ಜ್ವರ ಬಂದಾಗ ಕೋಳಿ ಮೊಟ್ಟೆಯನ್ನು ತಿಂದರೆ ಏನಾಗುತ್ತದೆ ಗೊತ್ತೇ?

0
500

ಮನೆಯಲ್ಲಿ ಯಾರಿಗಾದರೂ ಒಬ್ಬರಿಗೆ ಹುಷಾರಿಲ್ಲ ಅಂತಾದರೆ ಖಂಡಿತಾ ನಮಗೆ ಬೇಜರಾಗುತ್ತದೆ. ಹಾಗೂ ಅವರಿಗೆ ಬೇಗ ಗುಣವಾಗಲಿ ಎಂದು ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ. ಜ್ವರ ಬಂದಾಗ ನಾವು ಹಲವು ಬಗೆಯ ಆಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಹಲವು ರೀತಿಯ ಆಹಾರ ಪದ್ದತೆ ಬಳಕೆ ಮಾಡೋದು ಸಹಜ. ವೈದ್ಯರ ಬಳಿ ತೆರಳಿದಾಗ ಅವರು ನಮಗೆ ಸಾಕಷ್ಟು ರೀತಿಯ ಆಹಾರಗಳನ್ನು ಸೂಚಿಸುತ್ತಾರೆ. ಅವರು ಹೇಳುವ ಪ್ರಕಾರ ಹಲವು ರೀತಿಯ ಪೌಷ್ಟಿಕಾಂಶಗಳು ಹಾಗು ಹಣ್ಣುಗಳ ಸೇವನೆ ಹೆಚ್ಚು ಮಾಡಿರಿ ಎಂದು ನಮಗೆ ತಿಳಿಸುತ್ತಾರೆ. ಆದರೆ ನಮ್ಮ ಜನರಲ್ಲಿ ಈಗಲೂ ಒಂದು ಅನುಮನವಿದೆ. ಅದು ಏನಪ್ಪಾ ಅಂದರೆ ಜ್ವರ ಬಂದಾಗ ಕೋಳಿ ಮೊಟ್ಟೆಯನ್ನು ತಿನ್ನಬೇಕೇ ಬೇಡವೇ ಎಂದು. ಹಲವರು ಈ ಗೊಂದಲದಲ್ಲೇ ಇರುತ್ತಾರೆ. ಕೆಲ ವೈದ್ಯರು ಸಹ ಈ ಗೊಂದಲಕ್ಕೆ ಸರಿಯಾದ ಸೂಚನೆಗಳನ್ನು ನೀಡಿರುವುದಿಲ್ಲ.

ಆದರೆ ವೈದ್ಯರು ಹೇಳುವ ಪ್ರಕಾರ ಜ್ವರ ಬಂದಾಗ ಮಾಂಸಾಹಾರ ಸೇವನೆ ಸೂಕ್ತವಲ್ಲ. ಇದು ಜ್ವರವನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ. ಆದರೆ ಕೋಳಿ ಮೊಟ್ಟೆಯಿಂದ ಹಾಗಲ್ಲ. ಕೋಳಿ ಮೊಟ್ಟೆಯನ್ನು ತಿನ್ನುವುದರಿಂದ ಜ್ವರದ ಸಮಯದಲ್ಲಿ ಉಪಯುಕ್ತವಾಗಿದೆ. ಆದರೆ ಮೊಟ್ಟೆ ತಿನ್ನುವಾಗ ಒಂದು ವಿನಾಯಿತಿ ಇದೆ. ಅದೇನೆಂದರೆ ಕೋಳಿಮೊಟ್ಟೆಯನ್ನು ಹಸಿಯಾಗಿ ತಿಂದರೆ ಸಾಕಷ್ಟು ಸಮಸ್ಯೆಗಳು ಬರುತ್ತದೆ. ಜ್ವರ ಬಂದಾಗ ಕೋಳಿ ಮೊಟ್ಟೆಯನ್ನು ತಿನ್ನಲೇಬೇಕೆಂದಿದ್ದರೆ ಅದನ್ನು ಮಮೂಲಿಗಿಂತ ದುಪ್ಪಟ್ಟು ರೀತಿಯಲ್ಲಿ ಬೇಯಿಸಿ ತಿನ್ನಬೇಕು. ಇಲ್ಲವಾದಲ್ಲಿ ನಿಮಗೆ ಅದರಲ್ಲಿರುವ ಒಂದು ಬ್ಯಾಕ್ಟೀರಿಯಾದಿಂದ ನಿಮಗೆ ಆರೋಗ್ಯ ಸಮಸ್ಯೆ ಕಾಡುತ್ತದೆ.

