ಯಾವ ದೇವರಿಗೆ ಯಾವ ಹೂವು ಅರ್ಪಣೆ ಮಾಡಿದ್ರೆ ನಿಮಗೆ ಹೆಚ್ಚಿನ ಫಲ ಸಿಗಲಿದೆ

0
557

ಪ್ರತಿನಿತ್ಯ ನಾವು ದೇವರ ಪೂಜೆ ಮಾಡುತ್ತೇವೆ ದೇವರಿಗೆ ಪೂಜೆ ಸಲ್ಲಿಸುವಾಗ ಹಲವು ರೀತಿಯ ಹೂವುಗಳನ್ನು ದೇವರಿಗೆ ಸಮರ್ಪಣೆ ಮಾಡುತ್ತೇವೆ. ಕೆಲವರು ನಿತ್ಯ ದೇವರ ಪೂಜೆಗೆ ಎಂದು ತಮ್ಮ ಮನೆಯ ಬಳಿ ಹಲವಾರು ರೀತಿಯ ಹೂವಿನ ಗಿಡಗಳನ್ನು ಹಾಕಿಕೊಂಡಿರುತ್ತಾರೆ ಆದರೆ ಇನ್ನೂ ಕೆಲವರು ನಿತ್ಯ ಮಾರ್ಕೆಟ್ ನಿಂದ ಕೊಂಡು ದೇವರಿಗೆ ಅರ್ಪಣೆ ಮಾಡುತ್ತಾರೆ ಆದರೆ ಯಾವುದೇ ರೀತಿಯ ಹೂವುಗಳು ಸಿಕ್ಕರು ಅವು ಅಂದವಾಗಿ ಸುಗಂಧ ವಾಸನೆ ಬರುತ್ತಿದ್ದಾರೆ ಸಾಕು ಅವುಗಳನ್ನು ದೇವರಿಗೆ ಅರ್ಪಿಸುತ್ತೇವೆ ಆದರೆ ಮುಖ್ಯವಾದ ಕೆಲವು ವಿಷಯಗಳನ್ನು ಮಾತ್ರ ನಾವು ತಿಳಿದುಕೊಳ್ಳುವುದೇ ಇಲ್ಲ ಅದು ಏನೆಂದರೆ ದೇವರಿಗೆ ಕೆಲವು ಬಗೆಯ ಹೂವುಗಳನ್ನು ಅರ್ಪಣೆ ಮಾಡಲೇ ಬಾರದು ಅವುಗಳನ್ನು ಅರ್ಪಿಸಿದರೆ ನಮ್ಮ ಪೂಜೆ ದೇವರಿಗೆ ಸಮರ್ಪಿಸುವುದಿಲ್ಲ ಹಾಗಾದರೆ ಯಾವ ರೀತಿಯ ಹೂವುಗಳನ್ನು ಹೂವುಗಳನ್ನು ಅರ್ಪಣೆ ಮಾಡಬಾರದು ಎಂದು ತಿಳಿಯೋಣ ಬನ್ನಿ.

ನಾವು ಪೂಜೆ ಮಾಡುವಾಗ ಯಾವ ದೇವರಿಗೆ ಯಾವ ರೀತಿಯ ಹೂವುಗಳನ್ನ ಅರ್ಪಣೆ ಮಾಡಿದ್ರೆ ಅಧಿಕ ಲಾಭ ಹಾಗೂ ಸಂತೃಪ್ತಿ ದೊರೆಯುತ್ತದೆ ಎನ್ನುವುದನ್ನು ತಿಳಿಯೋಣ ಬನ್ನಿ. ನಮ್ಮ ಅನಾದಿ ಕಾಲದಿಂದಲೂ ಭಗವಂತನನ್ನು ಭಕ್ತಿಯಿಂದ ಪೂಜೆ ಮಾಡಲು ಅನೇಕ ರೀತಿಯ ಹೂವುಗಳನ್ನು ಉಪಯೋಗಿಸಿಕೊಂಡು ಬಂದಿರುವಂಥದ್ದು ಸುಗಂಧ ಭರಿತವಾದಂತ ಪುಷ್ಪಗಳು. ಏಕೆಂದರೆ ಭಗವಂತನಿಗೆ ಪ್ರೀತಿಕರವಾದಂತಹ ಈ ಸುಗಂಧಭರಿತ ಪುಷ್ಪಗಳನ್ನು ಸಮರ್ಪಿಸಿ ನಾವು ನಮ್ಮ ಭಕ್ತಿ ಶ್ರದ್ಧೆಗಳನ್ನ ಆಚಾರ ವಿಚಾರಗಳ ಮೂಲಕ ಪದ್ಧತಿಗಳ ಮೂಲಕ ತೋರಿಸಿಕೊಳ್ಳುತ್ತೇವೆ. ಹೀಗೆ ಮಾಡುವುದರಿಂದ ನಾವು ನಂಬಿರುವ ಆ ಭಗವಂತನ ಸಂಪೂರ್ಣ ಅನುಗ್ರಹ ಹೊಂದಬಹುದು ಎಂದು ಹಿರಿಯರು ಹೇಳುತ್ತಾರೆ.

