ಈ ಹಣ್ಣು ಸಿಕ್ಕರೆ ಕೊಡಲೇ ತಿನ್ನಿ ಇದರಿಂದ ನಿಮಗೆ ನೂರು ಲಾಭ ಸಿಗುತ್ತೆ

0
570

ನಾವು ಎಲ್ಲ ರೀತಿಯ ಹಣ್ಣುಗಳನ್ನು ಸೇವಿಸುವ ರೀತಿಯಲ್ಲಿ ಬ್ಲೂ ಬೆರ್ರಿ ಹಣ್ಣುಗಳನ್ನು ಸೇವಿಸಬೇಕು ಏಕೆಂದರೆ ಈ ಬ್ಲೂ ಬೆರ್ರಿ ಹಣ್ಣುಗಳಲ್ಲಿ ಹಲವಾರು ರೀತಿಯ ಪೋಷಕಾಂಶ ಅಂಶಗಳು ಇದ್ದು ಇದನ್ನು ಸೇವಿಸುವುದರಿಂದ ಹಲವಾರು ರೀತಿಯ ಆರೋಗ್ಯದ ಸಮಸ್ಯೆಗಳನ್ನು ಕಾಪಾಡಿಕೊಳ್ಳಬಹುದು ಬ್ಲೂ ಬೆರ್ರಿಯಲ್ಲಿರುವ ವಿಟಮಿನ್ ಪೋಷಕಾಂಶ ಮತ್ತು ನಾರಿನಾಂಶಗಳು ನಮ್ಮ ದೇಹವನ್ನು ಆರೋಗ್ಯವಾಗಿ ಕಾಪಾಡುತ್ತದೆ. ಜೊತೆಗೆ ಈ ಹಣ್ಣನ್ನು ಸೇವಿಸಲು ಕೂಡ ತುಂಬಾ ಸಿಹಿ ಆಗಿರುತ್ತದೆ. ಹಾಗಾದರೆ ಈ ಬ್ಲೂ ಬೆರ್ರಿ ಹಣ್ಣುಗಳನ್ನು ಸೇವಿಸುವುದರಿಂದ ಏನೆಲ್ಲ ಪ್ರಯೋಜನ ಆಗುತ್ತದೆ ಗೊತ್ತೇ. ಬ್ಲೂ ಬೆರ್ರಿ ಹಣ್ಣುಗಳಲ್ಲಿ ಕಡಿಮೆ ಕ್ಯಾಲೋರಿ ಇದ್ದು ಇದು ದೇಹಕ್ಕೆ ಉತ್ತಮ ಆಹಾರ.ಬ್ಲೂ ಬೆರ್ರಿ ಹಣ್ಣುಗಳಲ್ಲಿ ಕಡಿಮೆ ಸಕ್ಕರೆ ಅಂಶವಿರುತ್ತದೆ ಜೊತೆಗೆ ಇದು ಇತರೆ ಹಣ್ಣುಗಳನ್ನು ಹೋಲಿಸಿಕೊಂಡರೆ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಮೌಲ್ಯವನ್ನು ಹೊಂದಿದೇ ಹೀಗಾಗಿ ಇದು ಆರೋಗ್ಯಕರವಾದ ಹಣ್ಣು. ಬ್ಲೂ ಬೆರ್ರಿ ಹಣ್ಣಿನಲ್ಲಿ ರೋಗಗಳ ವಿರುದ್ಧ ಹೋರಾಡುವ ಪಾಲಿಫೆನಾಲ್‌ಗಳು, ವಿಟಮಿನ್‌ ಸಿ, ಕೆ ಹಾಗೂ ಮ್ಯಾಂಗನೀಸ್‌ ಅಂಶಗಳ ಅತ್ಯುತ್ತಮ ಮೂಲವಾಗಿದೆ. ಬ್ಲೂ ಬೆರ್ರಿ ಹಣ್ಣನ್ನು ಸೇವಿಸುವುದರಿಂದ ಹೃದಯದ ಸಮಸ್ಯೆಗಳು ಹಾಗೂ ಕೆಲ ವಿಧದ ಕ್ಯಾನ್ಸರ್‌ ರೋಗಗಳು ಬರದಂತೆ ತಡೆಯಲು ಸಹಾಯವಾಗುತ್ತದೆ. ಬ್ಲೂ ಬೆರ್ರಿ ಹಣ್ಣನ್ನು ಸೇವಿಸುವುದರಿಂದ ನಮ್ಮ ನೆನಪಿನ ಶಕ್ತಿ ಹೆಚ್ಚುತ್ತದೆ.

