ಸಿಗರೇಟ್ ಸೇದಿ ಶ್ವಾಸಕೋಶ ಹಾಳಾಗಿದ್ದರೆ ಅದನ್ನು ಸರಿ ಮಾಡಿಕೊಳ್ಳುವುದು ಹೇಗೆ ಗೊತ್ತೇ.

0
817

ಸಿಗರೇಟ್ ಸೇದುವುದರಿಂದ ಎಷ್ಟೆಲ್ಲ ಸಮಸ್ಯೆಗಳು ಅಗುತ್ತವೆ ಎಂದು ಗೊತ್ತಿದ್ದರೂ ಕೂಡ ಸಿಗರೇಟ್ ಚಟವನ್ನು ಮಾತ್ರ ನಮ್ಮ ಜನರು ಬಿಡುವುದಿಲ್ಲ ಅದಕ್ಕೆ ಒಮ್ಮೆ ಅಂಟಿಕೊಂಡರೆ ಅದನ್ನು ದೂರ ಮಾಡಿಕೊಳ್ಳುವುದು ತುಂಬಾ ಕಷ್ಟ ಏಕೆಂದರೆ ನಾವು ಅದನ್ನು ಬಿಡುತ್ತೇವೆ ಅಂದರು ಅದು ನಮ್ಮನ್ನು ಬಿಡಲು ಸಿದ್ಧವಿರುವುದಿಲ್ಲ ಅಷ್ಟರ ಮಟ್ಟಿಗೆ ಅದಕ್ಕೆ ಅಭ್ಯಾಸ ಮಾಡಿಕೊಂಡಿರುತ್ತಾರೆ. ಸಿಗರೆಟ್ ನಿಂದ ಕ್ಯಾನ್ಸರ್ ಖಾಯಿಲೆ ಬರುತ್ತೆ ಎಂದು ಎಲ್ಲರಿಗು ಗೊತ್ತು ಆದರು ಅದನ್ನು ಬಿಡಲ್ಲ. ಸಿಗರೇಟ್ ಬೆಲೆ ಹತ್ತಲ್ಲ ಐವತ್ತು ದಾಟಿದರು ನಮ್ಮ ಜನ ಅದನ್ನ ಬಿಡಲ್ಲ ಅನ್ಸುತ್ತೆ ಇದರಿಂದ ಪ್ರಾಣಕ್ಕೆ ಅಪಾಯವಾಗುತ್ತದೆ ನಮ್ಮನೆ ನಂಬಿರುವ ಹೆಂಡ್ತಿ ಮಕ್ಕಳು ಆಗಿರಬಹುದು ಅಥವ ನಮ್ಮ ಮೇಲೆ ಅವಲಂಬಿತ ಆಗಿರೋ ನಮ್ಮ ತಂದೆ ತಾಯಿ ಆಗಿರಬಹುದು ನಮಗೆ ಹೆಚ್ಚು ಕಡಿಮೆ ಆದರೆ ಇವರಿಗೆಲ್ಲ ಸಮಾಧಾನ ಹೇಳೋದು ಯಾರು ಅಲ್ಲವೇ

