ಅರಳಿ ಮರವು ಎಂದಿಗೂ ಬಾಡುವುದಿಲ್ಲ ಅಂತ ತಿಳಿದಿದಿಯೇ? ಮತ್ತು ಸೀತೆ ಹೀಗೇಕೆ ಮಾಡಿದ್ರು

0
702

ಎಲ್ಲರೂ ಅರಳಿ ಮರವನ್ನು ನೋಡಿರುತ್ತೀರಾ. ಪ್ರತಿ ಊರಿನಲ್ಲೂ ಒಂದಾದರೂ ಅರಳಿ ಮರವಿರುತ್ತದೆ. ಈ ಮರದಲ್ಲಿ ಬೇರೆ ಮರಗಳಿಗಿಂತ ಹೆಚ್ಚು ಆಮ್ಲಜನಕ ಬಿಡುಗಡೆ ಆಗುತ್ತದೆ ಮತ್ತು ಬಿಸಿಲಿನ ಸಮಯದಲ್ಲಿ ಈ ಮರದ ಕೆಳಗಡೆ ಕುಳಿತರೆ ಒಂದು ರೀತಿಯ ನೆಮ್ಮದಿ ಮತ್ತು ತಂಪು ಸಿಗುತ್ತದೆ. ಈ ಮರದ ವಿಶೇಷತೆ ಎಂದರೆ ಈ ಮರವು ಎಂತಹದ್ದೇ ಬೇಸಿಗೆ ಕಾಲ ಬರಲಿ ಎಂದಿಗೂ ಬಾಡುವುದಿಲ್ಲ. ಇದರ ಹಿಂದೆ ಒಂದು ಕತೆಯೇ ಇದೆ. ಅದನ್ನು ನಾವು ಹೇಳುತ್ತೇವೆ ಕೇಳಿ. ರಾಮನ ವನವಾಸದ ಕತೆಯನ್ನು ನೀವು ಕೇಳೇ ಇರುತ್ತೀರಾ. ರಾಮ ಲಕ್ಷ್ಮಣ ಮತ್ತು ಸೀತೆ ವನವಾಸದಲ್ಲಿ ಇದ್ದಾಗ ಗಯಾ ಎಂಬ ಕ್ಷೇತ್ರಕ್ಕೆ ಬರುತ್ತಾರೆ. ರಾಮ ಲಕ್ಷ್ಮಣ ಸೀತೆಯನ್ನು ಪಾಲ್ಗುಣಿ ನದಿಯ ದಡದಲ್ಲಿ ಬಿಟ್ಟು ಕಾಡಿಗೆ ಹೊರಟು ಹೋಗುತ್ತಾರೆ.

