ನಾವು ನಿಮಗೆ ಇಂದು ಹೇಳಲು ಹೊರಟಿರುವುದು ಪುರಾಣ ಪ್ರಸಿದ್ಧ ದೇವತೆ ಸವದತ್ತಿ ಯಲ್ಲಮ್ಮ ತಾಯಿಯ ಬಗ್ಗೆ. ಸವದತ್ತಿ ಯಲ್ಲಮ್ಮ ನಿಜಕ್ಕೂ ವಿಶಿಷ್ಟವಾದ ದೇವತೆ ಎಂದು ಹೇಳಬಹುದು. ಇಡೀ ದೇಶದಲ್ಲೇ ಅತ್ಯಂತ ವಿಭಿನ್ನವಾಗಿ ಜಾತ್ರಾಮಹೋತ್ಸವಗಳನ್ನು ಆಚರಿಸಿಕೊಳ್ಳುವ ಈ ಕ್ಷೇತ್ರದಲ್ಲಿ ಪ್ರತಿ ಒಂದು ವರ್ಷದಲ್ಲಿ ಏಳು ಬಾರಿ ಜಾತ್ರೆ ನಡೆಯುವುದು ವಿಶೇಷವಾಗಿದೆ. ಈಕೆ ಬೆಳಗಾವಿಯ ಕನ್ನಡ ನಾಡಿನ ಶಕ್ತಿ ದೇವತೆ ಎಂದರೆ ತಪ್ಪಾಗಲಾರದು. ಪುರಾಣಕಾಲದಲ್ಲಿ ಸವದತ್ತಿಗೆ ಸೌಗಂಧಿಕಾ ಪುರ ಎಂಬ ಪ್ರಾಚೀನ ಹೆಸರಿತ್ತು. ಇದು ರೇಣುಕಾತಾಯಿ ಯಲ್ಲಮ್ಮನ ನೆಲೆಬಿಡಾಗಿದೆ. ಹಾಗೆ ಇಲ್ಲಿರುವ ದೇಗುಲವು ಸರಿಸುಮಾರು ಎರಡು ಸಾವಿರ ವರ್ಷಗಳ ಹಿಂದೆ ನಿರ್ಮಾಣವಾಗಿತ್ತು ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.

ಆದರೆ ನಮ್ಮ ಇತಿಹಾಸ ಪುಟಗಳನ್ನು ತಿರುವಿ ನೋಡಿದಾಗ ಕೆಲವು ತಜ್ಞರು ಹೇಳುವ ಹಾಗೆ ಸರಿಸುಮಾರು ಸಾವಿರದ ಐನೂರು ಇಸವಿಯ ಮಧ್ಯೆ ಭಾಗಿ ಬೊಮ್ಮಪ್ಪ ನಾಯಕನು ಕಟ್ಟಿಸಿದನೆಂದು ಹೇಳಲಾಗಿದೆ. ಆದರೆ ಸತ್ಯಾಸತ್ಯತೆ ಇಂದು ನಿಜಕ್ಕೂ ಸಿಕ್ಕಿಲ್ಲ. ಅದು ಏನೇ ಇರಲಿ ಸರಿಸುಮಾರು ಸಾವಿರಾರು ವರ್ಷಗಳಿಂದ ಜನರ ಕೋರಿಕೆಗಳನ್ನು ಈ ತಾಯಿ ನೆರವೇರಿಸುತ್ತಾ ಬಂದಿದ್ದಾರೆ. ಈ ತಾಯಿಯ ಬಗ್ಗೆ ಜನಪದಗಾರರು ಉಧೋ ಉಧೋ ಯಲ್ಲಮ್ಮ ಎಂದು ಹಾಡಿನ ಮುಖಾಂತರ ತಮ್ಮ ಭಕ್ಯಿಯನ್ನು ಸಲ್ಲಿಸುತ್ತಾರೆ. ತಾಯಿಯ ಮಹಿಮೆಯನ್ನು ಅತೀ ಹೆಚ್ಚಿನ ರೀತಿಯಲ್ಲಿ ಕೊಂಡಾಡುತ್ತಾರೆ. ಇಲ್ಲಿನ ದೇಗುಲ ಚಾಳುಕ್ಯ ಮತ್ತು ರಾಷ್ಟ್ರಕೂಟರ ಶೈಲಿಯಲ್ಲಿ ನಿರ್ಮಾಣವಾಗಿದೆ. ಪ್ರತಿನಿತ್ಯ ಈ ದೇವಿಗೆ ಶೈವ ಸಂಪ್ರದಾಯದಂತೆ ಪೂಜೆಯನ್ನು ಇಲ್ಲಿನ ಅರ್ಚಕರು ನಡೆಸುತ್ತಾರೆ. ಇಲ್ಲಿ ಯಾವುದೇ ರೀತಿಯ ಜಾತಿಗೆ ಆಧ್ಯತೆಯನ್ನು ನೀಡುವುದಿಲ್ಲ.
