ನಿಮ್ಮ ಮಲಗೋ ಕೋಣೆಯಲ್ಲಿ ಒಂದು ನಿಂಬೆ ಹಣ್ಣು ಕಟ್ ಮಾಡಿ ಇಟ್ಕೋಳಿ ಏಕೆ ಗೊತ್ತೇ

0
841

ಮಲಗುವಾಗ ನಿಮ್ಮ ಬೆಡ್ ಪಕ್ಕದಲ್ಲಿ ನಿಂಬೆ ಹಣ್ಣನ್ನು ಇಟ್ಟಿಕೊಂಡು ಮಲಗಿ ಇದರಿಂದ ಏನೆಲ್ಲ ಬದಲಾವಣೆ ಆಗುತ್ತದೆ ನೋಡಿ. ನಿಂಬೆ ಹಣ್ಣಿನಲ್ಲಿ ಹಲವಾರು ರೀತಿಯ ಆರೋಗ್ಯವನ್ನು ಕಾಪಾಡುವ ಅಂಶಗಳನ್ನು ಒಳಗೊಂಡಿದೆ ಎಂದು ಗೊತ್ತು ಹಾಗೆಯೇ ನಿಂಬೆಹಣ್ಣು ಹಲವಾರು ರೀತಿಯ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂದು ಸಹ ಗೊತ್ತು ಅಲ್ಲವೇ ಆದರೆ ಇನ್ನೊಂದು ಮುಖ್ಯವಾದ ವಿಷಯ ಏನೆಂದರೆ ರಾತ್ರಿ ಮಲಗುವ ಸಮಯದಲ್ಲಿ ನಿಂಬೆ ಹಣ್ಣನ್ನು ಬೆಡ್ ಪಕ್ಕದಲ್ಲಿ ಇಟ್ಟುಕೊಂಡು ಮಲಗಿದರೆ ಏನೆಲ್ಲ ಪ್ರಯೋಜನ ಆಗುತ್ತದೆ ಎಂಬುದು ಗೊತ್ತೇ ಬನ್ನಿ ತಿಳಿದುಕೊಳ್ಳೋಣ

ಬೆಳಿಗ್ಗೆ ಇಂದ ಸಂಜೆಯ ವರೆಗೂ ದುಡಿದು ಸುತ್ತಾಡಿ ಏನೋ ಒಂದು ರೀತಿಯ ದೇಹಕ್ಕೆ ಮನಸ್ಸಿಗೆ ಸುಸ್ತು ಆಗಿರುತ್ತದೆ ಒತ್ತಡ ಹೆಚ್ಚಾಗಿರುತ್ತದೆ ಈ ಎಲ್ಲ ಸಮಸ್ಯೆಗಳನ್ನು ಇಟ್ಟುಕೊಂಡು ಮಲಗಿದಾಗ ಕೂಡ ನಮಗೆ ಸರಿಯಾಗಿ ನಿದ್ದೆ ಬರದೆ ಒದ್ದಾಡುತ್ತೇವೆ ಆದರೆ ಇದೆಲ್ಲ ಸಮಸ್ಯೆಗೆ ಸುಲಭ ಉಪಾಯ ಎಂದರೆ ರಾತ್ರಿ ಮಲಗುವ ಮುಂಚೆ ನಿಂಬೆ ಹಣ್ಣನ್ನು ಇಟ್ಟುಕೊಂಡು ಮಲಗಿದರೆ ಸುಸ್ತು ಆಯಾಸ ಒತ್ತಡ ಎಲ್ಲವೂ ಕೂಡ ದೂರ ಆಗಿ ನೆಮ್ಮದಿಯಿಂದ ನಿದ್ರೆ ಮಾಡಬಹುದು. ಕೆಲವರಿಗೆ ರಾತ್ರಿ ಸಮಯದಲ್ಲಿ ಮಲಗಿದಾಗ ಸರಿಯಾಗಿ ನಿದ್ದೆ ಬರದೆ ಒದ್ದಾಡುತ್ತೇವೆ ಇದನ್ನು ನಿದ್ರಾಹೀನತೆ ಎಂದು ಕೂಡ ಕರೆಯುತ್ತಾರೆ ಇಂತಹ ಸಮಸ್ಯೆಗೆ ಸುಲಭ ಮದ್ದು ಎಂದರೆ ಮಲಗುವಾಗ ರಾತ್ರಿ ನಿಂಬೆ ಹಣ್ಣನ್ನು ಇಟ್ಟುಕೊಂಡು ಮಲಗುವುದು ಇದರಿಂದ ಮೆದುಳಿಗೆ ವಿಶ್ರಾಂತಿ ಸಿಕ್ಕಿ ಸುಖವಾದ ನಿದ್ದೆ ಬರುತ್ತದೆ.

