ಸಾಕ್ಷಾತ್ ಗಣಪತಿಯೇ ನೆಲೆಸಿರುವ ಪುಣ್ಯ ಕ್ಷೇತ್ರ ಇದು

0
5404

ಇಡಗುಂಜಿಯ ಮಹಾಗಣಪತಿಯ ಪವಾಡವನ್ನು ಹಾಗೂ ಅದರ ಹಿನ್ನಲೆಯನ್ನು ತಿಳಿದರೆ ಖಂಡಿತಾ ನೀವು ನಿಬ್ಬೆರಗಾಗುತ್ತೀರಿ. ಎಕೆಂದರೆ ಇಡಗುಂಜಿಯ ಕ್ಷೇತ್ರ ಇಂದು ಪ್ರವಾಸಿ ತಾಣವಾಗಿರಬಹುದು. ಆದರೆ ಹಾಗೆ ನೀವು ಆ ದೇಗುಲಕ್ಕೆ ಈಗಾಗಲೇ ಭೇಟಿ ನೀಡಿರಬಹುದು. ಆದರೆ ಅಲ್ಲಿ ನೆಲೆಸಿರುವ ಗಣಪತಿಯ ಮಹಿಮೆ ಹಾಗು ವಿಶೇಷವಾದ ಶಕ್ತಿಯ ಬಗ್ಗೆ ನಾವು ನಿಮಗೆ ಇಂದು ಹೇಳುತ್ತಿದ್ದೇವೆ. ಇಡಗುಂಜಿ ಉತ್ತರ ಕರ್ನಾಟಕದ ಅತ್ಯಂತ ಪವಿತ್ರ ಕ್ಷೇತ್ರ. ಈ ಕ್ಷೇತ್ರವು ಹೊನ್ನಾವರದಿಂದ ಕೇವಲ ಹದಿನೈದು ಕಿ.ಮೀ. ದೂರದಲ್ಲಿದೆ ಮತ್ತು ಮುರುಡೇಶ್ವರದ ಸಮೀಪದಲ್ಲೇ ಇದೆ. ಇಲ್ಲಿ ನೆಲೆಸಿರುವ ಮಹಾಗಣಪತಿಗೆ ಇಡಗುಂಜಿ ಗಣಪತಿ ಎಂಬ ಹೆಸರು ಏಕೆ ಬಂತು ಎಂದು ನಾವು ತಿಳಿಯ ಹೋದಾಗ ಸುಮಾರು ಸಾವಿರಾರು ವರ್ಷಗಳ ಹಿಂದೆ ಕಲಿಯುಗದ ಆರಂಭದ ಸಂದರ್ಭದಲ್ಲಿ ಬ್ರಹ್ಮತೀರ್ಥ ಮತ್ತು ಚಕ್ರತೀರ್ಥ ಎಂಬ ಎರಡು ತೀರ್ಥಗಳಿರುತ್ತದೆ. ಈ ತೀರ್ಥಗಳ ಸಮೀಪದಲ್ಲಿ ಋಷಿಗಳು ಆಶ್ರಮ ನಿರ್ಮಿಸಿಕೊಂಡು ಹೋಮ ಮತ್ತು ಯಜ್ಞಾಧಿಗಳನ್ನು ಮಾಡುತ್ತಿರುತ್ತಾರೆ. ಆ ಸಮಯದಲ್ಲಿ ಅವರು ಮಾಡುವ ಯಜ್ಞಾಧಿಗಳಿಗೆ ಪ್ರತಿನಿತ್ಯವೂ ಹಲವು ಬಗೆಯ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಅವರು ಎಷ್ಟು ಕಷ್ಟ ಪಟ್ಟರೂ ಕೂಡ ಅವರು ಮಾಡುವ ಯಜ್ಞಾಧಿಗಳಿಗೆ

