ಪವಾಡಗಳನ್ನು ಮಾಡುತ್ತಿರುವ ಸ್ವಯಂಭು ಲಿಂಗ

0
591

ಚಿಕ್ಕಮಗಳೂರು ಎಂದರೆ ನಿಮಗೆ ನೆನಪಾಗುವುದು ಕಾಫಿಯ ನಾಡು. ಇಲ್ಲಿನ ಸುಂದರವಾದ ಪರಿಸರದಲ್ಲಿ ಎತ್ತ ಕಣ್ಣು ಹಾಯಿಸಿದರೂ ಸಹ ನಮಗೆ ಕಾಫಿಯ ತೋಟಗಳು ಮತ್ತು ಕಾಫಿಯ ಗಿಡಗಳೇ ಕಾಣುತ್ತವೆ. ಹಾಗೆ ಈ ನಾಡಿನಲ್ಲಿ ಅನೇಕ ರೀತಿಯ ಪುರಾಣ ಪ್ರಸಿದ್ಧ ದೇವಾಲಯಗಳು ಸಹ ಇವೆ. ಆದರೆ ನಮ್ಮ ಇಂದಿನ ಆಧುನಿಕ ಜನಕ್ಕೆ ಎಷ್ಟೋ ದೇವಾಲಯಗಳ ಮಾಹಿತಿ ಇಲ್ಲದೆ ಅಲ್ಲಿಗೆ ಭೇಟಿ ಕೊಡುವುದನ್ನು ಕೆಲವರು ನಿಲ್ಲಿಸಿದ್ದಾರೆ. ಅಂತಹ ಒಂದು ಸಣ್ಣ ಪ್ರಯತ್ನವನ್ನು ನಾವು ನಿಮಗೆ ಇಂದು ಮಾಡಿಸುತ್ತಿದ್ದೇವೆ. ಇಲ್ಲಿರುವ ಉದ್ಭವ ಕಲ್ಲೇಶ್ವರ ಸ್ವಾಮಿಯು ನಿಜಕ್ಕೂ ಅನೇಕ ರೀತಿಯ ಪವಾಡಗಳನ್ನು ಮಾಡುತ್ತಿದ್ದಾರೆ. ಈ ದೇಗುಲದ ಬಗ್ಗೆ ಮತ್ತು ಈ ದೇವರ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ. ಆದರೆ ಈ ದೇವರು ಸ್ಥಳೀಯರಿಗೆ ಹೆಚ್ಹಿನ ರೀತಿಯಲ್ಲಿ ಪರಿಚಯವಿದೆ. ಈ ಕ್ಷೇತ್ರದ ಹೆಸರೇ ಬೆಳವಾಡಿಯ ಶ್ರೀ ಕಲ್ಲೇಶ್ವರ ದೇವಾಲಯ.

ಇದು ನಿಜಕ್ಕೂ ನಿನ್ನೆ ಮೊನ್ನೆಯ ದೇವಾಲಯವಲ್ಲ. ಹೊಯ್ಸಳರ ಕಾಲದಲ್ಲಿ ಪ್ರಮುಖವಾದ ಜನವಸತಿ ಪ್ರದೇಶದಲ್ಲಿ ಈ ದೇವಾಲಯ ನಿರ್ಮಾಣವಾಗಿತ್ತು. ನಿಮಗೆ ತಿಳಿದಿರಬಹುದು ಹೊಯ್ಸಳರು ಯಾವಾಗಲೂ ಹೆಚ್ಚು ಶಿವ ಮತ್ತು ವಿಷ್ಣುವಿನ ದೇವಾಲಯಗಳನ್ನು ಒಂದೇ ಊರಿನಲ್ಲಿ ಅದು ಜನನಿಬಿಡ ಪ್ರದೇಶದಲ್ಲಿ ನಿರ್ಮಿಸುತ್ತಿದ್ದರು. ಇಲ್ಲಿರುವ ಉದ್ಭವ ಕಲ್ಲೇಶ್ವರ ಸ್ವಾಮಿಯು ಸ್ವಯಂಭುಲಿಂಗ ಎಂದು ಪುರಾಣದಲ್ಲಿ ಉಲ್ಲೇಖವಿದೆ. ಈ ನಗರವನ್ನು ಮಹಾಭಾರತದ ಸಂದರ್ಭದಲ್ಲಿ ಏಕಚಕ್ರ ನಗರ ಎಂದು ಕರೆಯುತ್ತಿದ್ದರು. ವನವಾಸದ ಸಂದರ್ಭದಲ್ಲಿ ಸಹ ಇಲ್ಲಿಗೆ ಪಾಂಡವರು ಬಂದು ನೆಲೆಯೂರಿದ್ದರು ಎಂಬ ಹಿನ್ನೆಲೆಯಿದೆ. ಹಾಗೆ ಇಲ್ಲಿ ಪಾಂಡವರು ಬಂದು ಶಿವಲಿಂಗಕ್ಕೆ ಪೂಜೆ ಮಾಡಿದರು ಅಂದರೆ ಇಲ್ಲಿನ ಸ್ವಯಂಭುಲಿಂಗಕ್ಕೆ ಪೂಜೆ ಮಾಡಿದ್ದರು ಎಂದು ಕೂಡ ನಂಬಲಾಗುತ್ತದೆ. ಈ ದೇವಾಲಯವನ್ನು ಸರಿಸುಮಾರು ಕ್ರಿಶ 1100 ಅಂದರೆ ಎರಡನೇ ಬಳ್ಳಾಲರಾಯನ ಕಾಲದಲ್ಲಿ ನಿರ್ಮಾಣವಾಗಿದೆ ಎಂಬುದು ಇತಿಹಾಸದಲ್ಲಿ ಉಲ್ಲೇಖವಿದೆ.

