ಪುರುಷರಲ್ಲಿ ವೀರ್ಯಾಣು ಹೆಚ್ಚಿಸಲು ಇಲ್ಲಿದೆ ಮನೆ ಮದ್ದು

0
754

ಈಗಿನ ಪುರುಷರಲ್ಲಿ ವೀರ್ಯಾಣು ಕಣಗಳು ಅತ್ಯಂತ ಕಡಿಮೆ ಆಗುತ್ತಾ ಹೋಗಿದೆ ಇಂದಿನ ಯುವಕರಿಗೆ ಇದು ದೊಡ್ಡ ಸಮಸ್ಯೆ ಆಗಿ ಕಾಡುತ್ತಾ ಇದೆ ಎಂದರೆ ತಪ್ಪಾಗುವುದಿಲ್ಲ ಏಕೆಂದರೆ ವೀರ್ಯಾಣು ಕಡಿಮೆ ಆದರೆ ಸಾಕಷ್ಟು ಸಮಸ್ಯೆಗಳು ಬರುತ್ತದೆ. ಮಕ್ಕಳು ಆಗುವ ಸಂಭವ ಸಹ ಕಡಿಮೆ ಇರುತ್ತದೆ. ಇದಕ್ಕೆ ಕಾರಣ ಇವೆ ಅವರ ಒತ್ತಡ ಆಧುನಿಕ ಜೀವನ ಶೈಲಿ ಮಾನಸಿಕ ತೊಂದರೆಗಳು ಆಹಾರ ಪದ್ದತಿ. ಧೂಮಪಾನ ಮದ್ಯಪಾನ ಇತ್ಯಾದಿ. ಒಂದು ಮಿಲಿ ವಿರ್ಯದಲ್ಲಿ 15 ದಶಲಕ್ಷ ವೀರ್ಯಾಣುಗಳಿಗಿಂತಲೂ ಕಡಿಮೆ ಇದ್ದರೆ ಒಲಿಗೊಝೋಸ್ಪೆರ್ಮಿಯಾ ಎಂದು ಕರೆಯುತ್ತಾರೆ. ಈ ವೀರ್ಯಾಣುವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಎಷ್ಟೋ ಹಣವನೆಲ್ಲ ಖರ್ಚು ಮಾಡಿ ಪ್ರಯತ್ನ ಮಾಡುತ್ತಾರೆ ಆದರೆ ವೀರ್ಯಾಣುಗಳನ್ನು ವೃದ್ಧಿಸಿಕೊಳ್ಳಲು ಸುಲಭ ಮನೆ ಮದ್ದುಗಳನ್ನು ತಿಳಿಯೋಣ ಬನ್ನಿ. ಹೋಚು ಎಕ್ಕಿ ಇದನ್ನು ಮೊದಲ ಬಾರಿಗೆ ಜಪಾನ್ನಲ್ಲಿ ಪರಿಚಯಿಸಲಾಯಿತು ಶುಚಿಯಾದ ಗಿನ್ಸೆಂಗ್ ಆಸ್ಪ್ಯಾರಗಸ್ ಏಂಜೆಲಿಕಾ ರೂಟ್ ಮತ್ತು ಇತರ ಹಲವು ಅಗತ್ಯ ಗಿಡಮೂಲಿಕೆಗಳಿಂದ ಮಾಡುವ ಪದಾರ್ಥವಿದು ಪ್ರತಿದಿನ ಮೂಲಿಕೆಗಳನ್ನು ಸೇವಿಸಿದರೆ ವೀರ್ಯ ಚಲನಶೀಲತೆ ವೀರ್ಯಾಣು ಸಾಂದ್ರತೆ ಹೆಚ್ಚುತ್ತದೆ.

