ಹೆಣ್ಣು ಮಕ್ಕಳು ಹೆಚ್ಚಾಗಿ ತಂದೆಯನ್ನು ಇಷ್ಟಪಡುತ್ತಾರೆ ಯಾಕೆ ಗೊತ್ತಾ?

1
693

ಹೆಣ್ಣು ಅಥವಾ ಗಂಡು ಯವುದೇ ಮಕ್ಕಳಾದರು ಕೂಡ ಅವರ ಆರೈಕೆ ಪ್ರೀತಿ ಅವಶ್ಯಕತೆಯನ್ನು ತಂದೆ ತಾಯಿ ಇಬ್ಬರು ಕೂಡ ಪೂರೈಸುತ್ತಾರೆ ಆದರೆ ಯಾವ ಕಾರಣಕ್ಕೆ ಹೇಗೆ ಎಂದು ಗೊತ್ತಿಲ್ಲ ನೀವು ಕೂಡ ಗಮನಿಸಿರಬಹುದು ಗಂಡು ಮಕ್ಕಳು ಹೆಚ್ಚಾಗಿ ತಾಯಿಯನ್ನು ಇಷ್ಟ ಪಡುತ್ತಾರೆ ಹೆಣ್ಣು ಮಕ್ಕಳು ತಂದೆಯನ್ನು ಹೆಚ್ಚು ಇಷ್ಟ ಪಡುತ್ತಾರೆ ಅಲ್ಲವೇ ಆದರೆ ಯಾಕೆ ಎಂದು ಗೊತ್ತೇ ಬನ್ನಿ ತಿಳಿದುಕೊಳ್ಳೋಣ. ಪ್ರತಿಯೊಂದು ಮನೆಗಳಲ್ಲೂ ಗಂಡು ಮತ್ತು ಹೆಣ್ಣು ಇಬ್ಬರನ್ನು ಒಂದೇ ಬಗೆಯಲ್ಲಿ ಬೆಳೆಸುವುದಿಲ್ಲ ಗಂಡು ಮಕ್ಕಳಿಗೆ ಸ್ವಲ್ಪ ಹೆಚ್ಚಿನ ಸ್ವಾತಂತ್ರ್ಯ ನೀಡುತ್ತಾರೆ ಆದರೆ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಎಂಬುದು ಹೆಚ್ಚು ಸಿಗುವುದಿಲ್ಲ ಹೊರಗಡೆ ಹೋಗಬೇಕು ಎಂದರು ತಾಯಿಯನ್ನು ಕೇಳಿ ಹೋಗಬೇಕು ಆದರೆ ಗಂಡು ಮಕ್ಕಳು ಆಗಲ್ಲ ಯಾರನ್ನು ಕೇಳದೆ ಹೊರಗಡೆ ಸುತ್ತಿಕೊಂಡು ಬರುತ್ತಾರೆ ತಾಯಿಯ ಅನಿಸಿಕೆ ಏನೆಂದರೆ ಹೆಣ್ಣು ಮಕ್ಕಳು ಇದ್ದರೆ ಜವಾಬ್ದಾರಿ ಎಂಬುದು ತುಂಬಾ ಹೆಚ್ಚುತ್ತದೆ ಜೊತೆಗೆ ಹೆಣ್ಣು ಮಕ್ಕಳ ಪ್ರತಿ ಹೆಜ್ಜೆಯನ್ನು ಗಮನಿಸಿ ಅವಳನ್ನು ತಿದ್ದುತ್ತ ಹೋಗುತ್ತಾಳೆ ಆದರೆ ತಂದೆಯರಿಗೆ ಇದು ಯಾವುದೇ ಅರಿವು ಇಲ್ಲದೆ ಅವಳ ಸುಖ ಸಂತೋಷ ನಗುವನ್ನು ನೋಡಲು ಇಷ್ಟ ಪಡುತ್ತಾರೆ.

