ಆಲೂಗಡ್ಡೆ ತಗೊಂಡು ಈ ರೀತಿ ಮಾಡಿರಿ ನಿಮಗೆ ಹತ್ತಾರು ಲಾಭ ಸಿಗುತ್ತೆ

0
407

ಆಲೂಗೆಡ್ಡೆ ಯಾರಿಗೆ ಗೊತ್ತಿರುವುದಿಲ್ಲ ಹೇಳಿ. ಪ್ರತಿಯೊಬ್ಬರ ಮನೆಯಲ್ಲೂ ಆಲೂಗೆಡ್ಡೆ ಹಾಕಿ ಸಾಂಬಾರ್ ಮಾಡುತ್ತಾರೆ. ಹುಡುಗಿಯರಿಗಂತೂ ಆಳುಗೆಡ್ಡೆಯಲ್ಲಿ ಮಾಡಿರುವ ಚಿಪ್ಸ್ ಎಂದರೆ ಪಂಚ ಪ್ರಾಣ. ಆಲೂಗೆಡ್ಡೆಯನ್ನು ಸಾಂಬಾರ್ ಪಲ್ಯ ಮತ್ತು ಇನ್ನು ಅನೇಕ ಖಾದ್ಯಗಳನ್ನು ಮಾಡುತ್ತಾರೆ. ಅದರಲ್ಲೂ ಆಲೂಗಡ್ಡೆ ಸಮೋಸ ದ ರುಚಿಯ ಬಗ್ಗೆ ಕೇಳಬೇಕೆ. ತಿನ್ನುತ್ತಾ ಇದ್ದರೆ ಇನ್ನು ತಿನ್ನಬೇಕು ಎನ್ನಿಸುತ್ತದೆ. ಪ್ರತಿ ನಿತ್ಯ ಜಿಮ್ ಗೆ ಹೋಗುವವರು ವಾಕಿಂಗ್ ಮಾಡುವವರು, ಮತ್ತು ವ್ಯಾಯಾಮ ಮಾಡುವವರು ತಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಬಹಳ ಕಷ್ಟ ಪಡುತ್ತಿರುತ್ತಾರೆ. ಆದರೆ ಆಲೂಗೆಡ್ಡೆಯನ್ನು ಚೆನ್ನಾಗಿ ತೊಳೆದು ನಂತರ ನೀರಿನಲ್ಲಿ ಚೆನ್ನಾಗಿ ಬೇಯಿಸಿ ನಂತರ ಅದರ ಸಿಪ್ಪೆಯನ್ನು ತೆಗೆದು ಬೇರೆ ಏನನ್ನು ಮಿಕ್ಸ್ ಮಾಡದೆ ಹಾಗೆ ಬೇಯಿಸಿದ ಆಲೂಗೆಡ್ಡೆಯನ್ನು ಸೇವಿಸುವಿದರಿಂದ ನಿಮ್ಮ ಹೊಟ್ಟೆಯ ಬೊಜ್ಜು ಕರಗುತ್ತದೆ ಹಾಗೂ ನಿಮ್ಮ ದೇಹದ ತೂಕವು ಕೂಡ ಕಡಿಮೆ ಆಗುತ್ತದೆ.

ಬರೀ ಆಲೂಗೆಡ್ಡೆಯನ್ನು ಅಗಿದು ತಿನ್ನಲು ಕಷ್ಟ ಆಗುತ್ತಿದ್ದರೆ ಸಿಪ್ಪೆ ತೆಗೆದ ಆಲೂಗೆಡ್ಡೆಯನ್ನು ಸಣ್ಣದಾಗಿ ಹೆಚ್ಚಿಕೊಂಡು ನಂತರ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಂಡು ನಂತರ ಅದನ್ನು ಜ್ಯೂಸ್ ರೀತಿ ಮಾಡಿಕೊಂಡು ಕೂಡ ಕುಡಿಯುವುದರಿಂದ ನಿಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು. ಸಿಪ್ಪೆ ತೆಗೆದ ಆಲೂಗೆಡ್ಡೆಯನ್ನು ಚೆನ್ನಾಗಿ ಸ್ಮಾಶ್ ಮಾಡಿ ನಂತರ ಇದಕ್ಕೆ ಸ್ವಲ್ಪ ಮೊಸರನ್ನು ಮಿಶ್ರಣ ಮಾಡಿ ರಾತ್ರಿಯ ಸಮಯ ಊಟ ಮಾಡಿದ ನಂತರ ಮೊಸರು ಮಿಶ್ರಿತ ಆಲೂಗೆಡ್ಡೆಯನ್ನು ಎರಡು ಚಮಚ ಸೇವಿಸುವುದರಿಂದ ನಿಮ್ಮ ಹೊಟ್ಟೆಯ ಬೊಜ್ಜು ಕರಗುತ್ತದೆ. ಆದರೆ ಇದನ್ನು ಸೇವಿಸಿದ ಮೇಲೆ ಬೇರೆ ಯಾವ ಪದಾರ್ಥಗಳನ್ನು ಸೇವಿಸಬೇಡಿ.

ಇನ್ನು ಉಳಿದಂತೆ ಆಲೂಗೆಡ್ಡೆ ಪಲ್ಯ ಸಾಂಬಾರ್ ಮಾಡಿ ಸೇವಿಸುವುದರಿಂದ ಕೂಡ ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸಿಪ್ಪೆಯನ್ನು ತೆಗೆದು ಬೇಯಿಸಿದ ಆಲೂಗೆಡ್ಡೆಯನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಾಣಬಹುದು ಮತ್ತು ನಿಮ್ಮ ದೇಹದ ತೂಕ ಕೂಡ ಕಡಿಮೆ ಆಗುತ್ತದೆ. ನಾವು ನಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಬಹಳಷ್ಟು ಕಷ್ಟ ಪಡುತ್ತೇವೆ. ಜಿಮ್ ಗೆ ಹೋಗುವುದು ಕಸರತ್ತು ಮಾಡುವುದು ವ್ಯಾಯಾಮ ಮಾಡುವುದು ಯೋಗ ಮಾಡುವುದು ಇನ್ನು ಏನೇನೋ ಮಾಡುತ್ತೇವೆ ಆದರೂ ನಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಸಾಧ್ಯ ವಾಗುತ್ತಿರುವುದಿಲ್ಲ. ಆದರೆ ನಿಯಮಿತ ವ್ಯಾಯಾಮದ ಜೊತೆ ಜೊತೆಗೆ ಉತ್ತಮ ಆಹಾರ ಹಾಗೂ ಪ್ರತಿ ನಿತ್ಯ ಸಿಪ್ಪೆ ತೆಗೆದು ಚೆನ್ನಾಗಿ ಬೇಹಿಸಿದ ಅಥವಾ ಹಾಗೆ ಕೂಡ ಆಲೂಗೆಡ್ಡೆಯನ್ನು ಸೇವಿಸುವುದರಿಂದ ನಿಮ್ಮ ದೇಹದ ತೂಕವನ್ನು ಬಹಳ ಬೇಗ ಸುಲಭವಾಗಿ ಕಡಿಮೆ ಮಾಡಬಹುದು. ಆಗಾಗಿ ಆಲೂಗೆಡ್ಡೆಯನ್ನು ಚೆನ್ನಾಗಿ ತಿನ್ನಿರಿ ಮತ್ತು ನಿಮ್ಮ ಆರೋಗ್ಯದಲ್ಲಿ ಉತ್ತಮ ಫಲಿತಾಂಶವನ್ನು ಕಾಣಿರಿ. ಈ ಲೇಖನ ಶೇರ್ ಮಾಡಿ ಎಲ್ಲರಿಗು ಸಹಾಯ ಆಗುತ್ತೆ.

LEAVE A REPLY

Please enter your comment!
Please enter your name here