ನಮ್ಮ ನಿತ್ಯದ ಆಹಾರ ಕ್ರಮಕ್ಕೆ ಬ್ಲೂ ಬೆರ್ರಿ ಹಣ್ಣುಗಳು ಉತ್ತಮವಾಗಿವೆ. ಇದರ ಜೊತೆಗೆ ಸ್ಟ್ರಾ ಬೆರ್ರಿ ರಸ್ಪ್‌ಬೆರ್ರಿ ಗೋಜಿ ಸೇರಿ ಇತರೆ ಬೆರ್ರಿ ಹಣ್ಣುಗಳ ಇದ್ದರೆ ಇನ್ನು ಉತ್ತಮ. ಬ್ಲೂ ಬೆರ್ರಿ ಹಣ್ಣುಗಳನ್ನು ಸೇವಿಸುವುದರಿಂದ ಹೃದಯದ ಸಮಸ್ಯೆಗಳು ದೂರವಾಗುತ್ತವೆ. ಬ್ಲೂ ಬೆರ್ರಿ ಹಣ್ಣುಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬ್ಲೂ ಬೆರ್ರಿ ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶವಿದ್ದು ಇದನ್ನು ಗರ್ಭಿಣಿಯರು ಸೇವಿಸುವುದರಿಂದ ಆರೋಗ್ಯದ ಸಮಸ್ಯೆಗಳು ದೂರವಾಗುತ್ತವೆ. ಬ್ಲೂ ಬೆರ್ರಿ ಹಣ್ಣಿನಲ್ಲಿ ಇರುವ ವಿಟಮಿನ್ ಸಿ. ಆ್ಯಂಟಿ ಆಕ್ಸಿಡೆಂಟ್‌ ಅಂಶವು ಚರ್ಮದ ರಕ್ಷಣೆ ಮಾಡಲು ಸಹಾಯವಾಗುತ್ತದೆ. ದೇಹದಲ್ಲಿರುವ ಬೇಡದ ಜೀವಕೋಶಗಳನ್ನು ಹೊರ ಹಾಕುವಲ್ಲಿ ಬ್ಲೂ ಬೆರ್ರಿ ಹಣ್ಣು ಸಹಾಯವಾಗುತ್ತದೆ. ಆ್ಯಂಟಿ ಆಕ್ಸಿಡೆಂಟ್‌ ಗುಣವಿರುವ ಬ್ಲೂ ಬೆರ್ರಿ ಹಣ್ಣುಗಳ ಸೇವನೆಯಿಂದ ಜೀರ್ಣ ಕ್ರಿಯೆ ವೃದ್ಧಿಯಾಗುವುದರ ಜೊತೆಗೆ ಸಮತೋಲನ ತೂಕ ಕಾಪಾಡಲು ಸಹಕಾರಿಯಾಗಿದೆ.

ಬ್ಲೂ ಬೆರ್ರಿ ಹಣ್ಣುಗಳಲ್ಲಿ ಅಧಿಕ ಪ್ರಮಾಣದ ಪೈಟೋನ್ಯೂಟ್ರಿಯೆಂಟ್​ಗಳಿವೆ ಹಾಗಾಗಿ ಇದನ್ನು ದಿನನಿತ್ಯದ ಆಹಾರದಲ್ಲಿ ಸೇವಿಸಿದರೆ ಹೃದಯಾಘಾತವನ್ನು ತಡೆಯಬಹುದು. ಹಾಗಾಗಿ ಆದಷ್ಟು ನಮ್ಮ ನಿತ್ಯದ ಆಹಾರ ಕ್ರಮಗಳಲ್ಲಿ ಬ್ಲೂ ಬೆರ್ರಿ ಹಣ್ಣುಗಳನ್ನು ಸೇವಿಸುತ್ತಾ ಬಂದರೆ ಹಲವಾರು ರೀತಿಯ ಆರೋಗ್ಯದ ಸಮಸ್ಯೆಗಳನ್ನು ದೂರ ಮಾಡಬಹುದು. ಈ ಉಪಯುಕ್ತ ಆರೋಗ್ಯ ಲೇಖನ ತಪ್ಪದೇ ಶೇರ್ ಮಾಡಿ ನಿಮ್ಮ ಸ್ನೇಹಿತರಿಗೂ ಮತ್ತು ನಿಮ್ಮ ಮನೆ ಜನಕ್ಕೂ ಖಂಡಿತ ಸಹಾಯ ಆಗುತ್ತೆ.

LEAVE A REPLY

Please enter your comment!
Please enter your name here