ಈ ಸೊಪ್ಪಿನ ಪಲ್ಯ ತಿಂದರೆ ಮುನ್ನೂರು ಖಾಯಿಲೆ ಬರದಂತೆ ತಡೆಯುತ್ತೆ

0
1236

ಸ್ನೇಹಿತರೇ ನಿಮಗೆ ಗೊತ್ತಿರುವ ಹಾಗೆ ನಮ್ಮ ದೈನಂದಿನ ಜೀವನದಲ್ಲಿ ನುಗ್ಗೆಸೊಪ್ಪನ್ನು ಪ್ರತಿನಿತ್ಯ ಬಳಸುತ್ತೇವೆ. ಆದರೆ ಕೆಲವರು ನುಗ್ಗೆಸೊಪ್ಪನ್ನು ಅಷ್ಟಾಗಿ ತಿನ್ನುವುದಿಲ್ಲ. ಆದರೆ ನುಗ್ಗೆಸೊಪ್ಪಿನ ಬಗ್ಗೆ ಒಂದು ಚಮತ್ಕಾರಿ ಉಪಯೋಗಗಳ ಬಗ್ಗೆ ಗೊತ್ತಾದರೆ ಖಂಡಿತಾ ನೀವು ಅದನ್ನು ಉಪಯೋಗಿಸುತ್ತೀರಾ. ಆದರೆ ಕೆಲವ ಆರೋಪ ಏನೆಂದರೆ ನುಗ್ಗೆಕಾಯಿ ಮತ್ತು ನುಗ್ಗೇ ಸೊಪ್ಪು ಹೆಚ್ಚಿನ ಲೈಂಗಿಕತೆ ನೀಡುತ್ತದೆ ಎಂದು ಹೇಳುತ್ತಾರೆ. ಆದರೆ ಅದಿಕ್ಕಿಂತಲೂ ಮಿಗಿಲಾದ ನೂರಾರು ಖಾಯಿಲೆಗಳನ್ನು ದೂರ ಮಾಡುವ ಶಕ್ತಿ ಈ ಸೊಪ್ಪಿನಲ್ಲಿದೆ. ಇಂತಹ ಶ್ರೀಮಂತ ಪೌಷ್ಟಿಕಾಂಶಗಳನ್ನು ಹೊಂದಿರುವ ಸೊಪ್ಪನ್ನು ನಾವು ಪ್ರತಿನಿತ್ಯ ತಿನ್ನದೇ ಉಳಿದೆಲ್ಲಾ ಆಹಾರಗಳನ್ನು ಸೇವಿಸುತ್ತಾ ಬಂದಿದ್ದೇವೆ. ಈ ನುಗ್ಗೇ ಸೊಪ್ಪಿನಿಂದ ಸಾರು ಪಲ್ಯ ಹೀಗೆ ಯಾವುದಾದರೂ ಒಂದು ಅಡುಗೆಯನ್ನು ಮಾಡಿಕೊಂಡು ತಿಂದರೆ ನಮಗೆ ರುಚಿಕರವಾಗುತ್ತದೆ. ನುಗ್ಗೇ ಸೊಪ್ಪನ್ನು ಎರಡು ವಿಧವಾಗಿ ನಾವು ತಿನ್ನಬಹುದು. ಒಂದನೇ ರೀತಿ ಅದನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಸಹ ಅದು ಅನೇಕ ಬಗೆಯ ಲಾಭವನ್ನು ತರುತ್ತದೆ. ಅಥವಾ ನುಗ್ಗೇ ಸೊಪ್ಪನ್ನು ಒಣಗಿಸಿ ಪುಡಿಮಾಡಿಕೊಂಡು ಅದನ್ನು ಬೇರೆ ರೀತಿಯಲ್ಲಿ ಸಹ ಉಪಯೋಗಿಸಬಹುದು. ಹಾಗಾದರೆ ಇದರ ಪ್ರಯೋಜನವನ್ನು ಇಂದು ತಿಳಿಯೋಣ.

