ಎಲ್ಲರೂ ಕೂಡ ತಮ್ಮ ಬಳಿ ಪರ್ಸ್ ಅನ್ನು ಇಟ್ಟುಕೊಂಡಿರುತ್ತೇವೆ ಆ ಪರ್ಸಿನಲ್ಲಿ ಸಾಮಾನ್ಯವಾಗಿ ದುಡ್ಡು ಕಾರ್ಡ್ಸ್ ಇನ್ನಿತರ ಮುಖ್ಯವಾದ ಚೀಟಿಗಳನ್ನು ಇಟ್ಟುಕೊಂಡಿರುತ್ತೇವೆ. ಆದರೆ ಕೆಲವರ ಪರ್ಸಿನಲ್ಲಿ ಎಷ್ಟೇ ಹಣವನ್ನು ಇಟ್ಟರು ಮರುದಿನಕ್ಕೆ ಆ ಹಣವೆಲ್ಲ ಖರ್ಚಾಗುತ್ತದೆ ಎಷ್ಟೇ ದುಡಿದರು ಉಳಿಸಿಕೊಳ್ಳಲು ಆಗುವುದಿಲ್ಲ ಆದರೆ ಇನ್ನೂ ಕೆಲವರಿಗೆ ಆರ್ಥಿಕ ಸ್ಥಿತಿ ಎಂಬುದು ಇರುತ್ತದೆ ಏನೇ ಮಾಡಿದರೂ ಕೂಡ ಕೆಲವರಿಗೆ ಅದೃಷ್ಟ ಎಂಬುದೇ ಇರುವುದಿಲ್ಲ ಹಾಗಾಗಿ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆ ದೂರವಾಗಬೇಕು ಎಂದರೆ ಸುಲಭ ಉಪಾಯ ಇದೆ ಅದನ್ನು ಪಾಲಿಸಿದರೆ ಸಾಕು ಆರ್ಥಿಕ ಸಮಸ್ಯೆ ದೂರ ಆಗುತ್ತದೆ. ಅದು ಏನೆಂದರೆ ನಿಮ್ಮ ಪಾರ್ಸಿನಲ್ಲಿ ಕೆಲವು ವಸ್ತುಗಳನ್ನು ಇಟ್ಟುಕೊಳ್ಳಬೇಕು ಇವುಗಳನ್ನು ಇಟ್ಟುಕೊಂಡು ನೋಡಿ ನಿಮ್ಮ ಅದೃಷ್ಟ ಎಂಬುದು ಹೇಗೆ ಬದಲಾವಣೆ ಆಗುತ್ತದೆ.

ಹಾಗಾದರೆ ಆ ವಸ್ತುಗಳು ಯಾವುವು ಎಂದು ತಿಳಿದುಕೊಳ್ಳೋಣ. ಕೆಟ್ಟ ಕಣ್ಣು ನಮ್ಮ ಎಲ್ಲಾ ದೌರ್ಭಗ್ಯವನ್ನು ನಿವಾರಿಸಿ ಋಣಾತ್ಮಕ ಕಂಪನಗಳನ್ನು ನಮ್ಮ ಸುತ್ತಮುತ್ತಲಿನ ವ್ಯಕ್ತಿಗಳಿಂದ ದೂರಗೊಳಿಸುತ್ತವೆ ಇದು ಒಂದು ಅದ್ಭುತವಾದ ಶಕ್ತಿಯ ಚಿಕ್ಕ ಯಂತ್ರವಾಗಿದ್ದು ಯಾರಾದರೂ ಕೂಡ ತುಂಬಾ ಸುಲಭವಾಗಿ ಜೇಬಿನಲ್ಲಿ ಅಥವಾ ಪರ್ಸ್ ನಲ್ಲಿ ಇಟ್ಟು ಕೊಳ್ಳಬಹುದು. ಒಂದು ಶುಭ್ರವಾದ ಹಳದಿ ಅಥವಾ ಕೆಂಪು ರೇಷ್ಮೆ ಬಟ್ಟೆಯನ್ನು ತೆಗೆದುಕೊಂಡು ಅದಕ್ಕೆ ನವಿಲಿನ ರೆಕ್ಕೆಯನ್ನು ಸುತ್ತಿ ಪರ್ಸಿನಲ್ಲಿ ಇಟ್ಟುಕೊಳ್ಳಬೇಕು. ಸ್ವಲ್ಪ ಅಕ್ಕಿಯ ಕಾಳನ್ನು ತೆಗೆದುಕೊಂಡು ನಾವು ಎಲ್ಲಿ ದುಡ್ಡು ಇಡುತ್ತೇವೋ ಆ ಜಾಗಕ್ಕೆ ಅಕ್ಕಿ ಕಾಳನ್ನು ಇಡಬೇಕು ಇದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ರುದ್ರಾಕ್ಷಿಯ ಒಂದು ಬೀಜವನ್ನು ತೆಗೆದುಕೊಂಡು ಅದಕ್ಕೆ ಕುಂಕುಮ ಹಚ್ಚಿ ಪ್ರಾರ್ಥನೆ ಮಾಡಿಕೊಂಡು ಪರ್ಸಿನಲ್ಲಿ ಇಟ್ಟುಕೊಳ್ಳಬೇಕು. ಅರಳಿ ಮರದ ಎಲೆಯನ್ನು ತೆಗೆದುಕೊಂಡು ಅದಕ್ಕೆ ಪೂಜೆ ಮಾಡಿ ಅದನ್ನು ಪರ್ಸಿನಲ್ಲಿ ಇಟ್ಟುಕೊಳ್ಳಬೇಕು.ಆದರೆ ಯಾವುದೇ ಕಾರಣಕ್ಕೂ ಆ ಎಲೆ ಮಡಚಿ ಹೋಗಬಾರದು ಮುರಿದು ಹೋಗಬಾರದು. ಹಾಗೆ ನೋಡಿಕೊಂಡು ಇಟ್ಟುಕೊಳ್ಳಿ.