ಪ್ರತಿನಿತ್ಯವೂ ತೊಂದರೆಗಳು ಇದ್ದೇ ಇರುತ್ತವೆ. ಅದೇ ಸಮಯದಲ್ಲಿ ಮುನಿಗಳಿಗೆ ದಿಕ್ಕು ತೋಚದಂತಾಗಿ ಕುಳಿತಿದ್ದಾಗ ಅದೇ ದಾರಿಯಲ್ಲಿ ತ್ರಿಲೋಕ ಸಂಚರಿಯಾದ ನಾರದ ಮುನಿಗಳು ದರ್ಶನವನ್ನು ನೀಡಿ ವಿಘ್ನ ವಿನಾಯಕ ಶ್ರೀ ಗಣಪತಿಯ ಬಗ್ಗೆ ಮುನಿಗಳಿಗೆ ತಿಳಿಸುತ್ತಾರೆ. ನಂತರ ನಾರದ ಮುನಿಗಳು ತಾನು ಕೈಲಾಸದಲ್ಲಿರುವ ಗಣಪನನ್ನು ಭೂಲೋಕಕ್ಕೆ ತಂದು ಆತನನ್ನು ಸಂತೃಪ್ತಿಗೊಳಿಸಿ ವಿಘ್ನ ನಿವಾರಣೆ ಮಾಡುತ್ತೇನೆಂದು ಮುನಿಗಳಿಗೆ ಮಾತು ನೀಡುತ್ತಾರೆ. ನಾರದರು ಹೇಳಿದಂತೆ ಕೈಲಾಸಕ್ಕೆ ತೆರಳಿ ಪಾರ್ವತಿ ದೇವಿಯ ಒಪ್ಪಿಗೆಯನ್ನು ಪಡೆದು ಗಣಪನನ್ನು ಭೂಲೋಕಕ್ಕೆ ಕರೆಸುತ್ತಾರೆ. ಮುನಿಗಳು ತಾವು ಮಾಡಿದ ನಾನಾ ಬಗೆಯ ಖಾದ್ಯಗಳನ್ನು ಗಣಪತಿಗೆ ನೀಡಿ ಸಂತೃಪ್ತಿಗೊಳಿಸುತ್ತಾರೆ. ಸಂತೃಪ್ತಿ ಹೊಂದಿದ ಗಣೇಶನು ತನ್ನ ಸ್ಥಳವನ್ನು ಬಿಡಲು ನಿರ್ಧರಿಸಿ ಕೈಲಾಸಕ್ಕೆ ಹೊರಡಲು ತಯಾರಾಗುತ್ತಾರೆ.

ಆಗ ಅಲ್ಲಿರುವ ಮುನಿಗಳು ಗಣಪನಲ್ಲಿ ಎಲ್ಲಿಯೂ ಹೋಗಬಾರದು ಇಲ್ಲೆಯೇ ನೆಲೆಯಾಗಬೇಕೆಂದು ಕೋರುತ್ತಾರೆ. ಹೀಗೆ ಮುನಿಗಳ ಕೋರಿಕೆಯಂತೆ ಗಣಪನು ಇಲ್ಲಿಯೇ ನೆಲೆಸುತ್ತೇನೆಂದೂ ಹಾಗೂ ತಾನು ಇಲ್ಲಿ ಶಿಲ್ಪಿಯ ರೂಪದಲ್ಲಿ ನೆಲೆಸುತ್ತೇನೆಂದು ಮುನಿಗಳಿಗೆ ಮಾತನ್ನು ನೀಡುತ್ತಾನೆ. ಆ ಸಮಯದಲ್ಲಿ ನಾರದರು ದೇವಶಿಲ್ಪಿ ಎಂದೇ ಕರೆಯುವ ವಿಶ್ವಕರ್ಮರನ್ನು ಕರೆಸಿ ದ್ವಿಭುಜ ಅಂದರೆ ಎರಡು ಕೈಗಳ ಸುಂದರ ಗಣವನ್ನು ನಿರ್ಮಿಸುವಂತೆ ತಿಳಿಸುತ್ತಾರೆ. ಆಗ ತಯಾರಾದ ಅತ್ಯಂತ ಸುಂದರವಾದ ಮೂರ್ತಿಯನ್ನು ನಾರದರೇ ಮಾಘ ಮಾಸದ ಶುಕ್ಲಪಕ್ಷದಲ್ಲಿ ಪ್ರತಿಷ್ಠಾಪಿಸಿದ್ದಾರೆ ಎಂಬ ಪ್ರತೀತಿಯಿದೆ. ಇದನ್ನು ನಾವು ಪುರಾಣಗಳಲ್ಲೂ ಕೂಡ ತಿಳಿಯಬಹುದು. ಇಲ್ಲಿ ಪ್ರತಿವರ್ಷ ಮಾಘ ಮಾಸದಲ್ಲಿ ವಾರ್ಷಿಕೋತ್ಸವ ಹಬ್ಬ ನಡೆಯುತ್ತದೆ. ಹೀಗೆ ನಾರದರಿಂದಲೇ ಸೃಷ್ಟಿ ಪಟ್ಟ ಮತ್ತು ಸಾಕ್ಷಾತ್ ಗಣಪತಿಯೇ ಈ ದೇಗುಲಕ್ಕೆ ಬಂದಿರುವುದರಿಂದ ತುಂಬಾ ಶಕ್ತಿಶಾಲಿಯಾಗಿದ್ದಾನೆ.