ಉಸಿರಾಟದಲ್ಲಿ ಸಮಸ್ಯೆ ಆಗಿದ್ದಾಗ ಶೀತ ನೆಗಡಿ ಅಥವಾ ಇನ್ನಿತರ ಅಲರ್ಜಿಯಿಂದ ಬಳಲುತ್ತಿರುವವರು ರಾತ್ರಿ ಸಮಯದಲ್ಲಿ ನಿಂಬೆ ಹಣ್ಣು ಇಟ್ಟುಕೊಂಡು ಮಲಗಿ. ಕೆಲವರಿಗೆ ಮಲಗುವ ವೇಳೆ ಉಸಿರು ಕಟ್ಟಿದಂತಾಗುತ್ತದೆ. ಜೊತೆಗೆ ಸೈನೆಸ್ಸ್ ಸಮಸ್ಯೆಯಿಂದ ಬಳಲುವವರು ಕೂಡ ನಿಂಬೆ ಹಣ್ಣಿನ ತುಂಡನ್ನು ಪಕ್ಕದಲ್ಲಿ ಇಟ್ಟುಕೊಂಡು ಮಲಗಿ ಇದರಿಂದ ನಿಂಬೆಯಲ್ಲಿ ಇರುವ ಪರಿಮಳ ತಾಜಾ ಗಾಳಿಯೊಂದಿಗೆ ಸೇರಿ ನೇರವಾಗಿ ಮೂಗಿಗೆ ಹೋಗಿ ಕಟ್ಟಿದ ಉಸಿರಾಟವನ್ನು ಬಿಡಿಸುತ್ತದೆ. ಮಲಗುವ ರೂಮ್ ಅಲ್ಲಿ ಸೊಳ್ಳೆ ಇನ್ನಿತರ ಕೀಟಗಳು ಇದ್ದು ಅವುಗಳಿಂದ ನಿತ್ಯ ಹಿಂಸೆ ಅನುಭವಿಸುತ್ತಿದ್ದಾರೆ ನಿಂಬೆ ಹಣ್ಣು ಒಳ್ಳೆಯ ಪರಿಣಾಮ ಬೀರುತ್ತದೆ. ನಿಂಬೆ ಹಣ್ಣಿನ ವಾಸನೆಗೆ ಯಾವುದೇ ರೀತಿಯ ಕೀಟಗಳು ಬರುವುದಿಲ್ಲ. ಮಲಗುವ ಹತ್ತಿರ ನಿಂಬೆ ಹಣ್ಣನ್ನು ಇಟ್ಟುಕೊಳ್ಳುವುದರಿಂದ ಅದರ ಪರಿಮಳ ನಮಗೆ ಹೆಚ್ಚು ಶಕ್ತಿ ಉಲ್ಲಾಸ ನೀಡುತ್ತದೇ ಜೊತೆಗೆ ಮನಸ್ಸು ಶಾಂತವಾಗಿ ಇರುತ್ತದೆ. ಈ ನಿಂಬೆ ಹಣ್ಣಿನ ವಾಸನೆಯಿಂದ ಬೆಳಿಗ್ಗೆ ಎದ್ದಾಗ ಸಹ ಮನಸ್ಸು ಉಲ್ಲಾಸ ಬರಿತವಾಗಿರುತ್ತದೆ. ಹಾಗಾಗಿ ನಿತ್ಯ ಮಲಗುವಾಗ ನಿಮ್ಮ ಬೆಡ್ ಪಕ್ಕದಲ್ಲಿ ನಿಂಬೆ ಹಣ್ಣಿನ ತುಂಡನ್ನು ಇಟ್ಟುಕೊಂಡು ಮಲಗಿ ನಂತರ ಆಗುವ ಬದಲಾವಣೆಯನ್ನು ನೀವೇ ಕಂಡು ಕೊಳ್ಳುವುದು ತುಂಬಾ ಒಳ್ಳೆಯದು.

ಎಷ್ಟೋ ಜನಕ್ಕೆ ನಿಂಬೆ ಹಣ್ಣಿನ ಬಗ್ಗೆ ಈ ರೀತಿಯ ಮಾಹಿತಿ ತಿಳಿದಿರುವುದಿಲ್ಲ ಎಲ್ಲರೂ ನಿಂಬೆಯನ್ನು ತಮ್ಮ ಆರೋಗ್ಯಕ್ಕಾಗಿ ಸೇವನೆ ಮಾಡುತ್ತಾರೆ ಆದರೆ ನಿಂಬೆ ಕಟ್ ಮಾಡಿ ನೀವು ಮಲಗುವ ಕೋಣೆಯಲ್ಲಿ ಇಟ್ಟು ಇಷ್ಟೊಂದು ಲಾಭ ಪಡೆಯುತ್ತೇವೆ ಅಂದ್ರೆ ಅರ್ಥ ಮಾಡಿಕೊಳ್ಳಿರಿ ನಿಂಬೆ ಹಣ್ಣಿಗೆ ಎಷ್ಟು ಶಕ್ತಿ ಇದೆ ಎಂದು. ಈ ಉಪಯುಕ್ತ ಮಾಹಿತಿ ಮರೆಯದೇ ಶೇರ್ ಮಾಡಿರಿ ಎಲ್ಲ ಸ್ನೇಹಿತರಿಗೂ ಸಹಾಯ ಆಗುತ್ತೆ.

LEAVE A REPLY

Please enter your comment!
Please enter your name here