ಮೊಬೈಲ್ ಇಂದ ಎಷ್ಟು ಉಪಯೋಗ ಆಗುತ್ತದೋ ಅಷ್ಟೇ ಅನಾನುಕೂಲ ಸಹ ಇದೆ ಎಂದು ಗೊತ್ತು ಏನೇ ಆದರೂ ಕೂಡ ಯಾರು ಮೊಬೈಲ್ ಅನ್ನು ಒಂದು ಕ್ಷಣ ಕೂಡ ಬಿಟ್ಟು ಇರುವುದಿಲ್ಲ ಯಾವಾಗ ನೋಡಿದರು ಕೂಡ ಕೈಯಲ್ಲಿ ಮೊಬೈಲ್ ಇದ್ದೆ ಇರುತ್ತದೆ ಆದರೆ ಇತ್ತೀಚಿಗೆ ಹೆಚ್ಚು ಕಂಡು ಬರುತ್ತಿರುವುದು ಮೊಬೈಲ್ ಸ್ಪೋಟಗೊಳ್ಳುವ ಪ್ರಕರಣಗಳು ಇದು ಯಾವ ಸಮಯದಲ್ಲಿ ಎಲ್ಲಿ ಆಗುತ್ತದೆ ಎಂದು ಊಹಿಸಲು ಕೂಡ ಆಗುವುದಿಲ್ಲ ಈ ಮೊಬೈಲ್ ಬ್ಲಾಸ್ಟ್ ವ್ಯಕ್ತಿಯ ಪ್ರಾಣವನ್ನೇ ತೆಗೆದು ಬಿಡುವ ಸಾಧ್ಯತೆ ಇರುತ್ತದೆ.
ಈ ಮೊಬೈಲ್ ಬ್ಲಾಸ್ಟ್ ಆಗುವುದಕ್ಕೆ ಕಾರಣ ಆದರೂ ಏನು ಎಂದು ನೋಡುವುದಾದರೆ. ಮೊಬೈಲ್ ಫೋನ್ ಬ್ಯಾಟರಿಗಳಲ್ಲಿ ಸ್ಫೋಟಗಳು ಹೆಚ್ಚು ಕಂಡು ಬರುತ್ತಿದೆ ಅದರಲ್ಲಿ ನೋಕಿಯಾದ ಫೀಚರ್ ಫೋನ್ಗಳ ಬಿ ಎಲ್. ಐದು ಸಿ ಎಂಬ ಬ್ಯಾಟರಿಯ ನೀಲಿಬಣ್ಣದ ಸ್ಫೋಟ ಸಂಭವಿಸಿತ್ತು. ಮತ್ತು ಕಳೆದ ವರ್ಷ ಸೆಪ್ಟೆಂಬರ್ ಅಲ್ಲಿ ಅತೀ ಹೆಚ್ಚು ಸಾಮ್ಸಂಗ್ ಗ್ಯಲೆಕ್ಸಿ ನೋಟ್ 9 ಸ್ಮಾರ್ಟ್ಫೋನ್ ಬ್ಯಾಟರಿ ಛಿದ್ರವಾದ ದೂರು ಸಹ ನೋಡಿದ್ದೇವೆ. ಅದರಲ್ಲೂ ಚೈನಾ ಫೋನ್ ಯಾವಾಗ ಸ್ಪೋಟ ಆಗುತ್ತೆ ಎಂಬುದು ಆ ದೇವರಿಗೆ ಮಾತ್ರ ಗೊತ್ತು. ಈ ರೀತಿಯ ಹಲವಾರು ಸ್ಮಾರ್ಟ್ಫೋನ್ಗಳು ಮತ್ತು ಅಪಘಾತಗಳ ಸ್ಫೋಟಗಳು ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಘಟನೆಗಳು ನಡೆದಿವೆ ಅದೆಲ್ಲವೂ ಈಗಲೂ ನಡೆಯುತ್ತಲೇ ಇದೆ.