ಈ ರೀತಿಯ ವಿಶೇಷವಾದ ಗಣಪತಿಯನ್ನು ನಾವು ಯಾವ ದೇಗುಲಗಳಲ್ಲೂ ಕೂಡ ಕಾಣಲು ಸಾಧ್ಯವಿಲ್ಲ. ಪ್ರಸ್ತುತ ಈ ಇಡಗುಂಜಿ ಕ್ಷೇತ್ರವನ್ನು ಸರಿಸುಮಾರು ಎರಡರಿಂದ ಮೂರನೇ ಶತಮಾನದ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಆದರೂ ಸಹ ಈ ದೇವಾಲಯದ ಬಗ್ಗೆ ಯಾವುದೇ ರೀತಿಯ ಕುರುಹುಗಳಿಲ್ಲ. ಇದು ಕಲಿಯುಗದ ಆರಂಭದ ಕಾಲ ಅಂದರೆ ಸುಮಾರು ನಾಲ್ಕೈದು ಸಾವಿರ ವರ್ಷಗಳ ಹಿಂದೆಯೇ ನೆಲೆಯಾಗಿದೆ ಎಂದು ಕೆಲವರು ವಾದಿಸಿದರೆ ಇನ್ನು ನಮ್ಮ ಇತಿಹಾಸಕಾರರು ಮೂರರಿಂದ ನಾಲ್ಕನೇ ಶತಮಾನದ ಕಾಲದಲ್ಲಿ ನಿರ್ಮಾಣವಾಗಿರಬಹುದು ಎಂಬುದಾಗಿ ಹೇಳುತ್ತಾರೆ.

ಇಲ್ಲಿರುವ ಮಹಾಗಣಪತಿಯು ತನ್ನ ಬಲಗೈಯಲ್ಲಿ ಕಮಲವನ್ನು ಹಿಡಿದರೆ ತನ್ನ ಎಡಗೈಯಲ್ಲಿ ಕಡುಬಿನ ಪಾತ್ರೆ ಹಿಡಿದು ಸೊಂಡಿಲಿನಿಂದ ಕಡುಬು ತಿನ್ನುತ್ತಿರುವ ರೀತಿಯಲ್ಲಿ ಈ ವಿಗ್ರಹ ಇದೆ. ಇಲ್ಲಿನ ಗಣಪತಿಗೆ ನೀವು ಹರಕೆ ಹೊತ್ತು ಬೇಡಿದರೆ ಖಂಡಿತಾ ನಿಮ್ಮ ಕೋರಿಕೆಗಳು ಈಡೇರುತ್ತವೆ. ಏಕೆಂದರೆ ಸಾಕ್ಷಾತ್ ಗಣಪತಿಯೇ ಅಂದು ಭೂಲೋಕಕ್ಕೆ ಬಂದು ಮುನಿಗಳ ಇಚ್ಛೆಯಂತೆ ಇಲ್ಲಿ ನೆಲೆಸಿದ್ದಾನೆ. ಈ ಕ್ಷೇತ್ರವು ಸಾಕಷ್ಟು ಶಕ್ತಿಶಾಲಿಯನ್ನು ಹೊಂದಿದ್ದು ನಿಮ್ಮ ಕೋರಿಕೆಗಳು ಏನೇ ಇರಲಿ ಖಂಡಿತಾ ನಿಮಗೆ ಲಭಿಸುತ್ತದೆ. ಒಮ್ಮೆಯಾದರೂ ಈ ಕ್ಷೇತ್ರಕ್ಕೆ ಭೇಟಿ ನೀಡಿ ಗಣಪತಿಯ ದರ್ಶನವನ್ನು ಪಡೆದು ಆತನ ಕೃಪೆಗೆ ಪಾತ್ರರಾಗಿರಿ.

ಇವರು ಪ್ರಖ್ಯಾತ ಜ್ಯೋತಿಷ್ಯರು ದುರ್ಗಾ ಪರಮೇಶ್ವರಿ ಆರಾಧಕರು ನಿಮ್ಮ ಸಮಸ್ಯೆಗಳು ಏನೇ ಆದ ಕೌಟುಂಬಿಕ ಹಣಕಾಸಿನ ಅಭಿವೃದ್ದಿ ಆಗಲು ಮಾನಸಿಕ ಮತ್ತು ದೈಹಿಕ ಸಮಸ್ಯೆ. ಕೋರ್ಟು ಕಛೇರಿ ಸಮಸ್ಯೆಗಳು ಏನೇ ಇದ್ದರು ಮೋಡಿ ಮಾಂತ್ರಿಕರು ಶಾಶ್ವತವಾಗಿ ನಿಮಗೆ ಪರಿಹಾರ ಮಾಡಿಕೊಡುತ್ತಾರೆ. 99453 39940 ಒಮ್ಮೆ ಮಾತನಾಡಿ ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿರಿ. ಈ ಲೇಖನ ಶೇರ್ ಮಾಡಿರಿ ಮಹಾ ಗಣಪನ ಕೃಪೆಗೆ ಪಾತ್ರರಾಗಿರಿ.

LEAVE A REPLY

Please enter your comment!
Please enter your name here