ತರಕಾರಿ ನಾಲ್ಕೈದು ದಿನ ಆದರು ಫ್ರೆಶ್ ಆಗಿ ಇರ್ಬೇಕು ಅಂದ್ರೆ ಈ ಕೆಲಸ ಮಾಡಿ

0
541

ಈ ಬೇಸಿಗೆಯ ದಗೆಯಲ್ಲಿ ಯಾವುದೇ ತರಕಾರಿ ಹಣ್ಣುಗಳನ್ನು ಫ್ರೆಶ್ ಆಗಿ ಇಟ್ಟುಕೊಳ್ಳುವುದು ತುಂಬಾ ಕಷ್ಟ ಎಷ್ಟೇ ಫ್ರೆಶ್ ಅದ ತರಕಾರಿಯನ್ನು ತಂದರು ಕೂಡ ಮನೆಗೆ ತಂದು ಒಂದೇ ದಿನಕ್ಕೆ ಬಾಡಿ ಹೋಗುತ್ತದೆ ಬಾಡಿ ಹೋಗುತ್ತವೇ ಎಂದು ನಿತ್ಯ ಹೋಗಿ ತರಕಾರಿ ತರುವುದಕ್ಕೂ ಕೂಡ ಆಗುವುದಿಲ್ಲ ಅಲ್ಲವೇ ಒಂದು ಬಾರಿ ತಂದ ತರಕಾರಿ ಸುಮಾರು 3 ರಿಂದ 4 ದಿನ ಆದರೂ ತಾಜಾವಾಗಿ ಇರಬೇಕು ಅಲ್ಲವೇ ಆದರೆ ಹೇಗೆ ತರಕಾರಿಗಳನ್ನು ತಾಜಾವಾಗಿ ಇಟ್ಟುಕೊಳ್ಳುವುದು ಎಂದು ತಿಳಿದುಕೊಳ್ಳೋಣ ಬನ್ನಿ.

ಎಲ್ಲರೂ ಸಾಮಾನ್ಯವಾಗಿ ತರಕಾರಿಗಳನ್ನು ತಂಡ ತಕ್ಷಣ ಅವುಗಳನ್ನು ತೊಳೆದು ರೆಫ್ರಿಜರೇಟರ್ ನಲ್ಲಿ ಇಟ್ಟುಬಿಡುತ್ತಾರೆ ಆದರೆ ಹಾಗೆ ಮಾಡದೆ ತರಕಾರಿಗಳನ್ನು ತೊಳೆದು ಅದರ ನೀರು ಸಂಪೂರ್ಣವಾಗಿ ಒಣಗಿದ ಮೇಲೆ ರೆಫ್ರಿಜರೇಟರ್ ಅಲ್ಲಿ ಇಟ್ಟುಕೊಳ್ಳಬೇಕು. ಆಲೂಗಡ್ಡೆಯನ್ನು ತೊಳೆದುಕೊಂಡು ಗಾಳಿಯಾಡದ ಕವರ್ ನಲ್ಲಿ ಸುತ್ತಿಡಬೇಕು ಆದರೆ ಆಲೂಗಡ್ಡೆಯನ್ನು ಫ್ರಿಜ್ ನಲ್ಲಿಡ ಬಾರದು. ಈರುಳ್ಳಿ ತರುವಾಗ ಆದಷ್ಟು ಆರಿಸಿ ಒಳ್ಳೆಯದನ್ನು ತರಬೇಕು ಆದರೆ ಈರುಳ್ಳಿಯನ್ನು ಫ್ರಿಜ್ ನಲ್ಲಿಡಬಾರದು ಆದಷ್ಟು ಗಾಳಿಯಾಡುವಂತಹ ಜಾಗದಲ್ಲಿ ಇಡಬೇಕು. ಬದನೆ ಬೀನ್ಸ್ ಟೊಮೆಟೋನಂತಹ ತರಕಾರಿಗಳನ್ನು 08 ಡಿಗ್ರಿ ಸೆಲ್ಶಿಯಸ್ ಗಿಂತ ಕಡಿಮೆ ಉಷ್ಣತೆಯಲ್ಲಿ ಶೇಖರಿಸಿಡಬೇಕು. ಕ್ಯಾಬೇಜ್ ಕಾಲಿಫ್ಲವರ್ ನಂತಹ ತರಕಾರಿಗಳನ್ನು ಉಪ್ಪು ನೀರಿನಲ್ಲಿ ಚೆನ್ನಾಗಿ ತೊಳದುಕೊಂಡು ನಂತರವೇ ಬಳಸಬೇಕು.