ಒಮೆಗಾ 6 ಒಮೆಗಾ 9 ವಿಟಮಿನ್ ಬಿ ಪ್ರೋಟೀನ್ ಪೊಟ್ಯಾಸಿಯಮ್ ಫೈಬರ್ ಸತು ಲೆಸಿಥಿನ್ ಮತ್ತು ಮೆಗ್ನೀಸಿಯಮ್ನಂತಹ ಅನೇಕ ಪ್ರಯೋಜನಕಾರಿ ಸಕ್ರಿಯ ಸಂಯುಕ್ತಗಳನ್ನು ಒಳಗೊಂಡಿರುವ ಅಗಸೆಬೀಜದ ಎಣ್ಣೆಯನ್ನು ಬಳಸುವುದರಿಂದ ವೀರ್ಯಾಣು ವೃದ್ಧಿಸುತ್ತದೆ. ಸ್ವಲ್ಪ ಮಕಾ ಬೇರುಗಳನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಬೇರೆಸಿ ಶೇಖರಿಸಿ ಇಟ್ಟುಕೊಳ್ಳಬೇಕು ನಂತರ ನಿತ್ಯ ಅದನ್ನು ಅರ್ಧ ಚಮಚದಷ್ಟು 2 ರಿಂದ 3 ತಿಂಗಳು ಕುಡಿಯಬೇಕು ಹೀಗೆ ಮಾಡಿದರೆ ವೀರ್ಯಾಣು ವೃದ್ಧಿಸುತ್ತದೆ. ಅಶ್ವಗಂಧದ ಪುಡಿಯನ್ನು ಸ್ವಲ್ಪ ಬೆಚ್ಚಗಿನ ಹಾಲಿನಲ್ಲಿ ಬೇರೆಸಿಕೊಂಡು ದಿನಕ್ಕೆ ಎರಡು ಬಾರಿ ಕುಡಿದರೆ ವೀರ್ಯಾಣು ವೃದ್ಧಿಸುತ್ತದೆ. ಟೆಸ್ಟೋಸ್ಟೆರಾನ್ ಹೆಚ್ಚಿಸಲು ಮತ್ತು ವೀರ್ಯಾಣು ಸಂಖ್ಯೆಯನ್ನು ವೃದ್ಧಿಸಲು ಪಾನಸ್ ಗಿನ್ಸೆಂಗ್ ತುಂಬಾ ಸಹಾಯಕ ಇದು ಪುರುಷರ ಫಲವತ್ತತೆ ಹೆಚ್ಚಿಸಲು ಸಹಾಯ ಮಾಡುತ್ತದೆ.

ಬೆಳ್ಳುಳ್ಳಿಯು ನೈಸರ್ಗಿಕ ಅಪ್ರೊಡಿಸಿಯಾಕ್ ಅಂಶವನ್ನು ಹೊಂದಿದ್ದು ಇದು ವೀರ್ಯ ಉತ್ಪಾದನೆ ಹೆಚ್ಚಿಸುತ್ತದೆ , ಜೊತೆಗೆ ದಿನನಿತ್ಯದ ಆಹಾರದಲ್ಲಿ 1 ಅಥವಾ 2 ಜಜ್ಜಿದ ಬೆಳ್ಳುಳ್ಳಿ ಲವಂಗ ಸೇರಿಸಿ ತಿಂದರು ಕೂಡ ವೀರ್ಯಾಣು ವೃದ್ಧಿಸುತ್ತದೆ. ವೀರ್ಯಾಣು ಹೆಚ್ಚಿಸಲು ಮತ್ತು ಹಾರ್ಮೋನ್ ಮಟ್ಟವನ್ನು ವರ್ಧಿಸಲು ಗೋಕ್ಷುರ ಉತ್ತಮ ಮದ್ದು.ಇವೆಲ್ಲದರ ಜೊತೆಗೆ ನಿತ್ಯ ಒಂದು ಅರ್ಧ ಗಂಟೆ ಆದರೂ ವ್ಯಾಯಾಮ ಮಾಡಬೇಕು. ಹೀಗೆ ಮಾಡಿದರೆ ಪುರುಷರಲ್ಲಿನ ವೀರ್ಯಾಣು ಹೆಚ್ಚುತ್ತದೆ. ಈ ಆರೋಗ್ಯ ಮಾಹಿತಿ ಎಲ್ಲರು ಮರೆಯದೇ ಶೇರ್ ಮಾಡಿರಿ ಎಲ್ಲ ಯುವಕರಿಗೂ ಸಹಾಯ ಆಗುತ್ತದೆ. ನಮ್ಮ ವೆಬ್ಸೈಟ್ ಬರಹಗಳಿಗೆ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡುವ ಪ್ರಯತ್ನ ಮಾಡಿದ್ರೆ ಅಥವ ಚಿತ್ರಗಳು ನಕಲು ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ. ಮರೆಯದೇ ನಮ್ಮ ಪೇಜ್ ಕೂಡ ಲೈಕ್ ಮಾಡಿ ಶೇರ್ ಮಾಡಿರಿ.

LEAVE A REPLY

Please enter your comment!
Please enter your name here