ಬಿಸಿನೀರಿನಲ್ಲಿ ಹತ್ತು ನಿಮಿಷ ನಿಮ್ಮ ಪಾದ ಇಟ್ಟುಕೊಳ್ಳಿ ಹತ್ತು ಲಾಭ ಪಡೆಯಿರಿ

0
633

ಬಿಸಿ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಗೊತ್ತು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿದರೆ ಎಷ್ಟೆಲ್ಲ ಪ್ರಯೋಜನ ಇದೆ ಎಂದು ಗೊತ್ತು ಹಾಗೆಯೇ ನಮ್ಮ ಕಾಲುಗಳು ನಮ್ಮ ದೇಹಕ್ಕೆ ಆಧಾರ ಸ್ತಂಭ ಅಲ್ಲವೇ ನಮ್ಮ ಪಾದಗಳು ನಮಗೆ ಎಷ್ಟೆಲ್ಲ ಪ್ರಯೋಜನ ಇದೆ ನಾವು ಎಷ್ಟೆಲ್ಲ ಸುತ್ತಾಡುತ್ತವೆ ಕಲ್ಲು ಮುಳ್ಳು ಎಂಬುದನ್ನು ನೋಡದೆ ಸುತ್ತಾಡಿ ಬರುತ್ತೇವೆ ಆದರೆ ಎಷ್ಟೇ ಸುತ್ತಾಡಿ ಬಂದರು ನಾವು ನಮ್ಮ ಪಾದಗಳನ್ನು ಆರೈಕೆ ಮಾಡುವುದಿಲ್ಲ ಅವುಗಳ ಪೋಷಣೆ ಮಾಡುವುದಿಲ್ಲ ಪಾದಗಳು ನೋವು ಬಂದಾಗ ಮಾತ್ರ ಪಾದಕ್ಕೆ ಕ್ರೀಮ್ ಅಥವ ಎಣ್ಣೆ ಹಚ್ಚಿ ಸುಮ್ಮನೆ ಆಗುತ್ತೇವೆ ಅದು ಎಷ್ಟೇ ನೋವು ಇದ್ದರು ನೆಡೆದಾಡುವುದನ್ನು ಮಾತ್ರ ಬಿಡುವುದಿಲ್ಲ ಬಿಡಲು ಸಾಧ್ಯವೂ ಇಲ್ಲ ಅಲ್ಲವೇ. ಆದರೆ ನಮ್ಮ ಪಾದಗಳಿಗೆ ಆರೈಕೆ ಮಾಡಿದರೆ ನಮ್ಮ ಆರೋಗ್ಯವು ಉತ್ತಮವಾಗಿ ಇರುತ್ತದೆ ಅದಕ್ಕಾಗಿ ಪಾದಗಳಿಗೆ ಕೂಡ ನಿತ್ಯ ವ್ಯಾಯಾಮ ಮಾಡಬೇಕು ಜೊತೆಗೆ ನಿತ್ಯ ಫ್ರೀ ಇದ್ದ ಸಮಯದಲ್ಲಿ ಸ್ವಲ್ಪ ಸಮಯ ನಮ್ಮ ಪಾದಗಳನ್ನು ಬಿಸಿ ನೀರಲ್ಲಿ ಇಟ್ಟುಕೊಂಡು ಕುಳಿತರೆ ಪಾದಗಳ ಆರೋಗ್ಯ ಹೆಚ್ಚುವ ಜೊತೆಗೆ ನಮ್ಮ ಆರೋಗ್ಯ ಕೂಡ ಹೆಚ್ಚುತ್ತದೆ.

