ಒಂದು ರೂಪಾಯಿಗೆ ಊಟ ಕೊಡುತ್ತಾರೆ ಈ ಪುಣ್ಯಾತ್ಮರು

0
691

ಯೋಜನೆಗಳ ಹೆಸರಲ್ಲಿ ಕೋಟಿ ಕೋಟಿ ರೂಪಾಯಿಗಳನ್ನು ಲೂಟಿ ಮಾಡುತ್ತಾರೆ ದೇಶವನ್ನು ಬಡತನದಲ್ಲಿಯೇ ಉಳಿಸಿ ತಾವು ಶ್ರೀಮಂತರಾಗುತ್ತಾರೆ ಎಲ್ಲಿ ಸಿಕ್ಕರು ಅದನ್ನೆಲ್ಲ ತಮ್ಮದಾಗಿಸಿ ಕೊಳ್ಳುತ್ತಾರೆ ಆದರೆ ಇಂತಹ ದುಷ್ಟರ ನಡುವೆಯೂ ಕೂಡ ಬಡವರಿಗೆ ಸೇವೆ ಮಾಡಬೇಕು ಅನ್ನೋ ಮನಸ್ಸಿನಲ್ಲಿ ಕೆಲವು ಪುಣ್ಯಾತ್ಮರು ಈ ಬಡವರ ಸೇವೆಯಲ್ಲಿಯೇ ದೇವರನ್ನ ಕಾಣೋರು ಕೂಡ ಇದ್ದರೆ. ಇಂತಹ ಪುಣ್ಯಾತ್ಮರ ಬಗ್ಗೆ ತಿಳಿಯೋಣ ಬನ್ನಿ. ಹುಬ್ಬಳ್ಳಿಯ ಅಕ್ಕಿಹೊಂಡದ ಮಹಾವೀರ ಗಲ್ಲಿಯ ರೋಟಿಘರ್ ನಲ್ಲಿ ಇಲ್ಲೊಬ್ಬರು ಬಡವರಿಗೆ ಕೇವಲ ಒಂದು ರೂಪಾಯಿಗೆ ಹೊಟ್ಟೆ ತುಂಬ ಊಟ ಕೊಡುತ್ತಾರೆ ಒಂದು ರೂಪಾಯಿಗೆ ಬಿಸಿ ಬಿಸಿ ಚಪಾತಿ ಪಲ್ಯ ಅನ್ನ ಸಾಂಬಾರ್. ಸಿಹಿ ತಿನಿಸು ಕೊಡುತ್ತಾರೆ ಇಲ್ಲಿ ಊಟ ಬಡಿಸುವರು ಮಹಿಳೆಯರು.

ರೋಟಿ ಘರ್‌ನಲ್ಲಿ ಒಂದು ಡಬ್ಬಿ ಇದೆ ಅಲ್ಲಿಗೆ ಹೋಗಿ ಅದರಲ್ಲಿ ಒಂದು ರೂಪಾಯಿಯನ್ನು ಹಾಕಿ ಸಾಲಿನಲ್ಲಿ ನಿಂತು ಊಟವನ್ನು ಹಾಕಿಸಿಕೊಳ್ಳುತ್ತಾರೆ. ಇಲ್ಲಿ ಸಾಮಾನ್ಯವಾಗಿ ಸಂಶಿ ಶಿಗ್ಗಾಂವ ಗುಡಗೇರಿ ಹುಬ್ಬಳ್ಳಿ ಧಾರವಾಡ ಶಿರಗುಪ್ಪಿ ಕುಂದಗೋಳ ಬಳಗಲಿ ಗಂಗಿವಾಳ ಚಡಚಾಳ ರಾಮನಕೊಪ್ಪ ಛಬ್ಬಿ ಸೇರಿದಂತೆ ಇನ್ನಿತರ ಕಡೆಗಳಿಂದ ಮಾರುಕಟ್ಟೆಗೆ ವ್ಯಾಪಾರ ಮಾಡಲು ಬರುವವರು ತಮ್ಮ ವ್ಯಾಪಾರ ಮುಗಿಸಿ ಇಲ್ಲಿ ಬಂದು ಊಟ ಮಾಡಿಕೊಂಡು ಹೋಗುತ್ತಾರೆ. ಹುಬ್ಬಳ್ಳಿಯ ಸುತ್ತಮುತ್ತಲಿನ ಹಳ್ಳಿಯಿಂದ ಮಾರುಕಟ್ಟೆಗೆ ಬರುವ ನೂರಾರು ಬಡ ಕೂಲಿ ಕಾರ್ಮಿಕರಿಗೆ ಕೇವಲ ಒಂದು ರೂಪಾಯಿ ಬಿಡಿಗಾಸಿನಲ್ಲಿ ಈ ರೋಟಿ ಘರ್ ಇವರ ಹಸಿವನ್ನು ನೀಗಿಸುತ್ತದೆ. ರೋಟಿಘರ್‌ನ ಸೇವೆಯು ಸುಮಾರು ಏಳು ಎಂಟು ವರ್ಷಗಳಿಂದ ನಿತ್ಯ ಮಧ್ಯಾಹ್ನ ಊಟ ನೀಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.

