ನಿಮಗೆ ಈ ಸಮಸ್ಯೆ ಇದ್ದರೆ ಪರಂಗಿ ಹಣ್ಣು ತಿನ್ನಬೇಡಿ

0
491

ಯಾವುದೇ ಆರೈಕೆ ಇಲ್ಲದೆ ತುಂಬಾ ಸುಲಭವಾಗಿ ಬೆಳೆಯುವ ಗಿಡ ಎಂದರೆ ಅದು ಪರಂಗಿ ಗಿಡ ಇದು ಸಾಮಾನ್ಯವಾಗಿ ಎಲ್ಲರ ಹಿತ್ತಲಲ್ಲೂ ಕಂಡು ಬರುತ್ತದೆ ನಾವು ಬೀಜ ಹಾಕದೆಯೇ ಈ ಗಿಡ ಕೆಲವೊಮ್ಮೆ ಬೆಳೆಯುತ್ತದೆ ಪರಂಗಿ ಹಣ್ಣಿನಲ್ಲಿ ನಾರಿನಂಶ ಹೇರಳವಾಗಿದೆ ಜೊತೆಗೆ ಕೆರೋಟಿನ್ ವಿಟಮಿನ್ ಸಿ ಖನಿಜ ಲವಣಗಳು. ವಿಟಮಿನ್ ಎ ಪೊಟಾಷಿಯಂ ಅಂಶವು ಹೇರಳವಾಗಿದೆ. ಪರಂಗಿ ಹಣ್ಣನ್ನು ಸೇವಿಸುವುದರಿಂದ ಎಷ್ಟೆಲ್ಲ ರೀತಿಯ ಆರೋಗ್ಯದ ಸಮಸ್ಯೆಗಳು ದೂರ ಆಗುತ್ತದೆ ಎಂದು ಗೊತ್ತು ಹಾಗಾಗಿ ಎಲ್ಲರೂ ಕೂಡ ಈ ಹಣ್ಣನ್ನು ತುಂಬಾ ಇಷ್ಟ ಪಟ್ಟು ಸೇವಿಸುತ್ತಾರೆ. ಹಾಗಾದ್ರೆ ಯಾರೆಲ್ಲ ಈ ಹಣ್ಣು ಸೇವನೆ ಮಾಡಬಾರದು ತಿಳಿಯಲು ಸಂಪೂರ್ಣ ಮಾಹಿತಿ ಓದಿ.

ಪರಂಗಿ ಹಣ್ಣಿನಲ್ಲಿ ಯಥೇಚ್ಛವಾಗಿ ಉತ್ಕರ್ಷಣ ನಿರೋಧಕಗಳು ಇದ್ದು ಇವು ಉರಿಯೂತವನ್ನು ತಡೆಯುತ್ತವೆ. ಪರಂಗಿ ಹಣ್ಣಿನಲ್ಲಿ ಆಂಟಿ ಅಗ್ನಿನ್ಗ್ ಜೀವಾಂಶಗಳಿದ್ದು ಇದನ್ನು ತಿನ್ನುವುದರಿಂದ ನಾವು ಹೆಚ್ಚು ತಾರುಣ್ಯಭರಿತರಾಗಿ ಕಾಣುತ್ತೇವೆ. ಪರಂಗಿ ಹಣ್ಣನ್ನು ಸೇವಿಸುವುದರಿಂದ ಒತ್ತಡ ನಿವಾರಣೆ ಹಾಗೂ ಹೃದಯದ ತೊಂದರೆಗಳನ್ನು ದೂರವಾಗುತ್ತವೆ. ಪರಂಗಿ ಹಣ್ಣಿನಲ್ಲಿ ವಿಟಮಿನ್ ಸಿ ಹಾಗೂ ವಿಟಮಿನ್ ಎ ಅಂಶ ಇರುವುದರಿಂದ ಚರ್ಮದ ಕಾಂತಿ ಹಾಗೂ ಕಣ್ಣಿನ ದೃಷ್ಟಿ ಹೆಚ್ಚುತ್ತದೆ. ಪರಂಗಿ ಹಣ್ಣಿನಲ್ಲಿ ಪಪ್ಪಾಯಿನ್ ಎಂಬ ಕಿಣ್ವವಿದ್ದು ಇದು ಅಜೀರ್ಣತೆಯ ತೊಂದರೆಯನ್ನು ನಿವಾರಿಸುತ್ತದೆ. ಪರಂಗಿ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಿ ಅಂಶ ಫೈಟೋನ್ಯೂಟ್ರಿಯೆಂಟ್ಸ್ ಮತ್ತು ಫ್ಲೇವಿನೋಯಿಡ್ಸ್ ಕರುಳಿನ ಕೋಶಗಳನ್ನು ಮುಕ್ತ ರೇಡಿಕಲ್ ಹಾನಿಯಿಂದ ತಪ್ಪಿಸುತ್ತವೆ.

ಮೂಲವ್ಯಾಧಿಯಿಂದ ಬಳಲುವವರಿಗೆ ಪರಂಗಿ ಹಣ್ಣು ತುಂಬಾ ಒಳ್ಳೆಯದು.ಜೊತೆಗೆ ನರದ ದೌರ್ಬಲ್ಯ ಇರುವವರಿಗೆ ಹೃದ್ರೋಗದಿಂದ ಬಳಲುವವರಿಗೆ ಇದು ಉತ್ತಮ ಹಣ್ಣು. ಪರಂಗಿ ಹಣ್ಣಿನ ಸೇವನೆಯಿಂದ ಮಲಬದ್ಧತೆ ಹಾಗೂ ಉರಿಮೂತ್ರ ಸಮಸ್ಯೆ ಗುಣವಾಗುತ್ತದೆ. ಇಷ್ಟೆಲ್ಲ ಆರೋಗ್ಯದ ಗುಣಗಳನ್ನು ಹೊಂದಿರುವ ಪರಂಗಿ ಹಣ್ಣನ್ನು ಸೇವಿಸುವುದು ತುಂಬಾ ಒಳ್ಳೆಯದು ಆದರೆ ಕೆಲವರು ಮಾತ್ರ ಯಾವುದೇ ಕಾರಣಕ್ಕೂ ಪರಂಗಿ ಹಣ್ಣನ್ನು ಸೇವಿಸಬಾರದು. ಯಾರು ಯಾರು ಸೇವಿಸಬಾರದು ಎಂದರೆ

ಗರ್ಭಿಣಿ ಮಹಿಳೆಯರು ತಿನ್ನಬಾರದು ಏಕೆಂದರೆ ಪರಂಗಿ ಹಣ್ಣಿನಲ್ಲಿರುವ ಲ್ಯಾಟೆಕ್ಸ್ ಅಂಶವು ಗರ್ಭಪಾತವಾಗುವ ಸಂಭವ ಇರುತ್ತದೆ ಆದ್ದರಿಂದ ಗರ್ಭಿಣಿ ಮಹಿಳೆಯರು ಪರಂಗಿ ಹಣ್ಣು ತಿನ್ನಬಾರದು. ಮಗುವನ್ನು ಹೊಂದಬೇಕೆಂಬ ಆಸೆ ಇರುವವರು ಸೇವಿಸಬಾರದು ಏಕೆಂದರೆ ಪುರುಷರಲ್ಲಿ ವೀರ್ಯಾಣುಗಳನ್ನು ಪರಂಗಿ ಹಣ್ಣು ಕಡಿಮೆ ಮಾಡುತ್ತದೆ ಆದ್ದರಿಂದ ಪರಂಗಿ ಹಣ್ಣು ಸೇವಿಸಬಾರದು. ಜಠರ ಹಾಗೂ ಕರುಳಿನ ಸಮಸ್ಯೆ ಇರುವವರು ಸೇವಿಸಬಾರದು ಏಕೆಂದರೆ ಅತಿಯಾದ ದೇಹದ ಉಷ್ಣದಿಂದ ಬಳಲುತ್ತಿರುವವರು ಪರಂಗಿ ಹಣ್ಣು ಸೇವನೆ ಮಾಡಬಾರದು. ಕ್ಯಾರೊಟೆನಿಮಾ ಎಂಬ ಚರ್ಮದ ಸಮಸ್ಯೆಯಿಂದ ಬಳಲುತ್ತಿರುವವರು ಪರಂಗಿ ಹಣ್ಣನ್ನು ಸೇವಿಸಬಾರದು. ಹೈಪೋ ಗ್ಲುಕೋಮೀಯ ಅಂದರೆ ಕಡಿಮೆ ಸಕ್ಕರೆ ಅಂಶವನ್ನು ದೇಹದಲ್ಲಿ ಹೊಂದಿರುವವರು ಪರಂಗಿ ಹಣ್ಣು ಸೇವನೆ ಮಾಡಬಾರದು. ದೇಹದ ಉಷ್ಣತೆ ಹೆಚ್ಚಿರುವವರು ಕೂಡ ಪರಂಗಿ ಹಣ್ಣು ಸೇವನೆ ಮಾಡಬಾರದು. ಇವರೆಲ್ಲ ಕೂಡ ಪರಂಗಿ ಹಣ್ಣನ್ನು ಸೇವಿಸಬಾರದು ಸೇವಿಸಿದರೆ ಮತ್ತಷ್ಟು ಆರೋಗ್ಯದ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

LEAVE A REPLY

Please enter your comment!
Please enter your name here