ಜ್ವರ ಬಂದಾಗ ಅಧಿಕ ರೀತಿಯ ಪೌಷ್ಟಿಕಾಂಶಗಳು ನಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ. ಆದರೆ ಜ್ವರ ಇದ್ದರೆ ನಿಮಗೇನಾದರು ಹೆಚ್ಚಿನ ಹಸಿವು ಇದ್ದರೆ ಮಾತ್ರವೇ ನೀವು ಮೊಟ್ಟೆಯನ್ನು ತಿನ್ನಬೇಕು. ಇಲ್ಲವಾದಲ್ಲಿ ಅದು ನಿಮ್ಮ ಜೀರ್ಣಾಂಗದ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಜ್ವರ ಬಂದಾಗ ಜೀರ್ಣ ಕ್ರಿಯೆ ಕಡಿಮೆ ಇರುವುದರಿಂದ ಹಸಿವಿನ ಸಮಯದಲ್ಲಿ ಮಾತ್ರ ತಿನ್ನಿರಿ. ಈಗಾದರು ಮಾಹಿತಿ ತಿಳಿಯಿತಲ್ಲವೇ ಜ್ವರ ಬಂದಾಗ ಖಂಡಿತಾ ಬೇಯಿಸಿದ ಮೊಟ್ಟೆಯನ್ನು ತಿನ್ನಬಹುದು. ಆದರೆ ಅದು ಹೆಚ್ಚಿನ ಸಂಖ್ಯೆಯಲ್ಲಿ ಬೇಡ. ಮೊಟ್ಟೆಯಲ್ಲಿರುವ ಅಧಿಕ ಬಗೆಯ ಪ್ರೋಟೀನ್ ಗಳು ಮತ್ತು ನಿಮ್ಮ ದೇಹದಲ್ಲಿರುವ ಅನೇಕ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ತೆಗೆಯಲು ಸಹಾಯಮಾಡುತ್ತದೆ.

ವೈದ್ಯರು ಸೂಚಿಸಿರುವ ಪ್ರಕಾರ ನಲವತ್ತು ನಲವತ್ತೈದು ವರ್ಷ ದಾಟಿರುವವರಿಗೆ ಬಿಪಿ ಕೊಲೆಸ್ಟ್ರಾಲ್ ಸಕ್ಕರೆಕಾಯಿಲೆ ಹೀಗೆ ಅನೇಕ ರೀತಿಯ ಕಾಯಿಲೆಗಳು ಬರುತ್ತಾ ಇರುತ್ತವೆ. ಅಂತಹವರು ವಾರಕ್ಕೆ ಒಮ್ಮೆಯಾದರೂ ಒಂದು ಮೊಟ್ಟೆಯನ್ನು ತಿನ್ನುವುದು ಸೂಕ್ತವಾಗಿದೆ ಎನ್ನುತಾರೆ ಆದರೆ ನೀವು ಫಾರ್ಮ್ ಮೊಟ್ಟೆ ಸೇವನೆಗಿಂತ ನಾಟಿ ಮೊಟ್ಟೆ ತಿನ್ನುವುದು ತುಂಬಾ ಒಳ್ಳೆಯದು ಅದ್ರಲ್ಲಿ ಹೆಚ್ಚಿನ ಸತ್ವಗಳು ನಮ್ಮ ಆರೋಗ್ಯದ ಮೇಲೆ ಒಳ್ಳೆ ಪರಿಣಾಮ ಬೀರಲಿದೆ. ಈ ಉಪಯುಕ್ತ ಲೇಖನ ಮರೆಯದೇ ಶೇರ್ ಮಾಡಿರಿ ಎಲ್ಲ ಸ್ನೇಹಿತರಿಗೂ ಸಹಾಯ ಆಗಲಿ.

LEAVE A REPLY

Please enter your comment!
Please enter your name here