ತಿಂಡಿ ತಿನ್ನೋವಾಗ ಈ ತಪ್ಪು ಮಾಡಿದ್ರೆ ಸಕ್ಕರೆ ಖಾಯಿಲೆ ನಿಮಗೂ ಬರುತ್ತೆ

0
570

ನೀವು ಬೆಳಗ್ಗಿನ ಉಪಹಾರವಾಗಿ ದೋಸೆ ಇಡ್ಲಿ ವಡೆ ಚಪಾತಿ ಅಥವಾ ಪರೋಟ ಉಪ್ಪಿಟ್ಟು ಈ ರೀತಿಯ ಆಹಾರಗಳನ್ನು ಸೇವಿಸುತ್ತೀರಿ. ಆದರೆ ಪ್ರತಿಯೊಬ್ಬರೂ ಈ ರೀತಿಯ ಆಹಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತಾರೆ ಆದರೆ ನಿಮ್ಮ ಆರೋಗ್ಯದ ಸಲುವಾಗಿ ಯಾವ ಉಪಹಾರ ಸೂಕ್ತ ಎಂದು ನಿಮಗೆ ಇಂದು ನಾವು ಸಂಪೂರ್ಣವಾಗಿ ತಿಳಿಸುತ್ತೇವೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ. ನಮ್ಮ ಜನರಲ್ಲಿ ಬೆಳಗ್ಗೆ ಹೊತ್ತು ಅನ್ನ ತಿಂದು ರಾತ್ರಿ ಸಮಯದಲ್ಲಿ ತಿಂಡಿ ತಿನ್ನುವುದರಿಂದ ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಬಹುದು ಎಂದು ತಪ್ಪು ಕಲ್ಪನೆ ಇದೆ. ಸಾಕಷ್ಟು ಜನರು ಇದೇ ವಿಧಾನವನ್ನು ಮಾಡುತ್ತಾರೆ. ನಮ್ಮಲ್ಲಿ ಕಚೇರಿಗೆ ಹೋಗುವ ಎಷ್ಟೋ ಮಂದಿ ಜಂಕ್ ಫುಡ್ಡಿಗೆ ಮಾರು ಹೋಗುತ್ತಾರೆ. ಪ್ರತಿನಿತ್ಯ ಪರೋಟ ವಡೆ ನೂಡಲ್ಸ್ ಹೀಗೆ ಹಲವು ರೀತಿಯ ತಿಂಡಿಗಳನ್ನು ಸೇವಿಸುತ್ತಾರೆ. ಆದರೆ ನಿಜಕ್ಕೂ ಈ ಆಹಾರಗಳು ನಮಗೆ ಸೂಕ್ತವೇ ಅದು ನಮಗೆ ಎಷ್ಟು ರೀತಿಯ ಕಾಯಿಲೆಗಳು ತರುತ್ತವೆ ಹಾಗು ಅದರಿಂದ ನಮ್ಮ ದೇಹಕ್ಕೆ ಅನುಕೂಲವಾಗುತ್ತಿದೆಯ ಎಂಬುದರ ಬಗ್ಗೆ ನಾವು ತಿಳಿಯೋಣ.

