ಒಂದು ಕೆಂಪು ಸೀಬೆ ಹಣ್ಣು ತಿನ್ನಿರಿ ನಲವತ್ತು ಲಾಭ ಪಡೆಯಿರಿ

0
620

ಸೀಬೆಹಣ್ಣು ನಿಜವಾಗಲು ಬಡವರ ಬಂದು ಎಂದು ಹೇಳಿದರೆ ತಪ್ಪಾಗುವುದಿಲ್ಲ ಏಕೆಂದರೆ ಇದು ಒಂದು ಶ್ರೀಮಂತ ಹಣ್ಣು ಇದರಲ್ಲಿ ಸಾಕಷ್ಟು ರೀತಿಯ ಪೌಷ್ಟಿಕಾಂಶಗಳು ಇದೆ. ಈ ಹಣ್ಣು ಯಾರಿಗೆ ತಾನೇ ಇಷ್ಟ ಹೇಳಿ ಈ ಸೀಬೆ ಹಣ್ಣಿನಲ್ಲಿ ಪೊಟ್ಯಾಶಿಯಂ ಮೆಗ್ನಿಶಿಯಂ ಕ್ಯಾಲ್ಸಿಯಂ ಸೋಡಿಯಂ ಕಬ್ಬಿಣಾಂಶ ವಿಟಮಿನ್ ಎ ಸಿ ಬಿ6 ಅಂಶವನ್ನು ಒಳಗೊಂಡಿರುವುದರಿಂದ ಇದನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭಗಳು ಇವೆ ಗೊತ್ತೇ ಸೀಬೆ ಹಣ್ಣನ್ನು ಸೇವಿಸುವುದರಿಂದ ನಮ್ಮ ಬಾಯಿಯ ಒಸಡುಗಳು ಗಟ್ಟಿಯಾಗುತ್ತವೆ ರಕ್ತಸ್ರಾವದ ಸಮಸ್ಯೆ ನಿಲ್ಲುತ್ತದೆ ಜೊತೆಗೆ ಬಾಯಿ ಹುಣ್ಣಿನ ಸಮಸ್ಯೆಗಳು ನಿವಾರಣೆ ಆಗುತ್ತದೆ. ಸೀಬೆ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ನಾರಿನಂಶ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಸಣ್ಣ ಕರುಳಿನಲ್ಲಿ ಆಹಾರ ಸರಾಗವಾಗಿ ಹೋಗಲು ಸಹಾಯವಾಗುತ್ತದೆ.ಜೊತೆಗೆ ಹಸಿವನ್ನು ಹೆಚ್ಚಿಸುತ್ತದೆ.

ಸೀಬೆಹಣ್ಣನ್ನು ಸೇವಿಸುವುದರಿಂದ ನಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಬಹುದು. ಸೀಬೆ ಹಣ್ಣಿನಲ್ಲಿ ಇರುವ ಅಧಿಕ ಪ್ರಮಾಣದ ನಾರಿನಂಶ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಸೀಬೆ ಹಣ್ಣಿನಲ್ಲಿ ಸಕ್ಕರೆಯ ಪ್ರಮಾಣ ಅತ್ಯಂತ ಕಡಿಮೆ. ಆದ್ದರಿಂದ ಇದರ ಸೇವನೆಯಿಂದ ಮಧುಮೇಹ ಸಮಸ್ಯೆಯಿಂದ ಕೂಡ ದೂರವಿರಬಹುದು. ಸೀಬೆ ಹಣ್ಣಿನ ಒಳಗೆ ಇರುವ ಬೀಜವನ್ನು ತೆಗೆದು ಸೀಬೆ ಹಣ್ಣಿನ ತಿರುಳಿಗೆ ಸ್ವಲ್ಪ ಜೇನು ತುಪ್ಪ ಬೆರೆಸಿಕೊಂಡು ಗರ್ಭಿಣಿಯರು ಸೇವಿಸಿದರೆ ಹೃದ್ರೋಗದ ಸಮಸ್ಯೆ. ಕಾಮಾಲೆ ಸಮಸ್ಯೆ, ಉಬ್ಬಸ ಹಾಗೂ ಕ್ಷಯದಂತಹ ಕಾಯಿಲೆಗಳಿಗೆ ಒಳ್ಳೆಯ ಔಷದಿ ಇದು.