ಈ ಸಿಗರೇಟ್ ಸೇದುತ್ತಿದ್ದರೆ ಮನುಷ್ಯನ ಶ್ವಾಸಕೋಶ ಹಾಳಾಗುತ್ತದೆ ಅವನಿಗೆ ಸರಿಯಾಗಿ ಉಸಿರಾಡಲು ಆಗದೆ ತುಂಬಾ ನೋವು ಅನುಭವಿಸಬೇಕಾಗುತ್ತದೆ ಆದರೆ ಈ ರೀತಿ ಸಿಗರೇಟ್ ಸೇದಿ ಶ್ವಾಸಕೋಶ ಹಾಳಗಿದ್ದರೆ ಅದನ್ನು ಸರಿ ಮಾಡಿಕೊಳ್ಳಲು ಸುಲಭ ಉಪಾಯ ಇದೆ. ಇದು ಸಂಪೂರ್ಣ ಆಗೋದಿಲ್ಲ ಎಂದರು ಒಂದಿಷ್ಟು ಪ್ರಯತ್ನ ಮಾಡಿದರೆ ಖಂಡಿತ ಸಿಗರೆಟ್ ಸೇದುವ ಜನಕ್ಕೆ ಸಹಾಯ ಆಗಲಿದೆ. ಸಿಗರೇಟ್ ಅಲ್ಲಿ ಬಳಕೆ ಮಾಡಿರುವ ತಂಬಾಕಿನಲ್ಲಿ ನಿಕೋಟಿನ್ ಅಂಶವು ಹೆಚ್ಚಾಗಿದ್ದು ದೇಹದ ವಿವಿಧ ಅಂಗಗಳನ್ನು ಇದು ಕೊಲ್ಲುತ್ತಾ ಬರುತ್ತದೆ. ಈ ಸಮಸ್ಯೆಗೆ ಮನೆಯಲ್ಲಿಯೇ ಸಿಗುವಂತಹ ಕೆಲವು ವಸ್ತುಗಳನ್ನು ಬಳಕೆ ಮಾಡಿಕೊಂಡು ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಹಾಗಾದರೆ ಅದು ಏನು ಎಂದು ತಿಳಿಯೋಣ. ಇದಕ್ಕೆ ಬೇಕಾಗಿರುವ ಸಾಮಗ್ರಿಗಳು ಈರುಳ್ಳಿ ಅರಿಶಿನ ನೀರು ಬ್ರೌನ್ ಸಕ್ಕರೆ ಮತ್ತು ಒಂದಿಷ್ಟು ಶುಂಟಿ ಈ ಮದ್ದನ್ನು ತಯಾರಿಸುವ ವಿಧಾನ ಹೇಗೆ ಎಂದು ನೋಡೋಣ ಬನ್ನಿ.

ಮೊದಲು ಒಂದು ಪಾತ್ರೆಗೆ ನೀರನ್ನು ಹಾಕಿ ಅದನ್ನು ಕುದಿಯಲು ಬಿಡಬೇಕು ನಂತರ ಸಣ್ಣದಾಗಿ ಹಚ್ಚಿಕೊಂಡಿರುವ ಈರುಳ್ಳಿಯನ್ನು ಹಾಕಿ ಬೇಯಲು ಬಿಡಬೇಕು ನಂತರ ಇದಕ್ಕೆ ಶುಂಠಿ ಮತ್ತು ಅರಿಶಿನ ಪುಡಿಯನ್ನು ಮಿಶ್ರಣ ಮಾಡಿ ಕುದಿಸಬೇಕು ಇದನ್ನು ಅರ್ಧ ಗ್ಲಾಸ್ ಅಷ್ಟು ದಿನ ನಿತ್ಯ ಬೆಳಗ್ಗೆ ತಿಂಡಿಗು ಮುಂಚೆ ಮತ್ತು ರಾತ್ರಿ ಮಲಗುವ ಮುಂಚೆ ಸೇವನೆ ಮಾಡಬೇಕು ಹೀಗೆ ತಪ್ಪದೆ ಸರಿಯಾಗಿ ತೆಗೆದುಕೊಂಡರೆ ಶ್ವಾಸಕೋಶದ ಸಮಸ್ಯೆ ಸ್ವಲ್ಪ ಮಟ್ಟಿಗೆ ದೂರ ಆಗುತ್ತದೆ. ಸಮಸ್ಯೆಗೆ ಪರಿಹಾರ ಇದೆ ಎಂದು ಸಿಗರೇಟ್ ಸೇದುವುದಲ್ಲ ಸಿಗರೇಟ್ ಸೇದಿದರೆ ಸಮಸ್ಯೆ ಎಂಬುದು ಹೇಗೆ ಯಾವಾಗ ಬರುತ್ತದೆ ಎಂದು ತಿಳಿದುಕೊಳ್ಳಲು ತುಂಬಾ ಕಷ್ಟ ಹಾಗಾಗಿ ಆದಷ್ಟು ಈ ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಬಿಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ. ಈ ಲೇಖನ ತಪ್ಪದೇ ಶೇರ್ ಮಾಡಿರಿ ನಿಮ್ಮ ಸ್ನೇಹಿತರಿಗೆ ಕಾಮೆಂಟ್ ಬಾಕ್ಸ್ ನಲ್ಲಿ ಟ್ಯಾಗ್ ಮಾಡಿ ಏಕೆಂದರೆ ಈ ಒಂದು ಮನೆ ಮದ್ದು ಅವರ ಬಾಳಲ್ಲಿ ಅವರಿಗೆ ಸಹಾಯ ಮಾಡಬಹುದು.

LEAVE A REPLY

Please enter your comment!
Please enter your name here