾತ ಹೃದಯ ವೈಫಲ್ಯ ಇವೆಲ್ಲವೂ ಕೂಡ ನಮ್ಮ ಜೀವನ ಶೈಲಿಯಿಂದ ಬರುವ ತೊಂದರೆಗಳು ಅಂದರೆ ನಾವು ತಿನ್ನುವ ಆಹಾರ ನಾವು ಆಲೋಚಿಸುವ ರೀತಿ ನಾವು ವಾಸಿಸುವ ಪರಿಸರ ನಮ್ಮ ದೈಹಿಕ ಶ್ರಮ ನಮ್ಮ ವಿಶ್ರಾಂತಿ ಎಲ್ಲವೂ ಕೂಡ ಇದಕ್ಕೆ ಸಂಭಂದಿಸುತ್ತದೆ.

ಪ್ರಕೃತಿ ಚಿಕಿತ್ಸೆಯ ಮೂಲಕ ನಮ್ಮ ಜೀವನಶೈಲಿಯಲ್ಲಿ ನಮ್ಮ ಆರೋಗ್ಯ ಉತ್ತಮವಾಗಿ ಇರಬೇಕು ಎಂದರೆ ನಾವು ಸೇವಿಸುವ ಆಹಾರ ಕೂಡ ಹಾಗೆ ಇರಬೇಕು ಸಾಮಾನ್ಯವಾಗಿ ನಾವು ಸೇವಿಸುವ ಆಹಾರವನ್ನು ನಾವು ಹುರಿದು ಕರಿದು ಬೇಯಿಸಿ ಸೇವಿಸುತ್ತೇವೆ ಇದು ನಮ್ಮ ನಾಲಿಗೆಗೆ ಒಳ್ಳೆಯ ರುಚಿ ಕೊಡುತ್ತದೆ ಎಂದು ಆದರೆ ಪ್ರಕೃತಿ ಚಿಕಿತ್ಸೆಯ ಪ್ರಕಾರ ನೋಡುವುದಾದರೆ ಆದಷ್ಟು ಹಸಿ ತರಕಾರಿಗಳನ್ನು ಸೇವಿಸಬೇಕು. ಪ್ರಕೃತಿ ಚಿಕಿತ್ಸೆ ಪ್ರಕಾರ ನಿತ್ಯದ ದಿನಚರಿ ಹೇಗಿರಬೇಕು ಎಂದರೆ ಬೆಳಗ್ಗೆ 5 ಗಂಟೆಯೊಳಗೆ ಎದ್ದೇಳಬೇಕು ಎದ್ದು 2 ರಿಂದ 4 ಲೋಟ ಸ್ವಲ್ಪ ಬಿಸಿ ಇರುವ ನೀರನ್ನು ಕುಡಿಯಬೇಕು ನಂತರ ನಿತ್ಯದ ಕೆಲಸಗಳನ್ನು ಮುಗಿಸಿ ವ್ಯಾಯಾಮ ಅಥವಾ ಯೋಗದ ಅಭ್ಯಾಸವನ್ನು ಮಾಡಬೇಕು.

