ಪವಾಡಗಳನ್ನು ಮಾಡುವ ಅನಂತ ಪದ್ಮನಾಭನ ದರ್ಶನ ಪಡೆಯಿರಿ

0
564

ಕೇರಳ ರಾಜ್ಯ ಅತ್ಯಂತ ಹೆಚ್ಚಿನ ದೇವಸ್ಥಾನಗಳನ್ನು ಹೊಂದಿದೆ. ಈ ರಾಜ್ಯವನ್ನು ದೇವರ ನಾಡು ಎಂದೂ ಕರೆಯುತ್ತಾರೆ. ಹಾಗೆ ಅಲ್ಲಿರುವ ಸಾಕಷ್ಟು ಪುಣ್ಯ ಕ್ಷೇತ್ರಗಳು ಅತ್ಯಂತ ಹೆಚ್ಚಿನ ಇತಿಹಾಸವನ್ನು ಹೊಂದಿದೆ. ಹಾಗೆ ಅಲ್ಲಿರುವ ಜನರೂ ಕೂಡ ಅಪಾರವಾದ ಭಕ್ತಿಯಿಂದ ದೈವವನ್ನು ನಂಬುತ್ತಾರೆ. ಹೀಗೆ ನಾವು ನಿಮಗೆ ಇಂದು ಹೇಳಲು ಹೊರಟಿರುವ ಕ್ಷೇತ್ರ ಅನಂತಪುರದ ಪದ್ಮನಾಭ ಸ್ವಾಮಿಯ ಬಗ್ಗೆ. ಈ ಕ್ಷೇತ್ರವಿರುವುದು ಅನಂತಪುರ. ಕೇರಳದ ಕಾಸರಗೋಡು ಜಿಲ್ಲೆಯಲ್ಲಿರುವ ಪವಿತ್ರ ಕ್ಷೇತ್ರ ಎನ್ನಬಹುದು. ಈ ಕ್ಷೇತ್ರ ಅಂದು ಕರ್ನಾಟಕದಲ್ಲಿತ್ತು. ಏಕೆಂದರೆ ಅಂದಿನ ಕಾಸರಗೋಡು ನಮ್ಮ ಕನ್ನಡ ನಾಡಿನಲ್ಲಿತ್ತು. ಆದರೆ ಇಂದು ಕೇರಳಕ್ಕೆ ಸೇರಿದ್ದರೂ ಕೂಡ ಅಲ್ಲಿ ಮೊದಲ ಪ್ರಾಶಸ್ತ್ಯ ನೀಡುವುದು ಕನ್ನಡ ಭಾಷೆಗೆ. ಅಲ್ಲಿನ ಅರ್ಚಕರು ಸಹ ಕನ್ನಡದವರೆ. ಕನ್ನಡ ಮನೆತನದವರೇ ನೂರಾರು ವರ್ಷಗಳಿಂದ ಅಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಾ ಬಂದಿದ್ದಾರೆ.

ದೇವಸ್ಥಾನದ ಸೇವಾ ಕೌಂಟರ್ನಿಂದ ಹಿಡಿದು ಅಲ್ಲಿನ ಪಡೆಯುವ ಟಿಕೆಟ್ ಎಲ್ಲವೂ ಕನ್ನಡದಲ್ಲೇ ಮುದ್ರಿತವಾಗಿರುತ್ತದೆ. ನಂತರದ ಸ್ಥಾನ ಕೇರಳದ ಮಲಯಾಳಂ ಭಾಷೆಗೆ ಹಾಗು ನಂತರ ಆಂಗ್ಲ ಭಾಷೆಗೆ ಹೋಗುತ್ತದೆ. ಇಲ್ಲಿನ ದೇವಸ್ಥಾನ ವಿಶೇಷವಾದ ವಾಸ್ತುಶಿಲ್ಪಗಳಿಂದ ಕೂಡಿದೆ. ಇಲ್ಲಿನ ದೇವಸ್ಥಾನವನ್ನು ಮೇಲಪ್ಪರಂಬಿಲ್ ಶ್ರೀ ಪರಮೇಶ್ವರನ್ ನಂಬೂರಿ ವಿಪ್ಪಿಡ್ ಎಂಬ ವಾಸ್ತುಶಿಲ್ಪಿ ಕಟ್ಟಿದರೆಂದು ಇತಿಹಾಸ ಹೇಳುತ್ತದೆ. ಈ ದೇಗುಲಕ್ಕೆ ಸರ್ಪ ರೀತಿಯ ಪ್ರವೇಶ ದ್ವಾರ ಇರುತ್ತದೆ. ದೇಗುಲದ ಚಾವಣಿಯಲ್ಲಿ ತುಳಸಿದಾಸ ಮಹಾನ್ನರು ಮತ್ತು ಸ್ವಾಮಿ ವಿವೇಕಾನಂದರ ಚಿತ್ರಗಳಿದೆ. ಹಾಗೆ ದೇಗುಲದ ಚೌಕಟ್ಟಿನಲ್ಲಿ ರಾಮಾಯಣ ಮತ್ತು ಮಹಾಭಾರತ ಇತಿಹಾಸದ ಘಟನೆಗಳನ್ನು ತೋರಿಸುವ ಕಲಾಕೃತಿಗಳಿದೆ. ಹಾಗೆ ಮುಂದೆ ಸಾಗುತ್ತಾ ಹೋದರೆ ತುಪ್ಪದ ದೀಪಗಳಿಂದ ಬೆಳಕಿನಲ್ಲಿ ಕಂಗೊಳಿಸುವ ಅನಂತ ಪದ್ಮನಾಭನ ಮೂರ್ತಿಯ ದಿವ್ಯ ದರ್ಶನವಾಗುತ್ತದೆ. ನಿಜಕ್ಕೂ ಈ ದೇವರ ದರ್ಶನವನ್ನು ನಾವು ಪಡೆಯಲೇಬೇಕು.