ಸೊಪ್ಪುನ್ನು ತಂದ ತಕ್ಷಣ ಅದನ್ನು ಬಿಡಿಸಿ ಅದರ ಕಸವನ್ನು ತೆಗೆದು ತೊಳೆದು ನಂತರ ಬಿಡಿಸಿದ ಸೊಪ್ಪನ್ನು ಅರಿಸಿನ, ಉಪ್ಪು ಬೆರೆಸಿದ ನೀರಿನಲ್ಲಿ ಹಾಕಿಡಬೇಕು ನಂತರ ಬಿಡುವಾದಾಗ ಒಗ್ಗರಣೆ ಮಾಡಿ ಫ್ರಿಜ್ ನಲ್ಲಿಡಿ. ಆಗ ಯಾವಾಗ ಬೇಕೆಂದರೂ ತಕ್ಷಣ ಸೊಪ್ಫು ಬಳಸಿ ಅಡುಗೆ ಮಾಡಬಹುದು. ತಿರುಳಿರುವಂತಹ ತರಕಾರಿಗಳು ಅಂದರೆ ಸೋರೆಕಾಯಿ, ಕುಂಬಳಕಾಯಿ ಮುಂತಾದವುಗಳನ್ನು ತಿರುಳು ತೆಗೆದು ಹೋಳುಗಳಾಗಿ ಮಾಡಿ ಫ್ರಿಜ್ ನಲ್ಲಿಡಬೇಕು. ಕೊತ್ತಂಬರಿ ಸೊಪ್ಪನ್ನು ತಂದ ದಿನವೇ ಬೇರು ಕತ್ತರಿಸಿ ತೊಳೆದು ಬಿಡಿಸಿ ಗಾಳಿಯಾಡುವಂತಹ ಡಬ್ಬಿಯಲ್ಲಿ ಹಾಕಿ ಫ್ರಿಜ್ ನಲ್ಲಿಡಬೇಕು. ತರಕಾರಿಗಳನ್ನು ಫ್ರಿಜ್ ಅಲ್ಲಿ ಇಟ್ಟ ನಂತರ ಎಷ್ಟು ಬೇಕೋ ಅಷ್ಟನ್ನು ತೆಗೆದುಕೊಂಡು ಉಪಯೋಗಿಸಿಕೊಳ್ಳಬೇಕು ಅದು ಬಿಟ್ಟು ಎಲ್ಲ ತರಕಾರಿಗಳನ್ನು ತೆಗೆದುಕೊಂಡು ಗಂಟೆ ಗಟ್ಟಲೆ ಹೊರಗಡೆ ಇಡಬಾರದು. ಫ್ರಿಜ್ ಇಲ್ಲದೆ ಇರುವವರು ತರಕಾರಿಗಳನ್ನು ತೊಳೆದು ಅದರ ನೀರನ್ನು ಸೋರಿಸಿ ಒಂದು ಗಾಳಿ ಆಡುವ ತಂಪಾಗಿ ಇರುವ ಜಾಗದಲ್ಲಿ ಇಟ್ಟುಕೊಳ್ಳಿ. ಹೀಗೆ ಮಾಡಿದರೆ ತರಕಾರಿಗಳು 3 ರಿಂದ 4 ದಿನ ಆದರೂ ಕೂಡ ತಾಜಾವಾಗಿ ಇರುತ್ತವೆ. ಈ ಲೇಖನ ಮರೆಯದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ.

LEAVE A REPLY

Please enter your comment!
Please enter your name here