ಗುರು ರಾಘವೇಂದ್ರ ಸ್ವಾಮಿಗಳ ಪವಾಡ ಇದು

0
635

ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳು ಅಂದ್ರೆ ಕಲಿಯುಗದ ಕಾಮಧೇನು ಅವರು ಬೃಂದಾವನದಲ್ಲೇ ಇದ್ದು ಭಕ್ತರ ಸಂಕಷ್ಟಗಳಿಗೆ ಪರಿಹಾರ ನೀಡುತ್ತಾ ಇರೋ ವಿಚಾರ ನಿಮಗೆ ತಿಳಿದ ವಿಚಾರ ಆದರೆ ನಮ್ಮಲ್ಲಿ ಎಷ್ಟೋ ಜನರು ಇಂದಿಗೂ ಸಹ ನಾಸ್ತಿಕರಾಗಿ ಬದುಕಿದ್ದಾರೆ ಅವರಲ್ಲಿ ದೈವದ ಬಗ್ಗೆ ಒಂದಿಷ್ಟು ಕಾಳಜಿ ಎಂಬುದು ಇಲ್ಲ. ಹೀಗೆ ಅವರು ದೇವರ ಬಗ್ಗೆ ಆಲೋಚನೆ ಮಾಡದೆ ತಮ್ಮ ಸಮಯ ವ್ಯರ್ಥ ಮಾಡುತ್ತಾ ಇದ್ದಾರೆ ಹಾಗೆಯೇ ತಮ್ಮ ಜೀವನದಲ್ಲಿ ನಡೆಯುವ ಸಾಕಷ್ಟು ಸಮಸ್ಯೆಗಳಿಗೆ ತಾವೇ ತಂದು ಕೊಂಡ ತಪ್ಪು ಎನ್ನುತ್ತಾರೆ ಆದರೆ ಹಿಂದೂ ಧರ್ಮದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ನಿಖರ ಮಾಹಿತಿ ನೀಡುತ್ತಾ ಇದ್ದರು ಮುಂದೆ ಆಗುವ ಘಟನೆ ಬಗ್ಗೆ ತಿಳಿಯುತ್ತಾ ಇತ್ತು ಆದರೆ ನಮ್ಮ ಕೆಲವು ಜನ ದೇವಾಲಯಕ್ಕೆ ಹೋಗುವುದಾದರು ಇರಲಿ ದೇವರ ಹೆಸರೇ ಅವರಿಗೆ ಆಗುವುದಿಲ್ಲ ಅಷ್ಟರ ಮಟ್ಟಿಗೆ ನಾಸ್ತಿಕತೆ ಹೊಂದಿರುವ ಜನಕ್ಕೆ ಈ ಒಂದು ಗುರು ರಾಯರು ಮಾಡುತ್ತಿರುವ ಪವಾಡದ ಲೇಖನ ಸ್ಫೂರ್ತಿ ಆಗಲಿದೆ.

ನೂರಾರು ವರ್ಷಗಳ ಹಿಂದೆಯೇ ಬೃಂದಾವನ ಪ್ರವೇಶ ಮಾಡಿದ ಗುರು ರಾಘವೇಂದ್ರ ಸ್ವಾಮಿಗಳು ಇಹಲೋಕ ತ್ಯಜಿಸಿದ್ದರು ಸಹ ಅವರಿಗೆ ಸಾವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ದೇವರ ವಿಷಯದಲ್ಲಿ ಅನೇಕ ಜನರು ಹಣಕ್ಕಾಗಿ ಮೋಸ ಮಾಡಬಹುದು ಆದ್ರೆ ಆ ದೈವ ನಮಗೆ ಎಂದು ಸಹ ಮೋಸ ಮಾಡಿಲ್ಲ. ಗುರು ರಾಘವೇಂದ್ರ ಸ್ವಾಮಿಗಳ ಪವಾಡಗಳು ನಾವು ನಿಮಗೆ ಈ ಹಿಂದೆ ಸಹ ಸಾಕಷ್ಟು ತಿಳಿಸಿದ್ದೇವೆ ಮುಂದೆಯೂ ಸಹ ತಿಳಿಸುತ್ತೇವೆ. ಕಲಿಯುಗದ ಕಾಮಧೇನು ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹ ನಮ್ಮ ಮೇಲೆ ಒಮ್ಮೆ ಬಿದ್ದರೆ ಸಾಕು ನಮ್ಮ ಇಡೀ ಜೀವನದ ಚಿತ್ರಣವೇ ಬದಲಾಗಿ ಹೋಗುತ್ತದೆ ಇದಕ್ಕೆ ಸಾಕ್ಷಿ ಇಲ್ಲಿದೆ. ನಾನು ಇತ್ತೇಚೆಗೆ ಮೈಸೂರು ನಲ್ಲಿ ಇದ್ದಾಗ ಅಲ್ಲಿನ ಒಂದು ಸಾಧಾರಣ ಮಟ್ಟದ ಹೋಟಲ್ ಗೆ ಹೋಗಿದ್ದೆ ಅಲ್ಲಿನ ಹೋಟೆಲ್ ಹೇಗೆ ಇತ್ತು ಅಂದ್ರೆ ಖಾಲಿ ಜಾಗ ಇರುವ ಸಾಕಷ್ಟು ಕಡೆ ಗುರು ರಾಯರ ಚಿತ್ರಗಳು ಇದ್ದವು ನಾನು ಅದನ್ನು ನೋಡಿ ಈ ಹೋಟಲ್ ಮಾಲೀಕರು ಯಾರೋ ಗುರು ರಾಘವೇಂದ್ರ ಸ್ವಾಮಿಯ ದೊಡ್ಡ ಭಕ್ತರು ಇರಬೇಕು ಎನ್ನುತ್ತಾ ಹಾಗೇ ಸುಮ್ಮನೆ ಕೇಳಿದೆ. ಏನ್ ಸಾರ್ ನೀವು ಗುರು ರಾಯರ ಅಪ್ಪಟ್ಟ ಭಕ್ತರು ಅನಿಸುತ್ತದೆ ಎಂದೇ ಅದಕ್ಕೆ ಅಲ್ಲಿನ ಸುರೇಶ ರಾವ್ ಎಂಬ ಮಾಲೀಕರು ಹೌದು ಇತ್ತೇಚೆಗೆ ಅಷ್ಟೇ ಗುರು ರಾಯರ ಭಕ್ತನಾದೆ ಎಂದು ಹೇಳಿದರು. ಇದನ್ನು ಕೇಳಿದ ನನಗೆ ಒಂದು ಕ್ಷಣ ಆಶ್ಚರ್ಯ ಅದು ಹೇಗೆ ಎನುತ್ತಾ ಒಂದಿಷ್ಟು ಸಮಯ ಅವರ ಬಳಿ ಮಾಹಿತಿ ಪಡೆದುಕೊಂಡೆ ಆಗ ಅವರು ತಮ್ಮ ಜೀವನದ ಅಂದಿನ ದಿನದ ಕಷ್ಟಗಳ ಬಗ್ಗೆ ಒಂದಿಷ್ಟು ಮಾಹಿತಿ ನೀಡಿದರು.

ಮೊದಲಿಗೆ ಸುರೇಶ್ ಅವರು ಬೀದಿ ಬದಿಯಲ್ಲಿ ಇಡ್ಲಿ ಮತ್ತು ಬೆಳಗ್ಗಿನ ಉಪಾಹಾರ ಮಾರುತ್ತ ಜೀವನ ಮಾಡುತ್ತಾ ಇದ್ದರಂತೆ ಆದರೆ ಅವರಿಗೆ ಎಷ್ಟೇ ಕಷ್ಟ ಪಟ್ಟರು ಸಹ ವ್ಯಾಪಾರದಲ್ಲಿ ಹೆಚ್ಚಿನ ಅಭಿವೃದ್ದಿ ಸಿಗಲೇ ಇಲ್ಲ ಎಂದು ಹೇಳಿದರು. ಕೊನೆಗೆ ದೇವರನ್ನೇ ಅಷ್ಟಾಗಿ ನಂಬದ ಸುರೇಶ ಅವರು ಸ್ನೇಹಿತರ ಸಹಾಯದಿಂದ ಒಮ್ಮೆ ಮಂತ್ರಾಲಯ ಪ್ರವಾಸ ಹೋಗಿದ್ದರು ಅಂತೆ. ಸ್ನೇಹಿತರ ಒತ್ತಾಯದ ಮೇಲೆ ಅಂದಿನ ಗುರು ರಾಘವೇಂದ್ರ ಸ್ವಾಮಿಯ ಬೃಂದಾವನ ದರ್ಶನ ಮಾಡಿದರು ಅಂತೆ. ಸ್ನೇಹಿತರ ಬಳಿ ಇದೆಲ್ಲ ಸುಳ್ಳು ಎಂದು ಹೇಳುತ್ತಾ ಇದ್ದರಂತೆ. ಆದ್ರೆ ಸುರೇಶ ಅವರಿಗೆ ಒಂದು ಪವಾಡ ನಡದೇ ಹೋಯಿತು ಅಂದಿನ ರಾತ್ರಿ ಅವರಿಗೆ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಆಗಿದೆ. ಒಂದು ಅಶರೀರ ವಾಣಿಯು ಮಾತನಾಡಿದೇ. ನೀನು ನಿಮ್ಮ ಕುಟುಂಬದ ಜೊತೆಗೆ ಮತ್ತೊಮ್ಮೆ ಇಲ್ಲಿ ಬಾ ಎಂಬ ಸಂದೇಶ ಬಂದಿದೆ.

ದೇವರನ್ನೇ ನಂಬದ ಸುರೇಶ ಅವರ ಕುಟುಂಬ ನಂತರ ಎರಡೇ ದಿನದಲ್ಲಿ ಆತುರದಿಂದ ಗುರು ರಾಯರ ದರ್ಶನ ಪಡೆದು ನಂತರ ತಮ್ಮ ಕೋರಿಕೆ ತಮ್ಮ ಕಷ್ಟಗಳು ಗುರುಗಳ ಬಳಿ ಹೇಳಿಕೊಂಡರು ಅಂತೆ. ಹೀಗೆ ಬೃಂದಾವನ ಬಳಿ ಕಣ್ಣೀರು ಹಾಕಿ ತಮ್ಮ ಕಷ್ಟದ ಬಗ್ಗೆ ಹೇಳಿದ ಕೆಲವೇ ದಿನದಲ್ಲಿ ಅವರ ವ್ಯಾಪಾರ ಹೆಚ್ಚಿನ ರೀತಿಯಲ್ಲಿ ಆಗಿದ್ದು. ಮತ್ತು ದಿನ ದಿನಕ್ಕೆ ಅವರು ಹೆಚ್ಚಿನ ಲಾಭ ಗಳಿಸಿದರು. ಹೀಗೆ ತಿಂಗಳುಗಳು ಸಾಗುತ್ತಾ ಸುರೇಶ ಅವರು ಇಂದು ಮೈಸೂರು ನಲ್ಲೆ ಒಂದು ಸಣ್ಣ ಹೋಟೆಲ್ ಉದ್ಯಮಿ ಆಗಿದ್ದಾರೆ ಗುರುಗಳು ಮಾಡಿದ ಈ ಚಮತ್ಕಾರ ನೋಡಿ ಆವರಿಗೆ ಶಾಶ್ವತ ಭಕ್ತರು ಆಗಿದ್ದಾರೆ. ಯಾರೇ ಹೋಟಲಿಗೆ ಬರಲಿ ರಾಯರ ಬಗ್ಗೆ ಮಾಹಿತಿ ಕೇಳಿದರು ಸಹ ಅವ್ರಿಗೆ ಆದ ಘಟನೆ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ. ನಿಜಕ್ಕೂ ಇದು ಕೆಲವ ಒಂದು ಉದಾಹರಣೆ ಅಷ್ಟೇ. ಆದರೆ ಗುರು ರಾಘವೇಂದ್ರ ಸ್ವಾಮಿಗಳನ್ನು ನಂಬಿ ನಡೆದರೆ ಜೀವನವೇ ಪಾವನ ಆಗಲಿದೆ. ಈ ಗುರುವಿನ ಪವಾಡ ಲೇಖನ ಮರೆಯದೇ ಶೇರ್ ಮಾಡಿರಿ.

LEAVE A REPLY

Please enter your comment!
Please enter your name here