ಸೀಬೆ ಹಣ್ಣಿನಲ್ಲಿ ಹೆಚ್ಚು ಫೋಲಿಕ್ ಆಮ್ಲ. ವಿಟಮಿನ್ ಬಿ 9 ಇರುವ ಕಾರಣ ಇದನ್ನು ಗರ್ಭಿಣಿಯರು ಸೇವಿಸುವುದರಿಂದ ಹುಟ್ಟುವ ಮಗುವಿನ ನರಮಂಡಲದ ಅಭಿವೃದ್ಧಿಪಡಿಸುವಲ್ಲಿ ಸಹಾಯವಾಗುತ್ತದೆ. ಸೀಬೆ ಹಣ್ಣಿನ ಜೊತೆಗೆ ಸೀಬೆ ಹಣ್ಣಿನ ಹೂಗಳಲ್ಲಿ ಕೂಡ ತುಂಬಾ ಪ್ರಯೋಜನ ಇದೆ ಅದು ಏನೆಂದರೆ ಸೀಬೆ ಹೂವನ್ನು ನುಣ್ಣಗೆ ಅರೆದು ಅದನ್ನು ಗಾಯಗಳಿಗೆ ಹಚ್ಚಿದರೆ ಗಾಯ ಬೇಗ ಗುಣ ಆಗುತ್ತದೆ. ಸೀಬೆ ಎಲೆಗಳನ್ನು ಶ್ರೀಗಂಧದೊಂದಿಗೆ ಚೆನ್ನಾಗಿ ತೇದು ಅದನ್ನು ಕಜ್ಜಿ ತುರಿ ಹುಳುಕಡ್ಡಿ ಆಗಿರುವ ಜಾಗಕ್ಕೆ ಹಚ್ಚಿದರೆ ಬೇಗ ಗುಣ ಆಗುತ್ತದೆ.

ಸೀಬೆ ಹಣ್ಣಿನಲ್ಲಿ ಮೆಗ್ನೀಷಿಯಂ ಹೇರಳವಾಗಿರುವ ಕಾರಣ ಇದನ್ನು ಸೇವಿಸುವುದರಿಂದ ಒತ್ತಡವನ್ನೂ ನಿಯಂತ್ರಣದಲ್ಲಿಟ್ಟು ಕೊಳ್ಳಬಹುದು. ಸೀಬೆಹಣ್ಣು ತಿನ್ನುವುದರಿಂದ ದೇಹದ ನರ ಮಂಡಲಗಳು ಸ್ನಾಯುಗಳಿಗೆ ವಿಶ್ರಾಂತಿ ದೊರಕಿ ದೇಹದಲ್ಲಿ ನವಚೈತನ್ಯ ಬರುತ್ತದೆ. ಸೀಬೆ ಹಣ್ಣನ್ನು ಸೇವಿಸುವುದರಿಂದ ಕಾನ್ಸರ್ ಅಂತಹ ಸಮಸ್ಯೆಗಳು ದೂರ ಆಗುತ್ತದೆ. ಸೀಬೆ ಹಣ್ಣಿನಲ್ಲಿ ವಿಟಾಮಿನ್‌ ಎ ಹೆಚ್ಚು ಇರುವ ಕಾರಣ ಇದು ಕಣ್ಣಿನ ದೃಷ್ಟಿ ದೋಷವನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಸೀಬೆ ಹಣ್ಣನ್ನು ಸೇವಿಸುವುದರಿಂದ ಮಧುಮೇಹದ ಸಮಸ್ಯೆ ದೂರ ಆಗುತ್ತದೆ. ಸೀಬೆ ಹಣ್ಣಿನ ಎಲೆಗಳನ್ನು ನುಣ್ಣಗೆ ಅರೆದು ಅದನ್ನು ಮುಖಕ್ಕೆ ಹಚ್ಚಿದರೆ ಮೊಡವೆಗಳು ಹೋಗುತ್ತವೆ. ಸೀಬೆಹಣ್ಣು ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಸೀಬೆ ಹಣ್ಣಿನ ಚಿಗುರು ಎಲೆಗಳು ಆ್ಯಂಟಿಬಯೋಟಿಕ್‌ ರೀತಿ ವರ್ತಿಸುವುದರಿಂದ ಹಲ್ಲು ನೋವು ನಿವಾರಣೆಗೆ ಇದು ಸಹಾಯ ಮಾಡುತ್ತದೆ. ನೋಡಿ ಸೀಬೆ ಹಣ್ಣನ್ನು ಸೇವಿಸುವುದರಿಂದ ಎಷ್ಟೆಲ್ಲ ಪ್ರಯೋಜನ ಆಗುತ್ತದೆ ಹಾಗಾಗಿ ಸೀಬೆ ಹಣ್ಣನ್ನು ಸೇವಿಸಿ ಪ್ರಯೋಜನ ಪಡೆಯಿರಿ.

LEAVE A REPLY

Please enter your comment!
Please enter your name here