ನಿಮ್ಮ ಕೂದಲು ಯಾವಾಗಲು ಸಾಫ್ಟ್ ಮತ್ತು ಸಿಲ್ಕಿ ಆಗಿ ಇರ್ಬೇಕು ಅಂದ್ರೆ ಈ ಮನೆ ಮದ್ದು ಮಾಡಿರಿ

0
631

ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳ ಅಂದವನ್ನು ಹೆಚ್ಚಿಸುವುದು ಅವರ ಕೂದಲು ಮಾತ್ರ. ಒಬ್ಬರಿಗೆ ಒಂದು ಒಂದು ರೀತಿಯ ಕೂದಲು ಇರುತ್ತದೆ ಅವರ ಕೂದಲಿನ ಆರೈಕೆಗೆ ಎಷ್ಟೆಲ್ಲ ಹರಸಾಹಸ ಪಡುತ್ತಾರೆ ಮಾರುಕಟ್ಟೆಯಲ್ಲಿ ಸಿಗುವ ವಿಧವಿಧವಾದ ಸಾಂಪು ಎಣ್ಣೆಗಳನ್ನೆಲ್ಲ ಬಳಕೆ ಮಾಡುತ್ತಾರೆ ಆದರೂ ಕೂಡ ಗಾಳಿ ಧೂಳು ಬಿಸಿಲಿಗೆ ಕೂದಲು ಒರಟು ಒರಟು ಆಗುತ್ತದೆ. ನೀವು ಎಷ್ಟು ಹಣ ಕೊಟ್ಟು ದುಬಾರಿ ಬೆಲೆಯ ಶಾಂಪೂ ಮತ್ತು ಹೇರ್ ಕ್ರೀಮ್ ಬಳಕೆ ಮಾಡಿದ್ರು ನಂತರದ ದಿನಗಳಲ್ಲಿ ನಿಮಗೆ ಬೇರೆಯದ್ದೇ ಸಮಸ್ಯೆ ಬರಲಿದೆ. ಆದರೆ ಈ ಒರಟು ಕೂದಲನ್ನು ಸಾಫ್ಟ್ ಮಾಡಲು ಯಾವುದೇ ಎಣ್ಣೆ ಸಾಂಪು ಬಳಕೆ ಮಾಡಿದರು ಕೂಡ ಅದರಿಂದ ಅಷ್ಟೇನು ಪ್ರತಿಫಲ ಸಿಗುವುದಿಲ್ಲ ಜೊತೆಗೆ ಅದರಿಂದ ಇನ್ನಷ್ಟು ಕೂದಲು ಹಾಳಾಗುವುದೇ ಹೆಚ್ಚು ಆದರೆ ಈ ಒರಟು ಕೂದಲನ್ನು ಸಾಫ್ಟ್ ಮಾಡುವುದಕ್ಕೆ ಸುಲಭ ವಿಧಾನಗಳು ಇವೆ ಅವುಗಳನ್ನು ತಿಳಿದುಕೊಳ್ಳೋಣ ಬನ್ನಿ.

