ಇದನ್ನು ನಮ್ಮ ಎಲ್ಲರ ಅಡುಗೆ ಮನೆಯಲ್ಲಿ ಇರುವ ಸಾಂಬಾರ ಪದಾರ್ಥವಾಗಿದೆ ಇದು ತುಂಬಾ ಸುವಾಸನೆಯನ್ನು ಕೊಡುವ ಜೊತೆಗೆ ಇದನ್ನು ಅಡುಗೆಗೆ ಬಳಸುವುದರಿಂದ ಅಡುಗೆಯ ರುಚಿ ಆಗು ಸುವಾಸನೆ ಹೆಚ್ಚುತ್ತದೆ ಆದರೆ ಈ ಲವಂಗ ಕೇವಲ ಅಡುಗೆಗೆ ಮಾತ್ರ ಅಲ್ಲದೆ ಇನ್ನು ಹಲವಾರು ರೀತಿಯ ಪ್ರಯೋಜನವನ್ನು ಇದರಿಂದ ಪಡೆದುಕೊಳ್ಳಬಹುದು ಹಾಗಾದರೆ ಅದು ಏನು ನೋಡೋಣಬನ್ನಿ. ಹಳ್ಳಿಗಳಲ್ಲಿ ನೋಡಿರಬಹುದು ಏನಾದರೂ ಸ್ವಲ್ಪ ಹಲ್ಲು ನೋವು ಬಂದರೆ ಲವಂಗವನ್ನು ತಿನ್ನುತ್ತಾರೆ ಏಕೆಂದರೆ ಲವಂಗದಲ್ಲಿ ಹಲ್ಲು ನೋವಿನ ಸಮಸ್ಯೆಯನ್ನು ದೂರ ಮಾಡುವ ಶಕ್ತಿ ಇದೆ ಅದಕ್ಕಾಗಿಯೇ ನಾವು ಹಲ್ಲನ್ನು ಕ್ಲಿನ್ ಮಾಡಲು ಬಳಸುವ ಪೇಸ್ಟ್ ಅಲ್ಲೂ ಕೂಡ ಲವಂಗವನ್ನು ಬಳಕೆ ಮಾಡಿರುತ್ತಾರೆ.
ಕೆಮ್ಮು ಬಂದಾಗ ಕೂಡ ಲವಂಗವನ್ನು ತಿನ್ನುತ್ತೇವೆ ಏಕೆಂದರೆ ಲವಂಗದಲ್ಲಿ ಇರುವ ಖಾರದ ಅಂಶವು ಕೆಮ್ಮನ್ನು ಕಡಿಮೆ ಮಾಡುತ್ತದೆ. ಲವಂಗದ ಎಣ್ಣೆಯನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಅದನ್ನು ಮನೆಯಲ್ಲಿ ಸ್ಪ್ರೇ ಮಾಡುವುದರಿಂದ ಮನೆ ಸುಗಂಧ ಭರಿತವಾಗುತ್ತದೆ. ಮನೆಯಲ್ಲಿ ಯಾವುದಾದರೂ ಕೆಟ್ಟ ವಾಸನೆಗಳು ತುಂಬಿದ್ದರೆ ನೀರಿನಲ್ಲಿ ಲವಂಗವನ್ನು ಹಾಕಿ ಕುದಿಸಿ ಆ ನೀರು ಆವಿಯಾದಂತೆಲ್ಲ ಲವಂಗದ ವಾಸನೆ ಕೆಟ್ಟ ವಾಸನೆಯನ್ನು ಹೋಗಲಾಡಿಸುತ್ತದೆ.

ಕಾಫಿ ಚಹಾ ಹಾಲು ಇಂತವುಗಳನ್ನು ಪ್ಲಾಸ್ಕಿನಲ್ಲಿ ತೆಗೆದುಕೊಂಡು ಹೋಗಿರುತ್ತೇವೆ. ಎಷ್ಟೇ ತೊಳೆದರೂ ಅದರೊಳಗಿನ ಕೆಟ್ಟ ವಾಸನೆ ಹೋಗುವುದು ಕಷ್ಟ ಆ ಸಮಯದಲ್ಲಿ ಅದರ ಒಳಗೆ ಕೆಲವು ಲವಂಗವನ್ನು ಹಾಕಿ ಮುಚ್ಚಿಡಬೇಕು ನಂತರ ಅದನ್ನು ಬಳಸುವಾಗ ಲವಂಗವನ್ನು ತೆಗೆದು ಬಳಸುವುದರಿಂದ ಕೆಟ್ಟ ವಾಸನೆ ಹೋಗುತ್ತದೆ. ಲವಂಗದ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿ ಮಸಾಜ್ ಮಾಡಿದರೆ ಚರ್ಮ ಕಾಂತಿಯುತವಾಗುತ್ತದೆ ಆದರೆ ಲವಂಗದ ಎಣ್ಣೆಯನ್ನು ಹೆಚ್ಚು ಹಚ್ಚಿಕೊಳ್ಳಬಾರದು ಹೆಚ್ಚು ಹಚ್ಚಿದರೆ ಚರ್ಮಕ್ಕೆ ಹಾನಿಯಾಗುವ ಸಂಭವ ಕೂಡ ಇದೆ.
ನಿತ್ಯ ಒಂದರಿಂದ ಎರಡು ಲವಂಗ ಸೇವಿಸುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಲವಂಗದ ಎಣ್ಣೆಯನ್ನು ದಾಲ್ಚಿನ್ನಿ ತೈಲ ಮತ್ತು ನೀರಿನೊಂದಿಗೆ ಮಿಶ್ರಣ ಮಾಡಿ ಇರುವೆಗಳು ಇರುವ ಜಾಗಕ್ಕೆ ಸಂಪಡಿಸಿದರೆ ಇರುವೆಗಳು ಸತ್ತು ಹೋಗುತ್ತವೆ. ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಎರಡು ಭಾಗ ಮಾಡಿ ಆ ನಿಂಬೆ ಹಣ್ಣಿನ ಸುತ್ತ ಲವಂಗವನ್ನು ಚುಚ್ಚಿ ಮನೆಯಲ್ಲಿ ಇಡುವುದರಿಂದ ಸೊಳ್ಳೆಗಳು ಬರುವುದಿಲ್ಲ. ಲವಂಗದ ಸೇವನೆಯಿಂದ ಮೂಳೆಗಳು ಗಟ್ಟಿ ಅಗುತ್ತವೆ. ಊಟ ಅದ ನಂತರ ಒಂದು ಲವಂಗವನ್ನು ತಿನ್ನುವುದರಿಂದ ಸೇವಿಸಿದ ಆಹಾರ ಸುಲಭವಾಗಿ ಜೀರ್ಣ ಆಗುತ್ತದೆ ಹಾಗೂ ವಾಕರಿಕೆ. ಹೊಟ್ಟೆ ಉಬ್ಬರದ ಸಮಸ್ಯೆ ದೂರ ಆಗುತ್ತದೆ. ನೋಡಿ ಲವಂಗ ಕೇವಲ ಅಡುಗೆಗೆ ಮಾತ್ರ ಅಲ್ಲದೆ ಹಲವಾರು ರೀತಿಯ ಪ್ರಯೋಜನವನ್ನು ಹೊಂದಿದೆ ಹಾಗಾಗಿ ಲವಂಗದ ಪ್ರಯೋಜನವನ್ನು ಪಡೆದುಕೊಳ್ಳುವುದು ಒಳ್ಳೆಯದು. ಈ ಉಪಯುಕ್ತ ಲೇಖನ ಮರೆಯದೇ ನೀವು ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ.