ಅಸ್ತಮ ಖಾಯಿಲೆ ಇದ್ರೆ ಈ ಮನೆ ಮದ್ದು ಮಾಡಿರಿ

0
639

ಸಾಮಾನ್ಯವಾಗಿ ನೀವು ತಿಳಿದಿರುವಂತೆ ನಮ್ಮ ಆರೋಗ್ಯಕ್ಕೆ ಹೆಚ್ಚಾಗಿ ನಾವು ತರಕಾರಿಗಳನ್ನು ಹಣ್ಣುಗಳನ್ನು ಸೇವಿಸಬೇಕು ಎಂದು ಹೇಳುತ್ತಾರೆ ಏಕೆಂದರೆ ಈ ಹಣ್ಣುಗಳು ತರಕಾರಿಗಳಲ್ಲಿ ಹೆಚ್ಚಾಗಿ ಎಲ್ಲ ರೀತಿಯ ಪೋಷಕಾಂಶಗಳು ಇವೆ ಎಂದು ನಮಗೆ ಗೊತ್ತು. ಜೊತೆಗೆ ತರಕಾರಿಗಳಲ್ಲಿ ರೋಗ ನಿರೋಧಕ ಜೀವಸತ್ವಗಳು ಮತ್ತು ಖನಿಜ ಅಂಶಗಳು ಹೇರಳವಾಗಿದ್ದು ಇವು ನಮ್ಮ ಆರೋಗ್ಯ ಕಾಪಾಡಲು ಸಹಾಯಕಾರಿಯಾಗಿವೇ ಅಂತಹ ತರಕಾರಿಗಳಲ್ಲಿ ಒಂದಾಗಿರುವ ಲೇಡೀಸ್ ಫಿಂಗರ್ ಅಂದರೆ ಬೆಂಡೆ ಕಾಯಿ ಇದನ್ನು ಹಸಿಯಾಗಿ ಕೂಡ ತಿನ್ನುತ್ತಾರೆ ಜೊತೆಗೆ ಇದರಲ್ಲಿ ಗೊಜ್ಜು ಪಲ್ಯ ಸಾಂಬಾರ್ ಎಲ್ಲವನ್ನು ತಯಾರಿಸುತ್ತರೆ ಅಲ್ಲವೇ ಈ ಬೆಂಡೆಕಾಯಿಯಲ್ಲಿ ಎಂತಹ ಅದ್ಭುತವಾದ ಶಕ್ತಿ ಇದೆ ಎಂದು ಗೊತ್ತೇ ಇದು ಹಲವಾರು ರೀತಿಯ ಆರೋಗ್ಯದ ಸಮಸ್ಯೆಗಳನ್ನು ಗುಣಪಡಿಸುವ ಗುಣವನ್ನು ಹೊಂದಿದೆ. ಹಾಗಾದರೆ ಯಾವ ಯಾವ ಸಮಸ್ಯೆಗೆ ಉತ್ತಮ ಮದ್ದು ಎಂದು ತಿಳಿಯೋಣ. ಬೆಂಡೆ ಕಾಯಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು ಇದು ಉರಿಯೂತದ ಸಮಸ್ಯೆ. ಆಸ್ತಮಾ ಮತ್ತು ಇತರ ಕೆಲವು ಉಸಿರಾಟದ ತೊಂದರೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಬೆಂಡೆಕಾಯಿಯಲ್ಲಿ ಇರುವ ಫೋಲೆಟ್ ವಿಟಮಿನ್ ಸಿ ಮತ್ತು ವಿಟಮಿನ್ ಬಿ ಅಂಶ ಹೇರಳವಾಗಿದೆ. ಈ ಎಲ್ಲ ಪೋಷಕಾಂಶಗಳು ಮಹಿಳೆಯ ಗರ್ಭವಸ್ಥೆಯಲ್ಲಿರುವ ತಾಯಿಯ ಆರೋಗ್ಯವನ್ನು ಕಾಪಡುತ್ತದೆ ಜೊತೆಗೆ ಭ್ರೂಣದ ಬೆಳವಣಿಗೆಗೆ ಬೆಂಡೆಕಾಯಿ ಉತ್ತಮವಾದುದು. ಬೆಂಡೆಕಾಯಿಯಲ್ಲಿ ಇರುವ ಕಬ್ಬಿಣ, ಫೋಲೇಟ್ ಮತ್ತು ವಿಟಮಿನ್ ಸಿ ಮತ್ತು ಕೆ ಅಂಶವು ಸಮೃದ್ಧವಾಗಿದ್ದು ಈ ಸತ್ವಗಳು ಮನುಷ್ಯನ ರಕ್ತ ಕಣಗಳ ಉತ್ಪತ್ತಿಗೆ ಪ್ರಮುಖ ಕಾರಣವಾಗಿರುತ್ತದೆ ಜೊತೆಗೆ ಇದರಿಂದ ಹಿಮೋಗ್ಲೊಬಿನ್ ಕೂಡ ಹೆಚ್ಚುತ್ತದೆ ಈ ಬೆಂಡೆಕಾಯಿ ಸೇವನೆಯಿಂದ ಮನುಷ್ಯನ ದೇಹದ ರಕ್ತಹೀನತೆಯನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. ಬೆಂಡೆಕಾಯಿಗೆ ರಕ್ತದಲ್ಲಿರುವ ಸಕ್ಕರೆಯ ಅಂಶದ ಮಟ್ಟವನ್ನು ಸಮತೋಲನದಲ್ಲಿಡುವ ಶಕ್ತಿಯನ್ನು ಹೊಂದಿದೆ.ಬೆಂಡೆಕಾಯಿ ಇನ್ಸುಲಿನ್ ನ ಉತ್ಪಾದನೆಯನ್ನು ದೇಹದಲ್ಲಿ ಹೆಚ್ಚಿಸುವುದರಿಂದ ಮಧುಮೇಹದ ಸಮಸ್ಯೆಗಳು ದೂರ ಆಗುತ್ತದೆ. ಬೆಂಡೆಕಾಯಿಯಲ್ಲಿ ಆಂಟೀ ಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಅಂಶ ಇರುವುದರಿಂದ ಇವು ಚರ್ಮದ ಕಾಂತಿಗೆ ಉತ್ತಮವಾದ ಪೋಷಕಾಂಶ ನೀಡುತ್ತದೆ.

ಬೆಂಡೆಕಾಯಿಯಲ್ಲಿ ಕೊಬ್ಬಿನ ಅಂಶ ಇಲ್ಲದಿರುವುದರಿಂದ ಇದರ ಸೇವನೆಯಿಂದ ದೇಹಕ್ಕೆ ಕೊಬ್ಬಿನ ಅಂಶ ಸೇರುವುದಿಲ್ಲ. ಜೊತೆಗೆ ಕೊಬ್ಬಿನ ಅಂಶವನ್ನು ತಡೆಗಟ್ಟುವಲ್ಲಿ ಸಹಾಯಕಾರಿಯಾಗಿದೆ. ಬೆಂಡೆಕಾಯಿಯಲ್ಲಿ ಹೈ ಫೈಬರ್ ಅಂಶವು ಇದ್ದು ಇದು ಸೇವಿಸಿದ ಆಹಾರವನ್ನು ಜೀರ್ಣ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಬೆಂಡೆಕಾಯಿಯಲ್ಲಿ ನೀರಿನಲ್ಲಿ ಕರಗುವ ನಾರು ಇದೆ. ಇದು ಹೃದಯದ ರಕ್ತನಾಳಗಳನ್ನು ಬಲಗೊಳಿಸಿ ಪಾರ್ಶ್ವವಾಯು ಹೃದಯರೋಗಗಳಿಗೆ ಕಾರಣವಾಗುವ ಕೊಲೆಸ್ಟ್ರಾಲ್ ಏರಿಕೆಯನ್ನು ತಡೆಯುತ್ತದೆ. ಹಾಗಾಗಿ ನಿಮ್ಮ ನಿತ್ಯದ ತರಕಾರಿಗಳಲ್ಲಿ ಬೆಂಡೆಕಾಯಿಯನ್ನು ಪ್ರತಿ ನಿತ್ಯ ಕೂಡ ಸೇವಿಸುತ್ತಾ ನಿಮ್ಮ ಆರೋಗ್ಯಾವನ್ನು ಕಾಪಿಡಿಕೊಳ್ಳಿ. ಈ ಲೇಖನ ಮರೆಯದೇ ಎಲ್ಲ ಕಡೆ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗಲಿದೆ.

LEAVE A REPLY

Please enter your comment!
Please enter your name here