ನಿಮಗೆ ತಿಳಿದಿರಬಹುದು. ನಮ್ಮ ಹಳೆಯ ಕಾಲದಲ್ಲಿ ನಮ್ಮ ಪೂರ್ವಿಕರು ದೇಹಕ್ಕೆ ಎಷ್ಟು ರೀತಿಯ ಪೌಷ್ಟಿಕಾಂಶಯುಕ್ತ ಆಹಾರವನ್ನೇ ದೇಹಕ್ಕೆ ನೀಡುತ್ತಿದ್ದರು ಮತ್ತು ಅವರು ಅಂತಹ ಆಹಾರವನ್ನೇ ಸೇವಿಸುತ್ತಿದ್ದರು. ನಮ್ಮ ಹಿಂದಿನ ಕಾಲದಲ್ಲಿ ಪ್ರತಿನಿತ್ಯ ಜೋಳದ ರೊಟ್ಟಿ ರಾಗಿ ಮುದ್ದೆ ಅಥವಾ ಸಿರಿಧಾನ್ಯಗಳಿಂದ ಕೂಡಿದ ಆಹಾರವನ್ನೇ ತಿನ್ನುತ್ತಿದ್ದರು. ಅವರಿಗೆ ಯಾವುದೇ ರೀತಿಯ ಕಾಯಿಲೆಗಳು ಸಹ ಬರುತ್ತಿರಲಿಲ್ಲ. ಆದರೆ ಇಂದು ನಾವು ಆಧುನಿಕ ಯುಗದಲ್ಲಿ ಉಪಹಾರದ ಹೆಸರಿನಲ್ಲಿ ಎಲ್ಲಾ ರೀತಿಯ ಕ್ಯಾಲೋರಿಗಳು ಇಲ್ಲದಿರುವಂತಹ ತಿಂಡಿಗಳನ್ನು ತಿನ್ನುತ್ತಿದ್ದೇವೆ. ಬೆಳಗ್ಗೆ ಬೆಳಗ್ಗೆಯೇ ಖಾಲಿ ಹೊಟ್ಟೆಯಲ್ಲಿ ಎಣ್ಣೆ ಪದಾರ್ಥಗಳು ಮತ್ತು ಹಲವು ಬಗೆಯ ಪದಾರ್ಥಗಳನ್ನು ತಿನ್ನುವುದರಿಂದ ಇದು ನಮ್ಮ ಕರುಳಿಗೆ ಹೆಚ್ಚಿನ ರೀತಿಯಲ್ಲಿ ಹೊಡೆತ ನೀಡುತ್ತದೆ ಮತ್ತು ನಮ್ಮ ಜೀರ್ಣಾಂಗದ ಸಂಪೂರ್ಣ ವ್ಯವಸ್ಥೆಯನ್ನೇ ಹಾಳು ಮಾಡುತ್ತದೆ.

ಈಗಂತೂ ನಿಮಗೆ ತಿಳಿದಿರಬಹುದು. ಸಾಮಾನ್ಯವಾಗಿ ಮೂವತ್ತು ವಯಸ್ಸು ದಾಟಿದರೆ ಸಾಕು ಕೀಲು ನೋವು ಎಂಬುದು ಸರ್ವೇ ಸಾಮಾನ್ಯವಾಗಿದೆ. ಇದಕ್ಕೆ ಕಾರಣವೇನೆಂದರೆ ನಾವು ಪ್ರತಿನಿತ್ಯ ತಿನ್ನುವ ಆಹಾರಗಳು. ಪ್ರತಿನಿತ್ಯ ಯಾರು ಬೆಳಗ್ಗೆ ಸಿರಿಧಾನ್ಯಗಳು ರಾಗಿ ಜೋಳ ಈ ರೀತಿಯ ಆಹಾರಗಳನ್ನು ಉಪಯೋಗಿಸುತ್ತಾರೋ ಅವರಿಗೆ ಎಂದೂ ಸಹ ರೋಗದ ಸಮಸ್ಯೆಗಳು ಬರುವುದಿಲ್ಲ. ಹಾಗೆ ಕೆಲವರು ಬೆಳಗ್ಗೆ ಮಾಡಿದ ಆಹಾರಗಳನ್ನು ಅಥವಾ ಬೆಳಗ್ಗೆ ತಂದ ಮೊಸರನ್ನೋ ಅಥವಾ ಬೆಳಗ್ಗೆ ಕಾಯಿಸಿದ ಹಾಲನ್ನೋ ಮತ್ತೆ ರಾತ್ರಿ ಉಪಯೋಗಿಸುವುದು ಹಾಗೆ ಬೆಳಗ್ಗೆ ಮಾಡಿದ್ದ ತಿಂಡಿಯನ್ನು ರಾತ್ರಿ ಹೊತ್ತಿನಲ್ಲಿ ತಿನ್ನುವುದು ಹೀಗೆ ಹಲವು ರೀತಿಯ ದುರಭ್ಯಾಸವನ್ನು ಹೊಂದಿರುತ್ತಾರೆ. ಈ ರೀತಿ ಮಾಡುವುದರಿಂದ ನಮ್ಮ ದೇಹಕ್ಕೆ ನೀಡುವ ಗ್ಲೂಕೋಸ್ ಅಂಶ ಹೆಚ್ಚಿನ ರೀತಿಯಲ್ಲಿ ಸಿಗುತ್ತದೆ. ಇದು ನಾವು ತಿನ್ನುವ ಅನ್ನಕ್ಕಿಂತಲೂ ದುಪ್ಪಟ್ಟು ಗ್ಲುಕೋಸ್ ಅಂಶ ದೇಹಕ್ಕೆ ದೊರೆಯುತ್ತದೆ ಮತ್ತು ನಮ್ಮ ಆರೋಗ್ಯ ಹಾಳಾಗುತ್ತದೆ. ಇದರಿಂದ ದೇಹದಲ್ಲಿ ಸಿಹಿ ಅಂಶ ಹೆಚ್ಚಾಗಿ ಬೇಗನೆ ಸಕ್ಕರೆ ಕಾಯಿಲೆ ಬರುವ ಸಾಧ್ಯತೆಯಿರುತ್ತದೆ.