ಚಿಕ್ಕದಾಗಿರುವ ಒಂದು ಲಕ್ಷ್ಮಿ ಚಿತ್ರದ ಫೋಟೋವನ್ನು ಅಥವ ಲಕ್ಷ್ಮಿ ನಾಣ್ಯ ಪಾರ್ಸ್ ನಲ್ಲಿ ಹಣ ಇಡುವ ಜಾಗದಲ್ಲಿ ಇಟ್ಟುಕೊಳ್ಳಬೇಕು. ಕೆಲವೊಂದು ನಾಣ್ಯದಲ್ಲಿ ಚಾಮುಂಡೇಶ್ವರಿ ಫೋಟೋ ಇದೆ ಆ ರೀತಿಯ ನಾಣ್ಯವನ್ನು ಪರ್ಸಿನಲ್ಲಿ ಇಟ್ಟುಕೊಳ್ಳಬೇಕು. ಶ್ರೀ ಯಂತ್ರ ವನ್ನು ಇಟ್ಟುಕೊಳ್ಳುವುದರಿಂದ ಕೂಡ ಧನಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆ ದೂರವಾಗುತ್ತದೆ. ಪರ್ಸ್ ನಲ್ಲಿ ಒಂದು ಚಿಕ್ಕ ಕನ್ನಡಿಯನ್ನು ಇಟ್ಟುಕೊಂಡರೆ ಹಣ ವ್ಯಯವಾಗುವುದಿಲ್ಲ. ಹಾಗೂ ಕೆಲಸದಲ್ಲೂ ಶ್ರೇಯಸ್ಸು ಸಿಗುತ್ತದೆ. ಪರ್ಸನ್ನು ಸದಾ ಸ್ವಚ್ಛವಾಗಿ ಇಟ್ಟುಕೊಳ್ಳಬೇಕ್ ಅದರಲ್ಲಿ ಅರಿದಿರುವ ದುಡ್ಡು. ಕಾಗದದ ಪ್ರತಿಗಳನ್ನು ಇಟ್ಟುಕೊಳ್ಳಬಾರದು.
ನಾವು ನಿಮಗೆ ಹೇಳಿರುವ ಈ ವಸ್ತುಗಳು ಎಲ್ಲವು ಇಟ್ಟುಕೊಳ್ಳಬೇಕು ಎಂದು ಏನಿಲ್ಲ ನಿಮಗೆ ಯಾವುದು ಸುಲಭ ಅದನ್ನ ತಪ್ಪದೆ ಇಟ್ಟುಕೊಂಡರೆ ಸಾಕು ನಿಮ್ಮ ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳು ದೂರ ಅಗುತ್ತವೆ ಎನ್ನುವ ನಂಬಿಕೆ ನಮ್ಮ ಹಿಂದಿನ ಕಾಲದಿಂದ ಬಂದಿದೆ ಜೊತೆಗೆ ಹಣದ ಸಮಸ್ಯೆ ಬರುವುದಿಲ್ಲ ಎಂಬ ಹಲವರ ನಂಬಿಕೆ ಇದೆ ಒಮ್ಮೆ ಪ್ರಯತ್ನ ಮಾಡಿ ನೋಡುವುದರಲ್ಲಿ ತಪ್ಪಿಲ್ಲ ಅಲ್ಲವೇ. ಈ ಲೇಖನ ಮರೆಯದೇ ಶೇರ್ ಮಾಡಿರಿ ನಿಮ್ಮ ಎಲ್ಲ ಸ್ನೇಹಿತರಿಗೂ ಈ ಮಾಹಿತಿ ಸಹಾಯ ಆಗಲಿ.