ಇಲ್ಲಿನ ಶಿವನು ನಿಜಕ್ಕೂ ಸಾಕಷ್ಟು ಪವಾಡಗಳನ್ನು ಮಾಡುತ್ತಾನೆ. ಹಾಗೆ ನಂದಿಯ ಮುಂದೆ ಇರುವ ವಿಗ್ರಹದ ಬಳಿ ನಾವು ನಮ್ಮ ಕೋರಿಕೆಗಳನ್ನು ಹೇಳಿದರೆ ಆ ನಂದಿಯು ಶಿವನಿಗೆ ತಿಳಿಸುತ್ತಾನೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ಇಲ್ಲಿನ ಮಹಿಮೆಯನ್ನು ತಿಳಿದ ಶ್ರೀ ಧರ್ಮಸ್ಥಳ ದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆಯವರು ಸಹ ಈ ದೇಗುಲಕ್ಕೆ ಆರ್ಥಿಕ ನೆರವನ್ನು ನೀಡಿದ್ದಾರೆ. ಇಲ್ಲಿ ದೇವರಿಗೆ ಪ್ರತಿನಿತ್ಯ ಪೂಜೆಗಳು ನಡೆಯುತ್ತವೆ. ಹಾಗೆ ಪ್ರತಿ ಸೋಮವಾರ ಶಿವನಿಗೆ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಪೂಜೆಗಳು ನಡೆಯುತ್ತವೆ. ಇಲ್ಲಿರುವ ಕಂಬಗಳಲ್ಲಿ ಸೂಕ್ಷ್ಮ ರೀತಿಯ ಕೆತ್ತನೆಗಳಿದ್ದು ನಿಜಕ್ಕೂ ಇದು ಮನಸ್ಸಿಗೆ ಅಚ್ಚರಿಯನ್ನು ಮೂಡಿಸುತ್ತದೆ. ಏಕೆಂದರೆ ನಮ್ಮ ಇಂದಿನ ಆಧುನಿಕ ಕಾಲದ ದೇಗುಲದಲ್ಲಿ ಎಂದೂ ಸಹ ನಾವು ಇಂತಹ ವಿಶೇಷವಾದ ಸ್ಥಬ್ಧ ಚಿತ್ರಗಳನ್ನು ಮತ್ತು ವಿಶೇಷ ವಿಗ್ರಹಗಳನ್ನು ನೋಡಲು ಸಾಧ್ಯವೇ ಇಲ್ಲ. ಈ ದೇವಸ್ಥಾನವು ಸಂಪೂರ್ಣವಾಗಿ ಮುಜರಾಯಿ ಇಲಾಖೆಯ ನಿರ್ದೇಶನದಲ್ಲಿದ್ದು ಕರ್ನಾಟಕ ಸರಕಾರವೇ ಈ ದೇಗುಲದ ಪೋಷಣೆಯನ್ನು ಮಾಡುತ್ತಿದೆ.

ಈ ದೇವಸ್ಥಾನಕ್ಕೆ ತೆರಳುವ ಮಾರ್ಗ ಹೇಗೆಂದರೆ ಚಿಕ್ಕ ಮಗಳೂರಿಂದ ಬಾಣಾವರಕ್ಕೆ ಹೋಗುವ ದಾರಿಯಲ್ಲಿ 20ಕಿ.ಲೋ ದೂರದಲ್ಲಿರುವ ಬೆಳವಾಡಿ. ಇಲ್ಲಿ ಸುಂದರವಾದ ಹೊಯ್ಸಳರ ಕಾಲದಲ್ಲಿ ಅವರದೇ ಶೈಲಿಯಲ್ಲಿ ನಿರ್ಮಾಣವಾದ ಬೆಳವಾಡಿ ಉದ್ಭವ ಕಲ್ಲೇಶ್ವರ ಸ್ವಾಮಿಯ ದೇಗುಲವಿದೆ. ನೀವೇನಾದರೂ ಚಿಕ್ಕಮಗಳೂರಿನ ಕಡೆ ಪ್ರವಾಸ ಹೋದಾಗ ಖಂಡಿತಾ ಈ ದೇಗುಲಕ್ಕೆ ಒಮ್ಮೆ ಹೋಗಿ ಬನ್ನಿ. ಹಿತರೇ ನಿಮ್ಮ ಜೀವನದಲ್ಲಿ ಸಹ ಅಷ್ಟೇ ಏನೇ ಕಷ್ಟಗಳು ಇರಲಿ ಗುರು ರಾಘವೇಂದ್ರ ಸ್ವಾಮಿಗಳ ನಂಬಿರಿ. ನಂಬಿಕೆ ಮತ್ತು ಭಕ್ತಿ ಮುಖ್ಯ ಅಷ್ಟೇ ನಿಮ್ಮ ಬಾಳಲ್ಲಿ ಸಹ ಪವಾಡ ಆದರು ಆಗಬಹುದು. ಈ ಲೇಖನ ಮರೆಯದೇ ಶೇರ್ ಮಾಡಿರಿ ರಾಯರ ಕೃಪೆಗೆ ಪಾತ್ರರಾಗಿರಿ. ನಿಮ್ಮ ಸಮಸ್ಯೆಗಳು ಏನೇ ಇರಲಿ ಅದಕ್ಕಾಗಿ ಗುರುಗಳಿಗೆ ಒಮ್ಮೆ ಕರೆ ಮಾಡಿರಿ ಪರಿಹಾರ ನಿಶ್ಚಿತವಾಗಿ ದೊರೆಯಲಿದೆ. 96111 90444

LEAVE A REPLY

Please enter your comment!
Please enter your name here