ತಮಿಳುನಾಡಿನಲ್ಲಿ ಅಮ್ಮ ಕ್ಯಾಂಟಿನ್‌ ಕರ್ನಾಟಕದಲ್ಲಿ ಇಂದಿರಾ ಕ್ಯಾಂಟಿನ್ ಆರಂಭವಾಗುವ ಮುನ್ನವೇ ಈ ಘರ್ ಆರಂಭವಾಗಿದೆ ಎನ್ನುವುದು ಇನ್ನೊಂದು ವಿಶೇಷ. ರೋಟಿಘರ್‌ನಲ್ಲಿ ಮಧ್ಯಾಹ್ನ 12.15 ರಿಂದ 2.15 ರವರೆಗೆ ಊಟ ಪೂರೈಸುತ್ತಾರೆ. ದಿನವೊಂದಕ್ಕೆ 500 ಮಂದಿ ಊಟ ಮಾಡುತ್ತಾರೆ ವಾರದಲ್ಲಿ ಎರಡು ದಿನ ಚಪಾತಿ ಉಳಿದ ದಿನಗಳಲ್ಲಿ ಚಿತ್ರಾನ್ನ ಅನ್ನ ಮತ್ತು ಸಾರು ಪಲಾವ್‌ ಇರುತ್ತದೆ ಭಾನುವಾರ ಊಟದ ಜತೆಗೆ ಸಿಹಿ ತಿಂಡಿಯೂ ಇರುತ್ತದೆ ಬುಧವಾರ ವಾರದ ರಜೆ ಈ ರೋಟಿಘರ್ ಎಲ್ಲರಿಗೂ ಒಳ್ಳೆಯ ಊಟ ನೀಡುವುದಲ್ಲದೆ ಮತ್ತೆ ಕೇಳಿದರೂ ಊಟ ವಿತರಿಸುತ್ತಾರೆ ಸ್ವಲ್ಪ ತಡವಾಗಿ ಬಂದರೂ ಊಟ ಖಾಲಿಯಾಗಿದೆ ಎಂದು ಹೇಳದೇ ಸ್ವಲ್ಪ ಇದ್ದರೂ ಅವರಿಗೆ ಊಟ ಕೊಡುತ್ತಾರೆ ಯಾರಿಗೂ ಭೇದಭಾವ ಮಾಡುವುದಿಲ್ಲ. ಅಲ್ಲಿ ನೀಡುವ ಆಹಾರ ಕೂಡ ಅಷ್ಟೇ ರುಚಿಯಾಗಿ ಜೊತೆಗೆ ಸ್ವಚ್ಛವಾಗಿ ಇರುತ್ತದೆ. ಇಂತಹ ದಾನಿಗಳು ನಮ್ಮ ದೇಶದಲ್ಲಿ ಇರುವುದರಿಂದಲೇ ಎಷ್ಟೋ ಬಡವರು ನೆಮ್ಮದಿಯಿಂದ ಜೀವನ ನೆಡೆಸುತ್ತಿದ್ದರೆ. ಈಗಿನ ಕಾಲದಲ್ಲಿ ಒಂದು ಹೊತ್ತು ಉಟ ಹಾಕೋದೆ ಹೆಚ್ಚು ಆದರೆ ಇಲ್ಲಿ ಈ ರೀತಿ ಜನಕ್ಕೆ ಸೇವೆ ಮಾಡ್ತಾ ಇದ್ದಾರೆ ಅಂದ್ರೆ ಮೆಚ್ಚಲೇ ಬೇಕು ಅಲ್ಲವೇ. ಈ ಲೇಖನ ಖಂಡಿತ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗಲಿ.

LEAVE A REPLY

Please enter your comment!
Please enter your name here