ಅಲೋವೆರದ ಲೋಳೆಸರ ಇದು ಕೂದಲಿಗೆ ತುಂಬಾ ಒಳ್ಳೆಯದು ಈ ಲೋಳೆಸರವನ್ನು ಕೂದಲಿಗೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ಲೋಳೆಸರದ ಶಾಂಪೂ ಬಲಕೆ ಮಾಡಿ ತಲೆಯನ್ನು ತೊಳೆದುಕೊಂಡರೆ ಕೂದಲು ಬೆಳೆಯುವುದರ ಜೊತೆಗೆ ಸಾಫ್ಟ್ ಆಗುತ್ತದೆ. ಸೇಬಿನ ಹಣ್ಣು ತಿನ್ನಲು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಗೆಯೇ ಸೇಬಿನ ರಸ ಕೂದಲಿಗೂ ಕೂಡ ತುಂಬಾ ಒಳ್ಳೆಯದು ಒಂದು ಸೇಬನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಗಟ್ಟಿಯಾಗಿಯೇ ನುಣ್ಣನೆ ರುಬ್ಬಿಕೊಂಡು ಅದರ ರಸವನ್ನು ತೆಗೆದುಕೊಳ್ಳಬೇಕು ನಂತರ ಆ ರಸವನ್ನು ತಲೆಗೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತಲೆ ತೊಳೆದುಕೊಳ್ಳಬೇಕು ಹೀಗೆ ಮಾಡುವುದರಿಂದ ಕೂದಲಿಗೆ ಹೊಳಪು ಬರುತ್ತದೆ. ಸಾಸಿವೆ ಎಣ್ಣೆಗೆ ಸ್ವಲ್ಪ ನಿಂಬೆರಸ ಮತ್ತು ಸ್ವಲ್ಪ ಮೊಸರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ನಂತರ ಆ ಮಿಶ್ರಣವನ್ನು ತಲೆಗೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತಲೆ ತೊಳೆಯಬೇಕು ಹೀಗೆ ಮಾಡುವುದರಿಂದ ಕೂದಲು ಮೃದುವಾಗುವುದರ ಜೊತೆಗೆ ಬೇಗ ಬೆಳೆಯುತ್ತದೆ.

ಮೊಟ್ಟೆಯ ಬಿಳಿ ಭಾಗವನ್ನು ಹಾಕಿ ಅದಕ್ಕೆ ಸ್ವಲ್ಪ ಆಲೀವ್ ಎಣ್ಣೆಯನ್ನು ಹಾಕಿ ಅದನ್ನು ಚೆನ್ನಗಿ ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಳ್ಳಬೇಕು ನಂತರ ಸ್ವಲ್ಪ ಸಮಯ ಬಿಟ್ಟು ತಲೆಸ್ನಾನ ಮಾಡಬೇಕು.ಈ ರೀತಿ ಮಾಡುವುದರಿಂದ ಕೂದಲಿಗೆ ಬೇಕಾಗಿರುವ ಪ್ರೊಟೀನ್ ಸಿಗುತ್ತದೆ ಕೂದಲು ತುಂಬಾ ಸಾಫ್ಟ್ ಆಗುತ್ತದೆ. ಬಾದಾಮಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಪ್ರತಿನಿತ್ಯ ಕೂದಲಿಗೆ ಮಸಾಜ್ ಮಾಡಿದರೆ ಕೂದಲು ಸಾಫ್ಟ್ ಆಗುತ್ತದೆ. ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಂಡು ಅದನ್ನು ಕೂದಲಿಗೆ ಹಚ್ಚಿಕೊಂಡು ಮಸಾಜ್ ಮಾಡಿಕೊಂಡರೆ ಕೂದಲು ಸಾಫ್ಟ್ ಆಗುತ್ತದೆ. ಈ ಮೇಲಿನ ವಿಧಾನಗಳಲ್ಲಿ ಯಾವುದಾದರೂ ಒಂದನ್ನು ತಪ್ಪದೆ ಪಾಲಿಸುತ್ತಾ ಬಂದರೆ ಕೂದಲು ಸಾಫ್ಟ್ ಆಗುವ ಜೊತೆಗೆ ಕೂದಲು ಬೆಳೆಯುತ್ತದೆ. ನಮ್ಮ ವೆಬ್ಸೈಟ್ ಎಲ್ಲ ಬರಹಗಳಿಗೆ ವಿಶೇಷ ಕಾಪಿರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡುವ ಪ್ರಯತ್ನ ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ. ಈ ಉಪಯುಕ್ತ ಆರೋಗ್ಯ ಮಾಹಿತಿ ನಿಮ್ಮ ಸ್ನೇಹಿತರೊಂದಿಗೆ ಮರೆಯದೇ ಹಂಚಿಕೊಳ್ಳಿರಿ.

LEAVE A REPLY

Please enter your comment!
Please enter your name here