ಬೆಂಗಳೂರಿನಲ್ಲಿ ನೆಲೆಸಿರುವ ವೇಣುಗೋಪಾಲ ಸ್ವಾಮಿ ಪವಾಡಗಳನ್ನು ಮಾಡುತಿದ್ದಾರೆ

0
695

ಬೆಂಗಳೂರಿನ ಸಮೀಪದಲ್ಲಿರುವ ಈ ದೇವಾಲಯ ನಿಜಕ್ಕೂ ಅಚ್ಚರಿಗಳನ್ನು ಮೂಡಿಸುತ್ತಿದೆ. ಇಲ್ಲಿರುವ ವೇಣುಗೋಪಾಲ ಸ್ವಾಮಿಯು ಜನರ ಕಷ್ಟಗಳನ್ನು ಈಡೇರಿಸುತ್ತಾ ದಿನದಿನಕ್ಕೂ ಪ್ರಸಿದ್ಧಿಯನ್ನು ಹೊಂದುತ್ತಿದ್ದಾರೆ. ಈ ದೇಗುಲ ಇರುವುದು ಬೆಂಗಳೂರಿನಲ್ಲಿ ಆದರೂ ಅಷ್ಟಾಗಿ ಜನರಿಗೆ ಮಾಹಿತಿ ಇಲ್ಲ. ನಮ್ಮ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಅವರ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿಗಳನ್ನು ಮಾಡಿದ್ದರು. ಅವರು ಸಾಕಷ್ಟು ದೇವಸ್ಥಾನಗಳನ್ನು ಕೂಡ ಕಟ್ಟಿಸಿದ್ದರು. ಅವರು ಹೀಗೆ ನೂರಾರು ವರ್ಷಗಳ ಹಿಂದೆ ಕಟ್ಟಿಸಿದ ಹಾಗೂ ಸಾವಿರಾರು ವರ್ಷಗಳ ಹಿಂದಿನ ದೇವಾಲಯಗಳು ನಮ್ಮ ಬೆಂಗಳೂರಿನಲ್ಲಿದೆ. ನಾವು ನಿಮಗೆ ಹೇಳಲು ಹೊರಟಿರುವುದು ವೇಣುಗೋಪಾಲ ಸ್ವಾಮಿಯ ಮಹಿಮೆಯ ಬಗ್ಗೆ.

ಇಲ್ಲಿರುವ ವೇಣುಗೋಪಾಲ ಸ್ವಾಮಿಯ ದೇಗುಲವು ಸುಮಾರು ಎಂಟು ನೂರು ವರ್ಷಗಳಷ್ಟು ಹಳೆಯದಾಗಿದೆ. ಈ ದೇವಾಲಯದ ಬಗ್ಗೆ ಮಹಾಭಾರತದಲ್ಲಿಯೂ ಸಹ ಉಲ್ಲೇಖವಾಗಿದೆ. ಹಾಗೆ ಉಲ್ಲೇಖಗೊಂಡಿರುವ ವಿಷಯವೆಂದರೆ ಜನಮೇಜಯನಿಗೆ ಒಮ್ಮೆ ಸ್ವಪ್ನದಲ್ಲಿ ಕಾಣಿಸಿಕೊಂಡ ಶ್ರೀ ಕೃಷ್ಣ ಪರಮಾತ್ಮ ತನ್ನ ಪ್ರತಿಮೆಯನ್ನು ಇಲ್ಲಿ ಪ್ರತಿಷ್ಠಾಪಿಸುವಂತೆ ಸೂಚಿಸಿದನಂತೆ. ಆ ಒಂದು ಸೂಚನೆಯಂತೆ ಜನಮೇಜಯನು ವೇಣುಗೋಪಾಲ ಸ್ವಾಮಿಯ ಪ್ರತಿಮೆಯನ್ನು ಇಲ್ಲಿ ಪ್ರತಿಷ್ಠಾಪಿಸಿದನು ಎಂದು ಹೇಳಲಾಗಿದೆ. ಹಾಗೆ ಈ ಪ್ರತಿಷ್ಠಾಪನ ಸಮಯದಲ್ಲಿ ಸಾಕ್ಷಾತ್ ಸಪ್ತಋಷಿಗಳೇ ಬಂದು ಪ್ರತಿಷ್ಠಾಪನಾ ಕಾರ್ಯವನ್ನು ಕೈಗೊಂಡರು ಎಂದು ಇತಿಹಾಸ ಹೇಳುತ್ತದೆ. ನಮ್ಮ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಈ ಪ್ರಾಂತ್ಯವನ್ನು ಚೋಳರು ಆಳುತ್ತಿದ್ದರು. ಆಗ ಆ ದೇವಸ್ಥಾನ ಅಷ್ಟಾಗಿ ಅಭಿವೃದ್ಧಿ ಹೊಂದದಿದ್ದರೂ ಕೂಡ ಯಲಹಂಕ ನಾಡಪ್ರಭುಗಳು ಜೀರ್ಣೋದ್ಧಾರ ಮಾಡಿದರು ಎಂದು ಇತಿಹಾಸದಲ್ಲಿದೆ.