ಪೂಜೆಗೆ ಉಪಯೋಗಿಸುವ ಪುಷ್ಪಗಳು ಯಾವುವು ಎಂದರೆ. ಹೂವುಗಳನ್ನು ಶುಚಿಯಾಗಿ ಶುಭ್ರಗೊಳಿಸಿದ ಮೇಲೆ ಸುವಾಸನೆಯುಳ್ಳ ಹೂವುಗಳನ್ನ ಮಾತ್ರ ನಾವು ಭಗವಂತನಿಗೆ ಸಮರ್ಪಿಸಬೇಕು. ಆ ಹೂವುಗಳು ಸುಗಂಧ ಭರಿತವಾದ ಪರಿಮಳವನ್ನು ಬಿರುತ್ತಾಯಿರಬೇಕು ಅಂತಹ ಹೂವುಗಳನ್ನ ಪೂಜೆಗೆ ಉಪಯೋಗಿಸಿದರೆ ಭಗವಂತನು ಸಂತುಷ್ಟನಾಗಿ ಪೂಜೆಗೆ ಪ್ರಸನ್ನನಾಗುತ್ತಾನೆ. ಹಾಗೆಯೇ ಶ್ರೀ ವಿನಾಯಕನಿಗೆ ತುಳಸಿಯನ್ನು ಸಮರ್ಪಿಸಬಾರದು ಗಣೇಶನಿಗೆ ತುಂಬಾ ಪ್ರಿಯವಾದದ್ದು ಗರಿಕೆ ಮತ್ತು ಇತರ ಹೂವುಗಳಿಂದ ಪೂಜಿಸತಕ್ಕದ್ದು ಆದರೆ ಚತುರ್ದಶಿಯಂದು ಮಾತ್ರ ತುಳಸಿ ದಳಗಳಿಂದ ವಿಘ್ನ ವಿನಾಯಕನನ್ನ ಪೂಜಿಸಬಹುದು ಆಗ ಗಣಪತಿ ದೇವರು ನಿಮ್ಮ ಮೇಲೆ ಬೇಗ ಸಂತೃಪ್ತಿಗೊಳ್ಳುವರು. ಶ್ರೀಮನ್ನ ನಾರಾಯಣ ಅನುಗ್ರಹ ಪ್ರಾಪ್ತಿಮಾಡಲು ಯಾವ ಬಗೆಯ ಹೂವುಗಳನ್ನಾದರೂ ಮುಡಿಸಬಹುದು. ಆದರೆ ಕಣಿಗಲು ಹೂವನ್ನು ಮಾತ್ರ ಯಾವುದೇ ಕಾರಣಕ್ಕೂ ಮುಡಿಸಬಾರದು. ಇತರ ಯಾವ ಹೂವುಗಳು ಸುಗಂಧಭರಿತ ವಾಗಿರುತ್ತವೆವೋ ಅಂತಹ ಹೂವುಗಳನ್ನು ಮಾತ್ರ ಮೂಡಿಸಬಹುದು.

ಭಕ್ತರ ಪ್ರಿಯ ಶಂಕರ ಹರ ಹರ ಮಹಾದೇವ ಸರ್ವರು ಪೂಜಿತ ಶ್ರೀ ಪರಮೇಶ್ವರನ ಪೂಜೆಯಲ್ಲಿ ಬಿಲ್ವಪತ್ರೆಗೆ ಹಾಗು ತುಂಬೆ ಹೊವಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ ಆದುದರಿಂದ ಸುಗಂಧ ಭರಿತವಾದ ಕೇದಿಗೆ ದಳಗಳಿಂದ ಈಶ್ವರನನ್ನು ಪೂಜಿಸಬಾರದು ಆದರೆ ಶಿವರಾತ್ರಿಯ ದಿನ ಒಂದು ದಿನ ಮಾತ್ರ ಕೇದಿಗೆ ದಳಗಳಿಂದ ಪೂಜಿಸಬಹುದು. ಹಾಗೆ ಸಂಪಿಗೆ ಹೂವನ್ನು ಕೂಡ ಪರಮೇಶ್ವರನಿಗೆ ಮುಡಿಸಬಾರದು. ನೋಡಿದರಲ್ಲ ಯಾವ ರೀತಿಯ ಹೂವುಗಳನ್ನು ದೇವರಿಗೆ ಧರಿಸಬಾರದು ಹಾಗೂ ಯಾವ ದೇವರಿಗೆ ಯಾವ ಹೂವು ತುಂಬಾ ಒಳ್ಳೆಯದು ಎಂದು ಹಾಗಾಗಿ ಇನ್ನು ಮುಂದೆ ಎಚ್ಚರಿಕೆ ವಹಿಸಿ ದೇವರಿಗೆ ಹೂವುಗಳನ್ನು ಅರ್ಪಣೆ ಮಾಡಿರಿ ಆ ಭಗವಂತನ ಕೃಪೆಗೆ ಪಾತ್ರರಾಗಿರಿ. ಈ ಮೇಲೆ ಹೇಳಿರುವ ಎಲ್ಲ ರೀತಿಯ ಪುಷ್ಪಗಳಿಂದ ದೇವರನ್ನು ಸಂತೃಪ್ತಿಗೊಳಿಸಿ ಜೊತೆಗೆ ನೀವು ದೇವರಿಗೆ ನೀಡುವ ಭಕ್ತಿ ಅತೀ ಮುಖ್ಯವಾಗಿದೆ. ಭಕ್ತಿ ಇಲ್ಲದೆ ನೀವು ಎಷ್ಟೇ ರೀತಿಯ ಪೂಜೆ ಮತ್ತು ಪುಷ್ಪಗಳಿಂದ ಪೂಜೆ ಮಾಡಿದರು ನಿಮಗೆ ಯಾವುದೇ ಫಲ ಎಂಬುದು ಸಿಗೋದಿಲ್ಲ.

LEAVE A REPLY

Please enter your comment!
Please enter your name here