ಹಾಗಾದರೆ ಬಿಸಿ ನೀರಲ್ಲಿ ಪಾದಗಳನ್ನು ಹಾಕಿ ಕುಳಿತುಕೊಳ್ಳುವುದರಿಂದ ಏನೆಲ್ಲ ಪ್ರಯೋಜನ ಆಗುತ್ತದೆ ನೋಡೋಣ ಬನ್ನಿ. ಪಾದಗಳನ್ನು ಬಿಸಿ ನೀರಲ್ಲಿ ಹಾಕಿ ಕುಳಿತುಕೊಳ್ಳುವುದರಿಂದ ಹಿಮ್ಮಡಿ ಒಡೆಯುವುದು ತಪ್ಪುತ್ತದೆ. ಪಾದಗಳನ್ನು ಬಿಸಿ ನೀರಲ್ಲಿ ಅದ್ದುವುದರಿಂದ ಶೀತ ನೆಗಡಿ ಮತ್ತು ಕಫದಂತಹ ಸಮಸ್ಯೆಗಳು ದೂರ ಆಗುತ್ತದೆ. ಬಿಸಿ ನೀರಿನ ಹಬೆಯನ್ನು ಮೂಗಿನ ಮೂಲಕ ತೆಗೆದುಕೊಳ್ಳುವುದರಿಂದ ಕಟ್ಟಿದ ಮೂಗು ಶೀತ ನೆಗಡಿ ಸಮಸ್ಯೆಗಳು ಕಡಿಮೆ ಆಗುತ್ತದೆ. ನರಮಂಡಲದ ಮೂಲ ನರಗಳು ಪಾದ ಮತ್ತು ಅಂಗೈನಲ್ಲೂ ಸಹ ಇರುವುದರಿಂದ ಪಾದವನ್ನು ಸ್ವಲ್ಪ ಸಮಯ ಬಿಸಿನೀರಿನಲ್ಲಿ ಅದ್ದಿಕೊಂಡರೆ ಕುತ್ತಿಗೆ ನೋವು ಮತ್ತು ಕುತ್ತಿಗೆಯ ಸೆಳೆತಗಳು ಮಾಯವಾಗುತ್ತದೆ. ಬಿಸಿ ನೀರಿನಲ್ಲಿ ಪಾದಗಳನ್ನು ಸ್ವಲ್ಪ ಸಮಯದ ಹೊತ್ತು ಅದ್ದಿಕೊಂಡು ಕುಳಿತುಕೊಳ್ಳುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಚುರುಕುಗೊಂಡು ಮಾನಸಿಕ ಮತ್ತು ದೈಹಿಕ ಒತ್ತಡವು ಕಡಿಮೆಯಾಗುತ್ತದೆ.

ಸ್ವಲ್ಪ ಸಮಯ ಪಾದಗಳನ್ನ ಬಿಸಿ ನೀರಿನಲ್ಲಿ ಅದ್ದಿ ಕುಳಿತುಕೊಳ್ಳುವುದರಿಂದ ಪಾದಕ್ಕೆ ರಕ್ತ ಸಂಚಾರ ಹೆಚ್ಚಾಗುತ್ತದೆ. ಸ್ವಲ್ಪ ಸಮಯ ಪಾದಗಳನ್ನು ಬಿಸಿ ನೀರಲ್ಲಿ ಹಾಕಿ ಕುಳಿತುಕೊಳ್ಳುವುದರಿಂದ ಒತ್ತಡ ಕಡಿಮೆ ಆಗುತ್ತದೆ. ರಾತ್ರಿ ಮಲಗುವ ಮುಂಚೆ ಸ್ವಲ್ಪ ಸಮಯ ಪಾದಗಳನ್ನ ಬಿಸಿ ನೀರಲ್ಲಿ ಅದ್ದಿಕೊಂಡು ಕುಳಿತುಕೊಳ್ಳುವುದರಿಂದ ನಿದ್ರಾ ಹೀನತೆಯ ಸಮಸ್ಯೆ ದೂರ ಆಗುತ್ತದೆ ನಿಮಗೆ ಆ ದಿನ ರಾತ್ರಿ ನೆಮ್ಮದಿಯ ನಿದ್ರೆ ಬೇಗನೆ ಬರುತ್ತದೆ. ಕೆಲವೊಮ್ಮೆ ಹಿಮ್ಮಡಿಗಳು ತುಂಬಾ ನೋವು ಬರುತ್ತದೆ ಹಾಗಾಗಿ ಬಿಸಿ ನೀರಲ್ಲಿ ಪಾದಗಳನ್ನು ಅದ್ದಿ ಕುಳಿತರೆ ಹಿಮ್ಮಡಿ ನೋವು ಕಡಿಮೆ ಆಗುತ್ತದೆ. ನೋಡಿದರಲ್ಲ ಸ್ವಲ್ಪ ಸಮಯ ಬಿಸಿ ನೀರಲ್ಲಿ ಪಾದಗಳನ್ನು ಅದ್ದಿ ಕುಳಿತರೆ ಎಷ್ಟೆಲ್ಲ ಪ್ರಯೋಜನ ಆಗುತ್ತದೆ ಹಾಗೆಯೇ ಬಿಸಿ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಕೊಂಡರೆ ಪಾದಗಳಲ್ಲಿ ಇರುವ ಕಿಟಾಣುಗಳು ದೂರ ಆಗುತ್ತವೆ. ಇದೊಂದು ಉಪಯುಕ್ತ ಲೇಖನ ಆಗಿದ್ದು ತಪ್ಪದೇ ಶೇರ್ ಮಾಡಿರಿ ಈ ಮಾಹಿತಿ ಎಲ್ಲರಿಗು ಸಹಾಯ ಆಗಲಿದೆ.

LEAVE A REPLY

Please enter your comment!
Please enter your name here