ಈ ದೇವಾಲಯದ ರಸ್ತೆ ಅಂಚಿನಲ್ಲಿ ಎರಡು ಗರುಡ ಗಂಭಗಳಿದ್ದು ಇವುಗಳಲ್ಲಿ ಶಾಸನಗಳು ಇದೆ. ಈ ಶಾಸನದ ಪ್ರಕಾರ ಈ ದೇಗುಲದ ನಿರ್ಮಾಣ ಹೇಗಾಯಿತು ಎಂಬ ಸಂಪೂರ್ಣ ವಿಷಯ ನಾವು ತಿಳಿಯಬಹುದು. ಈ ದೇವಸ್ಥಾನದಲ್ಲಿರುವ ಶಿಲ್ಪಕಲೆಗಳು ಸಹ ನಮಗೆ ಸಾಕಷ್ಟು ಕಣ್ಮನ ಸೆಳೆಯುತ್ತದೆ. ಹಾಗೆ ಮುಖ್ಯ ಮಂಟಪ ದಾಟಿದರೆ ಭುವನೇಶ್ವರಿ ತಾಯಿಯು ಹಾಗು ಆರಾಧಕರಾಗಿರುವ ಕಂಬಗಳಲ್ಲಿ ಹನುಮಂತ, ವಿಘ್ನೇಶ್ವರ ಹಾಗೂ ಶ್ರೀ ರಾಮ, ವಾಲಿ ಸುಗ್ರೀವರ ಮೊದಲಾದ ಹಲವು ಶಿಲ್ಪಗಳಿವೆ. ಹಾಗೇ ಇಲ್ಲಿರುವ ಕಂಬದಲ್ಲಿ ಶ್ರೀ ಉಗ್ರನರಸಿಂಹ ಸ್ವಾಮಿಯ ಶಿಲ್ಪವಿದ್ದು ಅದಿಕ್ಕೆ ಪ್ರತಿನಿತ್ಯ ಪೂಜೆ ಮಾಡುತ್ತಾರೆ. ಹಾಗೆ ದೇಗುಲದ ಒಳಗೆ ರಾಮಾನುಜಾಚಾರ್ಯರ ಗುಡಿಯೂ ಸಹ ಇದೆ.

ಪ್ರತಿನಿತ್ಯ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ ಮತ್ತು ಹಲವು ರೀತಿಯ ವಿಶೇಷ ಪೂಜೆಗಳು ನಡೆಯುತ್ತವೆ. ಈ ದೇಗುಲದಲ್ಲಿ ಪ್ರತೀ ಮಂಗಳವಾರ ವಿಶೇಷ ಪೂಜೆ ನಡೆಯುತ್ತದೆ. ಹಾಗೇ ಇಲ್ಲಿ ಕೃಷ್ಣ ಜನ್ಮಾಷ್ಟಮಿ ಹಾಗೂ ನರಸಿಂಹ ಜಯಂತಿಯಂದು ವಿಶೇಷ ಪೂಜೆಗಳ ಕಾರ್ಯಗಳು ಮತ್ತು ರಥೋತ್ಸವ ಹಾಗು ಹುಣ್ಣಿಮೆಯ ದಿನ ರಥೋತ್ಸವಗಳು ಕೂಡ ನಡೆಯುತ್ತದೆ. ಚೈತ್ರ ಶುದ್ದ ಪೌರ್ಣಿಮೆಯಂದು ರಥೋತ್ಸವ ನಡೆದರೆ ರಥೋತ್ಸವಂಗವಾಗಿ ಒಂದು ತಿಂಗಳ ಕಾಲ ವೈಕುಂಠ ಏಕಾದಶಿ ಹಾಗು ದ್ವಾದಶಿಯಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತದೆ. ಇಲ್ಲಿನ ದೇವರುಗಳಿಗೆ ಗರುಡವಾಹನ ಗಜವಾಹನ ಅಶ್ವವಾಹನ ಮಯೂರವಾಹನ ವೈರಮುಡಿ ಕಲ್ಪವೃಕ್ಷ ಬೃಂದಾವನ ಅನೇಕ ರೀತಿಯ ಉತ್ಸವಗಳು ಸಹ ಅದ್ದೂರಿಯಾಗಿ ನಡೆಯುತ್ತದೆ.