ಏಕೆಂದರೆ ಅಲ್ಲಿರುವ ಅನಂತ ಪದ್ಮನಾಭ ಸ್ವಾಮಿಯು ಸರ್ಪದ ಮೇಲೆ ಕುಳಿತು ಒಂದು ಮಂಡಿಯನ್ನು ಮಡಚಿ ಮತ್ತೊಂದು ಕಾಲನ್ನು ನೆಲದ ಮೇಲೆ ಇಟ್ಟುಕೊಂಡು ಶಂಖ ಚಕ್ರ ಹಿಡಿದು ಅಭಯ ಮುದ್ರೆಯಲ್ಲಿ ದಿವ್ಯ ಮಂಗಳ ಮೂರ್ತಿಯಾಗಿ ದರ್ಶನ ನೀಡುತ್ತಿರುತ್ತಾರೆ. ಹಾಗೆ ಗರ್ಭಗುಡಿಯ ಅಕ್ಕಪಕ್ಕದಲ್ಲಿ ಶ್ರೀದೇವಿ ಭೂದೇವಿ ಗರುಡ ಹನುಮಂತನ ದೇವಾಲಯ ಮತ್ತು ವಿಗ್ರಹಗಳು ಇವೆ. ಈ ಅನಂತ ಪದ್ಮನಾಭನ ವಿಗ್ರಹ ಸಾಮಾನ್ಯ ಕಲ್ಲಿನದಲ್ಲ, ಅದಕ್ಕೆ ನೂರಾರು ಗಿಡಮೂಲಿಕೆಗಳ ನೆರವಿನಿಂದ ಪಡೆದು ಅದನ್ನು ಮಾಡಲಾಗಿದೆ ಎಂದು ಇತಿಹಾಸ ಪುಟಗಳಲ್ಲಿ ಹೇಳಲಾಗಿದೆ. ಈ ರೀತಿ ಮಾಡಿರುವ ಕೆಲವೇ ಕೆಲವು ವಿಗ್ರಹಗಳಲ್ಲಿ ಇದುವೂ ಸಹ ಒಂದು. ಇಲ್ಲಿರುವ ಅನಂತ ಪದ್ಮನಾಭನ ಬಳಿ ನಿಮ್ಮ ಅಳಲನ್ನು ತೋಡಿಕೊಂಡು ಹರಕೆಯನ್ನು ಹತ್ತುಕೊಂಡರೆ ಖಂಡಿತಾ ಆತ ನಿಮ್ಮ ಕಷ್ಟಗಳಿಗೆ ಸ್ಪಂದನೆಯನ್ನು ನೀಡುತ್ತಾರೆ. ಹಾಗೆ ಈ ದೇವರನ್ನು ಪ್ರಾರ್ಥಿಸಿದ ನಂತರ ನಿಮ್ಮ ಕೋರಿಕೆ ಈಡೇರಿದ ನಂತರ ಹರಕೆಯನ್ನು ತೀರಿಸಿಕೊಳ್ಳಬಹುದು. ಹಾಗೆ ನಿಮಗೆ ಈ ದೇವಸ್ಥಾನದ ಆವರಣದಲ್ಲಿರುವ ಸರೋವರದಲ್ಲಿ ವಿಶೇಷವಾದ ಅನುಭವವಾಗುತ್ತದೆ. ಏಕೆಂದರೆ ಈ ಸರೋವರದಲ್ಲಿ ಒಂದು ಮೊಸಳೆಯಿದೆ. ಸ್ವತಂತ್ರ ಪೂರ್ವದಲ್ಲಿ ಒಬ್ಬ ಅಧಿಕಾರಿಯು ಇಲ್ಲಿ ಒಂದು ಮೊಸಳೆಯನ್ನು ಸಾಕಿದ್ದರು. ಅದರ ಸಂತಾನೋತ್ಪತ್ತಿ ಈಗಲೂ ಇದೆ ಎಂದು ಹೇಳುತ್ತಾರೆ.