ನಂತರ ಬೆಳಗ್ಗೆ 7 ಗಂಟೆ ಸುಮಾರಿಗೆ ಒಂದು ತಾಜಾ ತರಕಾರಿ ಅಥವಾ ಹಣ್ಣಿನ ರಸವನ್ನು ತೆಗೆದುಕೊಳ್ಳಬೇಕು. ಬೆಳಗ್ಗೆ 8 ಗಂಟೆಗೆ ಉಪಹಾರವನ್ನು ತೆಗೆದುಕೊಳ್ಳಬೇಕು ಉಪಹಾರ ಹೇಗಿರಬೇಕು ಎಂದರೆ ಆದಷ್ಟು ಮೊಳಕೆ ಕಾಳುಗಳು ಅಥವಾ ತರಕಾರಿ ಅಥವಾ ಹಣ್ಣುಗಳು ಅಥವಾ ಕಡಿಮೆ ಪ್ರಮಾಣದ ಆಹಾರದಿಂದ ಕೂಡಿರಿರಬೇಕು. ಮಧ್ಯಾಹ್ನ 12 ಗಂಟೆಗೆ ಊಟ ಊಟದಲ್ಲಿ 2 ಚಪಾತಿ ಅಥವಾ ಕೆಂಪಕ್ಕಿ ಅನ್ನ ಅಥವ ಮುದ್ದೆ ಬೇಯಿಸಿದ ತರಕಾರಿಗಳು ಪಲ್ಯ ಮಜ್ಜಿಗೆ ಅಥವಾ ಸೂಪನ್ನು ತೆಗೆದುಕೊಳ್ಳಬೇಕು. ಸಂಜೆ 4 ಗಂಟೆಗೆ ತಾಜಾ ಹಣ್ಣಿನ ರಸ ಅಥವಾ ಎಳನೀರು ಅಥವಾ ಬಾರ್ಲಿ ನೀರನ್ನು ಸ್ವಲ್ಪ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ರಾತ್ರಿ 8 ಗಂಟೆಗೆ ಕೆಂಪಕ್ಕಿ ಅನ್ನ ಅಥವಾ ಜೋಳದ ರೊಟ್ಟಿ ಜತೆಗೆ ಬೇಯಿಸಿದ ತರಕಾರಿಗಳು ಸೂಪ್‌ ಅಥವಾ ಸ್ವಲ್ಪ ಮಜ್ಜಿಗೆ ಅಥವ ಕೇವಲ ತರಕಾರಿಗಳು ಅಥವಾ ಹಣ್ಣುಗಳನ್ನು ತೆಗೆದುಕೊಳ್ಳಬೇಕು. ಹಾಗೆಯೇ ಪ್ರತಿನಿತ್ಯ 4 ರಿಂದ 5 ಲೀಟರ್‌ ನೀರನ್ನು ತೆಗೆದುಕೊಳ್ಳಲೇಬೇಕು. ದಿನಕ್ಕೆ 2 ಬಾರಿ ಮಾತ್ರ ಆಹಾರ ಸೇವಿಸಬೇಕು ಇದರಿಂದ ಜೀರ್ಣಾಂಗ ವ್ಯೂಹಕ್ಕೆ ಸಾಕಷ್ಟು ಸಮಯ ದೊರೆತು ಆಹಾರ ಸಂಪೂರ್ಣವಾಗಿ ಜೀರ್ಣವಾಗುತ್ತದೆ. ಆದರೆ ಇದು ನಿಮ್ಮ ಅನುಗುಣಕ್ಕೆ ಬಿಟ್ಟಿದೆ.

ನಿತ್ಯ ಬೆಳಿಗ್ಗೆ ಮತ್ತು ಸಂಜೆ ಪ್ರಾರ್ಥನೆ ಮಾಡುವುದರಿಂದ ನಮ್ಮ ಉದ್ವೇಗ ಒತ್ತಡ ಚಿಂತೆ ದೂರವಾಗಿ ಮನಸ್ಸಿನಲ್ಲಿ ಶಾಂತತೆ ನೆಲೆಸುತ್ತದೆ. ಆರೋಗ್ಯದ ದೃಷ್ಟಿಯಿಂದ ವಾರಕ್ಕೊಂದು ದಿನ ಉಪವಾಸ ಮಾಡುವುದರಿಂದ ಜೀರ್ಣಾಂಗ ವ್ಯೂಹಕ್ಕೆ ಸಂಪೂರ್ಣವಾದ ವಿಶ್ರಾಂತಿ ದೊರೆತು ತ್ಯಾಜ್ಯ ವಸ್ತುಗಳು ದೇಹದಿಂದ ಹೊರಹೋಗಲು ಸಹಾಯ ಆಗುತ್ತದೆ. ದೇಹ ಮತ್ತು ಮನಸ್ಸನ್ನು ಸದೃಢವಾಗಿರಿಸಲು ಯೋಗಾಭ್ಯಾಸ ಒಳ್ಳೆಯದು ನೋಡಿದಿರಲ್ಲ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಹಾಗೂ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಪ್ರಕೃತಿ ಚಿಕಿತ್ಸೆ ಒಳ್ಳೆಯ ಪರಿಣಾಮ ಬೀರುತ್ತದೆ.

LEAVE A REPLY

Please enter your comment!
Please enter your name here