ಬಾಣಂತಿಯರಿಗೆ ನುಗ್ಗೆಸೊಪ್ಪಿನ ರಸ ನಿಜಕ್ಕೂ ಅಮೃತವಿದ್ದಂತೆ. ಈ ಸೊಪ್ಪನ್ನು ಅವರು ಪ್ರತಿನಿತ್ಯ ಹತ್ತು ಎಮ್ ಎಲ್ ಮಾತ್ರ ಸೇವಿಸುವುದರಿಂದ ಅವರಿಗೆ ಅಗತ್ಯವಾದ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಹೇರಳವಾಗಿ ದೊರೆಯುತ್ತದೆ. ಗರ್ಭಿಣಿಯರಿಗೆ ಹೊಟ್ಟೆಯಲ್ಲಿರುವ ಮಗುವಿಗೂ ಸಹ ಹೇರಳವಾದ ಪೋಷಕಾಂಶ ಇದರಿಂದ ದೊರೆಯುತ್ತದೆ. ರಕ್ತಹೀನತೆ ಸಮಸ್ಯೆ ಇದ್ದವರು ಪ್ರತಿನಿತ್ಯ ಹತ್ತು ಎಮ್ ಎಲ್ ನುಗ್ಗೇ ಸೊಪ್ಪಿನ ರಸವನ್ನು ಕುಡಿಯಬೇಕು. ಹಾಗು 20 ರಿಂದ ಮುವತ್ತು ಎಮ್ ಎಲ್ ಹಾಲಿನೊಂದಿಗೆ ರಸವನ್ನು ಬೆರೆಸಿ ಕುಡಿದರೆ ಮೂಳೆಗಳು ಬಲಿಷ್ಠವಾಗುತ್ತದೆ ಮತ್ತು ರಕ್ತಹೀನತೆ ಸಮಸ್ಯೆ ಖಂಡಿತಾ ಸರಿ ಹೋಗುತ್ತದೆ. ಇರುಳು ಕುರುಡುತನ ಇರುವವರಿಗೆ ಈ ನುಗ್ಗೇ ಸೊಪ್ಪು ನಿಜಕ್ಕೂ ವರದಾನವಾಗಿದೆ. ಇದರಲ್ಲಿರುವ ಪ್ರೊಟೀನ್ ಅಂಶ ಓರೆಯೋ ಎಂಬ ಸಮಸ್ಯೆಯಿಂದ ನಿಮ್ಮನ್ನು ತಡೆಯುತ್ತದೆ. ಥೈರಾಯ್ಡ್ ಸಮಸ್ಯೆ ಜೀವನದಲ್ಲಿ ಬರಲೇ ಬಾರದು ಎಂದರೆ ಪ್ರತಿನಿತ್ಯ ನುಗ್ಗೇ ಸೊಪ್ಪು ಅಥವಾ ಅದರ ರಸವನ್ನು ಸೇವಿಸಬೇಕು. ಇದರಲ್ಲಿರುವ ವಿಟಮಿನ್ ಎ ಮತ್ತು ಸಿ ಅಂಶಗಳು ನಮ್ಮ ದೇಹಕ್ಕೆ ಪ್ರಾರ್ಪರಸ್ ಕ್ಯಾಲ್ಸಿಯಂ ಇನ್ನು ಅನೇಕ ರೀತಿಯ ವಿಟಮಿನ್ ಗಳನ್ನು ನಮಗೆ ನೀಡುತ್ತದೆ. ಹಾಗೂ ಥೈರಾಯ್ಡ್ ಸಮಸ್ಯೆ ನಮ್ಮ ದೇಹದಲ್ಲಿದ್ದರೆ ಅದನ್ನು ತೆಗೆದು ಹಾಕುತ್ತದೆ. ನುಗ್ಗೇ ಸೊಪ್ಪನ್ನು ಪ್ರತಿನಿತ್ಯ ಸೇವಿಸುವುದರಿಂದ ಐದು ರೀತಿಯ ಕ್ಯಾನ್ಸರ್ ಗಳು ಬರುವುದಿಲ್ಲ. ವೈದ್ಯರು ಹೇಳಿರುವ ಪ್ರಕಾರ ಲಂಗ್ಸ್, ಲಿವರ್ ಚರ್ಮ ಕರುಳು ಮತ್ತು ರಕ್ತ ಹೀಗೆ ಇದು ರೀತಿಯ ಕ್ಯಾನ್ಸರ್ ಗಳನ್ನು ಬರದಂತೆ ಇದು ತಡೆಯುತ್ತದೆ.