ಹಾಗೆ ಮಹಾ ಮಂಗಳಾರತಿ ಆದ ನಂತರ ಸರಿ ಸುಮಾರು 12.30 ನಂತರ ಈ ಮೊಸಳೆಗೆ ಅಲ್ಲಿನ ಅರ್ಚಕರು ಆಹಾರವನ್ನು ನೀಡುತ್ತಾರೆ. ದೇವಾಲಯದ ಅಂಗಳದಲ್ಲಿ ಮಹಾ ಗಣಪತಿ ಶ್ರೀ ರಕ್ತೇಶ್ವರಿ ಶ್ರೀ ಮಹಿಷಮರ್ಧಿನಿ ಉಳ್ಳಾಕುಲ್ ಶ್ರೀ ವೇದಾವತಿ ಮೊದಲಾದ ಸಾನ್ನಿಧ್ಯವೂ ಸಹ ಇದೆ. ಇಲ್ಲಿನ ದೇವಸ್ಥಾನದಲ್ಲಿ ಫೆಬ್ರವರಿ 14ನೆ ದಿನ ವಾರ್ಷಿಕೋತ್ಸವ ಮಹಾಮೇಳವು ನಡೆಯುತ್ತದೆ. ಕೃಷ್ಣ ಜನ್ಮಾಷ್ಟಮಿಯಂದು ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಈ ದೇವಸ್ಥಾನಕ್ಕೆ ತಲುಪುವುದು ಹೇಗೆಂದರೆ ಕಾಸರಗೋಡಿನಿಂದ ಹನ್ನೊಂದು ಕಿಮೀ ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದರೆ ಕುಂಬ್ಳೆ ಸಿಗುತ್ತದೆ. ಅಲ್ಲಿಂದ ನಾಲ್ಕು ಕಿ.ಮೀ. ದೂರಕ್ಕೆ ನಾಯಪ್ಪು ಎಂಬ ಊರು ಸಿಗುತ್ತದೆ. ಅಲ್ಲಿಂದ ಒಂದು ಕಿ.ಮೀ. ದೂರದಲ್ಲಿ ಅನಂತ ಪದ್ಮನಾಭನ ಕ್ಷೇತ್ರವಿದೆ. ನಿಮಗೆ ಸಾಧ್ಯವಾದರೆ ಖಂಡಿತಾ ಇಲ್ಲಿಗೆ ಭೇಟಿ ನೀಡಿ ಹಾಗೂ ಅನಂತ ಪದ್ಮನಾಭನ ದರ್ಶನವನ್ನು ಪಡೆಯಿರಿ. ನಿಮ್ಮ ಸಮಸ್ಯೆಗಳು ಏನಾದರು ಇದ್ದರೆ ನಾವು ಕೆಳಗೆ ನೀಡಿರುವ ಗುರುಗಳ ಸಂಖ್ಯೆಗೆ ಒಂದು ಮಿಸ್ ಕಾಲ್ ಕೊಡಿ ಪ್ರತ್ಯುತ್ತರ ಸಿಗಲಿದೆ.

ಇವರು ಪ್ರಖ್ಯಾತ ಜ್ಯೋತಿಷ್ಯರು ದುರ್ಗಾ ಪರಮೇಶ್ವರಿ ಆರಾಧಕರು ನಿಮ್ಮ ಸಮಸ್ಯೆಗಳು ಏನೇ ಆದ ಕೌಟುಂಬಿಕ ಹಣಕಾಸಿನ ಅಭಿವೃದ್ದಿ ಆಗಲು ಮಾನಸಿಕ ಮತ್ತು ದೈಹಿಕ ಸಮಸ್ಯೆ. ಕೋರ್ಟು ಕಛೇರಿ ಸಮಸ್ಯೆಗಳು ಏನೇ ಇದ್ದರು ಮೋಡಿ ಮಾಂತ್ರಿಕರು ಶಾಶ್ವತವಾಗಿ ನಿಮಗೆ ಪರಿಹಾರ ಮಾಡಿಕೊಡುತ್ತಾರೆ. 96111 904 44 ಒಮ್ಮೆ ಮಾತನಾಡಿ ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿರಿ. ಈ ಲೇಖನ ಶೇರ್ ಮಾಡಿರಿ ಮಹಾ ವಿಷ್ಣು ಕೃಪೆಗೆ ಪಾತ್ರರಾಗಿರಿ.

LEAVE A REPLY

Please enter your comment!
Please enter your name here