ಮೊಬೈಲ್ ಅನ್ನು ಚಾರ್ಜ್ ಮಾಡುವಾಗ ವಿಕಿರಣಗಳು ಮೊಬೈಲ್ನಲ್ಲಿ ಹೆಚ್ಚಾಗಿರುತ್ತದೆ ಇದರಿಂದಾಗಿ ಬ್ಯಾಟರಿಯು ಬಿಸಿಯಾಗಿರುತ್ತದೆ ಆದ್ದರಿಂದ ಚಾರ್ಜಿಂಗ್ ಹಾಕಿ ಮಾತನಾಡುವಾಗ ಸ್ಫೋಟಿಸುತ್ತದೆ. ಮೊಬೈಲ್ ಅಲ್ಲಿ ಸದಾ ನೆಟ್ ವರ್ಕ್ ಆನ್ ಆಗಿ ಇರಿಸಬಾರದು. ನೆಟ್ ವರ್ಕ್ ಆನ್ ಮಾಡಿ ಮೊಬೈಲ್ ಚಾರ್ಜ್ ಮಾಡಬೇಡಿ. ಮೊಬೈಲ್ ಬಿಸಿ ಆಗುವ ತನಕ ಕೂಡ ಚಾರ್ಜ್ ಮಾಡಬಾರದು ಜೊತೆಗೆ ಮೊಬೈಲ್ ಫುಲ್ ಚಾರ್ಜ್ ಆದರೂ ಚಾರ್ಜ್ ಅಲ್ಲೇ ಇಡಬೇಡಿ. ಮೊಬೈಲ್ ಬ್ಯಾಟರಿ ಆಫ್ ಆಗುವ ತನಕ ಬಿಡಬಾರದು. ಅನೇಕ ಬಾರಿ ಬಳಕೆದಾರರ ತಪ್ಪುಗಳಿಂದಾಗಿ ಬ್ಯಾಟರಿ ಕೂಡ ಅತಿಯಾಗಿ ಮತ್ತು ಸ್ಫೋಟಗೊಳ್ಳುತ್ತದೆ. ಕೆಲ ಒಮ್ಮೆ ರಾಸಾಯನಿಕ ಬದಲಾವಣೆಗಳನ್ನು ಮತ್ತು ಬ್ಯಾಟರಿ ಸ್ಫೋಟಗಳನ್ನು ಉಂಟುಮಾಡುತ್ತದೆ. ಆ ರೀತಿ ಆಗುವ ಮುನ್ನ ಫೋನಲ್ಲಿ ಈ ಲಕ್ಷಣಗಳಿದ್ದರೆ ಬದಲಾಯಿಸಿಕೊಳ್ಳಬೇಕು
ಫೋನ್ನ ತೆರೆ ಅಥವಾ ಸಂಪೂರ್ಣ ಸ್ಕ್ರೀನ್ ಮಬ್ಬು ಡಾರ್ಕ್ನೆಸ್ಗೆ ಹೋಗುತ್ತದೆ. ಫೋನ್ ತನ್ನನ್ ತಾನೇ ರೀಸ್ಟಾರ್ಟ್ ಆಗುವುದು ಅಥವಾ ಅನಿರೀಕ್ಷಿತ ಯಾವಾಗಲು ಹೆಚ್ಚು ಹೆಚ್ಚು ಹ್ಯಾಂಗ್ ಆಗುವುದು. ಮಾತನಾಡುವಾಗ ಫೋನ್ ಸಾಮಾನ್ಯಗಿಂತ ಹೆಚ್ಚು ಬಿಸಿಯಾಗಿರುತ್ತದೆ. ನಿಮ್ಮ ಮೊಬೈಲ್ ಒರಿಜಿನಲ್ ಚಾರ್ಜರ್ ಕಳೆದು ಹೋದ್ರೆ ಎಂದಿಗೂ ಕೂಡ ಕಳಪೆ ಚಾರ್ಜರ್ಗಳನ್ನೂ ಬಳಸಬಾರದು. ಬಿಸಿಯಾಗಿರುವ ಸ್ಥಳದಲ್ಲಿ ಫೋನನ್ನು ಇಡಬಾರದು ಹಾಗೂ ಚಾರ್ಜ್ ಮಾಡಬಾರದು. ಫೋನ್ ಒಂದು ವೇಳೆ ಬ್ಯಾಟರಿ ತೆಗೆದು ಹಾಕ ಬಹುದಾದ ಆಯ್ಕೆಯನ್ನು ಹೊಂದಿದ್ದರೆ ಬ್ಯಾಟರಿಯನ್ನು ಒಂದು ಮೇಜಿನ ಮೇಲೆ ಇರಿಸಿ. ಇದರ ನಂತರ ಅದನ್ನು ತಿರುಗಿಸಿ ಮತ್ತು ಬ್ಯಾಟರಿ ಉಬ್ಬಿದೆಯೇ ಎಂದು ನೋಡಿ ಕೊಳ್ಳಬೇಕು. ಇದರಿಂದಲೇ ಇತ್ತೀಚೆಗೆ ಮೊಬೈಲ್ ಹೆಚ್ಚು ಬ್ಲಾಸ್ಟ್ ಆಗುತ್ತಿರುವುದು ಅದಕ್ಕಾಗಿ ಆದಷ್ಟು ಎಚ್ಚರಿಕೆ ವಹಿಸಿ ಮೊಬೈಲ್ ಬಳಕೆ ಕಡಿಮೆ ಮಾಡಿ.