ಆ ನಂತರ ನದಿಯ ಒಳಗಡೆಯಿಂದ ದಶರಥ ಮಹಾರಾಜನು ಹಸಿವಿನಿಂದ ನನಗೆ ಹಸಿವು ಆಗುತ್ತಿದೆ ಎಂದು ಕೂಗುತ್ತಿರುತ್ತಾನೆ. ಆಗ ಸೀತೆಗೆ ಏನು ಮಾಡಬೇಕೆಂದು ತಿಳಿಯುವುದಿಲ್ಲ. ಆದರೆ ರಾಜನು ಮತ್ತೆ ಮತ್ತೆ ಹಸಿವಾಗುತ್ತಿದೆ ಎಂದು ಕೂಗುತ್ತಿರುತ್ತಾನೆ. ಆಗ ಸೀತೆಯು ಮರಳಿನಲ್ಲೇ ಒಲೆಯನ್ನು ಮಾಡಿ ನಂತರ ಅದರಲ್ಲಿ ಅನ್ನವನ್ನು ಆವಾಹನೆ ಮಾಡುತ್ತಾಳೆ ನಂತರ ನದಿಯ ಒಳಗಡೆ ಇಂದ ಬಂದ ಕೈಗೆ ಕೊಡುತ್ತಾಳೆ. ಇದಕ್ಕಾಗಿ ಸಾಕ್ಷಿಗಾಗಿ ಹಸು ಬ್ರಾಹ್ಮಣ ಫಾಲ್ಗುಣಿ ನದಿ ತುಳಸಿ ಗಿಡ ಮತ್ತು ಅರಳಿ ಮರವನ್ನು ಸಾಕ್ಷಿಗೆ ಇಟ್ಟುಕೊಳ್ಳುತ್ತಾಳೆ. ನಂತರ ಸೀತೆ ನೀಡಿದ ಆಹಾರವನ್ನು ಸೇವಿಸಿದ ರಾಜನು ಸಂತೃಪ್ತ ಆಗುತ್ತಾನೆ. ಇದಾದ ಸ್ವಲ್ಪ ಸಮಯದ ನಂತರ ರಾಮ ಲಕ್ಷ್ಮಣರು ಬರುತ್ತಾರೆ. ಆಗ ನೆಡೆದ ವಿಷಯವನ್ನು ಸೀತೆ ರಾಮ ಲಕ್ಷ್ಮಣನಿಗೆ ಹೇಳುತ್ತಾಳೆ ಆದರೆ ಅವರು ಇದನ್ನು ನಂಬುವುದಿಲ್ಲ ಆಗ ಸೀತೆ ಇಟ್ಟುಕೊಂಡಿದ್ದ ಸಾಕ್ಷಿಗಳನ್ನು ನಿಜ ಹೇಳುವಂತೆ ಕೇಳಿದಾಗ ಅರಳಿ ಮರ ಮಾತ್ರ ಸೀತೆಯ ಸಹಾಯಕ್ಕೆ ಬರುತ್ತದೆ. ಆಗ ತುಳಸಿ ಗಿಡಕ್ಕೆ ನೀನು ಎಲ್ಲಂದರಲ್ಲಿ ಬೆಳಿ ಎಂದು ಶಾಪ ಕೊಡುತ್ತಾಳೆ. ಪಾಲ್ಗುಣಿ ನದಿಗೆ ಮಳೆಗಾಲದಲ್ಲೂ ನೀನು ತುಂಬಿ ಹರಿಯದಿರು ಬತ್ತಿ ಹೋಗು ಎಂದು ಶಾಪ ಕೊಡುತ್ತಾಳೆ.

ಬ್ರಾಹ್ಮಣನಿಗೆ ನೀನು ಈ ಕ್ಷೇತ್ರಕ್ಕೆ ಬರುವ ಯಾತ್ರಿಗಳನ್ನು ಪೀಡಿಸಿ ಅದರಿಂದ ಬರುವ ದುಡ್ಡಿನಲ್ಲಿ ನಿನ್ನ ಜೀವನವನ್ನು ನೆಡೆಸು ಎಂದು ಶಾಪ ಕೊಡುತ್ತಾಳೆ. ನಂತರ ಗೋಮಾತೆಗೆ ನೀನು ಜಗವನ್ನು ಬೆಳಗ ಬೇಕಾದವಳು ಆದರೆ ನನ್ನ ಬಳಿ ನೀನು ಸತ್ಯವನ್ನು ನುಡಿಯಲಿಲ್ಲ ಹಾಗಾಗಿ ನೀನು ಗಯಾ ಕ್ಷೇತ್ರದಲ್ಲಿ ಇದ್ದುಕೊಂಡು ಅವರಿವರ ಪಿಂಡವನ್ನು ತಿನ್ನುತ್ತಾ ನಿನ್ನ ಜೀವನವನ್ನು ನೆಡೆಸು ಎಂದು ಶಾಪ ಕೊಡುತ್ತಾಳೆ. ನಂತರ ಸತ್ಯ ಹೇಳಿ ಸೀತೆಗೆ ಸಹಾಯ ಮಾಡಿದ ಅರಳಿಮರಕ್ಕೆ ನೀನು ಎಂದು ಬಾಡದಿರು ಎಂದು ಆಶೀರ್ವಾದ ಮಾಡುತ್ತಾಳೆ. ಅವತ್ತಿನಿಂದ ಇಲ್ಲಿಯವರೆಗೂ ಯಾವ ಕಾಲದಲ್ಲೂ ಅರಳಿಮರ ಬಾಡುವುದಿಲ್ಲ ಎಂಬ ನಂಬಿಕೆ ನಮ್ಮ ಜನರಲ್ಲಿದೆ. ಈ ಲೇಖನ ಮರೆಯದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗಲಿ.

LEAVE A REPLY

Please enter your comment!
Please enter your name here