ಇನ್ನಾದರೂ ನಿಮ್ಮ ಆರೋಗ್ಯದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಿ. ನಿಮ್ಮ ಊಟ ಉಪಚಾರದಲ್ಲಿ ಎಚ್ಚರಿಕೆಯಿಂದ ಇದ್ದರೆ ಮಾತ್ರವೇ ಉಳಿಗಾಲ. ಇಲ್ಲವಾದಲ್ಲಿ ಕೇವಲ ಮೂವತ್ತು ವರ್ಷ ದಾಟಿದ ಕೂಡಲೇ ಕೀಲು ನೋವಿನ ಸಮಸ್ಯೆ ಮತ್ತು ಸಕ್ಕರೆ ಕಾಯಿಲೆಯಿಂದ ಬಲಳುತ್ತೀರಿ. ಹಿಂದೊಂದು ಮಾತಿತ್ತು ಸಕ್ಕರೆ ಕಾಯಿಲೆಯು ಕೇವಲ ಶ್ರೀಮಂತರಿಗೆ ಮಾತ್ರವೆಂದು. ಆದರೆ ಇಂದು ಆ ಕಾಯಿಲೆಗೆ ಯಾವುದೇ ರೀತಿಯ ಭೇದ ಭಾವವಿಲ್ಲ. ಇದು ಪ್ರತಿಯೊಬ್ಬರಿಗೂ ಸಣ್ಣ ಮಕ್ಕಳಿಗೂ ಬೇಕಾದರೂ ಬರಬಹುದು. ಆದ್ದರಿಂದ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಇರಬೇಕೆಂದರೆ ನಿಮ್ಮ ತಿಂಡಿಯಲ್ಲಿ ರಾಗಿಯ ಪದಾರ್ಥಗಳು ಜೋಳದ ಪದಾರ್ಥಗಳು ಮತ್ತು ಮಿಲಿಟ್ಸ್ ಗೆ ಸೇರಿದ ಆಹಾರಗಳನ್ನೇ ಸೇವಿಸಿ. ಇಲ್ಲವಾದಲ್ಲಿ ಖಂಡಿತಾ ನೀವು ಸಮಸ್ಯೆಗೆ ಗುರಿಯಾಗುತ್ತೀರಿ.

LEAVE A REPLY

Please enter your comment!
Please enter your name here