ಅನ್ಯ ಕೋಮಿನ ಜನರು ಪ್ರತಿನಿತ್ಯವೂ ಸಹ ಇಲ್ಲಿಗೆ ಬಂದು ದೇವಿಯ ದರ್ಶನವನ್ನು ಪಡೆಯುತ್ತಾರೆ. ಈ ದೇಗುಲದಲ್ಲಿ ಪ್ರತಿ ಮಂಗಳವಾರ ವಿಶೇಷವಾದ ಪೂಜೆಗಳನ್ನು ಏರ್ಪಡಿಸುತ್ತಾರೆ. ಹಾಗೆ ವರ್ಷಕ್ಕೆ ಏಳು ಜಾತ್ರೆಗಳು ಇರುವುದರಿಂದ ಬನದ ಹುಣ್ಣಿಮೆ ಅಥವಾ ಬರತನ ಹುಣ್ಣಿಮೆ ದಿನ ಇಲ್ಲಿ ಲಕ್ಷಾಂತರ ಜನ ಸೇರಿ ದೊಡ್ಡ ರೀತಿಯ ಜಾತ್ರೆಯನ್ನು ನಡೆಸುತ್ತಾರೆ. ಹೀಗೂ ಇಡೀ ಭಾರತದಲ್ಲಿ ಎಲ್ಲೇ ನೋಡಿದರೂ ವರ್ಷಕ್ಕೆ ಏಳು ಜಾತ್ರೆಗಳು ಎಲ್ಲೂ ನಡೆಯುವುದಿಲ್ಲ. ಆದರೆ ಈ ಕ್ಷೇತ್ರದಲ್ಲಿ ನಡೆಯುತ್ತದೆ ಎಂದರೆ ನೀವೇ ಊಹಿಸಿಕೊಳ್ಳಿ ಎಷ್ಟರಮಟ್ಟಿಗೆ ಈ ದೇಗುಲ ಪ್ರಸಿದ್ಧವಾಗಿದೆ ಎಂದು. ಈ ಸ್ಥಳಕ್ಕೆ ವಿಶೇಷವಾದ ಹಿನ್ನೆಲೆ ಇದ್ದು ಆ ಸೂಚನೆಯ ಪ್ರಕಾರ ಇಲ್ಲಿ ತಾಯಿ ನೆಲೆಸಿದ್ದಾರೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಇಲ್ಲೇ ದೇವಸ್ಥಾನದ ಹತ್ತಿರ ಒಂದು ಜೈನ ಬಸದಿಯು ಇದೆ. ಸವದತ್ತಿಯಿಂದ ಉತ್ತರ ಭಾಗಕ್ಕೆ ತೆರಳಿದರೆ ಮನೋಳಿಯ ಮಲಪ್ರಭಾ ದಂಡೆಯ ಮೇಲೆ ಸುಂದರವಾದ ಪಂಚಲಿಂಗ ದೇವರುಗಳ ಮಂದಿರವಿದೆ. ಹತ್ತಿರದ ಮುರಕೋಡಿನಲ್ಲಿ ಮಲ್ಲಿಕಾರ್ಜುನ ಸ್ವಾಮಿಯ ಇತಿಹಾಸ ದೇಗುಲವಿದೆ.
ಹಾಗೆ ನೀವು ಈ ದೇವಸ್ಥಾನಕ್ಕೆ ತೆರಳಬೇಕೆಂದರೆ ಬೆಳಗಾವಿ ಮತ್ತು ಧಾರವಾಡದಿಂದ ನೇರ ಬಸ್ಸು ಸಂಪರ್ಕಗಳಿದೆ. ಇಲ್ಲಿಗೆ ಸುಮಾರು ಮೂವತ್ತರಿಂದ ನಲ್ವತ್ತು ಕಿ.ಮೀ. ಪ್ರಯಾಣ ಮಾಡಿದರೆ ಸವದತ್ತಿ ಯಲ್ಲಮ್ಮನ ಶ್ರೀ ಕ್ಷೇತ್ರ ಸಿಗುತ್ತದೆ. ಖಂಡಿತಾ ಒಮ್ಮೆ ಈ ಕ್ಷೇತ್ರಕ್ಕೆ ಹೋಗಿ ಬನ್ನಿ ವಿಶೇಷ ಜಾತ್ರಾ ಸಮಯದಲ್ಲಿ ಈ ದೇವಿಯ ದರ್ಶನವನ್ನು ಪಡೆಯಿರಿ. ನಿಮಗೆ ಶುಭವಾಗುತ್ತದೆ. ಈ ಲೇಖನ ಮರೆಯದೇ ಶೇರ್ ಮಾಡಿರಿ ಸವದತ್ತಿ ಎಲ್ಲಮ್ಮನ ಕೃಪೆಗೆ ಪಾತ್ರರಾಗಿರಿ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಮನೆಯಲ್ಲಿ ಅಶಾಂತಿ ಇದ್ದರೆ ಧನ ವಶ ಮತ್ತು ಶತ್ರು ನಾಶ ಆಗಲು ಇನ್ನು ಹತ್ತಾರು ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರವಾಗಿ ನಿಮಗೆ ಫೋನ್ ನಲ್ಲೆ 3 ದಿನದಲ್ಲಿ ನಿಮಗೆ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿರಿ. 98 86 835 33 3