ಇಲ್ಲಿನ ವೇಣುಗೋಪಾಲ ಸ್ವಾಮಿಗೆ ಭಕ್ತಿಯಿಂದ ನಡೆದರೆ ಸಂತಾನ ಇಲ್ಲದಿರುವವರಿಗೆ ಸಂತಾನ ಕರುಣಿಸುತ್ತಾನೆ ಎಂಬ ನಂಬಿಕೆಯಿದೆ. ಇಲ್ಲಿ ಈಗಾಗಲೇ ಸಾಕಷ್ಟು ಜನರು ಬಂದು ಹರಿಕೆಯನ್ನು ತೀರಿಸಿ ಸಂತಾನೋತ್ಪತ್ತಿಯನ್ನು ಪಡೆದುಕೊಂಡಿದ್ದಾರೆ. ವೈದ್ಯಲೋಕದಲ್ಲಿ ಆಗದಂತಹ ಸಾಕಷ್ಟು ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಸಿಕ್ಕಿದೆ. ಈ ದೇವಸ್ಥಾನಕ್ಕೆ ಯಾವುದೇ ರೀತಿಯ ಆಡಳಿತ ಸಂಸ್ಥೆ ಹೊಂದಿಲ್ಲ. ಈ ದೇವಸ್ಥಾನವನ್ನು ನಡೆಸುತ್ತಿರುವುದು ಕರ್ನಾಟಕ ಸರಕಾರ ಧಾರ್ಮಿಕ ದತ್ತಿ ಇಲಾಖೆ. ನೀವು ಕೂಡ ಒಮ್ಮೆ ಈ ವಿಶೇಷವಾದ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಈ ದೇವಸ್ಥಾನ ಇರುವುದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಸಿಗುವ ಹಳೆಯ ನಗರ ಯಲಹಂಕ. ಇಲ್ಲೇ ಸಮೀಪವಿರುವ ಈ ದೇಗುಲಕ್ಕೆ ಭೇಟಿ ನೀಡಿರಿ ಹಾಗು ವೇಣುಗೋಪಾಲ ಸ್ವಾಮಿಯ ದರ್ಶನ ಮಾಡಿ ದೇವರ ಆಶೀರ್ವಾದವನ್ನು ಪಡೆಯಿರಿ. ಸಮಸ್ಯೆಗಳಿಗೆ ಪರಿಹಾರ ಮಾಡಿ ಕೊಡುವ ಪ್ರಖ್ಯಾತ ಜ್ಯೋತಿಷ್ಯರು ದುರ್ಗಾ ಪರಮೇಶ್ವರಿ ಆರಾಧಕರು ನಿಮ್ಮ ಸಮಸ್ಯೆಗಳು ಏನೇ ಆದ ಕೌಟುಂಬಿಕ ಹಣಕಾಸಿನ ಅಭಿವೃದ್ದಿ ಆಗಲು ಮಾನಸಿಕ ಮತ್ತು ದೈಹಿಕ ಸಮಸ್ಯೆ. ಕೋರ್ಟು ಕಛೇರಿ ಸಮಸ್ಯೆಗಳು ಏನೇ ಇದ್ದರು ಮೋಡಿ ಮಾಂತ್ರಿಕರು ಶಾಶ್ವತವಾಗಿ ನಿಮಗೆ ಪರಿಹಾರ ಮಾಡಿಕೊಡುತ್ತಾರೆ. 9611190444 ಒಮ್ಮೆ ಮಾತನಾಡಿ ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿರಿ.

LEAVE A REPLY

Please enter your comment!
Please enter your name here