ಸಕ್ಕರೆ ಕಾಯಿಲೆ ಇರುವವರು ಎಷ್ಟೇ ಮದ್ದು ಮಾಡಿಯೂ ಕಾಯಿಲೆ ಕೆಲವೊಮ್ಮೆ ಸ್ಥಿಮಿತ ಕ್ಕೆ ಬಾರದ ಸಂದರ್ಭದಲ್ಲಿ ಈ ನುಗ್ಗೇ ಸೊಪ್ಪನ್ನು ಉಪಯೋಗಿಸಬಹುದು. ಅದು ಹೇಗೆಂದರೆ ಐದು ಗ್ರಾಮ್ ಒಣಗಿದ ನುಗ್ಗೇ ಸೊಪ್ಪಿನ ಪುಡಿಯನ್ನು ತೆಗೆದುಕೊಂಡು ಮೂರು ತಿಂಗಳ ಕಾಲ ತಪ್ಪದೇ ಸೇವಿಸುತ್ತಾ ಬಂದರೆ ಸಕ್ಕರೆಯಲ್ಲಿರುವ ಸಿಹಿಯ ಪ್ರಮಾಣ ಕಡಿಮೆಯಾಗುತ್ತದೆ ಎಂದು ಈಗಾಗಲೇ ಹಲವಾರು ಸಂಶೋಧನೆಗಳಲ್ಲಿ ನಡೆದಿದೆ. ನುಗ್ಗೇ ಸೊಪ್ಪು ನಿಜಕ್ಕೂ ಸಕ್ಕರೆ ಕಾಯಿಲೆ ಇರುವವರಿಗೆ ರಾಮಬಾಣ. ನಾವು ಪ್ರತಿನಿತ್ಯ ಕುಡಿಯುವ ಹಾಲಿಗಿಂತ ಶೇಕಡ ಇಪ್ಪತ್ತೈದರಷ್ಟು ಹೆಚ್ಚು ಅಂಶ ಅಂದರೆ ಕ್ಯಾಲ್ಸಿಯಂ ನುಗ್ಗೆಸೊಪ್ಪಿನಲ್ಲಿರುತ್ತದೆ. ಆದುದರಿಂದ ಪ್ರತಿನಿತ್ಯ ಒಂದು ಲೋಟ ಹಾಲುಕುಡಿಯುವುದು ತಪ್ಪಿದರೂ ಹತ್ತು ಎಮ್ ಎಲ್ ನುಗ್ಗೇ ಸೊಪ್ಪಿನ ರಸವನ್ನು ನೀವು ಕುಡಿದರೆ ಖಂಡಿತಾ ನಿಮಗೆ ದುಪ್ಪಟ್ಟು ಕ್ಯಾಲ್ಸಿಯಂ ಸಿಗುತ್ತದೆ. ಸ್ನೇಹಿತರೆ ತಿಳಿಯಿರಿ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸಿಗುವ ನುಗ್ಗೆಸೊಪ್ಪಿಗೆ ಅದು ಕೆಡದಂತೆ ಅನೇಕ ರೀತಿಯ ರಾಸಾಯನಿಕಗಳನ್ನು ಬೆರೆಸಿರುತ್ತಾರೆ. ದಯವಿಟ್ಟು ಅಂತಹ ರಾಸಾಯನಿಕಯುಕ್ತ ಆಹಾರವನ್ನು ಸೇವಿಸಬೇಡಿ.

LEAVE A REPLY

Please enter your comment!
Please enter your name here