ಒಬ್ಬ ಪುರುಷನಿಗೆ ಮೂವರು ತಾಯಿಯರು ಇರುತ್ತಾರೆ ಅವರ ಹುಟ್ಟಿಸಿದ ತಾಯಿ ನಂತರ ಅವರ ಹೆಂಡತಿ ನಂತರ ಅವರ ಮಗಳು ಈ ಮೂರು ತಾಯಿಯರ ಪ್ರೀತಿ ಗಂಡಸರ ಜೀವನವನ್ನು ಬದಲಾಯಿಸುತ್ತದೆ. ತಂದೆಯರು ಹೆಣ್ಣು ಮಕ್ಕಳನ್ನು ಇಷ್ಟ ಪಡಲು ಕಾರಣ ಏನೆಂದರೆ ಮನೆಯ ಎಲ್ಲ ರೀತಿಯ ಜವಾಬ್ದಾರಿಗಳನ್ನು ಅವಳು ನಿಭಾಯಿಸುತ್ತಾಳೆ ಮನೆಯ ಪ್ರತಿಯೊಬ್ಬರ ನೋವು ನಲಿವು ಎಲ್ಲವು ಕೂಡ ಅವಳು ಬೇಗ ಅರ್ಥ ಮಾಡಿಕೊಳ್ಳುತ್ತಾಳೆ ಮನೆಗೆ ಬೆಳಕಾಗಿ ಬೆಳಗುತ್ತಳೆ ಹಾಗಾಗಿ ತಂದೆಗೆ ಹೆಣ್ಣು ಮಕ್ಕಳು ಅಂದರೆ ತುಂಬಾ ಇಷ್ಟ. ತಂದೆ ಹೊರಗಡೆ ಇಂದ ದಣಿದು ಬಂದಾಗ ಅವರ ಕ್ಷೇಮವನ್ನು ವಿಚಾರಿಸುತ್ತಾಳೆ ಅವರ ಬೇಕು ಬೇಡವನ್ನು ಈಡೇರಿಸುತ್ತಾಳೆ ತಂದೆಗೆ ಸ್ವಲ್ಪ ನೋವು ಆದರೂ ತನಗೆ ನೋವು ಆಗಿದೆ ಎಂಬಂತೆ ನೋವು ಅನುಭವಿಸುತ್ತಳೆ ಇದೆಲ್ಲದರ ಜೊತೆಗೆ ತಮ್ಮ ತಂದೆ ತಾಯಿಯ ಆಸೆಗಳನ್ನು ಈಡೇರಿಸಿ ಅವರಿಗೆ ಸಂತೋಷ ತರುವುದಕ್ಕೆ ಇಷ್ಟ ಪಡುತ್ತಾಳೆ.

ನಿಮಗೆ ಒಂದು ವಿಷ್ಯ ತಿಳಿದಿರಬಹುದು ಈಗಂತೂ ಆಸ್ತಿ ವಿಷ್ಯ ಬಂತು ಅಂದ್ರೆ ಸಾಕು ಸ್ವಂತ ತಂದೆ ತಾಯಿಯನ್ನೇ ಮಕ್ಕಳು ಹೊರಗೆ ಹಾಕುತ್ತಾರೆ ಜಗಳ ತಗಾದೆ ತೆಗೆಯುತ್ತಾರೆ. ಆದರೆ ಹೆಣ್ಣು ಮಕ್ಕಳು ಹೀಗಲ್ಲ ತಂದೆ ತಾಯಿ ಆಸ್ತಿ ಸಿಕಲ್ಲ ಅಂದ್ರು ಪರವಾಗಿಲ್ಲ ಅವರನ್ನು ಹೆಚ್ಚಿನ ಪ್ರೀತಿಯಿಂದ ನೋಡಿಕೊಳ್ಳಬೇಕು ಎಂಬುದು ಅವರ ಆಲೋಚನೆ ಆಗಿರುತ್ತದೆ. ಹಾಗಾಗಿ ಎಲ್ಲ ತಂದೆಯರು ಕೂಡ ತಮ್ಮ ಹೆಣ್ಣು ಮಕ್ಕಳನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ ಪ್ರೀತಿಸುತ್ತಾರೆ ತಮಗೆ ತಮ್ಮ ಹೆಂಡತಿ ತಾಯಿಯಿಂದ ಪ್ರೀತಿ ಸಿಗದಿದ್ದರು ಕೂಡ ತನ್ನ ಮಗಳಿಗೆ ಕೊಡುವ ಪ್ರೀತಿಯನ್ನು ಮಾತ್ರ ಕಡಿಮೆ ಮಾಡುವುದಿಲ್ಲ. ತಂದೆಯನ್ನು ಗೌರವಿಸುವ ಪ್ರತಿ ಒಬ್ಬರು ಈ ಲೇಖನ ಮರೆಯದೇ ಶೇರ್ ಮಾಡಿ ಒಂದು ಹೆಣ್ಣಿಗೆ ತನ್ನ ತಂದೆ ಮೇಲಿನ ಪ್ರೀತಿ ಎಷ್ಟಿದೆ ಎಂಬುದು ಈ ಲೇಖನದ ಸಾರಾಂಶ ಆಗಿದೆ.

1 COMMENT

  1. Ee visayadalli kelavu thappu abiprauagalive,makkalu gandagali hennagali thande thayi vayasada nantara preethiyinda nodikollabekaste neevu helidanthe kelavu gandu makkalu vayassada thande thayiyannu maneyinda horage hakabahudu aadare ellaru agalla ,kelavu hennu makkalu kooda thamma thande thayiyannu kadeganisidannu naavu nodiddeve!

LEAVE A REPLY

Please enter your comment!
Please enter your name here